ಚೀನಕ್ಕೆ ಉತ್ತರಿಸುವುದು ಹೇಗೆ?ಸರಕು ಬಹಿಷ್ಕಾರ,ಲಾಭದ ಲೆಕ್ಕಾಚಾರ


Team Udayavani, Jul 30, 2017, 1:10 AM IST

BL03PANI1_825356f.jpg

ಉದ್ಯಮವೊಂದು ಗ್ರಾಹಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಅದು ಕಷ್ಟಕರ. ಈ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಿದರೆ ಗ್ರಾಹಕ ಕಣ್ಣೆತ್ತಿ ನೋಡುವವನಲ್ಲ. ಅಂದರೆ ಚೀನಾ ಉದ್ಯಮಿಗಳು ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನು ಅರ್ಥೈಸಿಕೊಂಡಷ್ಟು ನಮ್ಮ ದೇಶದ  ಉದ್ಯಮಿಗಳೂ ಅರ್ಥೈಸಿಕೊಂಡಿಲ್ಲ ಎನ್ನುವುದು ಸತ್ಯ!

ಜಾಗತೀಕರಣದ ಈ ಯುಗದಲ್ಲಿ 2ನೇ ಮಹಾಯುದ್ಧದ ಅನಂತರ ದೊಡ್ಡ ಮಟ್ಟದ ಸಂಘರ್ಷಗಳು ಜಗತ್ತಿನ ರಾಷ್ಟ್ರಗಳ ನಡುವೆ ಸಂಭವಿಸದಿದ್ದರೂ ಗಡಿಯ ಕುರಿತಾಗಿ ಸಂಬಂಧಗಳು ಬಿಗಡಾಯಿಸುತ್ತಲೇ ಇರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ನೆರೆ ಕೆರೆಯ ರಾಷ್ಟ್ರಗಳು ನೆರೆಹೊರೆಯಾಗಿವೆ. ಪರಮಾಪ್ತ ಎನಿಸಿಕೊಳ್ಳುವ ರಾಷ್ಟ್ರಗಳು ಒಂದಿಲ್ಲೊಂದು ರೀತಿಯಲ್ಲಿ ಪರಸ್ಪರ ಕಿರಿಕಿರಿಯನ್ನುಂಟು ಮಾಡುತ್ತಲೇ ಇರುತ್ತವೆ. ಇದಕ್ಕೆ ನಿತ್ಯ ಯಾತನೆ ಅನುಭವಿಸುತ್ತಿರುವ ಭಾರತವೇ ಉತ್ತಮ ಉದಾಹರಣೆಯಾಗಿದೆ. ಒಂದೆಡೆ ಪಾಕಿಸ್ಥಾನ ಮತ್ತೂಂದೆಡೆ ಚೀನ. 

