ಭಾರತದ ಹಣದ ಮೇಲೆಯೇ ಐಸಿಸಿ ಕಣ್ಣು!
Team Udayavani, May 16, 2017, 6:26 AM IST
ಮನೋಹರ್ ಅವರು ಐಸಿಸಿಯ ಮೊದಲ “ಸ್ವತಂತ್ರ’ ಅಧ್ಯಕ್ಷರಾಗಿ ಆಯ್ಕೆಯಾದ ನಂತರ(ಯಾವ ರಾಷ್ಟ್ರಗಳೂ ಅವರ ನಾಮನಿರ್ದೇಶನ ಮಾಡಿರಲಿಲ್ಲ)- ಬಹುದೊಡ್ಡ ಕುತಂತ್ರಕ್ಕೆ ವೇದಿಕೆ ಸಿದ್ಧವಾಯಿತು. ಜಾಗತಿಕ ಕ್ರಿಕೆಟ್ ಆದಾಯದಲ್ಲಿ 3,700 ಕೋಟಿ ರೂ.ನಷ್ಟಿದ್ದ ಭಾರತದ ಪಾಲನ್ನು 1,950 ಕೋಟಿಗೆ ತಗ್ಗಿಸಿಬಿಟ್ಟರು ಶಶಾಂಕ್ ಮನೋಹರ್.
ಯಾವಾಗ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಲೋಧಾ ಸಮಿತಿಯು ಬಿಸಿಸಿಐನ ಅಪಾರದರ್ಶಕತೆ ಮತ್ತು ಗುಂಪುಗುಳಿತನವನ್ನು ಛಿದ್ರಗೊಳಿಸಿತೋ, ಆಗ, ಅದರ ಉದ್ದೇಶ ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನು ಸ್ವತ್ಛಗೊಳಿಸುವುದಾಗಿತ್ತು. ಅದರ ಜೊತೆಗೆ ಬಿಸಿಸಿಐನ ಕಾರ್ಯ ನಿರ್ವಹಣೆಯನ್ನು ಪಾರದರ್ಶಕಗೊಳಿಸಿ, ಅದಕ್ಕೆ ವೃತ್ತಿಪರತೆ ಯನ್ನು ತಂದುಕೊಡುವುದಾಗಿತ್ತು.
ಅಂದರೆ ಒಟ್ಟಾರೆ ಸನ್ನಿವೇಶದ ಮೌಲ್ಯಮಾಪನ ಮಾಡಿ, ಮುಂದಿನ ದಾರಿ ತೋರಿಸಿ, ಸುಪ್ರೀಂ ಕೋರ್ಟ್‌ನ ಮಾನದಂಡ ಗಳಿಗೆ ಅನುಗುಣವಾದಂಥ ಹೊಸ ಮಂಡಳಿಯನ್ನು ಸ್ಥಾಪಿಸುವು ದಕ್ಕಾಗಿ ಈ ನಿರ್ವಾಹಕ ಸಮಿತಿ(ಸಿಓಎ)ಯನ್ನು ಸ್ಥಾಪಿಸಲಾಗಿತ್ತು.
ಏತನ್ಮಧ್ಯೆ ಐಸಿಸಿಯ ಪ್ರಧಾನ ಕಚೇರಿಯಿರುವ ದುಬೈನಲ್ಲಿ ಬೃಹತ್ ಮಟ್ಟದಲ್ಲಿ ಕುತಂತ್ರವೊಂದು ಸಿದ್ಧವಾಗತೊಡಗಿತ್ತು. ಐಸಿಸಿ ಜಾಗತಿಕ ಕ್ರಿಕೆಟ್‌ನ ನಿರ್ವಹಣೆ ಮಾಡಿದರೆ, ಲಂಡನ್‌ನಲ್ಲಿರುವ ಮರೈಲ್ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ನಿಯಮಗಳನ್ನು ರೂಪಿಸುತ್ತದೆ. ಮೇಲ್ನೋಟಕ್ಕೆ ಐಸಿಸಿ ಮತ್ತು ಎಂಸಿಸಿಯ ಕಾರ್ಯಗಳು ಡೆಮಾಕ್ರಟಿಕ್ ಎನಿಸುವಂತಿದೆ ಯಾದರೂ, ಇವುಗಳ ಮೂಲಭೂತ ಲಕ್ಷಣಗಳಲ್ಲಿ ಮಾತ್ರ ಸಾಮ್ರಾಜ್ಯಶಾಹಿತ್ವದ ಛಾಯೆಯಿದೆ.
