ವಜ್ರ ಮಾರುಕಟ್ಟೆಗೆ ಭಾರತ ದೊಡ್ಡಣ್ಣ! ಕೃತಕ ವಜ್ರ ಉತ್ಪಾದನೆಯಲ್ಲಿ ದಾಪುಗಾಲು

ಎಲ್‌ಜಿಡಿಗೆ ವಿಶ್ವಾದ್ಯಂತ ಹೆಚ್ಚುತ್ತಿದೆ ಬೇಡಿಕೆ; ಎಲ್‌ಜಿಡಿ ರಫ್ತಿನಲ್ಲಿ ಮಹತ್ತರ ಪ್ರಗತಿ

Team Udayavani, Mar 26, 2023, 8:30 AM IST

ವಜ್ರ ಮಾರುಕಟ್ಟೆಗೆ ಭಾರತ ದೊಡ್ಡಣ್ಣ! ಕೃತಕ ವಜ್ರ ಉತ್ಪಾದನೆಯಲ್ಲಿ ದಾಪುಗಾಲು

ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ಉಳಿದ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಭಾರತ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯೇ ದೇಶದ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂಬ ಮಾತುಗಳ ನಡುವೆಯೇ ಗರಿಷ್ಠ ಪ್ರಮಾಣದಲ್ಲಿರುವ ಮಾನವ ಸಂಪನ್ಮೂಲ ಅದರಲ್ಲೂ ಯುವ ಸಮುದಾಯವನ್ನೂ ಹೊಂದಿರುವುದು ಭಾರತದ ಪಾಲಿಗೆ ಬಲುದೊಡ್ಡ ಧನಾತ್ಮಕ ಅಂಶ. ಇದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಇದೇ ವೇಳೆ ಭಾರತ ಚಿನ್ನಾಭರಣಗಳ ತಯಾರಿಯಲ್ಲೂ ಮುಂಚೂಣಿಯಲ್ಲಿದೆ. ಶೀಘ್ರದಲ್ಲಿಯೇ ಭಾರತ ವಜ್ರ ಮಾರುಕಟ್ಟೆಯ ಮಹಾರಾಜನಾಗುವ ಹಾದಿಯಲ್ಲಿದೆ. ಪ್ರಾಯೋಗಿಕವಾಗಿ ತಯಾರಿಸಲ್ಪಡುವ ವಜ್ರಗಳು ಅಂದರೆ ಲ್ಯಾಬ್‌ ಗ್ರೋನ್‌ ಡೈಮಂಡ್ಸ್‌ (ಎಲ್‌ಜಿಡಿ) ಮಾರುಕಟ್ಟೆಯಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನಕ್ಕೇರಲಿದ್ದು, ವಜ್ರ ರಫ್ತಿನಲ್ಲಿ ವಿಶ್ವದ ದೊಡ್ಡಣ್ಣನಾಗಿ ಹೊರಹೊಮ್ಮಲಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಏನಿದು ಲ್ಯಾಬ್‌
ಗ್ರೋನ್‌ ಡೈಮಂಡ್‌?
ನೈಸರ್ಗಿಕ ವಜ್ರಗಳು ಶುದ್ಧ ಇಂಗಾಲದ್ದಾಗಿದ್ದು ಭೂಮಿಯ ಹೊರಪದರದಿಂದ ರೂಪುಗೊಳ್ಳುತ್ತದೆ. ಲ್ಯಾಬ್‌ ಗ್ರೋನ್‌ ಡೈಮಂಡ್‌(ಎಲ್‌ಜಿಡಿ)ಗಳನ್ನು ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತದೆ. ಪ್ರಯೋಗಾಲಯಗಳಲ್ಲಿ ಇಂಗಾಲದ ಸೀಡ್‌ಗಳನ್ನು ಮೈಕ್ರೋವೇವ್‌ನಲ್ಲಿ ಇರಿಸಿ, ಅತಿಯಾದ ತಾಪಮಾನದಲ್ಲಿ ಅದನ್ನು ಹೊಳೆಯುವ ಪ್ಲಾಸ್ಮಾ ತುಂಡುಗಳನ್ನಾಗಿ ಪರಿವರ್ತಿಸಲಾಗುತ್ತದೆ. ಕೆಲವು ವಾರಗಳ ಬಳಿಕ ಇವುಗಳು ವಜ್ರಗಳಾಗಿ ಬದಲಾಗುತ್ತವೆ. ಹೈ ಪ್ರಶರ್‌, ಹೈ ಟೆಂಪರೇಚರ್‌ (ಎಚ್‌ಪಿಎಚ್‌ಟಿ) ಹಾಗೂ ಕೆಮಿಕಲ್‌ ವೇಪರ್‌ ಡಿಪೊಸಿಶನ್‌ (ಸಿವಿಡಿ) ಎಂಬ ಎರಡು ತಂತ್ರಜ್ಞಾನಗಳ ಸಹಾಯದಿಂದ ಎಲ್‌ಜಿಡಿಗಳನ್ನು ತಯಾರಿಸಲಾಗುತ್ತದೆ. ಇವುಗಳ ರಚನೆ ಹಾಗೂ ಗುಣಲಕ್ಷಣಗಳು ನೈಸರ್ಗಿಕ ವಜ್ರಗಳನ್ನೇ ಹೋಲುತ್ತವೆ. ಇದೇ ಕಾರಣದಿಂದ ಇವೆರಡರ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಸುಲಭವಲ್ಲವಾದ್ದರಿಂದ ವಜ್ರ ಮಾರುಕಟ್ಟೆಯಲ್ಲಿ ಎಲ್‌ಜಿಡಿಗಳಿಗೂ ಭಾರೀ ಬೇಡಿಕೆ ಇದೆ.

