ಮಣ್ಣು ಬರಡಾದರೆ ನದಿಯೂ ಬರಿದು
ಕಾವೇರಿ ಪುನರುಜ್ಜೀವನಕ್ಕೆ ಕಾವೇರಿ ಕೂಗು ಎಂಬ ಅಭಿಯಾನ
Team Udayavani, Aug 19, 2019, 5:02 AM IST
ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್ ಅಗಲದಷ್ಟು ಹಸಿರು ಹೊದಿಕೆ ಇರಬೇಕು. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಹೆಚ್ಚಾಗುವಂತೆ ನೆಲ ನೆರಳಿನಲ್ಲಿರಬೇಕು. ಹಾಗಾದಾಗ ಮಾತ್ರ ಮಣ್ಣು ನೀರನ್ನು ಉಳಿಸಿಕೊಂಡು, ನೀರು ನದಿಯನ್ನು ಸೇರಲು ಅನುವು ಮಾಡಿಕೊಡುತ್ತದೆ.
ಬಾಲ್ಯದಿಂದಲೇ ಪರ್ವತಗಳು, ಕಾಡುಗಳು ಮತ್ತು ನದಿಗಳೊಂದಿಗಿನ ನನ್ನ ಒಡನಾಟ ಗಾಢವಾಗಿತ್ತು. ಕೇವಲ ಪ್ರಕೃತಿ ಮತ್ತದರ ಸಂಪನ್ಮೂಲಗಳನ್ನು ಆನಂದಿಸುವ ದೃಷ್ಟಿಯಿಂದ ಮಾತ್ರವಲ್ಲ, ನಾನು ಅವುಗಳನ್ನು ನನ್ನ ಅವಿಭಾಜ್ಯ ಅಂಗವಾಗಿ ಅನುಭವಿಸುತ್ತಿ¨ªೆ. ನಾಲ್ಕು ಟ್ರಕ್ ಟ್ಯೂಬ್‌ಗಳು ಮತ್ತು ಬಿದಿರಿನ ಕೋಲುಗಳನ್ನು ಒಟ್ಟಿಗೆ ಕಟ್ಟಿ, ನಾನೊಬ್ಬನೇ 13 ದಿನಗಳ ಕಾಲ ಕಾವೇರಿ ನದಿಯಲ್ಲಿ ಸಂಚರಿಸಿದ್ದೇನೆ. ನದಿಯನ್ನು ನಾನು ನನಗಿಂತ ಮಹತ್ತಾದ ಜೀವವಾಗಿ ನೋಡುತ್ತೇನೆ. ನಿಮ್ಮಂತಹವರು ಮತ್ತು ನನ್ನಂತಹವರು ಬಂದು ಹೋಗುತ್ತಾರೆ, ಆದರೆ ನದಿ ಲಕ್ಷಾಂತರ ವರ್ಷಗಳಿಂದ ಹರಿಯುತ್ತಿದೆ ಮತ್ತು ನೀವು ಕಲ್ಪಿಸಿಕೊಳ್ಳಲಾಗದ ಪ್ರಮಾಣದಲ್ಲಿ ಜೀವವನ್ನು ಪೋಷಿಸುತ್ತಾ ಬಂದಿದೆ. ನನ್ನ ಪ್ರಕಾರ ನದಿ ಒಂದು ಸಂಪನ್ಮೂಲವಲ್ಲ; ಅದು ಅಗಾಧವಾದ ಜೀವ. ನಮ್ಮ ಅಸ್ತಿತ್ವದ ಸ್ವರೂಪ ಹೇಗಿದೆಯೆಂದರೆ, ನಮ್ಮ ದೇಹದ ಮುಕ್ಕಾಲು ಭಾಗ ನೀರು. ಆದ್ದರಿಂದ ನೀರು ಒಂದು ಸರಕಲ್ಲ, ನೀರು ಜೀವಸೆಲೆ. ಅದು ಈ ದೇಹದಲ್ಲಿ¨ªಾಗ, ನಮಗೆ ಅದರ ಬಗ್ಗೆ ಎಷ್ಟು ಆಸಕ್ತಿಯಿರುತ್ತದಲ್ಲವೇ? ಆದರೆ ಅದು ಹೊರಗೆ ನದಿಯಾಗಿ ಹರಿಯುವಾಗ, ನಾವದನ್ನು ಏಕೆ ವಿಭಿನ್ನವಾಗಿ ಪರಿಗಣಿಸುತ್ತೇವೆ?
