ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಬಳಕೆ, ಇರಲಿ ಎಚ್ಚರಿಕೆ


Team Udayavani, Nov 19, 2017, 12:50 AM IST

mobile.jpg

ಮೊದಲೆಲ್ಲ ವಾರಾಂತ್ಯದ ರಜೆ ಬಂತೆಂದರೆ ಸಾಕು ಊರಿನ ಮಕ್ಕಳೆಲ್ಲ ಸೇರಿ ಹಾಳುಬಿದ್ದ ಗ¨ªೆಯÇÉೋ ಶಾಲಾ ಮೈದಾನದÇÉೋ ಸೇರಿ ಬಿಸಿಲು-ಮಳೆ ಎನ್ನದೆ ಬೇರೆಬೇರೆ ಆಟಗಳನ್ನು ಆಡುತ್ತಿದ್ದರು. ಆದರೆ ಈಗ ಮಕ್ಕಳು ಹಾಗೆ ಸೇರುವುದು ಬಹಳ ವಿರಳ. ಯಾಕೆಂದರೆ ಬಹಳ ಹೊತ್ತು ಅವರು ಟಿ.ವಿ. ಮತ್ತು ಕಂಪ್ಯೂಟರ್‌ ಗೇಮ್‌ ಇದರಲ್ಲಿಯೇ ಕಾಲಕಳೆಯುತ್ತಾರೆ. ಇವೆರಡರ ಸಾಲಿಗೆ ಇವೆರಡಕ್ಕಿಂತಲೂ ಹೆಚ್ಚು ದುಷ್ಪರಿಣಾಮವನ್ನೇ ಉಂಟು ಮಾಡುವ ಮೊಬೈಲ್‌ ಇಂದು ಸೇರಿಕೊಂಡಿದೆ. ಮೊನ್ನೆ ನೆಂಟರೊಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋದಾಗ ಹಲವು ಮಕ್ಕಳು ಸೇರಿದ್ದರು.

ಆದರೆ ಅಲ್ಲಿ ದೊಡ್ಡವರ ಮಾತು-ಗಲಾಟೆ ಕೇಳಿಸುತ್ತಿತ್ತೇ ವಿನಾ ಮಕ್ಕಳ ಸದ್ದೇ ಇಲ್ಲ. ಆಮೇಲೆ ಮಕ್ಕಳೆಲ್ಲ ಎಲ್ಲಿ ಹೋದರು ಎಂದು ಹುಡುಕಿ ನೋಡಿದರೆ ಚಿಕ್ಕ ಮಕ್ಕಳೆಲ್ಲ ಸೇರಿ ಮೊಬೈಲಿನಲ್ಲಿ ಆಟವಾಡುತ್ತ, ಯೂಟ್ಯೂಬಿನಲ್ಲಿ ಕಾಟೂìನ್‌ ನೋಡುತ್ತ ಸದ್ದಿಲ್ಲದೆ ಕುಳಿತಿದ್ದರು. ದೊಡ್ಡ ಮಕ್ಕಳು ವಾಟ್ಸಪ್‌, ಫೇಸುºಕ್‌ ನೋಡುತ್ತಾ ಕುಳಿತಿದ್ದರು. ಇದನ್ನು ನೋಡಿದ ನನಗೆ ನಮ್ಮ ಮನೆಯವರು ಆಗಾಗ ಹೇಳುತ್ತಿದ್ದ ಮಾತು ಅಕ್ಷರಶಃ ಸತ್ಯ ಎನಿಸಿತು. ಆ ಮಾತೆಂದರೆ “”ಹಿಂದಿನ ಮಕ್ಕಳು ಬೈಲಿನಲ್ಲಿ (ಬಯಲಿನಲ್ಲಿ) ಆಡುತ್ತಿದ್ದರು, ಇಂದಿನ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆ”.