ಜಾಗತಿಕ ಮಾರುಕಟ್ಟೆ
ಜಾಗತಿಕವಾಗಿ ವಜ್ರ ಮಾರುಕಟ್ಟೆಯು 89.19 ಬಿಲಿಯನ್‌ ಡಾಲರ್‌ (2019ರ ಪ್ರಕಾರ) ಮೌಲ್ಯದ್ದಾಗಿದ್ದು 2030ರ ಒಳಗೆ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ರಷ್ಯಾವು ಅತೀ ಹೆಚ್ಚು ವಜ್ರ ಸಂಪನ್ಮೂಲ ಹೊಂದಿರುವ ದೇಶವಾಗಿದೆ. 2021ರ ಪ್ರಕಾರ ಜಾಗತಿಕವಾಗಿ ವಜ್ರ ಮಾರುಕಟ್ಟೆಯಲ್ಲಿ ರಫ್ತಿನ ಮೌಲ್ಯ 109.5 ಬಿಲಿಯನ್‌ ಡಾಲರ್‌ಗಳಷ್ಟಾಗಿತ್ತು. ವಜ್ರ ಮತ್ತು ವಜ್ರಾಭರಣಗಳ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಒಟ್ಟಾರೆ ರಫ್ತಿನಲ್ಲಿ ಶೇ. 22ರಷ್ಟು ಪಾಲನ್ನು ಹೊಂದಿದೆ.

ಎಲ್‌ಜಿಡಿ ಮತ್ತು ಭಾರತ
ವಜ್ರಗಳ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ ಪ್ರತೀ ವರ್ಷ 25 ಬಿಲಿಯನ್‌ ಡಾಲರ್‌ ಮೌಲ್ಯದ ವಜ್ರವನ್ನು ವಿಶ್ವದ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಪ್ರಪಂಚದಲ್ಲಿರುವ ಒಟ್ಟಾರೆ ವಜ್ರ ಪಾಲಿಶಿಂಗ್‌ ಕೇಂದ್ರಗಳ ಪೈಕಿ ಶೇ.90ರಷ್ಟು ಭಾರತದಲ್ಲಿಯೇ ಇವೆ. ಚೀನವು ಸದ್ಯ ಶೇ.56ರಷ್ಟು ಎಲ್‌ಜಿಡಿ ಉತ್ಪಾದನೆ ಮಾಡುತ್ತಿದ್ದು ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಭಾರತವು ಶೇ.15ರಷ್ಟು ಉತ್ಪಾದನ ಪಾಲು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಚೀನದಲ್ಲಿ ಹೆಚ್ಚಾಗಿ ಎಚ್‌ಪಿಎಚ್‌ಟಿ ವಜ್ರಗಳನ್ನು ತಯಾರಿಸಲಾಗುತ್ತದೆ. ಆದರೆ ಸಿವಿಡಿ ತಂತ್ರಜ್ಞಾನದ ಮೂಲಕ ವಜ್ರಗಳನ್ನು ತಯಾರಿಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅಂದಾಜಿನ ಪ್ರಕಾರ 2021-22 ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಭಾರತ ಸಿವಿಡಿ ಉದ್ಯಮದ ಶೇ.25ರಷ್ಟು ಪಾಲನ್ನು ಹೊಂದಿತ್ತು. ಈ ಲೆಕ್ಕಾಚಾರದ ಪ್ರಕಾರ ಮುಂದಿನ ದಿನಗಳಲ್ಲಿ ಭಾರತ ಎಲ್‌ಜಿಡಿಯ ಬಲುದೊಡ್ಡ ಮಾರುಕಟ್ಟೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಪಂಚದ ಬಹುತೇಕ ವಜ್ರಗಳು ಭಾರತದ ಸೂರತ್‌ನಲ್ಲಿ ಪಾಲಿಶ್‌ ಆಗುತ್ತವೆ. ಸೂರತ್‌ನಲ್ಲಿ 7ರಿಂದ 8 ಸಾವಿರ ಪಾಲಿಶಿಂಗ್‌ ಕೇಂದ್ರಗಳಿವೆ. ಈ ಪೈಕಿ ಶೇ.25-30ರಷ್ಟು ಎಲ್‌ಜಿಡಿ ಘಟಕಗಳಾಗಿವೆ.