ಸುಮಾರು ಅರ್ಧಶತಮಾನಕ್ಕಿಂತಲೂ ಹೆಚ್ಚು ಕಾಲ ಐಸಿಸಿಯನ್ನು ಇಂಪಿರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಕರೆಯಲಾಗುತ್ತಿತ್ತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಿಯಮಗಳನ್ನು ರೂಪಿಸುತ್ತಿದ್ದವು. ಆ ದೇಶಗಳ ಆಟಗಾರರು ಸ್ಲೆಡಿjಂಗ್ ಮಾಡಿದರೂ, ಎದುರಾಳಿ ಆಟಗಾರರ ಮೇಲೆ ಮುಗಿಬಿದ್ದರೂ ಅದನ್ನೆಲ್ಲ ಕಡೆಗಣಿಸಲಾಗುತ್ತಿತ್ತು. ಆದರೆ ಭಾರತೀಯ ಕ್ರಿಕೆಟಿಗರು ಮತ್ತು ಇತರೆ ಬಿಳಿಯೇತರ ರಾಷ್ಟ್ರಗಳ ಆಟಗಾರರು ಒಂದಿಷ್ಟು ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ 20 ವರ್ಷಗಳ ಹಿಂದೆ ಈ ಸನ್ನಿವೇಶ ಬದಲಾಯಿತು.
ಭಾರತೀಯ ಕ್ರಿಕೆಟ್ ಭಾರೀ ಪ್ರಮಾಣ ದಲ್ಲಿ ಟೆಲಿವಿಷನ್ ಆದಾಯ ಹುಟ್ಟುಹಾಕಲು ಆರಂಭಿಸಿತು. ಜಗಮೋಹನ್ ದಾಲಿ¾ಯಾ ಐಸಿಸಿಯ ಮೊಟ್ಟ ಮೊದಲ ಭಾರತೀಯ ಮುಖ್ಯಸ್ಥರಾದರು. ಐಸಿಸಿಯಲ್ಲಿ ಸಾಮ್ರಾಜ್ಯ ಶಾಹಿತ್ವದ ಛಾಯೆ ನಿಧಾನಕ್ಕೆ ಕಮ್ಮಿಯಾಗಲಾರಂಭಿಸಿತ್ತಾದರೂ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೇತೃತ್ವದಲ್ಲಿ ಶ್ವೇತವರ್ಣೀಯ ರಾಷ್ಟ್ರಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಾ ಕುಳಿತವು.
