Trump ಮನೆಯಲ್ಲಿ ನೂರಾರು ರಹಸ್ಯ ದಾಖಲೆಗಳು: ಟ್ರಂಪ್‌ ಭವಿಷ್ಯಕ್ಕೆ ಅಂಧಕಾರ?


Team Udayavani, Jun 12, 2023, 7:25 AM IST

trump

ಅಮೆರಿಕದ ಮಾಜಿ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್‌, ನೂರಾರು ರಹಸ್ಯ ದಾಖಲೆಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದ ಕುರಿತಂತೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಒಂದು ವೇಳೆ ಈ ಆರೋಪ ಏನಾದರೂ ಸಾಬೀತಾದರೆ ಟ್ರಂಪ್‌ಗೆ 20 ವರ್ಷಗಳ ವರೆಗೆ ಜೈಲು ಶಿಕ್ಷೆಯಾಗಬಹುದು. ಸದ್ಯ ಅಮೆರಿಕ ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲೂ ಟ್ರಂಪ್‌ ಇದ್ದಾರೆ. ಹಾಗಾದರೆ ಮುಂದೇನಾಗಲಿದೆ? ಟ್ರಂಪ್‌ಗೆ ಶಿಕ್ಷೆಯಾಗುತ್ತಾ? ಅವರು ಅಧ್ಯಕ್ಷೀಯ ಚುನಾವಣ ಸ್ಪರ್ಧೆಯಲ್ಲಿ ಮುಂದುವರಿಯಬಹುದಾ? ಇಲ್ಲಿದೆ ಮಾಹಿತಿ…

ಟ್ರಂಪ್‌ ಮೇಲಿರುವ ಆರೋಪಗಳೇನು?

ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ, ಪರಮಾಣು ಸಂಬಂಧಿತ ರಹಸ್ಯ ದಾಖಲೆಗಳನ್ನೂ ಸೇರಿಸಿ ಹಲವಾರು ಕ್ಲಾಸಿಫೈಡ್‌ ದಾಖಲೆಗಳನ್ನು ತಮ್ಮ ಎಸ್ಟೇಟ್‌ಗೆ ಸಾಗಿಸಿ ಅಲ್ಲೇ ಇರಿಸಿಕೊಂಡಿದ್ದರು. ಕಾನೂನಿನ ಪ್ರಕಾರ ಇದು ತಪ್ಪು. ಯಾವುದೇ ಕಾರಣಕ್ಕೂ ಇಂಥ ದಾಖಲೆಗಳನ್ನು ಕಚೇರಿ ಹೊರತುಪಡಿಸಿ ಬೇರೆಡೆ ಕೊಂಡೊಯ್ಯಬಾರದು. ಅಲ್ಲದೆ ರಹಸ್ಯ ದಾಖಲೆಗಳ ಸಂಬಂಧ ತನಿಖಾಧಿಕಾರಿಗಳಿಗೂ ಅಡ್ಡಿ ಪಡಿಸಿದ ಆರೋಪಗಳೂ ಇವೆ. ಆದರೆ 2024ರ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗುತ್ತಿರುವ ಟ್ರಂಪ್‌, ಈ ಎಲ್ಲ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ಆದರೆ ಕಾನೂನು ತಜ್ಞರು ಹೇಳುವ ಪ್ರಕಾರ, ಟ್ರಂಪ್‌ ಅವರ ಮೇಲಿನ 37 ಕೌಂಟ್‌ ಆರೋಪಗಳಿಂದಾಗಿ ಅವರು ಜೈಲು ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.

