ನಾನು ಸರಕಾರಿ ಶಾಲೆಯ ವಿದ್ಯಾರ್ಥಿ


Team Udayavani, Apr 10, 2018, 12:30 AM IST

2.jpg

ನಾನು ಒಂದರಿಂದ ಏಳನೆಯ ತರಗತಿಯವರೆಗೆ ಸರಕಾರಿ ಶಾಲೆಯಲ್ಲಿ ಕಲಿತೆ. ಎಂಟನೆಯ ತರಗತಿಯನ್ನು ಅನುದಾನಿತ ಶಾಲೆಯಲ್ಲಿ ಕಲಿತೆ. ಈಗ ಒಂಬತ್ತನೆಗೆ ಸರಕಾರಿ ಶಾಲೆಗೆ ಸೇರಿದ್ದೇನೆ. ಒಂದರಿಂದ ಆರನೆಯವರೆಗೆ ಕಲಿತ ಕೊಡಂಗಲ್ಲು ಶಾಲೆಯಲ್ಲಿ ಪಾಠ, ಆಟ, ನೃತ್ಯ ಇತ್ತು. ವಾರ್ಷಿಕೋತ್ಸವಕ್ಕೆ ಸಿದ್ಧತೆ ಮಾಡಿ ಸುತ್ತಿದ್ದರು. ಮಧ್ಯಾಹ್ನದ ಬಿಸಿ ಊಟವನ್ನು ಎಲ್ಲರೂ ಒಟ್ಟಿಗೆ ಉಣ್ಣುವುದು ಚಂದ. ವಾರಕ್ಕೆ ಮೂರು ದಿನ ಬಿಸಿಯಾದ ರುಚಿಕರ ಹಾಲು ಸಿಗುತ್ತಿತ್ತು. ಐದನೆಯಲ್ಲಿದ್ದಾಗ ವಾಟರ್‌ ಪ್ಯೂರಿಫೈಯ್ಯರ್‌ ಬಂತು. ತಂಪು ನೀರು ಸಿಗುತ್ತಿತ್ತು. ಅದನ್ನು ಪಡೆಯಲು ಸಾಲಾಗಿ ನಿಂತು ಬಾಟಲಿಯಲ್ಲಿ ತುಂಬಿಕೊಳ್ಳು ವುದು ಮರೆಯಲಾಗದ ಅನುಭವ.

ಏಳನೆಯ ತರಗತಿಯನ್ನು ಪೆರಿಂಜೆ ಸರಕಾರಿ ಶಾಲೆಯಲ್ಲಿ ಕಲಿತೆ. ಅಲ್ಲಿ ಗ್ರಾಮ ಪಂಚಾಯತಿಯವರು ಬಂದು ಇಬ್ಬರು ಮಕ್ಕಳಿಗೆ ಒಂದು ಗಿಡದಂತೆ ಕೊಡುತ್ತಿದ್ದರು. ಅದನ್ನು ನೆಟ್ಟು ಬೇಲಿ ಹಾಕಲಾಗುತ್ತಿತ್ತು. ಗಿಡವನ್ನು ನೆಟ್ಟ ವಿದ್ಯಾರ್ಥಿಗಳ ಹೆಸರನ್ನು ಅಲ್ಲಿ ಬರೆಯಲಾಗುತ್ತಿತ್ತು. ಅದನ್ನು ಪೋಷಿಸುವ ಜವಾಬ್ದಾರಿ ಆ ವಿದ್ಯಾರ್ಥಿಗಳದು. ಆ ಕೆಲಸವನ್ನು “ನಮ್ಮ ಗಿಡ, ನಮ್ಮ ಗಿಡ’ ಎಂದು ಖುಷಿಯಿಂದ ಮಾಡುತ್ತಿದ್ದೆವು. ಆ ಶಾಲೆ ಬಿಟ್ಟು ಬರುವಾಗ ಗಿಡದ ನೆನಪಿಗಾಗಿ ತೆಗೆದುಕೊಂಡು ಬಂದ ಅದರ ಎಲೆ ಈಗಲೂ ನನ್ನ ಬಳಿ ಇದೆ. ಇದರಿಂದ ನಾವು ಪರಿಸರ ಸ್ನೇಹಿಗಳಾಗಲು ಸಹಾಯವಾಯಿತು.

