ಕೋವಿಡ್ ಬಳಿಕ ಮನೆಗಳಿಗೆ ಹೆಚ್ಚಿದ ಬೇಡಿಕೆ
ಶೇ. 73ರಷ್ಟು ಬಾಡಿಗೆಗಾರರಿಗೆ ಸ್ವಂತ ಸೂರಿನ ಅಪೇಕ್ಷೆ
Team Udayavani, Dec 30, 2020, 5:52 AM IST
ಕೋವಿಡ್ ಬಳಿಕ ಮನೆಗಳಿಗೆ ಹೆಚ್ಚಿದ ಬೇಡಿಕೆ
ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿದ್ದರೂ ನಗರ ಪ್ರದೇಶಗಳಲ್ಲಿ ಅದನ್ನು ಈಡೇರಿಸಿಕೊಳ್ಳುವುದು ಕಷ್ಟ. ಹೀಗಾಗಿ ಅಲ್ಲಿನ ಜನರು ಬಾಡಿಗೆ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಮನೆಯ ಕುರಿತಂತೆ ಜನರ ಕಾಳಜಿ ಹೆಚ್ಚಾಗಿದೆ. ನಗರವಾಸಿಗಳು ಬಾಡಿಗೆ ಮನೆ ಅಥವಾ ಫ್ಲ್ಯಾಟ್ ಅಥವಾ ಮನೆಗಳಿಗೆ ವಿದಾಯ ಹೇಳಿ ಸ್ವಂತ ಮನೆ ನಿರ್ಮಿಸುವ ಅಥವಾ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದಿದೆ ಒಂದು ವರದಿ.
ಯಾವ ವರದಿ
ಪಿಯರ್-ಟು-ಪಿಯರ್ ರಿಯಲ್ ಎಸ್ಟೇಟ್ ಪೋರ್ಟಲ್ ನೋ ಬ್ರೋಕರ್.ಕಾಮ್ ನ ವರದಿ ಈ ಅಂಶವನ್ನು ತೆರೆದಿಟ್ಟಿದೆ. ವರದಿಯ ಪ್ರಕಾರ ಮುಂದಿನ ವರ್ಷದ ವೇಳೆಗೆ ಸುಮಾರು ಶೇ. 73ರಷ್ಟು ಬಾಡಿಗೆದಾರರು ಮನೆ ಖರೀದಿಸಲು ಯೋಜಿಸುತ್ತಿದ್ದಾರೆ.
ಶೇ. 73 ಮಂದಿಗೆ ಮನೆ!
ದಿಲ್ಲಿಯಲ್ಲಿ ಸುಮಾರು ಶೇ. 73ರಷ್ಟು ಬಾಡಿಗೆದಾರರು 2021ರಲ್ಲಿ ಮನೆ ಖರೀದಿಸಲು ಮುಂದಾಗಿ¨ªಾರೆ. ದಿಲ್ಲಿಯ-ಎನ್‌ಸಿಆರ್‌ನಲ್ಲಿ ಸಿದ್ಧ ಮನೆಗಳನ್ನು ಖರೀದಿಸಲು ಶೇ. 67 ರಷ್ಟು ಜನರು ನಿರ್ಧರಿಸಿದ್ದಾರೆ. ಮರುಮಾರಾಟದ ಮನೆ (rಛಿsಚlಛಿ ಜಟusಛಿ)ಗಳ ಖರೀದಿಗೆ ಶೇ. 21ಮಂದಿ ಉತ್ಸುಕರಾಗಿದ್ದರೆ, ಕೇವಲ ಶೇ. 12ಮಂದಿ ಮಾತ್ರ ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ಗಳನ್ನು ಕೊಂಡುಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.
ಎಲ್ಲೆಲ್ಲಿ ಸಮೀಕ್ಷೆ?
ಬೆಂಗಳೂರು, ಮುಂಬಯಿ, ಪುಣೆ, ಚೆನ್ನೈ, ಹೈದರಾಬಾದ್ ಮತ್ತು ದಿಲ್ಲಿ-ಎನ್‌ಸಿಆರ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು ನಗರಗಳಲ್ಲಿಯೇ ಮನೆ ಹೊಂದಲು ಇಚ್ಚಿಸಿದ ಜನರ ಸಂಖ್ಯೆ ಶೇ.33ರಷ್ಟಿದೆ.