ಕೆಲವೇ ವರುಷಗಳ ಹಿಂದೆ ಈ ಮೊಬೈಲ್‌ ಎಂಬುದು ನಾವು ಸ್ವಾವಲಂಬಿಗಳಾದ ಅನಂತರ ಸ್ವಂತ ಬಳಕೆಗಾಗಿ ಕೊಂಡುಕೊಂಡು ಬಳಸುವ ಕಾಲವಾಗಿತ್ತು. ಕೇವಲ ಕರೆ ಮತ್ತು ಸಂದೇಶ ರವಾನೆಗಷ್ಟೇ ಸೀಮಿತವಾಗಿದ್ದ ಮೊಬೈಲ್‌ ಇಂದು ಬರಿಯ ಈ ಎರಡು ಉದ್ದೇಶಕ್ಕಷ್ಟೇ ಸೀಮಿತವಾಗಿರದೆ ಟಿ.ವಿ., ಇಂಟರ್ನೆಟ್‌, ಕ್ಯಾಮರಾ, ರೇಡಿಯೋ, ಸಾಮಾಜಿಕ ಮಾಧ್ಯಮಗಳ ಬಳಕೆಗೂ ಉಪಯೋಗವಾಗಬಲ್ಲ ಸ್ಮಾರ್ಟ್‌ ಫೋನ್‌ ಎಂಬ ಹೆಸರಿನ ಸಾಧನವಾಗಿದ್ದು ಇದರಲ್ಲಿ ಸಾಧಕ-ಬಾಧಕಗಳೂ ಸೇರಿವೆ. ಆದರೆ ಇಲ್ಲಿ ಗಂಭೀರವಾದ ಸಂಗತಿಯಂದರೆ ಇಂದು ಐದು ವರ್ಷದ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಮಕ್ಕಳೂ ಮೊಬೈಲಿಗೆ ಅಂಟಿಕೊಂಡಿರುವುದು ಕಾಣಬರುತ್ತಿದೆ. ಕೆಲವು ಮಕ್ಕಳು ಪಾಲಕರ ಮೊಬೈಲನ್ನೇ ಬಳಸುತ್ತಿದ್ದರೆ ಇನ್ನು ಕೆಲವರಂತೂ ಸ್ವಂತ ಮೊಬೈಲನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಸ್ಮಾರ್ಟ್‌ ಫೋನುಗಳಲ್ಲಿ ಬರುವ ಎಲ್ಲ ಆಪ್ಷನ್‌ಗಳನ್ನು ಸುಲಲಿತವಾಗಿ ಆಪರೇಟ್‌ ಮಾಡಬಲ್ಲವರಾಗಿರುತ್ತಾರೆ.

ಆದರೆ ತಂತ್ರಜ್ಞಾನವು ಆರೋಗ್ಯಕರವಾಗಿ ಬಳಸಲ್ಪಟ್ಟಾಗ ಮಾತ್ರ ಸಮಾಜದ ಸ್ವಾಸ್ಥ್ಯ ಹೆಚ್ಚುತ್ತದೆ. ಇಂಟರ್ನೆಟ್‌, ಗೂಗಲ್‌, ಯುಟ್ಯೂಬ್‌, ಮೊಬೈಲ್‌ ಗೇಮ್‌ ಇನ್ನಿತರ ಅಂತರ್ಜಾಲಗಳ ಬಳಕೆ ಮಕ್ಕಳಲ್ಲಿ ಜ್ಞಾನಾಭಿವೃದ್ಧಿಯನ್ನು ಮಾಡಬೇಕೇ ವಿನಾ ಅವರನ್ನು ತಪ್ಪು ದಾರಿಗೆ ಎಳೆಯುವಂತಾಗಬಾರದು. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್‌ ಬಳಸುವ ಸ್ವಾತಂತ್ರ್ಯವನ್ನು ನೀಡಬೇಕೆಂಬುದರ ಅರಿವು ಪೋಷಕರಿಗಿರುವುದು ಅಗತ್ಯವಾಗಿದೆ. ಇತ್ತೀಚೆಗೆ ಅತ್ಯಂತ ಸುದ್ದಿಯಲ್ಲಿರುವ ಬ್ಲೂ ವೇಲ್‌ನಂತಹ ಅಪಾಯಕಾರಿ ಆಟಗಳು ಹೇಗೆ ಚಿಕ್ಕ ಪ್ರಾಯದ ಮಕ್ಕಳನ್ನು ಬಲಿತೆಗೆದುಕೊಳ್ಳುವುದನ್ನು ಎಲ್ಲರೂ ತಿಳಿದಿರುವುದರಿಂದ ಆದಷ್ಟು ಮಕ್ಕಳಲ್ಲಿ ಮೊಬೈಲ್‌ ಬಳಕೆಯನ್ನು ಕಡಿಮೆಗೊಳಸುವುದು ಪೋಷಕರ ಆದ್ಯ ಕರ್ತವ್ಯವಾಗಿರುತ್ತದೆ. ಅದರಲ್ಲಿಯೂ ಮಕ್ಕಳು ಹೊಸ ವಿಷಯಗಳ ಬಗೆಗೆ ಕುತೂಹಲ ಹೊಂದಿರುವುದು ಸಾಮಾನ್ಯವಾದ ಸಂಗತಿ. ಅದರಲ್ಲಿ ಬೇಡದ ಸಂಗತಿಗಳೆಡೆಗೆ ಬೇಗ ಸೆಳೆಯಲ್ಪಡುತ್ತಾರೆ. ಅತಿಯಾದ ಮೊಬೈಲ್‌ ಬಳಕೆ ಕೇವಲ ದೇಹಾರೋಗ್ಯವನ್ನು ಹಾಳುಗೆಡಹುವುದಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತವೆ. 

