47 ಸಾವಿರ ಟನ್ ಯೂರಿಯಾ ಭಾರತಕ್ಕೆ; ಮೊದಲ ಬಾರಿಗೆ ಅಮೆರಿಕದಿಂದ ಯೂರಿಯಾ ಖರೀದಿ
ನವ ಮಂಗಳೂರು ಬಂದರಿಗೆ ಆಗಮನ
Team Udayavani, Jun 18, 2022, 10:20 AM IST
ಅಮೆರಿಕದ “ನ್ಯೂ ಓರ್ಲಿಯನ್ಸ್’ ಬಂದರಿನಿಂದ ನವ ಮಂಗಳೂರು ಬಂದರಿಗೆ ಸುಮಾರು 47 ಸಾವಿರ ಟನ್‌ನಷ್ಟು ಯೂರಿಯಾ ಸದ್ಯದಲ್ಲೇ ಆಗಮಿಸಲಿದೆ. ವಾರಾಂತ್ಯದ ಹೊತ್ತಿಗೆ ಈ ಬೃಹತ್ ಪ್ರಮಾಣದ ಯೂರಿಯಾ ನವ ಮಂಗಳೂರು ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕದಿಂದ ಭಾರತ ಯೂರಿಯಾ ಖರೀದಿ ಮಾಡಿದೆ.
ದರ ಹೇಗೆ?
ದಕ್ಷಿಣ ಕೊರಿಯಾದ ದೈತ್ಯ ಸಮೂಹ ಸಂಸ್ಥೆಗಳಲ್ಲೊಂದಾದ ಸ್ಯಾಮ್‌ಸಂಗ್ ಯೂರಿಯಾವನ್ನು ಕಳುಹಿಸಲು ಸಜ್ಜಾಗಿದೆ. ಈ ಯೂರಿಯಾವು ಹರಳುಗಳ ರೂಪದಲ್ಲಿ ಭಾರತಕ್ಕೆ ಬರಲಿವೆ. ಅಮೆರಿಕದ ಬಂದರಿನಲ್ಲಿ ರಫ್ತಿಗೆ ಸಿದ್ಧವಾಗಿರುವ ಯೂರಿಯಾ ದಾಸ್ತಾನಿನ ಪ್ರತಿ ಟನ್‌ನ ಬೆಲೆ ಸುಮಾರು 56 ಸಾವಿರ ರೂ. ನಿಗದಿಗೊಳಿಸಲಾಗಿದೆ.
ಕೇಂದ್ರದ ಕಂಪನಿಗೆ ರವಾನೆ
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಕಂಪನಿಗೆ, ಅಮೆರಿಕದಿಂದ ಯೂರಿಯಾ ಬರಲಿದೆ. ಮೇ 11ರಂದು ಭಾರತವು ಯೂರಿಯಾ ಸರಬರಾಜಿಗೆ ಆಗ್ರಹಿಸಿ ಗ್ಲೋಬಲ್ ಟೆಂಡರ್ ಜಾರಿಗೊಳಿಸಿತ್ತು. ಅದರನ್ವಯ, ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಿಂದ ಒಟ್ಟು 1.65 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಭಾರತಕ್ಕೆ ಬರಲಿದೆ.
2021-22ರಲ್ಲಿ ಬಂದ ಯೂರಿಯಾ:
ದೇಶ ಪ್ರಮಾಣ (ಮೆ.ಟನ್)
ಚೀನ 2.79
ಒಮನ್ 1.62
ಯುಎಇ 1.06
ಈಜಿಪ್ಟ್ 0.75
ಕತಾರ್ 0.58
ಸೌದಿ 0.50
ಇತ್ತೀಚೆಗೆ ಕೊಳ್ಳಲಾದ ಯೂರಿಯಾ ಪ್ರಮಾಣ
ವರ್ಷ ಪ್ರಮಾಣ (ಟನ್)
2019-20 1.47
2020-21 2.19
2021-22 43.71
ಅಂಕಿ-ಅಂಶ:
47,000 ಟನ್
ಅಮೆರಿಕದಿಂದ ಆಮದಾಗಲಿರುವ ಯೂರಿಯಾ ಪ್ರಮಾಣ
56,000 ರೂ.
ಆಮದಾಗಲಿರುವ ಯೂರಿಯಾದ ಪ್ರತಿ ಟನ್‌ನ ಬೆಲೆ
1.65 ಮೆ.ಟನ್
ವಿವಿಧ ದೇಶಗಳಿಂದ ಸದ್ಯದಲ್ಲೇ ಬರಲಿರುವ ಯೂರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.