ಶಿವ-ಶಕ್ತಿ ಜತೆಗೂಡಿದರೆ ಭವಕ್ಕೆ ಶಕ್ತಿ ಸಾಮರ್ಥ್ಯ
Team Udayavani, Aug 27, 2023, 6:00 AM IST
ಪ್ರಧಾನಿ ಮೋದಿಯವರು ಚಂದ್ರಯಾನ -2 ಮತ್ತು 3 ಇಳಿದ ಜಾಗಕ್ಕೆ ಕ್ರಮವಾಗಿ ತಿರಂಗಾ ಮತ್ತು ಶಿವಶಕ್ತಿ ಹೆಸರಿಟ್ಟಿದ್ದಾರೆ. ಈ ಶಿವಶಕ್ತಿ ಹೆಸರಿನ ತಾತ್ಪರ್ಯದ ಬಗ್ಗೆ ತರಳಬಾಳು ಶ್ರೀಗಳು ವಿವರಿಸಿದ್ದಾರೆ…
ಚಂದ್ರಯಾನ-03; ಇಡೀ ಜಗತ್ತಿಗೆ ಭಾರತದ ಇಚ್ಛಾಶಕ್ತಿಯ ಸತ್ವವನ್ನು ಸಾರಿದ ಯೋಜನೆ. ವೈಫಲ್ಯಗಳಲ್ಲೂ ಸಾಫಲ್ಯಗೊಂಡು ಆವಿಷ್ಕಾರಗಳಲ್ಲಿ ಯಶಸ್ಸು ಕಾಣುವುದು ಪಾಶ್ಚಾತ್ಯ ದೇಶದವರಿಗೆ ಮಾತ್ರ ಸಾಧ್ಯ ಎಂಬ ಕುರುಡು ಭಾವನೆಯನ್ನು ಸಾರಾಸಗಟಾಗಿ ಬದಿಗಿಟ್ಟು ಭಾರತದ ಹಿರಿಮೆಯನ್ನ ಜಗದ ತುಂಬೆಲ್ಲ ಮತ್ತೂಮ್ಮೆ ಪಸರಿಸಿದ ಕೀರ್ತಿ ಇಡೀ ಚಂದ್ರಯಾನ 3ರ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಯಶಸ್ಸು ಸಾಧಿಸಿದ ವಿಜ್ಞಾನಿಗಳಿಗೆ ಧನ್ಯತೆಯ ಹಾಗೂ ಅಭಿನಂದನೆಯ ಹೃದಯಸ್ಪರ್ಶಿ ಸಂವಹನ ನೀಡಲು ದೇಶದ ಪ್ರಧಾನ ಮಂತ್ರಿಗಳು ನೇರವಾಗಿ ಬೆಂಗಳೂರಿಗೆ ಆಗಮಿಸಿ ಇಸ್ರೋ ಸಿಬಂದಿಯನ್ನು ಅಭಿನಂದಿಸಿದರು. ಪ್ರಧಾನಿಗಳು ವಿಜ್ಞಾನಿಗಳ ಸಾಧನೆಯನ್ನು ವಿವರಿಸುವ ಸಂದರ್ಭದಲ್ಲೇ 2019ರಲ್ಲಿ ಚಂದ್ರಯಾನ-2 ವಿಫಲಗೊಂಡು ಚಂದ್ರನ ಮೇಲ್ಮೆ„ ಪ್ರದೇ ಶದಲ್ಲಿ ಬಿದ್ದ ಜಾಗವನ್ನು ತಿರಂಗ ಪಾಯಿಂಟ್ ಎಂತಲೂ ಹಾಗೂ ನಿಗದಿತ ಚಂದ್ರನ ದಕ್ಷಿಣ ಧ್ರುವವನ್ನು ಯಶಸ್ವಿಯಾಗಿ ತಲುಪಿದ ಚಂದ್ರ ಯಾನ-3ರ ಭೂಸ್ಪರ್ಶಿಸಿದ ಜಾಗವನ್ನು ಶಿವಶಕ್ತಿ ಪಾಯಿಂಟ್ ಎಂದೂ ನಾಮಕರಿಸಿದರು. ಇದರ ಬಗೆಗೆ ಪರ ವಿರೋಧದ ನಿಲುವುಗಳು ಏನೇ ಇರಲಿ ಆದರೆ ಪ್ರಧಾನಿಗಳು ಚಂದ್ರಯಾನದಲ್ಲಿ ಶಿವನ ಸ್ವರೂಪವನ್ನು ನೆನೆ ದದ್ದು ಯಾಕೆ ಹಾಗೂ ಶಿವನ ನಾಮವನ್ನು ನಾಮಕರಣ ಮಾಡಿದ್ದು ಯಾಕೆ ಎಂಬ ಈ ಎರಡು ಪ್ರಶ್ನೆಗಳ ಬಗೆಗೆ ಅವಲೋಕಿಸೋಣ.
