ಮನೆಯಂಗಳದಲ್ಲೇ ಬೆಳೆಯಿರಿ ಸೋರೆಕಾಯಿ

ಸೋರೆಕಾಯಿಯಿಂದ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ ಇತ್ಯಾದಿಗಳನ್ನು ತಯಾರಿಸುತ್ತಾರೆ.

Team Udayavani, Mar 19, 2021, 11:05 AM IST

ಮನೆಯಂಗಳದಲ್ಲೇ ಬೆಳೆಯಿರಿ ಸೋರೆಕಾಯಿ

ಸೋರೆಕಾಯಿ ಹಳ್ಳಿಯಲ್ಲಿ ಮಾತ್ರ ಬೆಳೆಯಲು ಸಾಧ್ಯ ಎಂದು ನೀವಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ನಗರದ ಸ್ವಲ್ಪವೇ ಜಾಗವಿದ್ದರೂ ಸೋರೆಕಾಯಿಯನ್ನು ಬೆಳೆಯಲು ಸಾಧ್ಯವಿದೆ. ಸೋರೆಕಾಯಿಯ ಬಳ್ಳಿ ಹಬ್ಬಲು ಸ್ಥಳ ಸಿಕ್ಕರೆ ಸಾಕು. ಅತ್ಯುತ್ತಮ ಗುಣಮಟ್ಟ ಮತ್ತು ಪೌಷ್ಟಿಕಾಂಶ ವುಳ್ಳ ತರಕಾರಿ ನಿಮ್ಮ ಮನೆಯಲ್ಲೇ ಮಾಡಬಹುದು.

ಬಳ್ಳಿಯ ರೂಪದ ಗಿಡದಲ್ಲಿ ಬೆಳೆಯುವ ಸೋರೆಕಾಯಿ ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇತರ ಬೆಳೆಗಳಿಗೆ ಹೋಲಿಸಿದರೆ ಸೋರೆ ಸುಲಭ ಮತ್ತು ಕಡಿಮೆ ಖರ್ಚಿನ ತರಕಾರಿ ಬೆಳೆ ಮತ್ತು ನಿರ್ದಿಷ್ಟ ಸ್ಥಳಾವಕಾಶವನ್ನೂ ಸೋರೆ ಕೃಷಿ ಬಯಸುವುದಿಲ್ಲ. ಔಷಧದ ತಯಾರಿಯಲ್ಲಿ ಸೋರೆಕಾಯಿ ಪ್ರಯೋಜನಕಾರಿ.

ವೈದ್ಯರು ಕೆಲವು ಕಾಯಿಲೆಗಳಿಗೂ ಸೋರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಲು ಸೂಚಿಸುವುದರಿಂದ ತಂಪಿನ ತರಕಾರಿ ಸೋರೆಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್‌, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್‌, ರಂಜಕ, “ಸಿ’ ಜೀವಸತ್ವ ಇತ್ಯಾದಿ
ಪೌಷ್ಟಿಕಾಂಶಗಳು ಹೇರಳವಾಗಿ ಹೊಂದಿರುವ ಸೋರೆಕಾಯಿಯಿಂದ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ ಇತ್ಯಾದಿಗಳನ್ನು ತಯಾರಿಸುತ್ತಾರೆ.

ಗೊಬ್ಬರ
ಸೋರೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ನೆಲಗಡಲೆ ಹಿಂಡಿಯನ್ನು ಬಳಸಬಹುದು. ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಹಾದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.

ಈ ಮಣ್ಣಿನಲ್ಲಿ ಬೆಳೆಯಿರಿ ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಉತ್ತಮ. ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ
ಬೆಳೆಯುವ ಸೋರೆಗೆ ಶೈತ್ಯ ಹವಾಗುಣ ಅಷ್ಟು ಸಹಕಾರಿಯಲ್ಲ. ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ. ಜೂನ್‌- ಜುಲೈ, ಅಕ್ಟೋಬರ್‌- ನವೆಂಬರ್ ಅಥವಾ ಫೆಬ್ರವರಿ- ಮಾರ್ಚ್ ತಿಂಗಳುಗಳು ಸೋರೆ ಬೆಳೆಯಲು ಸೂಕ್ತ ಸಮಯ ಹೀಗೆ ಬೆಳೆಯಿರಿ.

*ಬೀಜ ಬಿತ್ತನೆಯ ವಾರದಲ್ಲಿ ಗಿಡ ಮೊಳಕೆ ಬರುತ್ತವೆ

*ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಗೊಬ್ಬರ ಹಾಕಬೇಕು.
*ಮತ್ತೂಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬಹುದು.
*ಬಳ್ಳಿ ಹಬ್ಬಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶ ಬೇಕಾದಷ್ಟಿದ್ದರೆ ನೆಲದಲ್ಲಿಯೇ ಬಳ್ಳಿ ಹಬ್ಬಲು ಬಿಡಬಹುದು.
*ತಾರಸಿ ಮೇಲೆಯೂ ಬಳ್ಳಿಯನ್ನು ಬಿಟ್ಟರೆ ಸೋರೆಕಾಯಿ ಬೆಳೆಯುತ್ತದೆ.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024-Merge

Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು

Amber-1

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

China

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.