ಸ್ವಾತಂತ್ರ್ಯ ಸಮರಕ್ಕೆ ಸ್ಫೂರ್ತಿ ವಿದುರಾಶ್ವತ್ಥಕ್ಕೆ ಕೀರ್ತಿ
Team Udayavani, Aug 12, 2021, 7:50 AM IST
ಭಾರತವನ್ನು ಆಂಗ್ಲರ ಆಡಳಿತ ಸಂಕೋಲೆಯಿಂದ ಬಿಡಿಸಿಕೊಳ್ಳಲು ನಡೆದ ಹಲವು ಚಳವಳಿಯಿಂದ ಹರಿದ ರಕ್ತ ಅದೆಷ್ಟೋ. ಮಡಿದ ಜನ ಅಸಂಖ್ಯ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ವಾತಂತ್ರ್ಯದ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂಥ ಘಟನೆ. ಅಂತಹದೇ ಘಟನೆಗಳ ಸಾಲಿಗೆ ಸೇರುವಂಥದ್ದು ಹಳೇ ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಸಮರಕ್ಕೆ ಮತ್ತಷ್ಟು ಸ್ಫೂರ್ತಿ ಕೊಟ್ಟದ್ದು ವಿದುರಾಶ್ವತ್ಥದ ಗೋಲಿಬಾರ್ ಪ್ರಕರಣ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ದಡದಲ್ಲಿರುವ ಪುಣ್ಯಕ್ಷೇತ್ರ “ವಿದುರಾಶ್ವತ್ಥ’ ವಿದುರ ನಾರಾಯಣ ಸ್ವಾಮಿ ದೇಗುಲದಿಂದ ಹೆಸರು ಪಡೆದ ಈ ಊರು ಹತ್ಯಾಕಾಂಡದ ಅನಂತರ ಸ್ವಾತಂತ್ರ್ಯ ಸಂಗ್ರಾ ಮದ ಕೇಂದ್ರ ಬಿಂದುವೂ ಆಗಿದೆ.
ಮಳೆಗಾಲದಲ್ಲಿ ಮಾತ್ರ ಹರಿಯುವ ನದಿಯ ಬದಿಯಲ್ಲಿರುವ ವಿದುರಾಶ್ವತ್ಥದಲ್ಲಿ 77 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡ ಇಂದಿನ ತಲೆಮಾರುಗಳ ಜನಮನದಲ್ಲಿ ಮನೆ ಮಾಡಿದೆ. ಗೋಲಿಬಾರ್ ಬಗ್ಗೆ ಅದರಿಂದ ಅಸುನೀಗಿ ರುವ ಯೋಧರನ್ನು ಕುರಿತು ಲಾವಣಿಗಳನ್ನು ಜನಪ ದರು ಈಗಲೂ ಹಾಡುವುದನ್ನು ನಾವು ಕಾಣಬಹುದು.
1938 ರಲ್ಲಿ ಎಪ್ರಿಲ್ 24ರಂದು ತಾಲೂಕು ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಏರ್ಪಾಡಾಗಿತ್ತು. ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ಧ್ವಜಗಳೊಡನೆ, ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ್ದರು. ಬೆಳಗ್ಗೆ 10 ಗಂಟೆ ವೇಳೆಗೆ ವಿದುರ ನಾರಾಯಣಸ್ವಾಮಿ ದೇವಾಲಯದ ಬಳಿಗೆ ಮೆರವಣಿಗೆ ಬಂದಾಗ 10 ರಿಂದ 15 ಸಾವಿರ ಸಂಖ್ಯೆಯಲ್ಲಿ ಜಮಾವಣೆ ಆದರು.
ದೇಗುಲದ ಹಿಂಬದಿಯಲ್ಲಿದ್ದ ವಿಶಾಲ ಮರಗಳ ತೋಪಿನ ಮೂಲಕ ಇನ್ನಷ್ಟು ಜನ ಪ್ರವೇಶಿಸಿ ಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಟಿ.ರಾಮಾಚಾರ್ ಈ ಸಭೆಗೆ ಆಹ್ವಾನಿತರಾಗಿದ್ದು, ಮೆರವಣಿಗೆಯ ನಾಯಕತ್ವ ವಹಿಸಿದ್ದರು.
ಸಾರ್ವಜನಿಕ ಸಭೆಯಾಗಿ ಪರಿವರ್ತಿತವಾದ ಕಾಂಗ್ರೆಸ್ ಪಕ್ಷದ ಸಭೆ ಆರಂಭವಾಗುವ ಮುನ್ನವೇ ಶಸ್ತ್ರಸಜ್ಜಿತ ಪೊಲೀಸರು ವೇದಿಕೆಯನ್ನು ಸುತ್ತುವರಿದರು. ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶ ನೀಡದೇ ಸಭೆ ನಡೆಸಲು ನಾಯಕರು ಮುಂದಾದರು.
