ಜೀವನದಲ್ಲಿ ಸಂತೋಷವಾಗಿರುವುದು ಹೇಗೆ ?


Team Udayavani, Jul 18, 2023, 8:45 AM IST

ಜೀವನದಲ್ಲಿ ಸಂತೋಷವಾಗಿರುವುದು ಹೇಗೆ ?

“ಸಂತೋಷವಾಗಿ ಜೀವಿಸುವುದು ಹೇಗೆ’ ಎಂಬುದು ಬಹುತೇಕ ಜನರ ಪ್ರಶ್ನೆ. ಈ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರ ಸಿಗಲಾರದು. ಏಕೆಂದರೆ ಆ ವ್ಯಕ್ತಿಯ ಕೈಯÇÉೇ ಅವನ ಜೀವನದ ಸಂತೋಷವು ಅಡಗಿದೆ. ಒಂದು ಕೈಯಲ್ಲಿನ ಐದು ವಿವಿಧ ಬೆರಳುಗಳ ಉದ್ದ ದಂತೆಯೇ, ವಿವಿಧ ಜನರಿಗೆ ಸಂತೋಷವು ವಿಭಿನ್ನವಾಗಿರುತ್ತದೆ.

ಈ ಹಿಂದೆ ನಮ್ಮ ಜೀವನದ ಸಂತೋಷವು ವಿಭಿನ್ನ ವಾಗಿತ್ತು. 50 ವರ್ಷಗಳ ಹಿಂದೆಯಷ್ಟೇ ತಂತ್ರಜ್ಞಾನವು ಹುಟ್ಟಿಕೊಂಡಿತು ಮತ್ತು ಪ್ರಸ್ತುತ ಸ್ಮಾರ್ಟ್‌ ಫೋನ್‌ ಯುಗದಲ್ಲಿ ನಾವು ಸಂತೋಷವನ್ನು ಬೇರೆ ರೀತಿಯಲ್ಲಿ ಹುಡುಕುತ್ತಿದ್ದೇವೆ. ಜೀವನದಲ್ಲಿನ ಸಂತೋಷವನ್ನು ಅನುಭವಿಸುವಲ್ಲಿ ಬಹಳಷ್ಟು ಅಡಚಣೆಗಳಿವೆ – ಆತಂಕ, ವೈಫ‌ಲ್ಯದ ಭಯ, ಕೋಪ, ಹತಾಶೆ, ಹೋಲಿಕೆ ಇತ್ಯಾದಿ.

ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ತನ್ನ ಜೀವನದ ಯಾವುದಾದರೊಂದು ಸಮಯದಲ್ಲಿ ಆತಂಕವನ್ನು ಅನುಭವಿಸುತ್ತದೆ. ಅದು ಮನೆಗೆ ಆಹಾರ ವನ್ನು ಹೊತ್ತೂಯ್ಯುತ್ತಿರುವ ಇರುವೆಯಾಗಿರಬಹುದು ಅಥವಾ ಸಾಗರದಾಳದಲ್ಲಿರುವ ನೀಲಿ ತಿಮಿಂಗಿಲವೇ ಆಗಿರಬಹುದು. ನರಮಂಡಲವನ್ನು ಹೊಂದಿರುವ ಪ್ರತಿ ಯೊಂದು ಜೀವಿಯಲ್ಲಿಯೂ ಆತಂಕ ಕಂಡು ಬರುತ್ತದೆ. ಹೆಸರೇ ಸೂಚಿಸುವಂತೆ, ನರ್ವಸ್‌ ಸಿಸ್ಟಮ್‌ ಪೂರ್ವ ನಿಯೋಜಿತವಾಗಿ ಕೆಲವೊಮ್ಮೆ ನರ್ವಸ್‌ ಆಗುತ್ತದೆ. ಆದರೆ ಅದು ಅತಿಯಾಗಿ ಸಂಭವಿಸಿದಾಗ ತೊಂದರೆ ಯಾಗಬಹುದು.ಆತಂಕಕ್ಕೆ ಮುಖ್ಯ ಕಾರಣವೆಂದರೆ ಅತಿಯಾಗಿ ಯೋಚಿ ಸುವುದು. ಅತಿಯಾಗಿ ಯೋಚಿಸುವವನಿಗೆ ಆತಂಕ ಕಂಡು ಬರುತ್ತದೆ (anxiety attack). ಕೆಲವೊಮ್ಮೆ ಆತಂಕ ಇಲ್ಲದಿರುವಾಗಲೂ ಅವನು ಚಿಂತಿಸುತ್ತಲಿರುತ್ತಾನೆ.