ಕಳೆದ 25 ವರ್ಷಗಳಲ್ಲಿ ದೇಶಾದ್ಯಂತ ನದಿಗಳ ಹರಿವು ಕ್ರಮೇಣ ಕ್ಷೀಣಿಸುತ್ತಿರುವುದನ್ನು ನಾನು ಆತಂಕದಿಂದ ನೋಡುತ್ತಿದ್ದೇನೆ. ಒಂದು ವರ್ಷ ಹೆಚ್ಚಿನ ಹರಿವು, ಇನ್ನೊಂದು ವರ್ಷ ಕಡಿಮೆ ಹರಿವು ಎನ್ನುವಂತಿಲ್ಲ, ನದಿ ನೀರಿನ ಹರಿವು ಏಕಪ್ರಕಾರವಾಗಿ ಕ್ರಮೇಣ ಕ್ಷೀಣಿಸುತ್ತಿದೆ. 2016 ರಲ್ಲಿ ಈ ಕ್ಷೀಣಿಸುವಿಕೆ ತೀವ್ರವಾಗಿ ಹೆಚ್ಚಾಗಿದೆ. ನಮ್ಮ ಜೀವಿತಾವ ಧಿಯಲ್ಲಿ ನದಿಗಳು ಈ ರೀತಿ ಬರಿದಾಗುತ್ತಿದ್ದರೆ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮತ್ತು ಮುಂದಿನ ಪೀಳಿಗೆಗಳ ಹಿತದ ಬಗ್ಗೆ ನಮಗೆ ಆಸಕ್ತಿಯಿಲ್ಲವೆಂದು ನಾವು ಸ್ಪಷ್ಟವಾಗಿ ಹೇಳಿದಂತಾಗುತ್ತದೆ.
ನಾನು ವಿಜ್ಞಾನಿಯಲ್ಲ ಮತ್ತು ಇದನ್ನು ನಿರೂಪಿಸಲು ಸೂಕ್ತವಾದ ವಿಜ್ಞಾನ ಅಥವಾ ಪದಗಳು ನನಗೆ ತಿಳಿದಿಲ್ಲ. ಆದರೆ ನಾನು ಗಮನಿಸಿದ ಹಾಗೆ, ಸಾಕಷ್ಟು ಗಿಡಮರಗಳು ಇಲ್ಲದಿರುವುದು ಮತ್ತು ಅತಿಯಾದ ಅಂತರ್ಜಲ ಬಳಕೆ ಒಟ್ಟಾಗಿ ನಮ್ಮ ನದಿಗಳನ್ನು ಅಳಿವಿನಂಚಿಗೆ ತಳ್ಳಿದೆ. ಸಾಕಷ್ಟು ವೃಕ್ಷ ಸಮೂಹ ಇಲ್ಲದಿರುವಾಗ, ವಿಶೇಷವಾಗಿ ಉಷ್ಣವಲಯದ ವಾತಾವರಣದಲ್ಲಿ, ಮಣ್ಣು ಮರಳಾಗಿ ಪರಿವರ್ತಿತವಾಗುತ್ತದೆ. ಮಣ್ಣು ಮತ್ತು ನದಿಗಳ ನಡುವೆ ಆಳವಾದ ಸಂಪರ್ಕವಿದೆ. ನಾವು ನಮ್ಮ ಮಣ್ಣನ್ನು ಬರಡಾಗಿಸಿದರೆ, ನಮ್ಮ ನದಿಗಳನ್ನೂ ನಾವು ಬರಿದಾಗಿಸುತ್ತೇವೆ. ಇಂದು ಇದೇ ಆಗಿರುವುದು – ನಮ್ಮ ಜಲಮೂಲಗಳು ಕ್ಷೀಣಿಸಿವೆ ಮತ್ತು ನಮ್ಮ ಮಣ್ಣು ಸವೆತಕ್ಕೊಳಗಾಗಿದೆ.
