ಎಷ್ಟು ಮನೆಗಳಲ್ಲಿ ವೃದ್ಧರು ಹಿಂಸೆ ಅನುಭವಿಸುತ್ತಿಲ್ಲ?
Team Udayavani, Aug 26, 2018, 12:30 AM IST
ಅಮ್ಮ ಮತ್ತು ಮಮತೆ ಎನ್ನುವ ಪದಗಳು ಒಂದಕ್ಕೊಂದು ಪರ್ಯಾಯವಿದ್ದಂತೆ. ಯಾವುದೇ ತಾಯಿಯೂ ತನ್ನ ಮಕ್ಕಳಿಗೆ ಕೆಟ್ಟದ್ದನ್ನು ಬಯಸು ವುದಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಹೀಗೆ ಹೇಳಲಾಗುವುದಿಲ್ಲವಲ್ಲ? ಕೆಲ ಸಮಯದ ಹಿಂದೆ ಮಗಳೊಬ್ಬಳು ತನ್ನ ತಾಯಿಯನ್ನು ಥಳಿಸುವ ಸುಮಾರು ಒಂದೂವರೆ ನಿಮಿಷದ ವಿಡಿಯೋ ವೈರಲ್ ಆಯಿತು. ಮಗಳಾಗಿರಲಿ ಅಥವಾ ಮಗನಾಗಿ ರಲಿ ತಮ್ಮ ತಂದೆ ತಾಯಿಯನ್ನು ಥಳಿಸುವುದು ಪ್ರಪಂಚದ ಯಾವ ಸಮಾಜದಲ್ಲೂ ಸ್ವೀಕಾರಾರ್ಹ ವಲ್ಲ. ಆದರೆ ಈ ವಿಡಿಯೋದಲ್ಲಿ ತನ್ನ ವೃದ್ಧ ತಾಯಿಯನ್ನು ಪದೇ ಪದೆ ಥಳಿಸುವ ಮಗಳನ್ನು ನೆರೆಹೊರೆಯವರು ಬೈದಾಗ, “ಇದು ನನ್ನ ಮತ್ತು ನನ್ನ ಅಮ್ಮನ ನಡುವಿನ ವಿಷಯ’ ಎಂದು ಉಲ್ಟಾ ಬೈಯ್ಯುತ್ತಾಳೆ! ಈ ವೀಡಿಯೋ ವೈರಲ್ ಆದಾಗ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ತೆಹಚ್ಚಿದ್ದೇನೆಂದರೆ ಈ ಮಹಿಳೆ ತನ್ನ ತಾಯಿಯನ್ನು ನಿಯಮಿತವಾಗಿ ಒಂದಿಷ್ಟೂ ಕನಿಕರವಿಲ್ಲದೇ ಥಳಿಸುತ್ತಿದ್ದಳು ಎನ್ನುವುದು. ಬಹುತೇಕ ಬಾರಿ ಇಂಥ ಘಟನೆ ಮುಚ್ಚಿದ ಬಾಗಿಲಿನ ಹಿಂದೆ ನಡೆಯುತ್ತಿತ್ತು, ನೆರೆಹೊರೆಯವರಿಗೆ ಆ ಅಸಹಾಯಕ ವೃದ್ಧೆಯ ಆಕ್ರಂದನವಷ್ಟೇ ಕೇಳಿಸುತ್ತಿತ್ತು.