ಎರಡೂ ದೇಶಗಳ ನಡುವಿನ ವೈಮನಸ್ಯವು ಕ್ರೀಡೆಗೂ ಅಂಟಿಕೊಂಡಿದೆ. ಪಾಕಿಸ್ಥಾನವನ್ನು ಬಗ್ಗು ಬಡಿಯುವುದು ಹೇಗೆ? ಎಂಬ ಚಿಂತೆ ಒಂದೆಡೆಯಾದರೆ, ಚೀನದ ಉಪಟಳವನ್ನು ತಡೆಹಿಡಿಯಲು ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಿ ಸರಿಯಾದ ಪಾಠ ಕಲಿಸಬೇಕು ಎನ್ನುವ ವಾದ ಮತ್ತೂಂದೆಡೆ. ಇತ್ತೀಚಿನ ದಿನಗಳಲ್ಲಿ ಚೀನದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಮತ್ತೆ ಬಲಗೊಳ್ಳುತ್ತಿದೆ. ನಮ್ಮಲ್ಲೇ ಉತ್ಪಾದನೆಯಾದ ವಸ್ತುಗಳಿರುವಾಗ ಚೀನದ್ದು ಯಾಕೆ?
ಚೀನದ ಸರಕುಗಳು ಭಾರತೀಯ ಜನಜೀವನದಲ್ಲಿ ವಿಪರೀತವೆನಿಸುವಷ್ಟು ಹಾಸುಹೊಕ್ಕಾಗಿವೆ. ಬೆಳಗ್ಗೆ ಎದ್ದಕೂಡಲೇ ನಮ್ಮ ದೈನಂದಿನ ಚಟುವಟಿಕೆಗಳು ಪ್ರಾರಂಭಗೊಳ್ಳುವುದು ಚೀನದಲ್ಲಿ ಉತ್ಪಾದನೆಯಾದ ಸರಕಿನೊಂದಿಗೆ. ನಾವು ಹಾಸಿಗೆಯಿಂದ ಏಳಬೇಕಿದ್ದರೆ ಗಡಿಯಾರದ ಅಲರಾಂ ಆಗಬೇಕು. ಆ ಗಡಿಯಾರ ಚೀನದ ಅಗ್ಗದ ಸರಕೂ ಆಗಿರುವ ಸಾಧ್ಯತೆ ಹೆಚ್ಚು. 

ತದನಂತರ ನಾವು ಟಾಯ್ಲೆಟ್‌ನಲ್ಲಿ ಬಳಸುವ ಪರಿಕರಗಳು, ಹಲ್ಲುಜ್ಜುವ ಬ್ರಶ್‌, ಶೇವಿಂಗ್‌ ಕಿಟ್‌ಗಳೆಲ್ಲವೂ ಚೀನ ಮೇಕ್‌ ಆಗಿರಬಹುದು. ಸ್ನಾನವಾದ ಬಳಿಕ ದೇವರಕೋಣೆಗೆ ಕಾಲಿಟ್ಟ ಕೂಡಲೇ ಅಲ್ಲಿ ನಾವು ಪೂಜಿಸುವ ದೇವರ ವಿಗ್ರಹವೂ ಚೀನದ್ದೇ ಇರಬಹುದು. ಅನೇಕ ಬಾರಿ ನಾವು ಆ ವಸ್ತುಗಳು ಯಾವ ಮೇಕ್‌ ಎಂಬ ಬಗ್ಗೆ ಚಿಂತಿಸುವುದಿಲ್ಲ ಮತ್ತೆ ನಮಗೆ ಅದು ಗೊತ್ತಿರುವುದೂ ಇಲ್ಲ. ಆದರೆ ಅದು ಅಗ್ಗದ ವಸ್ತು ಅಂತ ಮಾತ್ರ ನಮಗೆ ಗೊತ್ತಿರುತ್ತದೆ. ಯಾಕೆಂದರೆ ನಾವೆಲ್ಲಾ “ರ್ಯಾಶನಲ್‌ ಬಯರ್‌’ಗಳು. ಅಂದರೆ ಕೊಳ್ಳುವ ಮೊದಲು ತೂಗಿ ಅಳೆದುಕೊಳ್ಳುವವರು. ಈ ಮಧ್ಯೆ ಸಿಕ್ಕಿದ್ದನ್ನೆಲ್ಲಾ ಕೊಳ್ಳುವ ವರ್ಗವೂ ಸೇರಿಕೊಂಡಿದೆ.  ಇನ್ನು ಅಡುಗೆ ಮನೆಯಲ್ಲಿ ಊಟದ ಟೇಬಲ್‌ನ ಮೇಲೆ ಬಳಸುವ ಸಾಧನಗಳು ಅಡುಗೆ ತಯಾರಿಕೆಗೆ ಬೇಕಾಗಿರುವ ಸಾಧನಗಳೆಲ್ಲವೂ ಮೇಡ್‌ ಇನ್‌ ಚೀನದ್ದೇ ಆಗಿರಬಹುದು. 