ಈ ದೇಶದ ಅತಿದೊಡ್ಡ ಸಾಧನೆಯೆಂದರೆ, ನಮ್ಮ ರೈತರು, ಹೆಚ್ಚಿನ ಮೂಲಸೌಕರ್ಯಗಳಿಲ್ಲದೆ, ಕೇವಲ ಸಾಂಪ್ರದಾಯಿಕ ಜ್ಞಾನದಿಂದಷ್ಟೆ ಈ ರಾಷ್ಟ್ರದ 1.3 ಶತಕೋಟಿ ಜನರಿಗೆ ಆಹಾರವನ್ನು ಒದಗಿಸಿ¨ªಾರೆ. ಆದರೆ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗುತ್ತಿರುವುದು ಮತ್ತು ನೀರಿನ ಕೊರತೆಯು ನಮ್ಮ ರೈತರನ್ನು ಪರಿಹಾರವೇ ಇಲ್ಲದಂತಹ ಇಕ್ಕಟ್ಟಿಗೆ ಸಿಲುಕಿಸಿದೆ; ಆತ್ಮಹತ್ಯೆಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಫಲವತ್ತಾಗಿರದ ಮತ್ತು ಸಾಕಷ್ಟು ನೀರಿಲ್ಲದ ಭೂಮಿಯಲ್ಲಿ ಬೆಳೆ ಬೆಳೆಯಲು ನಿಮ್ಮನ್ನು ಅಥವಾ ನನ್ನನ್ನು ಕೇಳಿದರೆ, ನಾವೂ ಸಹ ಅದನ್ನೇ ಮಾಡುತ್ತಿ¨ªೆವು. ನಮಗೆ ಆಹಾರ ಒದಗಿಸಿ ನಮ್ಮನ್ನು ಪೋಷಿಸುವ ಆ ರೈತನಿಗೇ ಸಾಕಷ್ಟು ಪೋಷಣೆ ಸಿಗುತ್ತಿಲ್ಲ; ಅವನ ಮಕ್ಕಳು ಹಸಿವಿನಿಂದ ಕಂಗೆಟ್ಟಿ¨ªಾರೆ. ನಮ್ಮ ಅನ್ನದಾತನು ತನ್ನ ಜೀವ ತೆಗೆದುಕೊಳ್ಳುವಂತಹ ಸ್ಥಿತಿಗೆ ಬರುವಷ್ಟು ಹಸಿದಿ¨ªಾನೆ ಎಂದು ನಮಗೆ ತಿಳಿದಿರುವಾಗ ನಾವು ತಲೆ ಎತ್ತಿ ನಡೆಯುವುದಾದರೂ ಹೇಗೆ? ಇದು ಬಹಳ ನಾಚಿಕಗೇಡಿನ ಸಂಗತಿ. ನಾವು ಇದಕ್ಕೊಂದು ಪರಿಹಾರ ಕಂಡುಕೊಂಡಿರದ ಕಾರಣ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ. ಇಂದು ದೇಶದ ಜನಸಂಖ್ಯೆಯ ಬಹುಪಾಲು ಕೃಷಿಯಲ್ಲಿ ತೊಡಗಿದೆ.
8,000 ರಿಂದ 12,000 ವರ್ಷಗಳ ಕೃಷಿಯ ಇತಿಹಾಸದಿಂದಾಗಿ ರೈತರಲ್ಲಿ ಅದ್ಭುತವಾದ ಜ್ಞಾನವಿದೆ. ಅವರಲ್ಲಿ ಕೃಷಿಯ ಸಂಸ್ಕಾರವಿದೆ. ಇದು ಕೇವಲ ಕಠಿಣ ಪರಿಶ್ರಮವಲ್ಲ – ಅÇÉೊಂದು ಜ್ಞಾನವಿದೆ; ಆದರೆ ಅದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಇಂದು ಕೇವಲ 15% ಕ್ಕಿಂತ ಕಡಿಮೆ ರೈತರು ತಮ್ಮ ಮಕ್ಕಳು ಕೃಷಿಯಲ್ಲಿ ತೊಡಗಬೇಕೆಂದು ಬಯಸುತ್ತಾರೆ. ನಾವು ಅವರಿಗೆ ತಕ್ಕದಾದ ಪರಿಸ್ಥಿತಿಯನ್ನು ಸೃಷ್ಟಿಸದಿದ್ದರೆ, ನಾವು ಈ ಜ್ಞಾನವನ್ನು ಈಗ ಬಳಸದಿದ್ದರೆ, ಅದು ಶಾಶ್ವತವಾಗಿ ಕಳೆದುಹೋಗಬಹುದು. ಮಣ್ಣಿನ ಸುಧಾರಣೆಯಲ್ಲಿ ನಮ್ಮ ರೈತರ ಸಾಂಪ್ರದಾಯಿಕ ಜ್ಞಾನವನ್ನು ಬಳಸುವುದು, ಭೂಮಿಯಲ್ಲಿ ಎಲ್ಲಾ ರೀತಿಯ ಗಿಡಮರಗಳನ್ನು ನೆಡುವ ಮೂಲಕ ನೀರಿನ ಮೂಲವನ್ನು ವೃದ್ಧಿಸುವುದು ಮತ್ತು ಸೂಕ್ತವಾದ ಆಧುನಿಕ ತಂತ್ರಜ್ಞಾನಗಳೊಂದಿಗೆ ನೀರಿನ ಬಳಕೆಯನ್ನು ನಿರ್ವಹಿಸುವುದೇ ನಮ್ಮ ಮುಂದಿನ ಮಾರ್ಗವಾಗಿದೆ.