ಹಾಗೆಂದು ಇದು ಅಲ್ಲೆಲ್ಲೋ ಒಂದೇ ಮನೆಯಲ್ಲಿ ನಡೆದ ಘಟನೆ ಎಂದು ಸುಮ್ಮನಾಗಲು ಸಾಧ್ಯವೇ? ಖಂಡಿತ ಇಲ್ಲ, ವಾಸ್ತವವಾಗಿ ಇಂದು ದೇಶದ ಪ್ರತಿ ಯೊಂದು ಊರಿನ ಅನೇಕ ಮನೆಗಳಲ್ಲಿ ಹಿರಿಯರು ಈ ರೀತಿಯ ಹಿಂಸೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಎದುರಿಸುತ್ತಲೇ ಇರುತ್ತಾರೆ. ಹೀಗೆಲ್ಲ ತಮ್ಮ ತಂದೆ ತಾಯಿಯನ್ನು ಥಳಿಸುವವರು ಮಾನಸಿಕರಾಗಿ ಅಸ್ವಸ್ಥರು, ಮೆಂಟಲ್‌ಗಳು ಎಂದುಬಿಡ ಲಾಗುತ್ತದೆ. ಆಧುನಿಕ ಲೋಕದ ಸಮಸ್ಯೆಯೆಂದರೆ ಅದು ಪ್ರತಿಯೊಂದಕ್ಕೂ ಒಂದು ಹೆಸರು ಕೊಡುವ ಗುಣ ಬೆಳೆಸಿಕೊಂಡುಬಿಟ್ಟಿದೆ ಎನ್ನುವುದು. ಆದರೆ ಬಹುತೇಕ ಸಂದರ್ಭದಲ್ಲಿ ಮಕ್ಕಳು ಮಾನಸಿಕವಾಗಿ ಸ್ವಸ್ಥರೇ ಆಗಿರುತ್ತಾರೆ, ಆದರೆ ಅವರಿಗೆ ತಮ್ಮ ತಂದೆ ಅಥವಾ ತಾಯಿಯು ಬೇಡವಾಗಿರುತ್ತಾರೆ. ಕೆಲವು ಬಾರಿ ಮಕ್ಕಳು ಆಸ್ತಿಗಾಗಿ ತಮ್ಮ ತಂದೆ-ತಾಯಿಯನ್ನು ಕೊಲೆಗೈದ ಸುದ್ದಿಯನ್ನೂ ನಾವು ಓದುತ್ತಿರುತ್ತೇವೆ. ಮೇಲೆ ಹೇಳಲಾದ ಘಟನೆಯಲ್ಲೂ ಆ ಮುದುಕಿಗೆ ಆಸ್ತಿಯಿತ್ತಂತೆ, ಆಕೆ ಸತ್ತರೆ ಆಸ್ತಿ ತನಗೆ ಬರುತ್ತದೆ ಎಂದು ಮಗಳಿಗೆ ಗೊತ್ತು. ಆದರೆ ಮುದುಕಿ ಸಾಯುತ್ತಿಲ್ಲ, ಮಗಳಿಗೆ ಅಸಹನೆ! ಅಮಾನವೀಯತೆಯ ಪರಮಾವಧಿಯಲ್ಲವೇ ಇದು? ಇದು ಕಾಲ ಚಕ್ರದ ಪ್ರಭಾವವೂ ಇರ ಬಹುದು. ಇಂದು ಕೂಡು ಕುಟುಂಬಗಳು ಮುರಿದು ಬೀಳುತ್ತಾ ಸಾಗಿವೆ. ನಗರಗಳಲ್ಲಂತೂ ಯಾರ ಮನೆಯಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯುವು ದಿಲ್ಲ. ತಿಳಿದರೂ ಒಬ್ಬರು ಇನ್ನೊಬ್ಬರ ವಿಷಯದಲ್ಲಿ ತಲೆ ಹಾಕಲು ಹೆದರುತ್ತಾರೆ. ಒಂದು ವೇಳೆ ಇಂಥ ಘಟನೆಗಳು ಹಳ್ಳಿಗಳಲ್ಲಿ ನಡೆದರೆ ಇಡೀ ಸಮಾಜವೇ ತಪ್ಪಿತಸ್ಥರಿಗೆ ಛೀಮಾರಿ ಹಾಕುತ್ತದೆ.
