ರಾಜಾಹುಲಿ ಎಂಬ ನಾನು…
Team Udayavani, Jul 28, 2019, 5:57 AM IST
ಥ್ಯಾಂಕ್ಸ್ ಟು ರೆಬಲ್ಸ್ … ಎಲ್ರೂ ಕೈ ಎತ್ತಿ ಸಿವಾ
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಎಲ್ಗ್ಲಾ ಹೊಂಟೋಗಿದ್ದೆ
ಅಮಾಸೆ: ಕೈ-ತೆನೆ ಸರ್ಕಾರ ಹೊಂಟೋಗಿ ರಾಜಾಹುಲಿ ಯಡ್ಯೂರಪ್ನೋರು ಸಿಎಂ ಆಗವ್ರೆ ಸಾ.. ಅದ್ಕೆ ನೋಡ್‌ಕಂಡ್ ಬರೂಮಾ ಅಂತ ಹೊಂಟೋಗಿದ್ದೆ
ಚೇರ್ಮನ್ರು:ಅದೇನ್ಲಾ ಇಂಗಾಗೋಯ್ತು
ಅಮಾಸೆ: ಕುಮಾರಣ್ಣೋರು ಫಾರಿನ್ ಟ್ರಿಪ್ ಹೋಯ್ತಿದ್ದಂಗೆ ಇತ್ಲಾಗ್ ರೆಬಲ್ಸ್ ಮುಂಬೈ ಸೇರ್ಕಂಡ್ ಬಿಟ್ರಾ. ಎಲ್ವೂ ಸರೋಯ್ತದೆ ಅಂತ ಕುಮಾರಣ್ಣೋರು ಕೂಲಾಗಿದ್ರು, ಆದ್ರೆ ನೈಟ್ ಅಂಡ್ ಡೇ ಆಪ್ರೇಸನ್ ಆಗ್‌ಬಿಟ್ಟು ಸಿಚ್ಯುಯೇಷನ್ ಸೀರಿಯಸ್ ಆಗೋಯ್ತು
ಚೇರ್ಮನ್ರು:ಅಲ್ಲಾ ಕಣ್ಲಾ ಸಿದ್ರಾಮಣ್ಣೋರು, ಕುಮಾರ ಣ್ಣೋರು, ಡಿ.ಕೆ.ಸಿವ್‌ಕುಮಾರ್, ಪರಮೇಸ್ವರ ಪ್ನೋರು ಇಷ್ಟೆಲ್ಲಾ ಲೀಡ್ರುಗ್ಳು ಇದ್‌ಕಂಡು ದೊಡ್‌ಗೌಡ್ರು ಐಡಿಯಾ ಮಡಿಕಂಡೂ ಸರ್ ಮಾಡಕ್ ಆಗಿಲ್ವಾ
ಅಮಾಸೆ: ಅಯ್ಯೋ, ನಮ್ ಹೈಕೆ ಅಲ್ವೇ ಹೋಗಿರೋದು ಬತ್ತಾರ್ ಬುಡು ಆಂದ್‌ಕಂಡಿದ್ರು. ಆದ್ರೆ ಎಲ್ರೂ ಐನಾತಿಗ್ಳು ಗುರುಗ್ಳುಗೆ ತಿರ್‌ಮಂತ್ರಾ ಹಾಕಿದ್ರು
ಚೇರ್ಮನ್ರು: ಜೆಡಿಎಸ್‌ನೋರು ಮೂರ್ ಮಂದಿ ಹೊಂಟೋದ್ರಂತಲ್ಲಾ