ಯುವಕರು ಹೆಚ್ಚು?
ದಿಲ್ಲಿಯಲ್ಲಿ ಶೇ. 58ರಷ್ಟು ಮಂದಿ ಹೊಸ ಮನೆಗಳತ್ತ ಮುಖ ಮಾಡಿದ್ದಾರೆ. ಇವರಲ್ಲಿ ಬಹುತೇಕರು ಯುವಕರಾಗಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮನೆಗಳ ಖರೀದಿಗೆ ಮುಂದಾಗಿರುವ ಯುವಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶೇ. 57ರಷ್ಟು ಜನರು ನಿವೇಶನಗಳ ಬದಲು ಫ್ಲ್ಯಾಟ್‌ಗಳ ಖರೀದಿಗೆ ಆಸಕ್ತಿ ತೋರಿದ್ದಾರೆ. ಸುಮಾರು ಶೇ. 65ರಷ್ಟು ಜನರು ಮನೆಗಳನ್ನು ನೋಡುವಾಗ ವಾಸ್ತು ಕುರಿತು ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ ವರ್ಷ ಕೇವಲ ಶೇ. 38ರಷ್ಟು ಖರೀದಿದಾರರು ಮಾತ್ರ ವಾಸ್ತು ಮೇಲೆ ಗಮನ ಕೇಂದ್ರೀಕರಿಸಿದ್ದರು ಎಂದು ವರದಿ ತಿಳಿಸಿದೆ.
ಡಿಜಿಟಲ್ ಪಾವತಿಗೆ ಒಲವು
ಸದ್ಯ ಬಾಡಿಗೆದಾರರು ಡಿಜಿಟಲ್ ಪಾವತಿಗೆ ಹಚ್ಚಿನ ಆದ್ಯತೆ ನೀಡುತ್ತಿದ್ದು ಸುಮಾರು ಅರ್ಧದಷ್ಟು ಬಾಡಿಗೆದಾರರು (ಶೇ. 48) ಆನ್‌ಲೈನ್ ಪಾವತಿ ವ್ಯವಸ್ಥೆ ಮೂಲಕ ತಮ್ಮ ಬಾಡಿಗೆಯನ್ನು ಪಾವತಿಸಿ¨ªಾರೆ.
ದುಬಾರಿ ಬಜೆಟ್!
ಈ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ. 32ರಷ್ಟು ಮಂದಿ 80 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಜೆಟ್‌ನ ಮನೆ ಅಥವಾ ಫ್ಲ್ಯಾಟ್‌ಗಳ ಖರೀದಿಗೆ ಒಲವು ಹೊಂದಿದ್ದಾರೆ. ಹಾಗೆಂದು ಮಹಾನಗರಗಳಲ್ಲಿ ನಿವೇಶನ ಅಥವಾ ಮನೆ ಖರೀದಿ ಅಷ್ಟೊಂದು ಸುಲಭದ ಮಾತಲ್ಲ. ನಿವೇಶನಗಳ ಕೊರತೆ ಪ್ರತಿಯೊಂದೂ ನಗರದ ಸಾಮಾನ್ಯ ಸಮಸ್ಯೆ. ವಸತಿ ಸಂಕೀರ್ಣಗಳಲ್ಲಿ ಖಾಲಿ ಬಿದ್ದಿರುವ ಫ್ಲ್ಯಾಟ್‌ಗಳಲ್ಲಿ ಹಲವಾರು ಕೊರತೆಗಳಿರುತ್ತವೆ. ಈ ಎಲ್ಲ ಸಮಸ್ಯೆ, ಸವಾಲುಗಳನ್ನು ಎದುರಿಸಿ ಸ್ವಂತ ಮನೆ ನಿರ್ಮಾಣ ಅಥವಾ ಖರೀದಿ ತುಸು ತ್ರಾಸದಾಯಕವೇ ಎಂದೂ ವರದಿ ಬೆಟ್ಟು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.