ಕೆಲವು ಅಧ್ಯಯನಗಳ ಪ್ರಕಾರ ಮೊಬೈಲುಗಳಿಂದ ಹೊರಹೊಮ್ಮುವ ರೇಡಿಯೇಶನ್‌ ಮಕ್ಕಳ ಮೆದುಳಿನಲ್ಲಿ ವಯಸ್ಕ ಮೆದುಳಿಗೆ ಹೋಲಿಸಿದಾಗ ಶೇ.60ರಷ್ಟು ಬೇಗ ಗ್ರಹಿಸಲ್ಪಡುತ್ತದೆ ಎನ್ನಲಾಗಿದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ ಹದಗಡುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಈ ಮೊಬೈಲ್‌ ಗೀಳು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನೂ ಕುಂಠಿತಗೊಳಿಸುತ್ತವೆ ಎನ್ನಬಹುದಾಗಿದೆ. ಸತತವಾಗಿ ಮೊಬೈಲ್‌ ಬಳಸುವಿಕೆಯಿಂದ ದೃಷ್ಟಿದೋಷಗಳು, ಶ್ರವಣ ದೋಷಗಳು ಬರುತ್ತವೆಯಲ್ಲದೆ ಮಗುವಿನ ವಿಕಸಿತಗೊಳ್ಳುತ್ತಿರುವ ವ್ಯಕ್ತಿತ್ವದ ಮೇಲೆಯೂ ವ್ಯತಿರಿಕ್ತವಾದ ಪರಣಾಮವನ್ನು ಬೀರುತ್ತವೆ. ಇಷ್ಟೆಲ್ಲ ದುಷ್ಪರಿಣಾಮಗಳನ್ನು ಬೀರುವ ಮೊಬೈಲುಗಳಿಗೆ ನಮ್ಮ ಮಕ್ಕಳು ದಾಸರಾಗುವುದನ್ನು ತಡೆಯುವ ಅಗತ್ಯ ಇದ್ದೇ ಇದೆ. ನಮ್ಮ ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸುವುದೂ ನಾವು ಅವರನ್ನು ಪ್ರೀತಿಸುವಷ್ಟೇ ಮುಖ್ಯ. ಆದ್ದರಿಂದ ಅದಕ್ಕಾಗಿ ಕೆಲವು ಕ್ರಮಗಳನ್ನು ಪಾಲಿಸುವುದು ಅನಿವಾರ್ಯ.

