ಮಳೆನದಿ- ಹಿಮನದಿ ಆಲಿಂಗನ; ಹೊಸ ರೀತಿಯ ನದಿ ಜೋಡಣೆ ಯೋಜನೆ ಆರಂಭ
Team Udayavani, Jun 13, 2022, 6:55 AM IST
ಹಿಮಾಲಯ ಪ್ರದೇಶಗಳ ನೀರಿನ ಬವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ “ಹಿಮನದಿಗಳನ್ನು ಮಳೆಯಾಶ್ರಿತ ನದಿಗಳೊಂದಿಗೆ ಜೋಡಣೆ’ ಮಾಡುವ ಯೋಜನೆಯನ್ನು ಉತ್ತರಾಖಂಡ ಸರ್ಕಾರ ಕೈಗೆತ್ತಿಕೊಂಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ನದಿ ಜೋಡಣೆ ಪ್ರಾಜೆಕ್ಟ್ ಸಾಕಾರಗೊಳ್ಳಲಿದ್ದು, ಪ್ರಾಜೆಕ್ಟ್‌ನ ಆರಂಭಿಕ ಕೆಲಸಗಳು ಈಗಾಗಲೇ ಶುರುವಾಗಿವೆ. ಇನ್ನೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಏನಿದು ಯೋಜನೆ?
ಉತ್ತರಾಖಂಡದ ಕುಮಾವುನ್ ಪ್ರದೇಶದಲ್ಲಿರುವ ಹಿಮನದಿಗಳನ್ನು ಅದೇ ಪ್ರದೇಶದಲ್ಲಿರುವ ಮಳೆಯಾಶ್ರಿತ ನದಿಗಳೊಂದಿಗೆ ಜೋಡಣೆ ಮಾಡುವ ಯೋಜನೆಯಿದು.
ಯಾವ ನದಿಗಳ ಜೋಡಣೆ?
ಪಿಂಡಾರಿ ನೀರ್ಗಲ್ಲುಗಳಿಂದ ಹುಟ್ಟುವಂಥ 105 ಕಿ.ಮೀ. ಉದ್ದದ ಪಿಂಡಾರ್ ನದಿಯ ಪ್ರಮುಖ ಉಪನದಿಗಳಾದ ಸುಂದರ್‌ದುಂಗಾ ಮತ್ತು ಶಂಭು ನದಿಗಳನ್ನು ಬಾಂಗೇಶ್ವರ ಜಿಲ್ಲೆಯ ಬೈಜನಾಥ್ ಕಣಿವೆ ಪ್ರದೇಶದ ಗೋಮತಿ ನದಿ, ಅಲ್ಮೋರಾ ಜಿಲ್ಲೆಯಲ್ಲಿರುವ ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳ ಮೇಲಾ^ಗದ ಜಲಾನಯನ ಪ್ರದೇಶಗಳೊಂದಿಗೆ ಜೋಡಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ನದಿ ಜೋಡಣೆ ಹೇಗೆ?
ಮೊದಲಿಗೆ ಪಿಂಡಾರಿ ನದಿಯಲ್ಲಿರುವ ನೀರನ್ನು ಹೊರತೆಗೆಯಲಾಗುತ್ತದೆ. ನಂತರ ಅದನ್ನು ಸುರಂಗಗಳು ಮತ್ತು ಪೈಪ್‌ಗ್ಳ ಮೂಲಕ ಗೋಮತಿ, ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳಿಗೆ ಪಂಪ್ ಮಾಡಲಾಗುತ್ತದೆ. ಜೂ.8ರಿಂದಲೇ ಎಂಜಿನಿಯರ್‌ಗಳು ಮತ್ತು ಭೂಗರ್ಭಶಾಸ್ತ್ರಜ್ಞರ ತಂಡವು ಸರ್ವೇ ಕೆಲಸ ಆರಂಭಿಸಿದೆ.
ಅನುಕೂಲತೆಗಳು
ಹವಾಮಾನ ವೈಪರೀತ್ಯ ಹಾಗೂ ಇತರೆ ಪರಿಸರೀಯ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಪ್ರದೇಶಗಳಲ್ಲಿನ ಮಳೆಯಾಶ್ರಿತ ನದಿಗಳು ಬತ್ತಿ ಹೋಗಲಾರಂಭಿಸಿವೆ. ಹೀಗಾಗಿ, ಈ ಪ್ರದೇಶದಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹಿಮನದಿಗಳೊಂದಿಗೆ ಮಳೆಯಾಶ್ರಿತ ನದಿಗಳನ್ನು ಜೋಡಣೆ ಮಾಡುವುದರಿಂದ ಅಲ್ಮೋರಾ ಮತ್ತು ಬಾಗೇಶ್ವರ ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.