ಹಳ್ಳಿಗಳಲ್ಲೂ ತಮ್ಮ ತಂದೆ-ತಾಯಿಯನ್ನು ಕಡೆಗಣಿ ಸು ವವರು ಇದ್ದಾರೆ. ಆದರೆ ಅಲ್ಲಿನ ವಾತಾವರಣ ಹೇಗಿರುತ್ತದೆಂದರೆ ಅಪ್ಪ-ಅಮ್ಮನ್ನ ಸರಿಯಾಗಿ ನೋಡಿಕೊಳ್ಳದವನು ತಲೆಯೆತ್ತಿ ಅಡ್ಡಾಡದಂಥ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಆದರೆ ನಗರಗಳ ಪರಿಸ್ಥಿತಿ ಭಿನ್ನ. ಅಲ್ಲಿ ಒಬ್ಬರ ಮನೆಗೆ ಇನ್ನೊಬ್ಬರು ಬರುವುದೇ ಅಪರೂಪ. ಎಂದೋ ಒಮ್ಮೆ ನೆಪಕ್ಕೆಂಬಂತೆ ಬರುವ ಬಂಧು ಬಳಗದವರೂ ಅರ್ಧಗಂಟೆ-ಒಂದು ತಾಸಲ್ಲಿ ಕಾಲ್ಕಿತ್ತುತ್ತಾರೆ. ಹಾಗಾಗಿ ಆ ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೂ ತಿಳಿದಿರುವುದಿಲ್ಲ.
ಕರುಳು ಹಿಂಡುವ ವಿಚಾರ ಕೇಳಿ. ಮಗಳಿಂದ ನಿತ್ಯವೂ ಪೆಟ್ಟು ತಿನ್ನುತ್ತಿದ್ದ ಆ ವೃದ್ಧೆಯನ್ನು ಪತ್ರಕರ್ತರು ಹೋಗಿ ಮಾತನಾಡಿಸಿದಾಗ ಆ ಮಹಾತಾಯಿ ತನ್ನ ಮಗಳ ಪರ ನಿಂತುಬಿಟ್ಟಳು! “ನನ್ನ ಮಗಳು ನನ್ನನ್ನು ಎಂದಿಗೂ ಥಳಿಸಿಲ್ಲ. ತುಂಬಾ ಚೆನ್ನಾಗಿ ನೋಡಿಕೊಳ್ಳು ತ್ತಾಳೆ’ ಎಂದು ಸುಳ್ಳುಹೇಳಿತು ಆ ಮಾತೃಹೃದಯ. ಹೇಗಿದೆ ನೋಡಿ…ತಾಯಿಯ ಮಮಕಾರ, ಮಗಳ ನೀಚ ವ್ಯವಹಾರ? ಒಂದು ವೇಳೆ ತಾಯಿಯೇನಾ ದರೂ ಮಗಳ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದರೆ ಏನಾಗುತ್ತಿತ್ತೋ ಯೋಚಿಸಿ? ಸಾಕ್ಷ್ಯ ಹೇಳಲು ನೆರೆಹೊರೆಯವರೂ ಸಿದ್ಧರಿದ್ದರು. ಭಾರತದ ವೃದ್ಧರ ಸ್ಥಿತಿಯ ಬಗ್ಗೆ “ಹೆಲ್ಪೆಸ್ ಇಂಡಿಯಾ’ ಸಂಸ್ಥೆಯು ಎರಡು ವರ್ಷಗಳ ಹಿಂದೆ ಹನ್ನೆರಡು ಮಹಾನಗರಗಳ 1200ಕ್ಕೂ ಹೆಚ್ಚು ವೃದ್ಧ ರೊಂದಿಗೆ ಮಾತುಕತೆ ನಡೆಸಿತ್ತು. ಇವರಲ್ಲಿ 600 ವೃದ್ಧರು(ಅರ್ಧದಷ್ಟು) ತಾವು ತಮ್ಮ ಮನೆಯಲ್ಲೇ ಪರಕೀಯರಂತೆ ಬದುಕುತ್ತಿರುವುದಾಗಿ, ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಅನುಭವಿಸು ತ್ತಿರುವುದಾಗಿ ಹೇಳಿದ್ದರು.