ಸರಕಾರದಿಂದ ಬಣ್ಣ ಬಣ್ಣದ ಸಮವಸ್ತ್ರ, ನಮ್ಮ ಕಾಲಿನ ಸೈಜಿನ ಶೂ ಕೊಡುತ್ತಾರೆ. ನನಗೆ ಶಾಲೆಯಲ್ಲಿ ಎರಡು ಬಾರಿ ಹುಷಾರಿಲ್ಲದಿದ್ದಾಗ ಶಿಕ್ಷಕರು ಅವರ ಬೈಕಿನಲ್ಲಿ ಮನೆಗೆ ಬಿಟ್ಟಿದ್ದರು. ಮಕ್ಕಳಿಗೆ ಹುಷಾರಿಲ್ಲದಾಗ ಮಾತ್ರೆ, ಮದ್ದು ಕೊಡುತ್ತಾರೆ. ಗ್ರಾಮ ಪಂಚಾಯತಿನವರು ಆಗಾಗ ಬಂದು ನಮ್ಮ ಬೇಕು ಬೇಡಗಳನ್ನು ವಿಚಾರಿಸುತ್ತಿದ್ದರು. ಒಂದು ವರ್ಷದಲ್ಲಿ ಬೆಳ್ತಂಗ ಡಿಯ ಶಾಸಕರು ಎರಡು ಸಲ ಬಂದು ನಮ್ಮನ್ನು ಮಾತ ನಾಡಿಸಿಕೊಂಡು ಹೋಗಿದ್ದರು. ಚೆನ್ನಾಗಿ ಕಲಿಸುತ್ತಿದ್ದರು. ಕಲಿ ಯಲು ಕಷ್ಟ ಆಗುವ ಮಕ್ಕಳಿಗೆ ಮತ್ತೆ ಮತ್ತೆ ಹೇಳಿಯಾದರೂ ಕಲಿಸುತ್ತಿದ್ದರು.

ಕೊಡಂಗಲ್ಲು ಶಾಲೆಯಲ್ಲಿದ್ದಾಗ ಸಹಪಾಠಿಗಳ ಹಿನ್ನೆಲೆಯೆಲ್ಲ ತಿಳಿಯುತ್ತಿರಲಿಲ್ಲ. ಏಳನೆ ತರಗತಿಗೆ ಬಂದಾಗ ಬೇರೆ ಬೇರೆ ಜಾತಿ, ಧರ್ಮದವರುಗಳ ಆಚರಣೆಗಳೆಲ್ಲ ಅರ್ಥ ಆಗಲಾರಂಭಿಸಿತು. ಸಹಪಾಠಿಗಳು ಮನೆಯ ವಿಷಯವನ್ನೆಲ್ಲ ಮಾತಾಡುತ್ತಿದ್ದರು. ಕೆಲವರ ಬಡತನ, ಕಷ್ಟಗಳು ಗೊತ್ತಾದವು. ಕೆಲವು ಸಲ ಕಷ್ಟ ಇರುವವರಿಗೆ ನನ್ನ ಪೆನ್ನು ಕೊಟ್ಟುಬಿಡುತ್ತಿದ್ದೆ. ಮನೆಯಲ್ಲಿ ನನಗೆ ಬೈತಾ ಇರಲಿಲ್ಲ. ನನ್ನ ಅಪ್ಪ-ಅಮ್ಮ-ಅಜ್ಜಿ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರಲ್ಲ ಎನಿಸುತ್ತಿತ್ತು. ಸರಕಾರಿ ಶಾಲೆಯಲ್ಲಿ ಓದುವ ಪ್ರಯೋಜನವೆಂದರೆ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವುದು ಹೇಗೆ ಎಂದು ಗೊತ್ತಾದದ್ದು. ಇದರಿಂದ ನನ್ನ ವ್ಯಕ್ತಿತ್ವದಲ್ಲಿ ಹಲವು ಒಳ್ಳೆಯ ರೀತಿಯ ಬದಲಾವಣೆಗಳಾಯಿತು.