ಆಪ್ತರ ಮೇಲೂ ಕೇಸ್‌

ಕೇವಲ ಟ್ರಂಪ್‌ ಅವರೊಬ್ಬರೇ ಅಲ್ಲ, ಆಪ್ತ ಸಹಾಯಕರಾದ ವಾಲ್ಟ್ ನಾಟ್‌ ಮೇಲೂ ದೋಷಾರೋಪ ಹೊರಿಸಲಾಗಿದೆ. ಇವರು ಶ್ವೇತಭವನದ ಮಿಲಿಟರಿ ವಿಭಾಗದ ಸಿಬಂದಿಯಾಗಿದ್ದು, ಇವರೇ ರಹಸ್ಯ ದಾಖಲೆಗಳನ್ನು ಟ್ರಂಪ್‌ ಅವರ ಎಸ್ಟೇಟ್‌ಗೆ ಸಾಗಿಸಿದ್ದರು. ಒಟ್ಟಾರೆಯಾಗಿ 49 ಪುಟಗಳ ದೋಷಾರೋಪ ಹೊರಿಸಲಾಗಿದೆ.

ಟ್ರಂಪ್‌ ಎಸ್ಟೇಟ್‌ನಲ್ಲಿ ಸಿಕ್ಕ ದಾಖಲೆಗಳು

ಅಮೆರಿಕದ ಪರಮಾಣುಕಾರ್ಯಕ್ರಮದ ದಾಖಲೆ

ಅಮೆರಿಕ ಮತ್ತು ಇತರ ದೇಶಗಳ ರಕ್ಷಣ ಮತ್ತು ಶಸ್ತ್ರಾಸ್ತ್ರಗಳ ಮಾಹಿತಿ

ಅಮೆರಿಕ ಮತ್ತು ಸ್ನೇಹಿ ದೇಶಗಳ ಮೇಲಿನ ಸಂಭಾವ್ಯ ದಾಳಿಗಳ ಕುರಿತ ಮಾಹಿತಿ

ವಿದೇಶಿ ಶಕ್ತಿಯೊಂದು ದಾಳಿ ಮಾಡಿದರೆ ಅದರಿಂದ ತಪ್ಪಿಸಿಕೊಳ್ಳುವ ಕುರಿತ ಯೋಜನಾ ಮಾಹಿತಿ

ಟ್ರಂಪ್‌ ಮೇಲೆ ಹೊರಿಸಿರುವ ಆರೋಪಗಳು

ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ರಕ್ಷಣ ಮಾಹಿತಿ ಸಂಗ್ರಹ : ಈ ಆರೋಪವನ್ನು ಟ್ರಂಪ್‌ ಅವರ ಮೇಲಷ್ಟೇ ಹೊರಿಸಲಾಗಿದೆ. ರಕ್ಷಣ ಇಲಾಖೆಗೆ ಸೇರಿದ 31 ಕಡತಗಳನ್ನು ಸಂಗ್ರಹಿಸಿ ಇಟ್ಟ ಕಾರಣದಿಂದಾಗಿ ಈ ಆರೋಪ.

ನ್ಯಾಯ ನೀಡಿಕೆಗೆ ತೊಂದರೆ : ಟ್ರಂಪ್‌ ಮತ್ತು ಆಪ್ತ ನಾಟ್‌ ಮತ್ತಿತರರ ಮೇಲೆ ಈ ಆರೋಪ ಹೊರಿಸಲಾಗಿದೆ. ನ್ಯಾಯಾಧೀಶರಿಗೂ ಸಿಗದಂತೆ ಈ ದಾಖಲೆಗಳನ್ನು ಎತ್ತಿ ಇಟ್ಟಿದ್ದರು ಎಂಬ ಆರೋಪವಿದೆ.

ರಹಸ್ಯ ದಾಖಲೆಗಳ ಮುಚ್ಚಿಟ್ಟ ಆರೋಪ : ವಕೀಲರನ್ನು ದಾರಿ ತಪ್ಪಿಸಿದ್ದ ಟ್ರಂಪ್‌ ಮತ್ತು ನಾಟ್‌ ತಮ್ಮಲ್ಲಿದ್ದ ರಹಸ್ಯ ದಾಖಲೆಗಳ ಬಾಕ್ಸ್‌ಗಳನ್ನು ಬೇರೆಡೆ ವರ್ಗಾಯಿಸಿದ್ದರು. ಇವುಗಳನ್ನು ಗ್ರಾಂಡ್‌ ಜ್ಯೂರಿಗೆ ಸಿಗದಂತೆ ಮಾಡಿದ್ದರು.