ನಾವು ಪ್ರಸ್ತಾಪಿಸುತ್ತಿರುವ ಪರಿಹಾರವಿದು: ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್ ಅಗಲದಷ್ಟು ಹಸಿರು ಹೊದಿಕೆ ಇರಬೇಕು. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಹೆಚ್ಚಾಗುವಂತೆ ನೆಲ ನೆರಳಿನಲ್ಲಿರಬೇಕು. ಹಾಗಾದಾಗ ಮಾತ್ರ ಮಣ್ಣು ನೀರನ್ನು ಉಳಿಸಿಕೊಂಡು, ನೀರು ನದಿಯನ್ನು ಸೇರಲು ಅನುವು ಮಾಡಿಕೊಡುತ್ತದೆ. ಸರ್ಕಾರಿ ಭೂಮಿಯಲ್ಲಿ, ಮರು ಅರಣ್ಯೀಕರಣ ಅತ್ಯವಶ್ಯಕ. ಖಾಸಗಿ ಭೂಮಿಯಲ್ಲಿ, ರೈತರು ಸಾಮಾನ್ಯ ಬೆಳೆ ಕೃಷಿಯಿಂದ ಮರ ಆಧಾರಿತ ಕೃಷಿಗೆ ಬದಲಾಗಬೇಕು. ಮರ ಆಧಾರಿತ ಕೃಷಿಯು ರೈತರ ಆದಾಯವನ್ನು ಕನಿಷ್ಠ 3 ರಿಂದ 5 ಪಟ್ಟು ಹೆಚ್ಚಿಸಬಹುದಾದ್ದರಿಂದ ಇದು ಭಾರತದ ರೈತರಿಗೆ ಉತ್ತಮ ಆರ್ಥಿಕ ಪ್ರತಿಪಾದನೆಯಾಗಿದೆ.
ಈ ಕರಡು ನೀತಿ ಶಿಫಾರಸು ಪರಿಸರಕ್ಕೆ ಗಮನಾರ್ಹ ಒಳಿತನ್ನು ಮಾಡುವುದರೊಂದಿಗೆ ಪರಿಹಾರವನ್ನು ಆರ್ಥಿಕ ನೀತಿಯನ್ನಾಗಿ ಮಾಡುವ ಪ್ರಯತ್ನವಾಗಿದೆ. ಎಲ್ಲಾ ಪಾಲುದಾರರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು, ವಿವಿಧ ಕ್ಷೇತ್ರಗಳ ಪರಿಣತಿ ಮತ್ತು ಅನುಭವ ಹೊಂದಿರುವ ತಜ್ಞರೊಂದಿಗೆ ನಾವು ನಡೆಸಿದ ಸಮಾಲೋಚನೆಯ ಫಲಿತಾಂಶ ಇದು.