ಯಾವಾಗ 2008ರಿಂದ ಐಪಿಎಲ್‌ನ ಮೂಲಕ ಬಿಸಿಸಿಐಗೆ ಬೆಟ್ಟದಷ್ಟು ಟಿ.ವಿ. ಆದಾಯ ಬರಲಾರಂಭಿಸಿತೋ, ಆಗ
ಭಾರತವು ಜಾಗತಿಕ ಕ್ರಿಕೆಟ್‌ನ ಸೂಪರ್‌ಪವರ್ ಆಯಿತು. ಜಾಗತಿಕ ಕ್ರಿಕೆಟ್ ಆದಾಯದಲ್ಲಿ ಭಾರತ ಪಾಲು 70 ಪ್ರತಿಶತ ದಷ್ಟಾಯಿತು. ಎಲ್ಲಾ ಕ್ರಿಕೆಟ್ ರಾಷ್ಟ್ರಗಳೂ ಇದರಿಂದ ಲಾಭಪಡೆ ಯಲಾರಂಭಿಸಿದವು. ಸಹಜವಾಗಿಯೇ, ಈ ಆದಾಯಕ್ಕೆ ಪ್ರಮುಖ ಕಾರಣಕರ್ತವಾದ ಭಾರತೀಯ ಕ್ರಿಕೆಟ್ ಮಂಡಳಿಗೆ ಸಿಂಹಪಾಲು ಸಿಗಲಾರಂಭಿಸಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಂಗ್ಲರ ಮೊದಲಿನ ಪಾರಮ್ಯವನ್ನು ಉಳಿಸುವುದಕ್ಕಾಗಿ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಅದರೊಟ್ಟಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೇರಿಸಿ “ಬಿಗ್ ತ್ರೀ’ ಫಾರ್ಮುಲಾ ರಚಿಸಲಾಯಿತು. ಮೊದಲಿನಿಂದಲೂ ಇದೊಂದು ಕೆಟ್ಟ ಐಡಿಯಾ ಆಗಿತ್ತು. ಏಕೆಂದರೆ ಈ ರೀತಿಯ ಸಹಕಾರ ವ್ಯವಸ್ಥೆಯಲ್ಲಿ ಭಾರತಕ್ಕಿಂತಲೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೆಚ್ಚು ಹೊಂದಾಣಿಕೆ/ಅಭ್ಯಾಸವಿತ್ತು.
ಇವುಗಳು ಒಟ್ಟುಗೂಡಿ ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್‌ರನ್ನು ಆಯ್ಕೆ ಮಾಡಿಕೊಂಡವು.
ಸ್ಥಳೀಯರನ್ನು ನಿಯಂತ್ರಿಸಲು ಅವರ ನಡುವಿನ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ!(ಬ್ರಿಟಿಷರು ಭಾರತವನ್ನು ಆಳಿದ್ದು ಇದೇ ರೀತಿಯೇ. ಹಣದ ಆಮಿಷ ಮತ್ತು ಬೆದರಿಕೆಯ ಮೂಲಕ ಭಾರತೀಯ ಸಿಪಾಯಿಗಳನ್ನು ಮತ್ತು ರಾಜರುಗಳನ್ನು ಅದು ತನ್ನ ಜೊತೆಯಾಗಿಸಿಕೊಂಡಿತ್ತು.)
ಮನೋಹರ್ ಅವರು ಐಸಿಸಿಯ ಮೊಟ್ಟ ಮೊದಲ “ಸ್ವತಂತ್ರ’ ಅಧ್ಯಕ್ಷರಾಗಿ ಆಯ್ಕೆಯಾದ ನಂತರ(ಯಾವ ರಾಷ್ಟ್ರಗಳೂ ಅವರ ನಾಮನಿರ್ದೇಶನ ಮಾಡಿರಲಿಲ್ಲ)- ಬಹುದೊಡ್ಡ ಕುತಂತ್ರಕ್ಕೆ ವೇದಿಕೆ ಸಿದ್ಧವಾಯಿತು. ಜಾಗತಿಕ ಕ್ರಿಕೆಟ್ ಆದಾಯದಲ್ಲಿ 3,700 ಕೋಟಿ ರೂಪಾಯಿಯಷ್ಟಿದ್ದ ಭಾರತದ ಪಾಲನ್ನು 1,950 ಕೋಟಿಗೆ ತಗ್ಗಿಸಿಬಿಟ್ಟರು ಶಶಾಂಕ್ ಮನೋಹರ್.