ಎಂಟನೆಯ ತರಗತಿಗೆ ಮೂಡಬಿದ್ರೆಯ ಜೈನ ಅನುದಾನಿತ ಪ್ರೌಢಶಾಲೆಗೆ ಸೇರಿದೆ. ಸೈಕಲ್‌ ಸಿಕ್ಕಿತು.ದೂರದಿಂದ ಬರು
ವವರಿಗೆ ಅನುಕೂಲವಾಗುತ್ತಿತ್ತು. ತುಂಬಾ ಚೆನ್ನಾಗಿ ಕಲಿಸುತ್ತಿ ದ್ದರು. ಆದರೆ ದೊಡ್ಡ ಶಾಲೆ. ಸಾಗರದ ಹಾಗೆ, ತುಂಬಾ ಮಕ್ಕಳು. ನನಗೆ ಸರಕಾರಿ ಶಾಲೆಯೇ ಒಳ್ಳೆಯದೆನಿಸಿತು. ಆದ್ದರಿಂದ ಒಂಬತ್ತನೆಯ ಕ್ಲಾಸಿಗೆ ಪ್ರಾಂತ್ಯ ಪ್ರೌಢಶಾಲೆಗೆ ಸೇರಿದೆ. ಇಲ್ಲಿಯೂ ಸರಕಾರದಿಂದ ಹಸಿರು ಬಣ್ಣದ ಸಮವಸ್ತ್ರ ಸಿಕ್ಕಿತು. ಚಪ್ಪಲಿ ಕೂಡ ಸಿಕ್ಕಿತು. ಈ ವರ್ಷ ಕರ್ನಾಟಕ ದರ್ಶನಕ್ಕೆ ಕರೆದು ಕೊಂಡು ಹೋಗಿದ್ದರು. ಪ್ರವಾಸಕ್ಕೆ ಬೇರೆ ಬೇರೆ ಶಾಲೆಯ ಮಕ್ಕಳು, ಶಿಕ್ಷಕರು ಬಂದಿದ್ದರು. ಹಲವರೊಂದಿಗೆ ಬೆರೆಯಲು ಆಯಿತು. ಶನಿವಾರದ ದಿನ ನಮಗೆ ಶಿಕ್ಷಕರಿಂದ ಸ್ವತ್ಛತೆಯ ಬಗ್ಗೆ ವಿಶೇಷ ಮಾಹಿತಿ ಸಿಗುತ್ತದೆ. ಬೀದಿ ನಾಟಕಗಳನ್ನು ಮಾಡಿ ಜನರಲ್ಲಿ ನಾವು ಅರಿವು ಮೂಡಿಸಿದ್ದೇವೆ. ಅರಣ್ಯದ ಬಗ್ಗೆ ಅರಣ್ಯಾಧಿಕಾರಿ ಬಂದು ವಿಶೇಷ ಉಪನ್ಯಾಸ ಕೊಟ್ಟಿದ್ದಾರೆ. ಬೆಂಕಿ ಆರಿಸುವ ಬಗ್ಗೆ ಅಗ್ನಿಶಾಮಕ ದಳದವರು ಬಂದು ವಿಶೇಷ ಉಪನ್ಯಾಸ ನೀಡಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್‌ ಕಲಿಕೆ, ಹೊಲಿಗೆ ತರಬೇತಿಗಳಿವೆ.

ನಾನು ಸರಕಾರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ. ಇಂಗ್ಲಿಷನ್ನು ಚೆನ್ನಾಗಿಯೇ ಕಲಿಸುತ್ತಾರೆ. ನಾನು ಸರಕಾರಿ 
ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವುದರಿಂದ ಏನೋ ನಷ್ಟ ವಾಗಿದೆ ಯೆಂದು ನನಗನಿಸಿಲ್ಲ. ಅತಿಯಾಗಿ ಹೋಂವರ್ಕ್‌ ಕೊಡುವು ದಿಲ್ಲ. ತಡೆಯಲಾಗದ ಒತ್ತಡವನ್ನೂ ಹಾಕುವುದಿಲ್ಲ. ಮುಂದಿನ ವರ್ಷ ನಾನು ಹತ್ತನೆಯ ತರಗತಿ ಎಂದು ಓದಲು ಒತ್ತಡ ಹಾಕಬಾರದು. ನಾನು ಚೆನ್ನಾಗಿ ಓದಬೇಕೆಂದು ನನಗೆ ಗೊತ್ತಿದೆ, ನಾನೇ ಓದಿಕೊಳ್ಳುತ್ತೇನೆಂದು ಮನೆಯಲ್ಲಿ ಹೇಳಿದ್ದೇನೆ. ನಾನು ಓದಿದ  ಶಾಲೆಗಳಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ.

ಕಷ್ಟ ಎಂದು ಬೇಜಾರಲ್ಲಿರುವ ಫ್ರೆಂಡ್ಸ್ಗಳಿದ್ದಾರೆ. ಇತ್ತೀಚೆಗೆ ಒಬ್ಬ ಶಾಲೆ ಬಿಡುತ್ತೇನೆ, ಮನೆಯಲ್ಲಿ ಕಷ್ಟ ಎಂದ. ಅವನನ್ನು ಹೇಗಾದರೂ ಹತ್ತನೆ ಮುಗಿಸು ಎಂದು ಹೇಳಿ ಒಪ್ಪಿಸಿದ್ದೇನೆ. ಆದ್ದರಿಂದ ನಮಗೆ ಸ್ವಾತಂತ್ರ್ಯವಿದೆ. ಕಲಿಕೆಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಕ್ರೀಡೆಗೆ ಯಾವುದಕ್ಕೆ ಬೇಕಾದರೂ ಸೇರಬಹುದು. ಸೇರದೆ ಇರಲು ಸ್ವಾತಂತ್ರ್ಯವೂ ಇದೆ. ಸರಕಾರಿ ಶಾಲೆಯಲ್ಲಿ ನನಗೆ ಸಿಕ್ಕಿದ ಜ್ಞಾನದಿಂದ, ಅನು ಭವಗಳಿಂದ ನಾನು ಚೆನ್ನಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಆದ್ದರಿಂದ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ- ನಾನು ಸರಕಾರಿ ಶಾಲೆಯ ವಿದ್ಯಾರ್ಥಿ.

ಅಧ್ಯಯನಾ ಸಿ.ಎ, ಕೊಡಂಗಲ್ಲು, ಮೂಡುಬಿದ್ರೆ 

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.