ನಾವು ಕೆಲಸಕ್ಕಾಗಿ ಅಥವಾ ಆಫೀಸಿಗೆ ಕಾರಿನಲ್ಲಿ ಹೋಗುವವರಾದರೆ ಕಾರಿನಲ್ಲಿ ಬಳಸುವ ಸ್ಪೀಕರ್‌, ಆಡಿಯೋ ಪ್ಲೇಯರ್‌ ಮತ್ತು ಇನ್ನಿತರ ಎಲೆಕ್ಟ್ರಾನಿಕ್‌ ಸಾಧನಗಳು ಚೀನ ಬ್ರ್ಯಾಂಡಿನದ್ದೇ ಇರಬಹುದು. ಆಫೀಸಿನಲ್ಲಿ ಬಳಸುವ ಲ್ಯಾಪ್‌ಟಾಪ್‌, ಮೊಬೈಲ್‌, ಪ್ರೊಜೆಕ್ಟರ್‌ಗಳು. ಹೀಗೆ ನಮ್ಮ ಒಂದಿಲ್ಲೊಂದು ಕೆಲಸಗಳನ್ನು ಅರಿವಿಲ್ಲದೇ ಚೀನದ ಸರಕುಗಳಿಂದಲೇ ಮಾಡಿ ಮುಗಿಸುವವರು ನಾವು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವಕರಿಗೆ ತಮ್ಮ ದೇಹವನ್ನು ಫಿಟ್‌ ಆಗಿರಿಸಲು ಜಿಮ್‌ನಲ್ಲಿ ಕಾಣಸಿಗುವ ಫಿಟ್‌ನೆಸ್‌ ಪರಿಕರಗಳಲ್ಲಿ ಹೆಚ್ಚಾಗಿ ಮೇಡ್‌ ಇನ್‌ ಚೀನ ವಸ್ತುಗಳಿರುತ್ತವೆ. ಇನ್ನು ಸಣ್ಣ ಮಕ್ಕಳೇನಾದರೂ ಹಠ ಮಾಡಿದರೆ ಅವರ ಬಾಯಿ ಮುಚ್ಚಿಸಲು ನಾವು ಹುಡುಕಿಕೊಂಡು ಹೋಗುವುದು ಅಗ್ಗದ ಆಟಿಕೆ ಚೀನದ ಉತ್ಪನ್ನವೇ. 

ಮನೆ ಅಲಂಕಾರಕ್ಕೆ ಬಳಸುವ, ಮನೆವಾರ್ತೆಗೆ ಬೇಕಾಗುವ ಫರ್ನಿಚರ್‌ನಿಂದ ಪ್ರಾರಂಭಗೊಂಡು ದೊಡ್ಡ ಕೈಗಾರಿಕೆಗಳಿಗೆ ಬಳಸುವ ಯಂತ್ರೋಪಕರಣಗಳು ಕೂಡಾ ಚೀನದ್ದೇ ಇರಬಹುದು. ಉದ್ಯಮವೊಂದು ಗ್ರಾಹಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಅದು ಕಷ್ಟಕರ. ಈ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಿದರೆ ಗ್ರಾಹಕ ಕಣ್ಣೆತ್ತಿ ನೋಡುವವನಲ್ಲ. ಅಂದರೆ ಚೀನ ಉದ್ಯಮಿಗಳು ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನು ಅರ್ಥೈಸಿಕೊಂಡಷ್ಟು ನಮ್ಮ ದೇಶದ ಉದ್ಯಮಿಗಳೂ ಅರ್ಥೈಸಿಕೊಂಡಿಲ್ಲ ಎನ್ನುವುದು ಸತ್ಯ! ಚೀನದ ಉತ್ಪನ್ನಗಳು ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಬಲಿಷ್ಟವಾಗಿ ಬೇರು ಬಿಟ್ಟಿವೆಯೆಂದರೆ, ನಮ್ಮ ಲೈಫ್ಸ್ಟೈಲನ್ನು ಆ ದೇಶ ನಿರ್ಧರಿಸುತ್ತಿದೆ! ಈ ಸರಕುಗಳು ಅಷ್ಟು ಜನಪ್ರಿಯವಾಗಲು ಕಾರಣ ಚೀನದ ವಸ್ತುಗಳನ್ನು ನಮ್ಮ ಬಜೆಟ್‌ಗೆ ಪಡೆದುಕೊಳ್ಳಬಹುದು ಎನ್ನುವುದು. 