ಅಮಾಸೆ: ಹೌದು ಸಾ..ಹಿಂದಿನ್ ದಿವ್ಸ ಹಳ್ಳಿಹಕ್ಕಿ ಜೆಪಿ ಭವ್ನದಾಗೆ ಸಕಲೇಸ್ಪುರ ಕುಮಾರಸ್ವಾಮಿಯೋರ್ಗೆ ಜೆಡಿಎಸ್ ಜಂಡಾ ಕೊಟ್ಟು ಒಳ್ಳೇದಾಗ್ಲಿ ದೇವ್ರು, ನಾವೆಲ್ಲಾ ಇದ್ಕಂಡು ಮಾರ್ಗದರ್ಸನ ಮಾಡ್ತೀವಿ ಅಂದ್ರು, ಪಕ್‌ದಾಗೆ ಗೋಪಾಲಣ್ಣೋರು ಹೌದೇಳಿ ಅಂತ ತಲೆ ಅಲ್ಲಾಡ್ಸಿದ್ರು, ಅದ್ಕೆ ಗೌಡ್ರು ಅವ್ರ್ನಾ ಪಾಲ್ಟಿ ಸೀನಿಯರ್ ವೈಸ್ ಪ್ರಸಿಡೆಂಟ್ ಮಾಡಿದ್ರು. ಆದ್ರೆ, ವತ್ತಾರೆ ಎದ್ದು ರೆಬಲ್ಸ್ ಜತೆ ಓಟ ಕಿತ್ತವ್ರೆ
ಚೇರ್ಮನ್ರು: ಮಂಡ್ಯಾದಾಗೂ ನಾರಾಯಣಗೌಡ್ರು ಮಾಂಜಾ ಕೊಟ್ಟವ್ರಂತಲ್ಲಾ
ಅಮಾಸೆ: ಹೌದು ಸಾ… ಮಂಡ್ಯ ಎಂಪಿ ಎಲೆಕ್ಸನ್‌ನ್ಯಾಗೆ ನಿಖೀಲ್ಗೆ ಜೈ ಅಂತ ಕುಮಾರಣ್ಣೋರು ಜತ್ಗೆ ಕ್ಯಾಂಪೇನ್ ಮಾಡಿದ್ರು ನಾರಾಯಣಗೌಡ್ರು, ಕೈ ಪಕ್ಸ ಎಂಎಲ್ಎ ಕುರು ಕ್ಷೇತ್ರ ಮುನಿರತ್ನಂ ಅವ್ರು ಜಾಪಾಳ ಕೊಟ್ರಾ, ಅವ್ರ್ ಜತ್ಗೆ ಎಸ್.ಟಿ. ಸೋಮ್‌ಸೇಖ್ರಣ್ಣೋರು, ಬೈರತಿ ಬಸವರಾಜಣ್ಣೋರು ನಮ್ದೂ ಜೈ ಅಂತ ಸೇರ್‌ಕಂಡ್ರಂತೆ
ಚೇರ್ಮನ್ರು: ಸಿದ್ರಾಮಣ್ಣೋರು, ಸಿವ್‌ಕುಮಾರ್ ಸುಮ್ಕಿದ್ರಾ