ತಮ್ಮ ಸಾಮರ್ಥ್ಯವನ್ನು ಅನ್ವೇಷಿಸಲು ಸಾಧ್ಯವಾಗದಿರಲು ವೈಫ‌ಲ್ಯದ ಭಯವೂ ಮತ್ತೂಂದು ಪ್ರಮುಖ ಕಾರಣ. ಅನೇಕ ಬಾರಿ ನಾವು ಹೊಸದನ್ನು ಪ್ರಾರಂಭಿಸು ವುದಿಲ್ಲ, ಅದು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ನಾನು ಬೆಸ್ಟ್‌ ಆಗದಿದ್ದರೆ?, ನಾನು ವಿಫ‌ಲವಾದರೆ?, ಜನ ನನ್ನನ್ನು ನೋಡಿ ನಕ್ಕರೆ ಏನು ಮಾಡೋದು? ಇವು ನಮ್ಮನ್ನು ಕಾಡುವ ಆಲೋಚನೆಗಳು. ಇದರಿಂದ ಜೀವನದ ಸಂತೋಷವು ಮರೆಯಾಗುತ್ತದೆ.

ಅಲ್ಲದೆ ಇತರ ಜನರೊಂದಿಗೆ ಹೋಲಿಕೆ ಕೇವಲ ಹತಾಶೆಯನ್ನು ಮೂಡಿಸುತ್ತದೆ. ಆದರೆ ದೀರ್ಘಾವಧಿಯಲ್ಲಿ ಇದು ನಿರಾಶೆಗೆ ಕಾರಣವಾಗುತ್ತದೆ. 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಒಬ್ಬ ಕ್ರೀಡಾಪಟು ತನ್ನ ರನ್ನಿಂಗ್‌ ಟ್ರಾÂಕ್‌ ಮೇಲೆ ಮಾತ್ರ ಗಮನಹರಿಸುತ್ತಾನೆ ಮತ್ತು ದಾಖಲೆಯನ್ನು ಸ್ಥಾಪಿಸಲು, ಉತ್ತಮ ಸಮಯದಲ್ಲಿ ರೇಸ್‌ ಮುಗಿಸಲು ಪ್ರಯತ್ನಿಸುತ್ತಾನೆ. ಅವರು ಇತರ ಕ್ರೀಡಾಪಟುಗಳ ಹಾದಿ ಯನ್ನು ಗಮನಿಸುವುದಿಲ್ಲ. ಅಂತೆಯೇ ನಾವು ನಮ್ಮ ಸ್ವಂತ ಸಾಮರ್ಥ್ಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕು ಮತ್ತು ಪ್ರತೀದಿನ ಹೆಚ್ಚು ಶ್ರಮಿಸಬೇಕು.

ಜೀವನದ ನಿಜವಾದ ಸಂತೋಷವು ಜೀವನದ ಸಣ್ಣ ಸಣ್ಣ ವಿಷಯಗಳಲ್ಲಿ ಅಡಗಿದೆ. ಮೊದಲ ಮಳೆಯ ಮಣ್ಣಿನ ಸುವಾಸನೆಯಂತೆ, ಪರ್ವತಗಳ ಮೇಲಿಂದ ಸೂರ್ಯ ಉದಯಿಸುವಂತೆ ಅಥವಾ ಮೊದಲ ಬಾರಿಗೆ ಸೈಕಲ್‌ ತಂದುಕೊಟ್ಟಾಗ ಮಗುವಿಗಾಗುವ ಸಂತೋಷ ದಂತೆ. ನಾವು ಬೆಳೆದಂತೆ, ಜೀವನದಲ್ಲಿ ಸಣ್ಣ ವಿಷಯ ಗಳನ್ನು ಆನಂದಿಸಲು ಮರೆತು ಬಿಡುತ್ತೇವೆ. ಸಂತೋಷ ವಾಗಿರಲು ಜೀವನದ ಮಂತ್ರ ಅಥವಾ ಹಾದಿ ಹೀಗಿರ ಬೇಕು: ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಿ, ವೈಫ‌ಲ್ಯಕ್ಕೆ ಹೆದರಬೇಡಿ, ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ ಮತ್ತು ಕೊನೆಯದಾಗಿ ಜೀವನದಲ್ಲಿ ಸಣ್ಣ ವಿಷಯಗಳನ್ನು ಆನಂದಿಸಲು ಪ್ರಾರಂಭಿಸಿ.

-ಡಾ| ರಾಹುಲ್‌ ಮಾಧವ ರಾವ್‌, ಮಂಗಳೂರು

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.