ನಮ್ಮಲ್ಲಿ ಉತ್ಪಾದನೆಯಾದ ವಸ್ತುಗಳು ತುಟ್ಟಿ ಹಾಗೂ ನಮ್ಮ ಬಜೆಟ್‌ ಮೀರಿ ಹೋಗುವಂಥವುಗಳು. ಆದರೆ ನಮ್ಮ ದೇಶದ ವಸ್ತುಗಳು ದೀರ್ಘ‌ಕಾಲ ಬಳಸಲ್ಪಡಬಹುದಾದ ವಸುಗಳಾಗಿವೆ. ಗ್ರಾಹಕನ ಕಣ್ಣು ಅಗ್ಗದ ನಂಬಲಸಾಧ್ಯವಾದ ಚೀನದ ಉತ್ಪನ್ನಗಳ ಮೇಲೆಯೇ. ಅನೇಕ ಬಾರಿ ನಾವು ಚೀನದ ವಸ್ತುಗಳನ್ನು ಕೊಳ್ಳುವುದೇ ಇಲ್ಲ ಏನಿದ್ದರೂ ಮೇಡ್‌ ಇನ್‌ ಇಂಡಿಯಾ ಎಂಬ ಮಂತ್ರದೊಂದಿಗೆ ಅಂಗಡಿಗೆ ಹೋದರೂ ಅಗ್ಗದ ಬೆಲೆಗೆ ಮರುಳಾಗಿ ಆ ದೇಶದ ಉತ್ಪನ್ನವನ್ನೇ ಖರೀದಿಸುತ್ತೇವೆ. 

ಚೀನದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಆಂದೋಲನ ದಿನೇ ದಿನೆ ಬಲಗೊಳ್ಳುತ್ತಿದೆ. ಅನೇಕ ಸಂಘಟನೆಗಳು ಈ ಆಂದೋಲನಕ್ಕೆ ಕೈ ಜೋಡಿಸಿವೆ. ಚೀನದ ವಸ್ತುಗಳನ್ನು ಬಹಿಷ್ಕರಿಸಬಹುದು ಅದರ ಬದಲಿಗೆ ಅಗ್ಗದ ವಸ್ತುಗಳು ಇಲ್ಲದಿದ್ದರೆ ಬಹಿಷ್ಕರಿಸುವ ಪ್ರಯತ್ನ ಫಲ ಕೊಡಲಿಕ್ಕಿಲ್ಲ. ಚೀನದ ಕಂಪೆನಿಗಳು ಯಾವ ವಸ್ತು ಬೇಕೋ ಆ ವಸ್ತುವನ್ನು ಕಾಪಿ ಮಾಡಿಕೊಡುವುದರಲ್ಲಿ ನಿಸ್ಸೀಮತೆ ಸಾಧಿಸಿವೆ. ಚೀನದೊಂದಿಗೆ ನಮ್ಮ ವ್ಯಾಪಾರವೂ ಲಾಭದಾಯಕವಾಗಿಲ್ಲ. ಚೀನಕ್ಕೆ ಭಾರತದ ರಫ್ತು ಕುಸಿದಿದೆ. ಆಮದು (ಮುಖ್ಯವಾಗಿ ಎಲೆಕ್ಟ್ರಾನಿಕ್ಸ್‌ ಮತ್ತು ಇತರ ಉತ್ಪಾದಕಾ ಸರಕುಗಳು) ಮಾತ್ರ ಹೆಚ್ಚಳವಾಗಿದೆ. ನಮ್ಮ ದೇಶದ ಔಷಧ ವಲಯವು ಚೀನದ ಮೇಲೆ ಅವಲಂಬಿತವಾಗಿವೆ. ಭಾರತ ಅನ್ನುವುದು ಚೀನಕ್ಕೆ ಮಾರುಕಟ್ಟೆಯೇ ಹೊರತು ಬೇರೇನೂ ಅಲ್ಲ.