ಸುಪ್ರೀಂ ಕೋರ್ಟ್ ಮತ್ತು ಸಿಓಎನಿಂದಾಗಿ ಶಕ್ತಿ ಕಳೆದುಕೊಂಡಿದ್ದ ಬಿಸಿಸಿಐ, ಬಹಳ ದುರ್ಬಲ ಸ್ಥಿತಿಯಲ್ಲಿತ್ತು. ಸೂಕ್ತ ಸಮಯಕ್ಕಾಗಿ ಕಾದುಕುಳಿತಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಈ ಪರಿಸ್ಥಿತಿಯನ್ನು ಬಹಳ ಚಾಣಾಕ್ಷತನದಿಂದ ಬಳಸಿಕೊಂಡವು. ಶಶಾಂಕ್ ಮನೋಹರ್ ಆಂಗ್ಲಶಕ್ತಿಗಳಿಗಾಗಿ ಬಹಳ ಅದ್ಭುತ ಕೆಲಸ ಮಾಡಿದ್ದರು. ಯಾವ ಮಟ್ಟಕ್ಕೆಂದರೆ ಕಳೆದ ತಿಂಗಳು ಐಸಿಸಿ ಅಧ್ಯಕ್ಷನ ಹುದ್ದೆಯಿಂದ ಕೆಳಕ್ಕಿಳಿಯುತ್ತೇನೆ ಎಂದು ಅವರು ಮುಂದಾದಾಗ, ಸಹಜವಾಗಿಯೇ ಐಸಿಸಿಯ ಆಡಳಿತ ಮಂಡಳಿ ಅವರ ರಾಜೀನಾಮೆಯನ್ನು ನಿರಾಕರಿಸಿತು!
ಬಿಸಿಸಿಐ, ತಾನೊಂದು ಅಪಾರದರ್ಶಕ ಸಂಸ್ಥೆ ಎಂದಷ್ಟೇ ಅಲ್ಲ, ಬದಲಾಗಿ ತಾನೊಂದು ಅಸಮರ್ಥ ಸಂಸ್ಥೆಯೆಂದೂ ರುಜುವಾತು ಮಾಡಿದೆ. ಕೆಲ ದಿನಗಳ ಹಿಂದೆ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ, ಬಿಸಿಸಿಐನ ಪ್ರತಿನಿಧಿ ಅಮಿತಾಭ್ ಚೌಧರಿಯ ಮೇಲೆ ಮೇಲುಗೈ ಸಾಧಿಸಲು ಯಶಸ್ವಿಯಾದರು ಮನೋಹರ್. ಆದಾಯ ಗಳಿಕೆಯ ಕುರಿತು ನಡೆದ ಮತದಾನದಲ್ಲಿ 9-1 ಮತಗಳೊಂದಿಗೆ ಮತ್ತು ಆಡಳಿತದ ವಿಚಾರದಲ್ಲಿ 8-2 ಮತಗಳ ಅಂತರದಿಂದ ಭಾರತ ಸೋತಿತು! ಇದಕ್ಕೆ ಪ್ರತಿಯಾಗಿ ಭಾರತವು ಪರ್ಯಾಯ ಆದಾಯ ಹಂಚಿಕೆ ಪ್ರಸ್ತಾವನೆಯೊಂದನ್ನು ಮುಂದಿಟ್ಟು, ಅದರ ಬಗ್ಗೆ ಚರ್ಚೆ ಮಾಡಲು ಕೇಳಿಕೊಂಡಿತು. ಆದರೆ ಶಶಾಂಕ್ ಮನೋಹರ್ ಉದ್ದೇಶಪೂರ್ವಕವಾಗಿ ಈ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ.
ಇದರ ಬದಲಾಗಿ ಮನೋಹರ್, ಭಾರತಕ್ಕೇನೋ ದೊಡ್ಡ ಉಪಕಾರ ಮಾಡುವವರಂತೆ ಮುಂದಿನ 8 ವರ್ಷಗಳ ವರೆಗೆ ಭಾರತಕ್ಕೆ ಹೆಚ್ಚುವರಿ 640 ಕೋಟಿ ರೂಪಾಯಿ ಕೊಟ್ಟು, ಜಾಗತಿಕ ಕ್ರಿಕೆಟ್ ಆದಾಯದಲ್ಲಿ ಅದರ ಪಾಲನ್ನು 2,500 ಕೋಟಿಗೇರಿಸುವ ಪ್ರಸ್ತಾವನೆಯಿಟ್ಟರು.