ಎಫ್ಬಿಐಗೆ ದಾರಿ ತಪ್ಪಿಸಿದ ಆರೋಪ : ಎಫ್ಬಿಐ ಅವರು ಹೇಳಿದ ದಾಖಲೆಗಳನ್ನು ನೀಡದೇ ರಹಸ್ಯಗಳನ್ನು ಮುಚ್ಚಿಟ್ಟಿದ್ದರು. ತಮ್ಮಲ್ಲಿ ಯಾವುದೇ ದಾಖಲೆಇಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು.

ರವಾನೆಯಾಗಿದ್ದು ಯಾವಾಗ?

2020ರಲ್ಲಿ ಟ್ರಂಪ್‌ ಸೋತ ಮೇಲೆ ಶ್ವೇತಭವನವನ್ನು ಖಾಲಿ ಮಾಡಿದ್ದರು. ಅದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ತಮ್ಮೊಂದಿಗೆ ಎಸ್ಟೇಟ್‌ ಆದ ಮಾರ್‌ ಎ ಲಾಗೋಗೆ ತೆಗೆದುಕೊಂಡು ಹೋಗಿದ್ದರು.  ಟ್ರಂಪ್‌ ಅವರ ಈ ಎಸ್ಟೇಟ್‌ನಲ್ಲಿರುವ ನಿವಾಸವನ್ನು ಪಾರ್ಟಿಗಳು ಸೇರಿದಂತೆ ಬೇರೆ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದರು.

ಆಗಾಗ ಸಾವಿರಾರು ಮಂದಿ ಇಲ್ಲಿ ಸೇರುತ್ತಿದ್ದರು. ಇಂಥ ಕಡೆಗಳಲ್ಲಿ ರಹಸ್ಯ ದಾಖಲೆಗಳನ್ನು ಇರಿಸಲಾಗಿತ್ತು ಎಂಬುದು ದೋಷಾರೋಪದಲ್ಲಿರುವ ಪ್ರಮುಖ ಆರೋಪ.

ಅಲ್ಲದೆ, ಇಂಥ ದಾಖಲೆಗಳನ್ನು ಇಡಲು ಅಥವಾ ಇಂಥ ದಾಖಲೆಗಳ ಬಗ್ಗೆ ಚರ್ಚೆ ಮಾಡಲು ಮಾರ್‌ ಎ ಲಾಗೋ ಸೂಕ್ತವಾದ ಸ್ಥಳವಾಗಿರಲಿಲ್ಲ.

ದಾಖಲೆ ಸಿಕ್ಕಿದ್ದು ಎಲ್ಲಿ?

ಟ್ರಂಪ್‌ ಅವರ ಎಸ್ಟೇಟ್‌ನ ಬಾಲ್‌ರೂಂ, ಸ್ನಾನದ ಕೋಣೆ, ಕಚೇರಿ ಮತ್ತು ಟ್ರಂಪ್‌ ಅವರ ಬೆಡ್‌ರೂಂನಲ್ಲಿಯ ರಹಸ್ಯ ದಾಖಲೆಗಳು ಸಿಕ್ಕಿವೆ. 2021ರಲ್ಲಿ ಟ್ರಂಪ್‌ ಅವರು ಈ ರಹಸ್ಯ ದಾಖಲೆಗಳನ್ನು ಯಾವುದೇ ಭದ್ರತಾ ಕ್ಲಿಯರೆನ್ಸ್‌ ಪಡೆಯದವರಿಗೂ ತೋರಿಸಿದ್ದರು. ಅಲ್ಲದೆ ಒಬ್ಬ ಲೇಖಕರು ಮತ್ತು ಇಬ್ಬರು ಕಚೇರಿ ಸಿಬಂದಿಗೂ ಈ ದಾಖಲೆಗಳನ್ನು ತೋರಿಸಲಾಗಿತ್ತು.  ಅಲ್ಲದೆ ನ್ಯೂಜೆರ್ಸಿಯಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ ಇವರು ಕೆಲವು ಮಂದಿಗೆ ಅಮೆರಿಕದ ಮೇಲೆ ನಡೆಯಬಲ್ಲ ಸಂಭಾವ್ಯ ದಾಳಿಗಳ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದರು. ಈ ದಾಖಲೆಗಳನ್ನು ಅಮೆರಿಕದ ರಕ್ಷಣ ಇಲಾಖೆ, ತಯಾರಿಸಿಕೊಟ್ಟಿತ್ತು. ಅಧ್ಯಕ್ಷರು ಮಾತ್ರ ಇಂಥ ದಾಖಲೆ ಗಳನ್ನು ಬಹಿರಂಗಪಡಿಸಬಹುದು. ಈಗಲೂ ಈ ದಾಖಲೆಗಳು ರಹಸ್ಯವಾಗಿವೆ. ಆದರೆ ನನ್ನ ಬಳಿಯೂ ಇವೆ  ಎಂದಿದ್ದರು.