ಮೊದಲ ಮತ್ತು ಅಗ್ರಗಣ್ಯ ಪಾಲುದಾರ ನದಿ; ನಂತರ ನದಿಯ ಕಾರಣದಿಂದ ಬದುಕುಳಿಯುವ ಜೀವಿಗಳು; ನಂತರ ರೈತರು; ನಂತರ ಸಮುದಾಯ; ಮತ್ತು ರಾಜ್ಯ ಮತ್ತು ಕೇಂದ್ರಸರ್ಕಾರಗಳು. ಇದನ್ನು ಕಾರ್ಯಗತಗೊಳಿಸಬಹುದಾದ ಮತ್ತು ಜಾರಿಗೊಳಿಸಬಹುದಾದ ನೀತಿಯನ್ನಾಗಿ ಮಾಡುವುದು ಮುಖ್ಯ ಗುರಿಯಾಗಿದೆ. ಹೆಚ್ಚಿನ ಮಾಹಿತಿ ಅಥವಾ ಅಗತ್ಯವಿರುವ ಯಾವುದೇ ಅಂಶಗಳನ್ನು ಸ್ಪಷ್ಟಪಡಿಸಲು ವೈಜ್ಞಾನಿಕ ತಂಡ ಅಥವಾ ನಾನು ಯಾವಾಗಲೂ ಲಭ್ಯವಿರುತ್ತೇವೆ.
ಸಹಸ್ರಮಾನಗಳ ಕಾಲ, ತಲೆಮಾರುಗಳಿಂದ, ನಮ್ಮ ನದಿಗಳು ನಮ್ಮನ್ನು ತಮ್ಮ ಬೆಚ್ಚಗಿನ ಅಪ್ಪುಗೆಯಲ್ಲಿ ಪೋಷಿಸಿವೆ. ಈಗ ಈ ನದಿಗಳನ್ನು ನಮ್ಮ ಅಪ್ಪುಗೆಯಲ್ಲಿ ಪೋಷಿಸಬೇಕಾದ ಸಮಯ ಬಂದಿದೆ. ನಮ್ಮ ಸಲಹೆಯಂತೆ ಅಗತ್ಯವಾದ ಶಾಸಕಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ಅದನ್ನು ಕಡ್ಡಾಯ ಕಾನೂನನ್ನಾಗಿ ಮಾಡಬೇಕು ಎನ್ನುವುದು ನಮ್ಮ ವಿನಮ್ರ ಆಶಯ. ನಮ್ಮ ನದಿಗಳು, ಜಲಮೂಲಗಳು ಮತ್ತು ಮಣ್ಣನ್ನು ರಾಷ್ಟ್ರೀಯ ನಿಧಿಯಾಗಿ ಪರಿಗಣಿಸುವ ಕಾನೂನನ್ನು ರೂಪಿಸುವತ್ತ ಸಾಗೋಣ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. ಜಿsಜಚ.sಚಛಜಜuru.ಟ್ಟಜ/ಜಿn/kn)
ಏನಿದು ಕಾವೇರಿಯ ಕೂಗು
ನಮ್ಮ ದೇಶದ ಜೀವನಾಡಿಗಳಂತಿರುವ ನದಿಗಳನ್ನು ಹೇಗೆ ಪುನರುಜ್ಜೀವಗೊಳಿಸಬಹುದು ಎಂಬುದರ ಮಾನದಂಡವನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಕಾವೇರಿ ಕೂಗು ಅಭಿಯಾನವು ಮೊದಲನೆಯ ಪ್ರಯತ್ನ ಎನ್ನಬಹುದು. ಇದರ ಅಂಗವಾಗಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡುವ ಮೂಲಕ ಕಾವೇರಿ ನದಿಯ ಪುನರುಜ್ಜೀವನಕ್ಕೆ ಚಾಲನೆ ನೀಡಲಾಗು ವುದು.
ಇದೆಲ್ಲದರ ಫಲವಾಗಿ ಜಲಾನಯನ ಪ್ರದೇಶದಲ್ಲಿ ನೀರಿನ ಧಾರಣ ಅಧಿ ಕವಾಗುತ್ತದೆ ಹಾಗೂ 5 ರಿಂದ 7 ವರ್ಷ ಗಳಲ್ಲಿ ರೈತರ ಆದಾಯವನ್ನು 3 ರಿಂದ 8 ಪಟ್ಟು ಹೆಚ್ಚಿಸುತ್ತದೆ ಮತ್ತು 84 ದಶಲಕ್ಷ ಜನರ ಜೀವನವನ್ನು ಬದಲಿಸುತ್ತದೆ. ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: Kannada.Cauvery Calling.org ಅಥವಾ 80009 80009 ಗೆ ಕರೆ ಮಾಡಿ.
– ಸದ್ಗುರು ಜಗ್ಗಿ ವಾಸುದೇವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.