ಕ್ರಿಕೆಟ್‌ನ ಜಾಗತಿಕ ಆದಾಯವನ್ನು ಗಮನಿಸಿದರೆ ಭಾರತಕ್ಕೆ ದೊರೆತ ಈ 40 ಪ್ರತಿಶತ ಪಾಲು ಬಹಳ ಕಡಿಮೆಯೇ. ಏನಿಲ್ಲ ವೆಂದರೂ 60-70 ಪ್ರತಿಶತದಷ್ಟು ಹಣ ಭಾರತಕ್ಕೆ ಸೇರಬೇಕು. ಬಿಸಿಸಿಐನ ಅನುಮತಿಯಿಲ್ಲದೇ ಆದಾಯ ಹಂಚಿಕೆ ಮತ್ತು ಆಡಳಿತಾತ್ಮಕ ಬದಲಾವಣೆಯನ್ನು ತಂದಿರುವ ಐಸಿಸಿ “ಸದಸ್ಯರ ಭಾಗವಹಿಸುವಿಕೆ ಒಪ್ಪಂದ(ಎಂಪಿಎ)ವನ್ನು ಉಲ್ಲಂ ಸಿದೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಬ್ರಿಟಿಷ್ ಕಾನೂನು ಸಂಸ್ಥೆಯ ಮೂಲಕ ಐಸಿಸಿಗೆ ನೋಟೀಸ್ ಜಾರಿ ಮಾಡಿದೆ.
ಜಾಗತಿಕ ಕ್ರಿಕೆಟ್ ಪ್ರೇಕ್ಷಕರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕವಿದೆ. ಭಾರತೀಯ ಪ್ರೇಕ್ಷಕರು ಟಿ..ವಿ ನೋಡದಿದ್ದರೆ, ಕ್ರಿಕೆಟ್‌ನ ಲೀಡ್ ಬ್ರಾಡ್‌ಕಾಸ್ಟರ್‌ಗೆ ಹಣ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅದಕ್ಕೆ ಹಣ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೆಂದರೆ, ಭಾರತೀಯ ಸ್ಪಾನ್ಸರ್‌ಗಳ ಮೇಲೆ ಬದುಕುತ್ತಿರುವ ಐಸಿಸಿಯ ಇತರೆ ರಾಷ್ಟ್ರಗಳಿಗೂ ಹಣ ಸಿಗುವುದಿಲ್ಲ. ಒಂದೆಡೆ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಹಣವಿಲ್ಲದೇ ಹೈರಾಣಾಗಿದೆ. ಐಸಿಸಿ ಒಪ್ಪಿಕೊಂಡಿರುವ ಹೊಸ ಆದಾಯ ಹಂಚಿಕೆಯು(ಇದಕ್ಕಿನ್ನೂ ಕೊನೆಯ ಒಪ್ಪಿಗೆ ಸಿಗಬೇಕಿದೆ) ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಆರ್ಥಿಕ ಜೀವದಾಯಿಯಾಗಲಿದೆ.