FBI ತನಿಖೆಗೆ ಅಡ್ಡಿ

ಕಾಣೆಯಾದ ದಾಖಲೆಗಳ ಕುರಿತಂತೆ ಎಫ್ಬಿಐ ತನಿಖೆ ನಡೆಸುತ್ತಿದೆ. ಆದರೆ ಟ್ರಂಪ್‌ ತನಿಖೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ಅಲ್ಲದೆ ತನಿಖಾಧಿಕಾರಿಗಳು ಕೇಳಿದಾಗ, ನಮ್ಮಲ್ಲಿ ಯಾವ ದಾಖಲೆಗಳು ಇಲ್ಲ ಎಂದು ಎಫ್ಬಿಐಗೆ ಹೇಳಿದರೆ ಒಳ್ಳೆಯದಲ್ಲವೇ ಎಂದು ಅವರ ವಕೀಲರೊಬ್ಬರ ಜತೆಗೂ ಟ್ರಂಪ್‌ ಚರ್ಚಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಇದೇ ಮಂಗಳವಾರ ಟ್ರಂಪ್‌, ಫ್ಲೋರಿಡಾದ ಮಿಯಾಮಿಯಲ್ಲಿ

ಕೋರ್ಟ್‌ಗೆ ಹಾಜರಾಗಲಿದ್ದಾರೆ.

ಶಿಕ್ಷೆ ಏನಾಗಬಹುದು?

ಟ್ರಂಪ್‌ ಮೇಲಿರುವ ಎಲ್ಲ ಆರೋಪಗಳು ಸಾಬೀತಾದರೆ ಅವರಿಗೆ 2.50 ಲಕ್ಷ ಡಾಲರ್‌ ದಂಡ ಮತ್ತು 20 ವರ್ಷಗಳ ವರೆಗೆ ಜೈಲುಶಿಕ್ಷೆಯಾಗಬಹುದು.

ಎರಡನೇ ದೋಷಾರೋಪ

ಇದು ಟ್ರಂಪ್‌ ಅವರ ಮೇಲೆ ಹೊರಿಸುತ್ತಿರುವ ಮೊದಲ ದೋಷಾರೋಪ ಅಲ್ಲ. ಮಾರ್ಚ್‌ನಲ್ಲಿ ವಯಸ್ಕರ ಚಿತ್ರದ ಮಾಜಿ ತಾರೆಯೊಬ್ಬರಿಗೆ ಅಕ್ರಮವಾಗಿ ಹಣ ನೀಡಿ ರಹಸ್ಯವಾಗಿರುವಂತೆ ಹೇಳಿದ್ದರು. 2016ರಲ್ಲಿ ಟ್ರಂಪ್‌ ಅವರು ಹಣ ನೀಡಿದ್ದರು.