– ಮಕ್ಕಳ ಮೆದುಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಮಕ್ಕಳಿಗೆ ಮೊಬೈಲನ್ನು ನೀಡುವುದು ಸಮಂಜಸವಾದುದಲ್ಲ. ಆದ್ದರಿಂದ ಮಕ್ಕಳಿಂದ ಮೊಬೈಲನ್ನು ದೂರವಿಡುವುದನ್ನು ರೂಢಿಸಿಕೊಳ್ಳಬೇಕು.
– ಬಸ್‌, ಟ್ರೈನುಗಳಲ್ಲಿ ಕಾರುಗಳಲ್ಲಿ ಅಥವಾ ಎಲಿವೇಟರುಗಳಲ್ಲಿ ಮಕ್ಕಳು ಫೋನ್‌ ಕರೆಗಳನ್ನು ಮಾಡದಂತೆ ಎಚ್ಚರವಹಿಸಿ. ಏಕೆಂದರೆ ಇಂತಹ  ಸಂದರ್ಭಗಳಲ್ಲಿ ಮೊಬೈಲುಗಳು ತೀವ್ರ ತೆರನಾಗಿ ವಿಕಿರಣಗಳನ್ನು ಸೂಸುತ್ತಿರುತ್ತವೆ. 
– ಪೋಷಕರು ಮಕ್ಕಳೆದುರು ಆದಷ್ಟು ಮೊಬೈಲ್‌ ಬಳಕೆಯನ್ನು ಕಡಿಮೆಗೊಳಿಸಬೇಕು.
– ಮೊಬೈಲುಗಳಲ್ಲಿನ ಯುಟ್ಯೂಬ್‌, ಗೂಗಲ್‌ ಇನ್ನಿತರ ವೀಡಿಯೋ ಆಕರಗಳನ್ನು ಮಕ್ಕಳೆದುರು ಬಳಸದಿರುವುದು ಮತ್ತು ಅವುಗಳನ್ನು ಅವರಿಗೆ ಪರಿಚಯಿಸದಿರುವುದು ಸೂಕ್ತವಾದುದು.
– ಮೊಬೈಲಿನಲ್ಲಿ ಆಟಗಳನ್ನಾಡದಂತೆ ತಡೆಯುವುದು ಮತ್ತು ದೈಹಿಕ ಆಟಗಳಿಗೆ ಅವರನ್ನು ಉತ್ತೇಜಿಸುವಂತೆ ಮಾಡುವುದು ಹಾಗೂ ಅವುಗಳಲ್ಲಿ ಪೋಷಕರೂ ತೊಡಗಿಕೊಳ್ಳುವುದು.
– ಮಕ್ಕಳು ಓದು, ಸಂಗೀತ, ಸಾಹಿತ್ಯ, ಚಿತ್ರಕಲೆ ಮೊದಲಾದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.
– ಮೊಬೈಲ್‌ ಬಳಕೆಯಿಂದಾಗುವ ಅನಾನುಕೂಲಗಳನ್ನು ತಿಳಿಯಪಡಿಸುವುದು.
– ಮರೆಯಾಗುತ್ತಿರುವ ಒಳಾಂಗಣ ಕ್ರೀಡೆಗಳಾದ ಚೆಸ್‌, ಲೂಡೊಗಳನ್ನು ಆಡುವಂತೆ ಪ್ರೇರೇಪಿಸುವುದು.
– ಒಳಾಂಗಣ ಕ್ರೀಡೆಗಳಂತೆ ಹೊರಾಂಗಣ ಕ್ರೀಡೆಗಳನ್ನು ಆಡುವಂತಹ ವಾತಾವರಣವನ್ನು ಸೃಷ್ಟಿಸುವುದು. 
ಈ ಎಲ್ಲ ಕ್ರಮಗಳನ್ನು ಕೈಗೊಳ್ಳುವುದರಿಂದ ಸ್ವಲ್ಪಮಟ್ಟಿಗಾದರೂ ಮಕ್ಕಳಲ್ಲಿ ಮೊಬೈಲ್‌ ಗೀಳನ್ನು ಕಡಿಮೆ ಮಾಡಬಹುದಾಗಿದೆ. ಅತ್ಯಂತ ಆವಶ್ಯಕತೆಯಿರುವಲ್ಲಿ ದೊಡ್ಡ ಮಕ್ಕಳಿಗೆ ಕೇವಲ ಬೇಸಿಕ್‌ ಸೆಟ್ಟುಗಳನ್ನು ಬಳಸುವ ಒಪ್ಪಿಗೆಯನ್ನು ನೀಡಬಹುದು. ಸ್ಮಾರ್ಟ್‌ ಫೋನುಗಳನ್ನು ಬಳಸಲು ಕನಿಷ್ಟ ವಯೋಮಾನದ ಮಿತಿಯನ್ನು ರೂಪಿಸುವುದು ಅತ್ಯಂತ ಆವಶ್ಯಕವಾಗಿದೆ. ಈ ಮಿತಿ ಸರಕಾರವೋ ಅಥವಾ ಇನ್ನಾರೋ ರೂಪಿಸುವಂತಹುದಲ್ಲ. ಬದಲಾಗಿ ನಮ್ಮ ಮಕ್ಕಳ ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪೋಷಕರೇ ಸ್ವತಃ ರೂಪಿಸಿಕೊಳ್ಳಬೇಕು.

– ಪ್ರಭಾ ಭಟ್‌

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.