ಪಾಕಿಸ್ತಾನಿ ಕ್ರಿಕೆಟ್ ಬೋರ್ಡ್ ದಿವಾಳಿ ಯಾಗುವುದನ್ನು ತಡೆಯಲು ಭಾರತೀಯ ಪ್ರೇಕ್ಷಕರ ಮೂಲಕ ಗಳಿಸಿದ ಹಣವನ್ನು ಬಳಸಲಾಗುತ್ತದೆ.ಹೀಗಾಗಿ, ಕ್ರಿಕೆಟ್ ಲೋಕದಲ್ಲಿ ಏನಾಗುತ್ತಿದೆ ಎಂದು ತಿಳಿಯದ ಸಿಓಎ ಸುಮ್ಮನೇ ಕೂತರೂ ಅಡ್ಡಿಯಿಲ್ಲ, ಬಿಸಿಸಿಐ ಈ ವಿಷಯದಲ್ಲಿ ಸ್ಪಷ್ಟ ನಿಲುವು ತೋರಿ, ಐಸಿಸಿಯ ಕುತಂತ್ರದ ವಿರುದ್ಧ ನಿಲ್ಲಬೇಕಿದೆ. ಭಾರತವೇನಾದರೂ ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಅದನ್ನು ವಿಶ್ವಕಪ್‌ನಂಥ ಟೂರ್ನಮೆಂಟ್‌ಗಳಿಂದ ಅನರ್ಹಗೊಳಿಸಲಾಗುವುದು ಎಂದು ಐಸಿಸಿ ಬೆದರಿಕೆ ಹಾಕಿತ್ತು.
ಆದರೆ ಇದು ಪೊಳ್ಳು ಬೆದರಿಕೆಯಷ್ಟೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಆಡಬೇಕೆಂದೇ ಐಸಿಸಿ ಬಯಸುತ್ತದೆ. ಅಲ್ಲದೆ, ಭಾರತವನ್ನೇನಾದರೂ ಭವಿಷ್ಯದ ಟೂರ್ನಿಗಳಿಂದ ಅನರ್ಹಗೊಳಿಸಿದರೆ, ಕಾನೂನು ಸಮರ ಎದುರಿಸಬೇಕಾಗುತ್ತದೆ ಎಂದೂ ಅದಕ್ಕೆ ಗೊತ್ತಿದೆ. ಭಾರತ ಆಡದಿದ್ದರೆ ಸ್ಪಾನ್ಸರ್‌ಗಳು ಕಾಣೆಯಾಗುತ್ತಾರೆ ಎನ್ನುವುದೂ ಅದಕ್ಕೆ ಚೆನ್ನಾಗಿ ತಿಳಿದಿದೆ.
ಇನ್ನು ಐಪಿಎಲ್ ಟೂರ್ನಿ ಆರ್ಥಿಕವಾಗಿ ಯಶಸ್ವಿಯಾಗಿರುವುದಕ್ಕೆ ಲಕ್ಷಾಂತರ ಭಾರತೀಯರು ಅದನ್ನು ನೋಡುತ್ತಾರೆ ಎನ್ನುವುದೇ ಕಾರಣ. ಸ್ಟೀವನ್ ಸ್ಮಿತ್‌ರಂಥ ಜಗತ್ತಿನ ಅತ್ಯುತ್ತಮ ಕ್ರಿಕೆಟರ್‌ಗಳೂ ತಮ್ಮ ಅಹಂಕಾರವನ್ನು ಬದಿಗೊತ್ತಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಅದು ತಂದುಕೊಡುವ ಹಣಕ್ಕಾಗಿಯೇ.
ಕ್ರಿಕೆಟ್ ಲೋಕದಲ್ಲಿ ಸರಿಯಾದ ಅಧಿಕಾರವನ್ನು ವ್ಯವಸ್ಥೆಯನ್ನು ರೂಪಿಸಲು ಭಾರತದ ಬಳಿ ಆರ್ಥಿಕ ಬಲವಿದೆ. ವಿದೇಶದ ಮತ್ತು ದೇಶದೊಳಗಿನ ಕುತಂತ್ರಿಗಳನ್ನು ಸೋಲಿಸಲು ಅದು ಎದ್ದು ನಿಲ್ಲುವ ಛಾತಿ ತೋರಬೇಕಿದೆ.
(ಲೇಖಕರು ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು.)
– ಮಿನ್ಹಾಜ್ ಮರ್ಚೆಂಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.