ಟ್ರಂಪ್‌ ನೇಮಕ ಮಾಡಿದ್ದ ಜಡ್ಜ್ರಿಂದಲೇ ವಿಚಾರಣೆ

ವಿಶೇಷವೆಂದರೆ, ಟ್ರಂಪ್‌ ಅವರ ಮೇಲಿನ ಈ ಆರೋಪಗಳ ಕುರಿತಂತೆ ಟ್ರಂಪ್‌ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ನ್ಯಾಯಾಧೀಶರಾದ ಎಲೀನ್‌ ಕ್ಯಾನನ್‌ ವಿಚಾರಣೆ ನಡೆಸಲಿದ್ದಾರೆ. ಇವರು ಟ್ರಂಪ್‌ ಅವರ ರೆಸಾರ್ಟ್‌ ಮೇಲೆ ದಾಳಿ ಮಾಡುವಂತೆ ಎಫ್ಬಿಐಗೆ ಆದೇಶ ನೀಡಿದ್ದರು. ಆದರೆ ಈಗ ಕ್ಯಾನನ್‌ ವಿಚಾರಣೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.

2024ರ ಚುನಾವಣೆ ಮೇಲೆ ಪರಿಣಾಮ?

ಟ್ರಂಪ್‌ ಮೇಲಿನ ಆರೋಪ ಸಂಬಂಧ ತ್ವರಿತವಾಗಿ ವಿಚಾರಣೆ ನಡೆಸಲು ಕೋರ್ಚ್‌ ನಿಶ್ಚಯಿಸಿದೆ. ಇದಕ್ಕಾಗಿ ಕೋರ್ಟ್‌ನ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಅಲ್ಲದೆ ಸದ್ಯ ಅಧ್ಯಕ್ಷ ಗಾದಿ ಸ್ಪರ್ಧೆಯಿಂದ ಟ್ರಂಪ್‌ ಹಿಂದುಳಿಯುವಂತೆ ಮಾಡುವಂತಿಲ್ಲ. ಅವರು ಚುನಾವಣ ಕಣದಲ್ಲಿ ಇರಬಹುದು. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ಇಡೀ ಪ್ರಕರಣ ಉಲ್ಟಾ ಆಗಬಹುದು. ಏಕೆಂದರೆ ಟ್ರಂಪ್‌ ಅವರ ನಿಯಂತ್ರಣಕ್ಕೆ ಕಾನೂನು ವಿಭಾಗ ಬರುವುದರಿಂದ ಇಡೀ ಕೇಸನ್ನೇ ರದ್ದು ಮಾಡಬಹುದು.

ಟ್ರಂಪ್‌ ಜೈಲಿಗೆ ಹೋಗುತ್ತಾರಾ?

ವಿಚಾರಣೆ ಇನ್ನಷ್ಟೇ ಆರಂಭವಾಗಬೇಕು. ಒಂದು ವೇಳೆ ಕೇಸಿನಲ್ಲಿ ಟ್ರಂಪ್‌ ಅಪರಾಧಿ ಎಂದು ಸಾಬೀತಾದರೆ ಅವರಿಗೆ ಜೈಲು ಶಿಕ್ಷೆಯೂ ಗ್ಯಾರಂಟಿಯಾಗುತ್ತದೆ. ಆದರೆ ಟ್ರಂಪ್‌ ಜೈಲಿಗೆ ಹೋಗಲೇಬೇಕು ಅಂತೇನಿಲ್ಲ. ಮುಂದೆ ಬರುವ ಅಧ್ಯಕ್ಷರು, ಇವರ ಮೇಲಿನ ಶಿಕ್ಷೆ ರದ್ದು ಮಾಡಬಹುದು.

ಹೀಗೆ ಆಗದೇ ಜೈಲಿಗೆ ಹೋದರೂ ಅವರ ಜತೆಗಿರುವ ಸಿಕ್ರೇಟ್‌ ಸರ್ವೀಸ್‌ ಅಲ್ಲಿಗೂ ಹೋಗಿ ಭದ್ರತೆ ಕೊಡಬೇಕಾಗುತ್ತದೆ. ಅಮೆರಿಕದ ನಿಯಮಗಳ ಪ್ರಕಾರ, ಅಮೆರಿಕದ ಮಾಜಿ ಅಧ್ಯಕ್ಷರ ಭದ್ರತಾ ಹೊಣೆ, ಈ ಸಿಕ್ರೇಟ್‌ ಸರ್ವೀಸ್‌ಗೆ ಸೇರಿದೆ.

 

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.