ಅಮಾಸೆ: ಸಿದ್ರಾಮಣ್ಣೋರು ಫೋನ್ ಮಾಡಿ ಬನ್ರೋಲೋ ಅಂದ್ರಂತೆ, ಅದ್ಕೆ, ಸಾಕ್ ಸುಮ್ಕಿರಿ, ಎಂಪಿ ಎಲೆಕ್ಸನ್ ಆದ್‌ಮ್ಯಾಕೆ ಗೌರ್ನ್ಮೆಂಟ್ ಇರ್‌ಬಾರ್ಧು ಅಂತ ಎಲ್ರೂ ಹೇಳ್ತಿದ್ರಿ. ಈಗ್ ನಮ್ ದಾರಿ ನಮ್ದು ಅಂದ್ರಂತೆ. ಅದ್ಕೆ ಸಿದ್ರಾಮಣ್ಣೋರು ಎಲಾ….ನಂಕೆ ಅಲ್ವಾ ಕೊಡ್ತೀರಾ ಅಂತೇಳಿ ಸ್ಪೀಕರ್ ಸಾಹೇಬ್ರತ್ರಾ ಹೋಗಿ ಎಲ್ರುನೂ ಡಿಸ್‌ಕ್ವಾಲಿಫೈ ಮಾಡಿ ಅಂತ ಪಿಟಿಸನ್ ಕೊಟ್ರಂತೆ
ಚೇರ್ಮನ್ರು: ಆದ್ರೂ ಇವ್ರ್ನೆಲ್ಲಾ ಕಟ್ಕಂಡು ಯಡ್ಯೂರಪ್ನೋರು ಗೌರ್ನ್ ಮೆಂಟ್ ಮಾಡಾಕಾಯ್ತದಾ
ಅಮಾಸೆ: ಅದೇ ಕಹಾನಿ ಮೇ ಟ್ವಿಸ್ಟು ಸಾ.., ಆಮಿತ್ ಶಾ ಆಣ್ಣೋರು ಅಬಿ ನಹಿ ಜರ ಟೆಹರೋ ಅಂದ್ರಂತೆ. ಅದ್ಕೆ ಯಡ್ಯೂರಪ್ನೋರು ಪಾಯಿಂಟ್ ಆಫ್ ಆರ್ಡರ್ ಮಾದುಸ್ವಾಮಣ್ಣೋರು, ಎಕ್ಸ್ ಪರ್ಟ್ ಬಸವರಾಜ್ ಬೊಮ್ಮಾಯ ಣ್ಣೋರ್ನ ಡೆಲ್ಲಿಗ್ ಕಳ್ಸಿ ನೀವ್ ಊಂ ಅನ್ನಿ ಅಂತ ಪ್ರಸರ್ ಹಾಕಿದ್ರಂತೆ. ಅದ್ಕೆ ಅಮಿತ್ ಸಾ ಅಣ್ಣೋರು, ಓಕೆ ಜಾವ್. ಮಗರ್ ಆಪ್ ಕಾ ಹೀ ಜಿಮ್ಮೇದಾರ್, ಕುಚ್ ಗಡ್‌ಬಡ್ ಹೋಗ ಯಾತೋ ಆಪ್ ಕೊ ನಹೀ ಚೋಡುಂಗಾ ಅಂತ ಹೇಳಿ ಕಳ್ಸವ್ರಂತೆ
ಚೇರ್ಮನ್ರು: ಅಂಗಾರೆ ಈಗೇನ್ ಆಯ್ತದೆ
ಅಮಾಸೆ: ಸೋಮ್‌ವಾರ್ಕೆ ಯಡ್ಯೂರಪ್ನೋರು ಇಸ್ವಾಸಮತ ಕೇಳ್‌ಬೇಕಾಯ್ತದೆ. ಗೆದ್ರೆ ಕಂಟಿನ್ಯೂ, ಇಲ್ಲಾಂದ್ರೆ ಸಿವನೇ ಚಂಬುಲಿಂಗ
ಚೇರ್ಮನ್ರು: ಕಮ್ಲ ಪಕ್ಸ್‌ದೋರು ಅಂಗೆಲ್ಲಾ ಸುಮ್ಕೆ ಸುಮ್ಕೆ ಕೈ ಹಾಕಲ್ಲ ಕೌರವ ಪಾಟೀಲ್ ಸಮೇತ ಎಲ್ರೂ ಲಾಕ್ ಆಗವ್ರಂತೆ.