ಆದರೆ 1.32 ಬಿಲಿಯನ್‌ ಜನರನ್ನು ಹೊಂದಿರುವ ಭಾರತದ ಆಂತರಿಕ ಮಾರುಕಟ್ಟೆಯೇ ಬದುದೊಡ್ಡದಿದೆ. ಉದ್ಯಮಸ್ನೇಹಿ ವಾತಾವರಣ ನಿರ್ಮಾಣದ ಅಗತ್ಯವಿದೆ. ನಾವೇನಾದರೂ ನಮ್ಮ ನೆಲದಲ್ಲಿ ಶ್ರೀಮಂತರಾಗಬೇಕಾದರೆ ಮೊದಲು ಮಾಡಬೇಕಾದದ್ದು ರಸ್ತೆ ನಿರ್ಮಾಣ ಅಥವಾ ಸುಗಮ ಸಂಚಾರ ವ್ಯವಸ್ಥೆ. ಮೂಲಸೌಕರ್ಯಗಳ ಅಭಿವೃದ್ಧಿ ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾಕ್ಕೆ ಪೂರಕ. ವಿದೇಶಿ ನೇರ ಹೂಡಿಕೆ ಪ್ರಮಾಣ ಹೆಚ್ಚಿದೆ. ಶೇ. 65 ಜನರು ಯುವಕರು. ಕೆಲಸ ಮಾಡುವ ಕೈಗಳು ಬೇಕಾದಷ್ಟಿವೆ. ಭೃಷ್ಟಾಚಾರ, ಲಂಚ, ಮೋಸ ಹೋಗಲಾಡಿಸಿ ಶುಭ್ರ ಭಾರತ ನಿರ್ಮಾಣವಾಗಬೇಕು.

ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸಲು ನೈಪುಣ್ಯ ವಿರುವ ಸಂಶೋಧನೆಗಳು, ನಮ್ಮ ದೇಶವನ್ನು ಚೀನದಂತೆ ಜಾಗತಿಕ ಉತ್ಪಾ ದಕಾ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಮ್ಮ ಆಂದೋಲನಕ್ಕೆ ಅಗತ್ಯವಿರುವ ಆಮ್ಲಜನಕವನ್ನು ನೀಡಬಹುದು. ಆಗ ಮಾತ್ರ ಇಂಡಿಯಾ ಫಸ್ಟ್‌, ಇಂಡಿಯಾ ಬೆಸ್ಟ್‌. ಇಂಡಿಯಾದ ವಸ್ತುಗಳನ್ನು ಕೊಳ್ಳಿರಿ ಆಂದೋಲನ ಸಾಕಾರಗೊಳ್ಳಬಹುದು.

ಉತ್ತಮ ಬೇಡಿಕೆ ಇರುವ ವಸ್ತುಗಳನ್ನು ಉತ್ಪಾದಿಸಿ ದೇಶದ ಮಾರುಕಟ್ಟೆ ಯಲ್ಲಿ ಹರಿಯ ಬಿಟ್ಟು ಚೀನದ ವಸ್ತುಗಳ ಮಾರುಕಟ್ಟೆಯನ್ನು ಕ್ಷೀಣಗೊಳಿಸಿದರೆ ನಮ್ಮ ಆಂದೋಲನ ಸಾರ್ಥಕ್ಯವನ್ನು ಪಡೆದಂತೆ.

– ರಾಘವೇಂದ್ರ ರಾವ್‌,ನಿಟ್ಟೆ

ಟಾಪ್ ನ್ಯೂಸ್

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.