ಭಾರತದಲ್ಲಿ ವೃದ್ಧರ ಜನಸಂಖ್ಯೆ ಅಜಮಾಸು 10 ಕೋಟಿಯಷ್ಟಿದೆ. 2050ರ ವೇಳೆಗೆ ಈ ಸಂಖ್ಯೆ 32 ಕೋಟಿಯಷ್ಟಾಗಬಹುದು. ಏಕಾಂಗಿ ಕುಟುಂಬಗಳ ಸಂಖ್ಯೆ ಏರಿದಂತೆಲ್ಲ ನಿತ್ಯ ಕಿರುಕುಳ ಅನುಭವಿಸುವ ವೃದ್ಧರ ಸಂಖ್ಯೆಯೂ ಹೆಚ್ಚಾಗಲಿದೆ. ಹಾಗೆಂದು ವೃದ್ಧರ ರಕ್ಷಣೆಗಾಗಿ ನಮ್ಮ ದೇಶದಲ್ಲಿ ಕಾನೂನು ಇಲ್ಲವೆಂದೇನೂ ಅಲ್ಲ. ಅವರ ಸಾಮಾಜಿಕ ಮತ್ತು ಕಾನೂನಾತ್ಮಕ ರಕ್ಷಣೆಗಾಗಿ “ಮೆಂಟೇನೆನ್ಸ್ ಆ್ಯಂಡ್ ವೆಲ್ಫೆàರ್ ಆಫ್ ಪೇರೆಂಟ್ಸ್ ಆ್ಯಂಡ್ ಸೀನಿಯರ್ ಸಿಟಿಜನ್ಸ್ ಆ್ಯಕ್ಟ್$’ನಂಥ ಕಾನೂನು ಇದೆ. ಇದರ ಅನ್ವಯ ವಯೋವೃದ್ಧರಿಗೆ ಹಿಂಸೆ ನೀಡುವ ವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನು ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು, ಅಜ್ಜ-ಅಜ್ಜಿ ಯನ್ನು ಸರಿಯಾಗಿ ನೋಡಿಕೊಳ್ಳಲು ಎಚ್ಚರಿಸುತ್ತದೆ.
ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಗೊತ್ತಿರುವವರೂ ಕೂಡ ಕುಟುಂಬದ ಮರ್ಯಾದೆ ಹೋಗುತ್ತದೆ ಎನ್ನುವ ಭಯದಲ್ಲೋ, ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ಮಮತೆಯಿಂದಲೋ ಕಾನೂನಿನ ಸಹಾಯ ಪಡೆಯಲು ಮುಂದಾಗುವುದೇ ಇಲ್ಲ.
ಮೇಲೆ ಹೇಳಲಾದ ಸಮೀಕ್ಷೆಯಲ್ಲಿ ಭಾಗವಹಿಸಿದ ವರಲ್ಲಿ 70 ಪ್ರತಿಶತ ವೃದ್ಧರು ತಮಗೆ ಪೊಲೀಸ್ ಸಹಾಯವಾಣಿಯ ಬಗ್ಗೆ ತಿಳಿದಿರುವುದಾಗಿ, ಆದರೆ ಮನೆಯ ವಾತಾವರಣವನ್ನು ಹಾಳು ಮಾಡಲು ಮನಸ್ಸಿಲ್ಲದ್ದರಿಂದ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇವರಲ್ಲಿ ಕೆಲವರಿಗೆ, ಎಲ್ಲಿ ತಾವು ಪೊಲೀಸರಿಗೆ ದೂರು ಕೊಟ್ಟುಬಿಟ್ಟರೆ ಮನೆಯಲ್ಲಿ ತಮಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚಾಗಿ ಬಿಡುತ್ತದೋ ಎನ್ನುವ ಭಯವೂ ಇದೆ! ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 61 ಪ್ರತಿಶತ ವೃದ್ಧರು ತಮ್ಮ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಸೊಸೆಯೇ ಕಾರಣ ಎಂದು ಹೇಳಿದರು. ಹಾಗೆಂದು ಹಿಂಸೆ ನೀಡುವ ಮಗ-ಮಗಳ ಸಂಖ್ಯೆ ಕಡಿಮೆ ಇದೆ ಎಂದು ಸಮಾಧಾನಪಡಲು ಆದೀತೇನು?