ಶಂಕರಾಚಾರ್ಯರ ಹೆಸರಿನಲ್ಲಿರುವ “ಸೌಂದರ್ಯ ಲಹರೀ’ ಎಂಬ ಸ್ತುತಿ ಕಾವ್ಯದ ಮೊದಲನೆಯ ಪದ್ಯದ ಶ್ಲೋಕವೊಂದರ ಮೊದಲ ಸಾಲು ಹೀಗಿದೆ;
“ಶಿವಃ ಶಕ್ತ್ಯಾ ಯುಕ್ತೋ ಯದಿ
ಭವತಿ ಶಕ್ತಃ ಪ್ರಭವಿತುಂ’
ಅಂದರೆ ಶಿವನು ಶಕ್ತಿಯೊಂದಿಗೆ ಜತೆಗೂಡಿದರೆ ಮಾತ್ರ ಈ ಭವಕ್ಕೆ/ಪ್ರಪಂಚಕ್ಕೆ ಶಕ್ತಿ ಸಾಮರ್ಥ್ಯ ಎಂಬುದು ದೊರಕುತ್ತದೆ ಎಂಬುದು ಅದರ ತಾತ್ಪರ್ಯ. ಶಿವ ಎಂಬುದು ಒಂದು ಐತಿಹ್ಯಕ್ಕಿಂತ ಹೆಚ್ಚಾಗಿ ಒಂ ದು ಸಾತ್ವಿಕ ಶಕ್ತಿ ಎಂಬುದು ಭಾರತೀಯರ ನಂಬಿಕೆ. ಶಿವನ ಶಕ್ತಿ ಅಥವಾ ಶಿವಶಕ್ತಿ ಎಂಬುದು ಭವದ ಸಂಕೋಲೆಗಳನ್ನ ತೊಡೆದು ಹಾಕಿ ಔಚಿತ್ಯ ಪೂರ್ಣ ಸಚ್ಚಿದಾನಂದನ ಸನಿಹಕ್ಕೆ ಪರಿಶುದ್ಧಪೂರ್ಣ ಆತ್ಮವನ್ನು ಸೆಳೆಯು ವ ಒಂದು ಅನೂಹ್ಯವಾದ ದಿವ್ಯ ಮಾರ್ಗ ಎಂಬುದು ಉಪ ನಿಷತ್ತುಗಳ ಅಭಿಪ್ರಾಯ.
ಇಂತಹ ಶಿವಶಕ್ತಿ ಎಂಬ ಪದವನ್ನು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ನಿಗದಿಯಂತೆ ಭೂಸ್ಪರ್ಶಿಸಿದ ಜಾಗಕ್ಕೆ ನಾಮಕರಣ ಮಾಡಿದ್ದರ ಉದ್ದೇಶ ಕೂಡ ಶಿವಶಕ್ತಿಯಂತಹ ಭವ್ಯ ಭಾರತೀಯ ಅಭಿವ್ಯಕ್ತವನ್ನು ಜಗತ್ತು ನೆನೆಪಿನಲ್ಲಿಟ್ಟುಕೊಳ್ಳಲಿ ಎಂಬ ಉದ್ದೇಶಕ್ಕಾಗಿಯೇ!