ಅಮಾಸೆ: ಐದಾರ್ ಕಿತಾ ಇಂಗೇ ಆಪ್ರೇಸನ್ ಮಾಡೋಕ್ಕೋಗಿ ದಬ್ಟಾಕ್ಕೊಂಡಿದ್ರು. ಅದ್ಕೆ ಈ ಕಿತಾ ಟೂ ಮಂತ್ಸ್ ಮೊದ್ಲೇ ಪಿಲಾನ್ ಮಾಡಿ ಎಲ್ರುನೂ ಗುಡ್ಡೆ ಹಾಕಿದ್ರಂತೆ. ಅದ್ರಾಗೆ ನಮ್ ರಾಮ್‌ಲಿಂಗಾರೆಡ್ಡಿಗಾರು ಇಂದ್ರಂತೆ. ಹಳ್ಳಿಹಕ್ಕಿ, ಅವ್ರುಗೂ ತೇಲ್ ಮಾಲಿಷ್ ಮಾಡಿ ಒಪ್‌ಸಿದ್ರಂತೆ. ಆದ್ರೆ ಕೈ ಲೀಡ್ರುಗ್ಳು ಹೋಗಿ ದಮ್ಮಯ್ನಾ ನೀವ್ ಮಾತ್ರ ಬಿಡ್‌ಬ್ಯಾಡಿ ಅಂದ್ರಂತೆ. ಆಮ್ಯಾಕೆ ರಾಮ್‌ಲಿಂಗಾರೆಡ್ಡಿಗಾರು ಸುಮ್ ನಾದ್ರಂತೆ
ಚೇರ್ಮನ್ರು: ಸಿವ್‌ಕುಮಾರ್ ಮುಂಬೈಗೋಗಿದ್ರಂತೆ
ಅಮಾಸೆ: ನಮ್ ಎಂಎಲ್ಗ್ಳನಾ ಕರ್‌ಕಂಡ್ ಬತ್ತೀನಿ, ಯಾರ್ ತಡೀತಾರೋ ನೋಡುಮಾ ಅಂತೇಳಿ ಹೋಗಿದ್ರು. ಆದ್ರೆ, ರೆಬಲ್ಸ್ ಮುಂಬೈ ಪೊಲೀಸ್ ಕಮೀಷನರ್‌ಗೆ ಕಂಪ್ಲೇಂಟ್ ಕೊಟ್ಟಿದ್ರು, ಅದ್ಕೆ ಸಿವ್‌ಕುಮಾರಣ್ಣೋರ್ಗೆ ಹೋಟೆಲ್ ಒಳ್ಗೆ ಬಿಡ್‌ಲಿಲ್ಲಾ. ಸಂಜೆಗಂಟಾ ನೋಡಿ ವಾಪಸ್ ಬಂದ್ರು. ನಾನ್ ಪಲ್ಲಕ್ಕಿ ಹೊತ್ತೆ, ನನ್ ಬೆನ್‌ಗೆ ಚೂರಿ ಹಾಕಿದ್ರು ಅಂತ ಆವಾಜ್ ಹಾಕಿ, ರಾಜ್ಕೀಯ ರಣರಂಗ್‌ದಾಗೆ ನಿಮ್‌ನೆಲ್ಲಾ ನೋಡ್ಕೋತೀನಿ ಬನ್ರಲೋ ಅಂತ ಅಸೆಂಬ್ಲಿನಾಗೆ ಸವಾಲ್ ಹಾಕಿದ್ರು
ಚೇರ್ಮನ್ರು: ಅಂಗಾರೆ ಇನ್‌ಮ್ಯಾಗೆ ಕಮ್ಲ ಸರ್ಕಾರ ಗ್ಯಾರಂಟೀನಾ
ಅಮಾಸೆ: ಈಗ್ ಅಂಗೈತೆ. ಆಮ್ಯಾಕ್ ಏನಾಯ್ತದೋ, ರೆಬಲ್ಸ್ ಮಿನಿಸ್ಟ್ರೆ ಸಿಕ್ಕಿಲ್ಲಾಂದ್ರೆ ಬಿಟ್ಟಾರಾ, ಸಿವ್‌ಕುಮಾರಣ್ಣೋರು ಹೇಳವ್ರೆ, ಯಡ್ಯೂರಪ್ನೋರು ಬಟ್ಟೆ ಹರಿದಾಕ್‌ತಾರೆ ಅಂತ. ಬೈ ಎಲೆಕ್ಸನ್ ಬೇರೆ ಐತೆ, ಅವಾಗ್ ನಂಬರ್‌ಗೇಮ್ ಸಿಕ್ಕಿಲ್ಲಾಂದ್ರೆ ಕಮ್ಲ ಪಕ್ಸದೋರು ತೆನೆ ಹುಡಿಕಂಡ್ ಬರ್‌ಬೇಕಾಯ್ತದೆ. ನೋಡುಮಾ ಏನ್ ಆಯ್ತದೋ. ನನ್ ಹೆಂಡ್ರು ನಾಟಿ ಕೋಳಿ ತತ್ತಾ ಅಂದೇಳವೆÛ ಬತ್ತೀನಿ ಸಾ….
