ನಾನು ಮೆಚ್ಚಿದ ಪತ್ರಿಕೆ
ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ
Team Udayavani, Jan 24, 2020, 5:09 AM IST
ನಾನು ಸಣ್ಣವಳಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಕನ್ನಡ ವಾರ್ತಾ ಪತ್ರಿಕೆಯನ್ನು ಅಪ್ಪ ತರುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಮನೆಗೆ ಉದಯವಾಣಿ ಬರುತ್ತಿತ್ತು. ಮೊದಲನೆಯ ಪುಟದಿಂದ ಕೊನೆಯ ಪುಟದ ವರೆಗೆ ಕ್ರಮಬದ್ಧವಾಗಿ ಜೋಡಿಸಲಾದ ಸುದ್ದಿಗಳು ನನಗಿಷ್ಟ.
ಎಡಿಶನ್ ರೂಪದಲ್ಲಿ ಬರುತ್ತಿದ್ದ ಸ್ಥಳೀಯ ವಾರ್ತೆಗಳು, ವಾರ ಕ್ಕೊಂದು ಬಾರಿ ಮಕ್ಕಳಿಗಾಗಿ ಪ್ರಕಟವಾಗುತ್ತಿದ್ದ ಪುಟಾಣಿ ಪುರವಣಿ ಯು ಚಿಣ್ಣರಾದ ನಮಗೆ ಓದಲು ಖುಷಿಯಾಗುತ್ತಿತ್ತು. ಪ್ರತಿದಿನ ಉದಯವಾಣಿಯನ್ನು ಅಪ್ಪ ವರಾಂಡದಲ್ಲಿ ಕೂತು ಓದುತ್ತಿದ್ದರು. ಅವರ ಬಳಿಕ ಓದುವ ಸರದಿ ನಮ್ಮದಾಗಿತ್ತು. ಪ್ರೌಢ ಶಾಲೆಯಲ್ಲಿದ್ದಾಗ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ನಮ್ಮ ಶಾಲೆಯ ತಂಡದಲ್ಲಿ ನಾನೂ ಇದ್ದೆ. ಅದರ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾಗಿದ್ದನ್ನು ನೋಡಿ ಖುಷಿಪಟ್ಟಿದ್ದೆ.
ಕನ್ನಡ ಪತ್ರಿಕೆಗಳ ಪುರವಣಿಗೆಗಳಿಗೂ ಬರೆಯಬೇಕೆಂದೆನಿಸಿದ್ದು ಮಂಗಳವಾರ ಜೋಶ್‌ನಿಂದ. ಅವಳಿಗಾಗಿಯೇ ಕಾದಿರುವ ಅವಳು ಪುರವಣಿ, ಮಹಿಳೆಯರ ಆಪ್ತ ಗೆಳತಿ ಮಹಿಳಾ ಸಂಪದ ಹಾಗೂ ರಜಾ ದಿನದ ಗೆಳೆಯ ಸಾಪ್ತಾಹಿಕ ಸಂಪದ ಪುರವಣಿಗಳಿಂದ ನನಗೆ ಬರಹದ ಆಸಕ್ತಿಯೂ ಬೆಳೆಯಿತು. ನನ್ನ ಮೊದಲ ಬರಹ ಪ್ರಕಟಗೊಂಡಿದ್ದು ಅವಳು ಪುರವಣಿಯಲ್ಲಿ. ಅದಕ್ಕಾಗಿ ನಾನು ಉದಯವಾಣಿಗೆ ಆಭಾ ರಿಯಾಗಿದ್ದೇನೆ. ಉದಯವಾಣಿ ತನ್ನ ಪುರವಣಿಗಳ ಗುಣಮಟ್ಟವನ್ನು ಉತ್ತಮವಾಗಿಯೇ ಕಾಯ್ದುಕೊಂಡು ಬಂದಿದೆ. ಕಳುಹಿಸುವ ಬರಹ ಗಳನ್ನು ಚೆನ್ನಾಗಿಯೇ ಪರಿಶೀಲಿಸಿ, ತಮ್ಮ ಪುರವಣಿಗೆಗಳಿಗೆ ಸೂಕ್ತವಾ ಗಿಲ್ಲದುದ್ದನ್ನು ಪ್ರಕಟಿಸದೇ ಇರುವುದು ತಾಜಾ ನಿದರ್ಶನ.
ಉದಯವಾಣಿ ತನ್ನ ಪುರವಣಿಗೆಗಳಲ್ಲಿ ಪ್ರಾರಂಭಿಸುವ ಹೊಸ ಅಂಕಣಗಳು, ಬರೆಯುವ ಉತ್ಸಾಹಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ತಮ್ಮಲ್ಲಿ ಹುದುಗಿದ್ದ, ಮರೆತು ಹೋದ ಅವೆಷ್ಟೋ ಮಾತುಗಳು ಹೊರಬರುತ್ತಿವೆ. ಇನ್ನು ಪತ್ರಿಕೆಯ ವಿನ್ಯಾಸ, ಲೇಖನಗಳಿಗೆ ತಕ್ಕುದಾದ ಪುಟಗಳು ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ.
ಚಾಚೂ ತಪ್ಪದೆ ಉದಯವಾಣಿಯನ್ನು ಪ್ರತಿದಿನ ಓದುತ್ತೇನೆ. ವಾಣಿಯನ್ನು ಹೊತ್ತು ಬರುವ ಉದಯವಾಣಿ ಎಲ್ಲೆಡೆ ಯೂ ಉದಯವಾಗಲಿ, ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ತಲುಪಲಿ. ಉದಯವಾಣಿಯ ಬಳಗಕ್ಕೆ ನಮಸ್ಕಾರಗಳು.
ಸುಪ್ರೀತಾ ವೆಂಕಟ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.