“ಹೆಲ್ಪೆಸ್ ಇಂಟನ್ಯಾìಷನಲ್ ನೆಟವರ್ಕ್ ಆಫ್ ಚಾರಿಟೀಸ್’ ಸುಮಾರು 96 ದೇಶಗಳಲ್ಲಿ ಈ ರೀತಿಯ ಸಮೀಕ್ಷೆ ನಡೆಸಿ ತಯ್ನಾರಿಸಿದ “ಗ್ಲೋಬಲ್ ಏಜ್ ವಾಚ್ ಇಂಡೆಕ್ಸ್ 2015′ “ಯಾವ ದೇಶಗಳಲ್ಲಿ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಿದೆಯೋ ಅಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು’ ಎಂದು ಹೇಳಿರುವುದನ್ನು ನಾವು ಗಮನಿಸಲೇಬೇಕು. ಇಲ್ಲಿ ನಾನು ಹೇಳಲು ಹೊರಟಿರುವುದೇನೆಂದರೆ ಭಾರತದಲ್ಲಿ ಹಿರಿಯರ ಸುರಕ್ಷೆ, ಅವರ ದೇಖರೇಖೀಯ ವಿಷಯದಲ್ಲಿ ಬಹಳ ಕೆಟ್ಟ ವಾತಾವರಣ ಸೃಷ್ಟಿ ಆಗುತ್ತಿದೆ. ಕಾನೂನು ಇದೆಯಾದರೂ ಜನರು ಹೋಗಿ ಬಾಗಿಲುತಟ್ಟುವವರೆಗೂ ಅದು ಕೆಲಸ ಮಾಡುವುದಿಲ್ಲ. ಯಾರಾದರೂ ತಮ್ಮ ಮನೆಯಲ್ಲಿ ಹಿರಿಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದರೆ ಅವರಿಗೆ ಶಿಕ್ಷೆಯಾಗಲೇಬೇಕು. ಕನಿಷ್ಠಪಕ್ಷ ಶಿಕ್ಷೆಗಾದರೂ ಹೆದರಿ ಇವರು ಸುಮ್ಮನಾಗಬಹುದು. ಹಿರಿಯರೂ ಕೂಡ ತಮ್ಮ ಮನೋಧೋರಣೆಯನ್ನು ಬದಲಿಸಿಕೊಳ್ಳಲೇ ಬೇಕು. ನಿಮಗೆ ಹಿಂಸೆ ನೀಡುವ ಮಕ್ಕಳ ಮೇಲೆ ನಿಮ್ಮದೆಂಥ ಪ್ರೀತಿ? ಯಾಕೆ ವ್ಯಾಮೋಹ? ಆದರೆ ಈ ರೀತಿಯ ಚಿಂತನೆ ಹಿರಿಯರಲ್ಲಿ ಬರುವುದು ಅಷ್ಟು ಸುಲಭವಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ ಒಂದು ಸಮಾಜವಾಗಿ ನಾವು ಈ ಹಿಂಸಾ ಚಕ್ರವನ್ನು ನಿಲ್ಲಿಸಲು ಎಲ್ಲಿಂದಲಾದರೂ ಪ್ರಯತ್ನ ಆರಂಭಿಸಲೇಬೇಕಲ್ಲವೇ?
(ಕೃಪೆ: ಅಮರ್ ಉಜಾಲಾ)
ಅವಧೇಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.