ಸ್ಪೀಕರ್ ಸಾಹೇಬ್ರು ಆಟೋ ಸಂಕ್ರು ಸೇರ್‌ಕಂಡಂಗೆ ಮೂರ್ ಎಂಎಲ್ಎಗ್ಳನಾ ಡಿಸ್‌ಕ್ವಾಲಿಫೈ ಮಾಡ್ದೇಟ್‌ಗೆ ಮುಂಬೈ ಬಿಟ್ಟು ಪುಣೆನಾಗಿರೋ ರೆಬಲ್ಸ್ ಫುಲ್ ಶೇಖ್ ಅಬ್ದುಲ್ಲಾ ಆದ್ರಂತೆ. ನಾನ್ ಇಂಡಿಪೆಂಡೆಂಟ್ ನನ್ಗೂ ಡಿಸ್‌ಕ್ವಾಲಿಫೈ ಮಾಡವ್ರೆ, ನಾನ್ ಎಲೆಕ್ಸನ್ ನಿಲ್ಲಾಕಿಲ್ಲಾ ಅಂತ ವರಾತ ತೆಗಿದ್ರಂತೆ. ಅದ್ಕೆ ಸಾಮ್ರಾಟ್ ಅಸೋಕ್ ಅವ್ರು ರಾತ್ರೋ ರಾತ್ರಿ ಸ್ಪೆಷಲ್ ಫ್ಲೈಟ್ನಾಗೆ ಹೋಗಿ ನಿಮ್‌ಕೇನೂ ಆಗಾಕಿಲ್ಲಾ, ನಾವಿದ್ದೀವಿ ಅಂತ ತಾಜಾ ಮಾಡಿದ್ರಂತೆ. ಸೋಮ್‌ವಾರ್ಕೆ ಇಸ್ವಾಸಮತ ಸಾಬೀತ್ ಮಾಡೋ ವರ್ಗೂ ಏನಾರಾ ಮನ್ಸು ಬದ್ಲಾ ಯಿಸ್‌ಬೋದು ಅಂತ ಅಸೋಕ್ ಸಾಹೇಬ್ರು ಅಸ್ವಥ್‌ನಾರಾಯಣ್ ಅಣ್ಣೋರು ಅಲ್ಲೇ ಇದ್ದು ಎಲ್ರೂನೂ ಟೆಂಪಲ್ ರನ್ ಮಾಡ್ಸಿದ್ರಂತೆ. ಕೈ -ತೆನೆ ಪಕ್ಸ್‌ದೋರು ಡಿಸ್‌ಕ್ವಾಲಿಫಿಕೇಸನ್ ಗುಮ್ಮ ತೋರ್ಸಿ ಎಲ್ರುನೂ ವಾಪಸ್ ಕರ್ಸೋ ಪಿಲಾನ್ ಮಾಡಿದ್ರಂತೆ, ಆದ್ರೆ, ಹಳ್ಳಿಹಕ್ಕಿ ನಾವೇನ್ ಹೈಕ್ಳು ಆಲ್ಲ, ಯಾವ್‌ದ್ಕೂ ಡೋಂಟೇಕೇರ್ ಅಂದ್ರತೆ. ಯಡ್ಯೂರಪ್ನೋರು ಇಸ್ವಾಸಮತ ತಕ್ಕಳ್ಳೋವರ್ಗು ಅವ್ರು ಇತ್ಲಾಗ್ ಬರಾಕಿಲ್ವಂತೆ. ಆದ್ರೂ ಏನಾರಾ ಕಮ್‌ಸರಸ್ ಆಗಿ ರಿವರ್ಸ್‌ಗೇರ್ ಅಂತ ಬಂದ್‌ಬುಟ್ರೆ ಸಿವ್‌ಕುಮಾರಣ್ಣೋರ್ ಹೇಳ್ದಂಗೆ ರಾಜಾಹುಲಿ ಕಥೆ ಗೋವಿಂದಾ…ಗೋವಿಂದ…..
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.