![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 21, 2019, 5:58 AM IST
ಅಮೆರಿಕಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮುಂದಿನ ಅಧ್ಯಕ್ಷೀಯ ಚುನಾ ವಣೆಯಲ್ಲಿ ತಮ್ಮ ಎದುರಾಳಿಯಾಗಲಿರುವ ಜೋ ಬೈಡನ್ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ಮೇಲೆ ಒತ್ತಡ ಹೇರಿರುವ ಟ್ರಂಪ್ ಮೇಲೆ ಮಹಾಭಿಯೋಗ ನಡೆಯುತ್ತಿದೆ.
ಏನಿದು ಮಹಾಭಿಯೋಗ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಮಾಡಿ ವಿಚಾರಣೆ ನಡೆಸಿ, ಅದು ಸಾಭೀತಾದರೆ ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆಯೇ ಮಹಾಭಿಯೋಗ.
ಹೆಸರು ಕೆಡಿಸುವ ಆರೋಪ
ವಿದೇಶದಲ್ಲೂ ಭ್ರಷ್ಟಾಚಾರದ ಆರೋಪಗಳು -ಮೊಕದ್ದಮೆಗಳನ್ನು ಹೂಡಿ ಬೈಡನ್ ಅವರ ಹೆಸರನ್ನು ಹಾಳು ಮಾಡಿದರೆ ಚುನಾವಣೆಯಲ್ಲಿ ಸುಲಭವಾಗಿ ಗೆಲುವಾಗುಬಹುದು ಎಂಬುದು ಟ್ರಂಪ್ ಲೆಕ್ಕಾಚಾರ. ಈ ವಿಚಾರ ಮಹಾಭಿಯೋಗಕ್ಕೆ ಕಾರಣವಾಗಿದೆ.
ಪ್ರಕ್ರಿಯೆ ಹೇಗೆ ನಡೆಯುತ್ತದೆ
ಅಮೆರಿಕದ ಅಧ್ಯಕ್ಷರ ವಾಗ್ಧಂಡನೆ ಮತ್ತು ಅನಂತರದ ಪದಚ್ಯುತಿಯು 2 ಹಂತದ ಪ್ರಕ್ರಿಯೆಯಾಗಿದೆ. ಅಧ್ಯಕ್ಷರ ವಿರುದ್ಧ ಆಪಾದನೆಗಳನ್ನು ಪ್ರಸ್ತಾಪಿಸುವ ಗೊತ್ತುವ ಳಿಯೊಂದನ್ನು ಸಂಸತ್ತಿನ ಕೆಳಮನೆಯಲ್ಲಿ ಮೊದಲು ಮಂಡಿಸಬೇಕು. ಈ ಗೊತ್ತುವಳಿಯ ಕುರಿತು ಸಂಸದರು ಚರ್ಚೆ ನಡೆಸಬೇಕು. ಗೊತ್ತು ವಳಿ ಬಹುಮತದಿಂದ ಅಂಗೀಕಾರ ಆದರೆ ಅಧ್ಯಕ್ಷರು ವಾಗ್ಧಂಡನೆಗೊಳಗಾದಂತೆ. ಆಗ ಆತ ಸೆನೆಟ್‌ನಲ್ಲಿ ವಿಚಾರಣೆ ಎದುರಿಸಬೇಕು.
ವಿಚಾರಣೆ ಹೇಗೆ?
ಒಂದು ವೇಳೆ ಟ್ರಂಪ್ ವಿರುದ್ಧದ ಕೇಸು ವಿಚಾರಣೆಯ ಹಂತ ತಲುಪಿದರೆ, ವಿಚಾರಣೆಯ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಹಿಸುವರು. ಸೆನೆಟ್ ಮುಂದೆ ತಮ್ಮ ಪರ ವಾದ ಮಂಡಿಸಲು ನ್ಯಾಯವಾದಿಯೊಬ್ಬರನ್ನು ಟ್ರಂಪ್ ನೇಮಿಸಿಕೊ ಳ್ಳಬಹುದು. ವಿಚಾರಣೆಯ ಕೊನೆಯ ಹಂತದಲ್ಲಿ ಸೆನೆಟ್ ಸಭೆ ಮತ ಚಲಾಯಿಸುತ್ತದೆ. ಮೂರನೆಯ 2ರಷ್ಟು ಸದಸ್ಯರು ಮತ ಚಲಾ ಯಿಸಿದರೆ ಟ್ರಂಪ್ ಅವರು ಅಧಿಕಾರ ಕಳೆದು ಕೊಳ್ಳುತ್ತಾರೆ. ಇನ್ನುಳಿದ ಸಮಯದಲ್ಲಿ ಉಪಾ ಧ್ಯಕ್ಷರು ಅಮೆರಿಕದ ಅಧ್ಯಕ್ಷರಾಗುತ್ತಾರೆ.