ಭಾರತೀಯ ಪರಂಪರೆ ಧರ್ಮ ಮತ್ತು ಪರಂಪರೆಯ ಸಾಪೇಕ್ಷಿತ ಮೌಲ್ಯಗಳನ್ನ ಸದಾಕಾಲ ಅನುಷ್ಠಾನಗೊಳಿಸುತ್ತಾ ಕಾಲಕಾಲದ ಆಲೋ ಚನೆಗಳಿಗೆ ಪೂರಕವಾಗಿ ಮನುಷ್ಯರ ದೃಷ್ಟಿಕೋನದಲ್ಲಿ ತನ್ನ ಸಾಕಾರವನ್ನು ರೂಪ ಗೊಳಿಸುತ್ತಾ ಸಾಗುತ್ತಿರುವುದು ಶತಮಾನಗಳ ಭಾರತೀಯ ಧಾ ರ್ಮಿಕ ದೈದೀಪ್ಯವಾಗಿದೆ. ಇಂತಹ ಭಾರತೀಯ ಧಾರ್ಮಿಕತೆಯ ಶಕ್ತಿ ಯನ್ನು ಜಗತ್ತು ಎಂದಿಗೂ ನಿರಾಕರಿಸದೆ ಸ್ವೀಕರಿಸಿದ್ದರ ಪರಿಣಾಮ ಇಡೀ ಜಗತ್ತಿಗೆ ಭಾರತವೊಂದು ಆಧ್ಯಾತ್ಮಿಕ ತವರು ನೆಲೆಯಾಗಿರುವುದು ಕೂಡ ವೇದಗಳ ಕಾಲದಿಂದಲೂ ನಿರ್ವಿವಾದ ಸಂಗತಿಯಾಗಿದೆ. ಹೀಗಿರುವ ಪರಿಸ್ಥಿತಿಗಳಿಗೆ ಅನುಗುಣ ಎಂಬಂತೆ ಚಂದ್ರನ ಚುಂಬಿಸಿದ ವಿಕ್ರಮ್ ಯಂತ್ರದ ಲ್ಯಾಂಡೆಡ್ ಪಾಯಿಂಟ್ ಶಿವಶಕ್ತಿ ಎಂದು ನಾಮಕರಿಸಿದ್ದರ ಹಿನ್ನೆಲೆಯೂ ಈ ನೆಲೆಯದ್ದೇ ಆಗಿರುವುದು ಆಶ್ಚರ್ಯವೇನಲ್ಲ. ಒಟ್ಟಿ ನಲ್ಲಿ ಸಮಷ್ಠಿಯ ಭಾರತೀಯತೆಯ ಪ್ರಜ್ವಲಮಾನವಾದ ಧಾರ್ಮಿಕ ಅಂತಃಶಕ್ತಿಯನ್ನು ಜಗತ್ತು ಸದಾಕಾಲ ಸ್ಮರಿಸಿಕೊಳ್ಳಲಿ ಹಾಗೂ ಭಾರತೀಯತೆ ಸದಾಕಾಲ ವಸುದೈವ ಕುಟುಂಬಕವಾಗಿಯೇ ಇದೆ, ಇರುತ್ತದೆ ಎಂಬುದು ಚಂದ್ರಯಾನ 03ರ ಶಿವಶಕ್ತಿ ನಾಮಕರಣದ ತಾತ್ವಿಕ ಮೀಮಾಂಸೆ!
ಡಾ| ಶಿವಮೂರ್ತಿ ಶೀವಾಚಾರ್ಯ ಮಹಾಸ್ವಾಮಿ, ಶ್ರೀ ತರಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.