ಆದರೆ ಸಭೆಗೆ ಅವಕಾಶ ನೀಡಬಾರದೆಂದು ಆಗಿನ ಅಮಲ್ದಾರ್ ರಾಜಶೇಖರ ಒಡೆಯರ್ ತೀರ್ಮಾನಿಸಿದರು. ಜನ ಕದಲಲಿಲ್ಲ. ಈ ಸಭೆಯ ನೇತೃತ್ವ ವಹಿಸಿದ್ದವರನ್ನೂ ಬಂಧಿಸಲಾಯಿತು. ಪೊಲೀಸರ ಆರ್ಭಟಕ್ಕೆ ಬೆಚ್ಚದೇ ಜನ ಅಲ್ಲೇ ಕುಳಿತರು, ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿದರು. ಬಳಿಕ 20 ನಿಮಿಷಗಳ ಕಾಲ ಜನರ ಮೇಲೆ ಗುಂಡು ಹಾರಿಸಲಾಯಿತು. ಒಟ್ಟು 92 ಸುತ್ತು ಗುಂಡು ಹಾರಿಸಲಾಯಿತು. ಆದರೆ ಮದ್ದು ಮುಗಿದದ್ದರಿಂದ ಈ ಹತ್ಯಾಕಾಂಡ 20 ನಿಮಿಷಗಳಲ್ಲೇ ಮುಗಿಯಿತು. ಆದರೆ ಈ ಹತ್ಯಾಕಾಂಡದಲ್ಲಿ ಮಡಿದರೆಷ್ಟು, ಗಾಯಗೊಂಡವರೆಷ್ಟು ಎಂಬ ಬಗ್ಗೆ ಲೆಕ್ಕವೇ ಸಿಗಲಿಲ್ಲ. ಆದರೂ, 32 ಮಂದಿ ಸಾವನ್ನಪ್ಪಿದರು, 148 ಮಂದಿ ತೀವ್ರವಾಗಿ ಗಾಯಗೊಂಡಿದ್ದರು ಎಂದು ಕೆಲವು ವರದಿಗಳು ಹೇಳುತ್ತವೆ.
ಇಡೀ ರಾಷ್ಟ್ರದ ಗಮನ ಸೆಳೆದ ವಿದುರಾಶ್ವತ್ಥದ ಹತ್ಯಾಕಾಂಡದ ವಿವರ ತಿಳಿಯಲು ಆಗಿನ ಅಖೀಲ ಕಾಂಗ್ರೆಸ್ ಕಾರ್ಯದರ್ಶಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜೆ.ಬಿ.ಕೃಪಲಾನಿ ವಿದುರಾಶ್ವತ್ಥಕ್ಕೆ ಆಗಮಿಸಿ ದರು. ಈ ಬಗ್ಗೆ ಹಲವು ಪ್ರತಿಭಟನೆಗಳು ನಡೆದಿದ್ದರಿಂದ ಸರಕಾರವು ಪ್ರಕರಣದ ತನಿಖೆ ನಡೆಸಲು ಸಮಿತಿ ಯೊಂದನ್ನು ರಚಿಸಿತು.
ಮೈಸೂರು ಕಾಂಗ್ರೆಸ್ ಈ ದಾರುಣ ಘಟನೆಯ ಅನಂತರ ಸ್ವಾತಂತ್ರ್ಯ ಚಳವಳಿ ತೀವ್ರಗೊಳಿಸಿತು. ವಿದುರಾಶ್ವತ್ಥ ಘಟನೆಯ ಬಳಿಕ ಗಾಂಧಿ ಅವರು ಮೈಸೂರು ಕಾಂಗ್ರೆಸ್‌ನೊಂದಿಗೆ ಹೆಚ್ಚಿನ ಸಂಪರ್ಕ ಇಟ್ಟುಕೊಂಡರು. ಮುಂದಿನ ವರ್ಷ 1939ರಲ್ಲಿ ಅಖೀಲ ಮೈಸೂರು ಕಾಂಗ್ರೆಸ್ ಮಹಾ ಅಧಿವೇಶನವನ್ನು ಎಚ್.ಸಿ. ದಾಸಪ್ಪ ಅವರ ಅಧ್ಯಕ್ಷತೆಯಲ್ಲಿ ವಿದು ರಾಶ್ವತ್ಥದಲ್ಲೇ ನಡೆಸಲಾಯಿತು.
ಪ್ರೌಢಶಾಲೆ ಆರಂಭ :
ದೇಶದ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ಕುಕೃತ್ಯ, ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತು ಪ್ರಾಣ ತೆತ್ತ ಯೋಧರ ಸ್ಮರಣಾರ್ಥ ವಿದುರಾಶ್ವತ್ಥದಲ್ಲಿ 1973ರ ಅ.2ರಂದು ಹುತಾತ್ಮರ ಸ್ಮಾರಕ ವನ್ನು ನಿರ್ಮಿಸಲಾಗಿದೆ. ಇದರ ನೆನಪಿ ನಲ್ಲಿ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆ ಆರಂಭಿಸಲಾಯಿತು.
-ಗಣೇಶ್ ವಿ.ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.