ಸಂವಿಧಾನ ಏನು ಹೇಳುತ್ತದೆ?
ಅಮೆರಿಕದ ಸಂಸತ್ತಿನ ಕೆಳಮನೆಗೆ ಇಂಪೀಚ್‌ಮೆಂಟ್ ಅಧಿಕಾರವಿದ್ದರೆ ಎಲ್ಲ ಮಹಾಭಿಯೋಗದ ವಿಚಾರಣೆ ನಡೆಸುವ ಅಧಿಕಾರವನ್ನು ಸೆನೆಟ್ (ಮೇಲ್ಮನೆ) ಹೊಂದಿ ರುತ್ತದೆ. ಸನೆಟ್‌ನಲ್ಲಿ ಜರುಗುವ ಮಹಾ ಭಿಯೋಗ ವಿಚಾರಣೆಗಳ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ವಹಿಸುತ್ತಾರೆ. ದೇಶದ್ರೋಹ, ಭ್ರಷ್ಟಾಚಾರ, ಇತರ ದೊಡ್ಡ ಅಪರಾಧಗಳು ಇಲ್ಲವೇ ದುರ್ವರ್ತನೆಗಳಿಗಾಗಿ ಶಿಕ್ಷೆಯಾದರೆ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಬಹುದು.
ಮಹಾಭಿಯೋಗದಿಂದ ಟ್ರಂಪ್ ಬಚಾವ್?
ಡೊನಾಲ್ಡ್ ಟ್ರಂಪ್ ಅವರ ಮಹಾಭಿಯೋಗ ಪ್ರಕ್ರಿಯೆ ಆರಂಭವಾಗಿದ್ದರೂ ವಿಚಾರಣೆಯ ಹಂತ ತಲುಪುವ ಸಾಧ್ಯತೆ ವಿರಳ. ಸೆನೆಟ್‌ನಿಂದ ಶಿಕ್ಷೆಗೊಳಗಾಗುವ ಅವಕಾಶ ಇನ್ನಷ್ಟೂ ವಿರಳ. ಕೆಳಮನೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಬಹುಮತ ಇಲ್ಲ. ಡೆಮಾಕ್ರಾಟಿಕ್ ಪಕ್ಷ 235 ಸದಸ್ಯರನ್ನೂ, ರಿಪಬ್ಲಿಕನ್ ಪಕ್ಷ 199 ಸದಸ್ಯರನ್ನೂ ಹೊಂದಿದೆ. ಒಬ್ಬ ಪಕ್ಷೇತರ. ಮೇಲ್ಮನೆಯಲ್ಲಿ ಬಹುಮತ ರಿಪಬ್ಲಿಕನ್ ಪಕ್ಷದ್ದು. 53 ಮಂದಿ ರಿಪಬ್ಲಿಕನ್ ಪಕ್ಷದ ಸದಸ್ಯರಿದ್ದರೆ, ಡೆಮಕ್ರಾಟ್ಸ್‌ಗಳ ಸಂಖ್ಯೆ 45. ಅಧ್ಯಕ್ಷನಿಗೆ ಶಿಕ್ಷೆ ವಿಧಿಸಲು ಅಗತ್ಯವಿರುವ ಮತಗಳ ಸಂಖ್ಯೆ 67.
ಟ್ರಂಪ್ ಅವರು ಜುಲೈ 25ರಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸಿ(Volodymyr Zelensky) ಅವರಿಗೆ ಮಾಡಿದ ದೂರವಾಣಿ ಕರೆಯೇ ಅವರ ಪದಚ್ಯುತಿಗೆ ಕಾರಣ. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಮತ್ತು ಉಕ್ರೇನ್‌ನಲ್ಲಿ ವ್ಯಾಪಾರಿಯಾಗಿರುವ ಅವರ ಪುತ್ರ ಹಂಟರ್ ಬೈಡನ್ ವಿರುದ್ಧ ಉಕ್ರೇನಿನಲ್ಲಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ಪ್ರಕರಣವೊಂದರಲ್ಲಿ ಸಿಲುಕಿಸಬೇಕು ಎಂದು ಟ್ರಂಪ್ ಅವರು ಝೆಲೆನ್ಸಿ ಅವರನ್ನು ಕೋರಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ.
You seem to have an Ad Blocker on.
To continue reading, please turn it off or whitelist Udayavani.