ಎಲ್‌ಜಿಡಿ: ಹೆಚ್ಚುತ್ತಿರುವ ಬೇಡಿಕೆ
ಸದ್ಯಕ್ಕೆ ವಜ್ರ ಮಾರುಕಟ್ಟೆಯಲ್ಲಿ ಲ್ಯಾಬ್‌ ಗ್ರೋನ್‌ ಡೈಮಂಡ್‌ಗಳು ಶೇ.10ರಷ್ಟು ಮಾತ್ರ ಪಾಲನ್ನು ಹೊಂದಿವೆ. ಆದರೆ ಹೆಚ್ಚುತ್ತಿರುವ ಬೇಡಿಕೆ ಮುಂದಿನ ದಿನಗಳಲ್ಲಿ ಎಲ್‌ಜಿಡಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸಿಕೊಡುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ಜಾಗತಿಕವಾಗಿ 2020ರಲ್ಲಿ ಎಲ್‌ಜಿಡಿ ಮಾರುಕಟ್ಟೆ ಮೌಲ್ಯ ಒಂದು ಶತಕೋಟಿ ಡಾಲರ್‌ಗಳಷ್ಟಾಗಿತ್ತು. ಇತ್ತೀಚಿನ ದಿನಗಳಲ್ಲಿ ಪ್ರಯೋಗಾಲಯದಲ್ಲಿ ತಯಾರಾಗುವ ಈ ವಜ್ರಾಭರಣಗಳ ಮಾರುಕಟ್ಟೆಯು ಶೇ.80ರಷ್ಟು ಏರಿಕೆ ಕಂಡಿದ್ದು 2025ರ ವೇಳೆಗೆ 5 ಶತಕೋಟಿ ಡಾಲರ್‌ಗೆ ಏರಿಕೆ ಕಾಣಲಿದ್ದರೆ, 2035ರ ವೇಳೆಗೆ ಅದು 15 ಶತಕೋಟಿ ಡಾಲರ್‌ ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಲೈಡ್‌ ಮಾರ್ಕೆಟ್‌ ರಿಸರ್ಚ್‌ನ ಪ್ರಕಾರ 2030ರ ವೇಳೆಗೆ ಎಲ್‌ಜಿಡಿ ಮಾರುಕಟ್ಟೆ 49 ಬಿಲಿಯನ್‌ ಡಾಲರ್‌ಗಳಷ್ಟು ಏರಿಕೆ ಕಾಣಲಿದೆ.

ಜಿಡಿಪಿಗೆ ಮಹತ್ತರ ಕೊಡುಗೆ
ದೇಶದ ಆರ್ಥಿಕತೆಯಲ್ಲಿ ಎಲ್‌ಜಿಡಿ ದೊಡ್ಡ ಪಾತ್ರವನ್ನು ವಹಿಸಿದೆ. ಪ್ರಸ್ತುತ ದೇಶದ ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡುತ್ತಿದೆ. ಅಲ್ಲದೇ ದೇಶದ ಒಟ್ಟಾರೆ ಸರಕು ರಫ್ತಿನಲ್ಲಿ ಶೇ.10-12ರಷ್ಟು ಪಾಲನ್ನು ಎಲ್‌ಜಿಡಿ ಹೊಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಹೇಳಿದೆ.

ಭಾರತದಲ್ಲಿ ಎಲ್‌ಜಿಡಿ ಮಾರುಕಟ್ಟೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲು 2023-24ರ ಕೇಂದ್ರ ಬಜೆಟ್‌ನಲ್ಲಿ ಈ ವಜ್ರಗಳ ತಯಾ ರಿಕೆಯಲ್ಲಿ ಬಳಸಲಾಗುವ ಸೀಡ್‌ಗಳ ಮೇಲಿನ ಕಸ್ಟಮ್‌ ಸುಂಕವನ್ನು ಕಡಿಮೆಗೊಳಿಸಲಾಗಿದೆ. ಇದು ಎಲ್‌ಜಿಡಿ ರಫ್ತಿಗೆ ಅತ್ಯಂತ ಉತ್ತೇಜನ ಕಾರಿಯಾಗಿದ್ದು, ಭಾರತ ಎಲ್‌ಜಿಡಿ ಉದ್ಯಮದಲ್ಲಿ ಮುಂಚೂಣಿಯ ರಾಷ್ಟ್ರವಾಗಿ ಹೊರಹೊಮ್ಮಲು ಪುಷ್ಠಿ ನೀಡಲಿದೆ. ಅಲ್ಲದೇ ನೈಸರ್ಗಿಕ ವಜ್ರಗಳಿಗೆ ಪರ್ಯಾಯವಾಗಿ ಈ ವಜ್ರ ಗಳು ದೊರಕಲಿವೆ. 2030ರ ಹೊತ್ತಿಗೆ ವಿಶ್ವದ ಎಲ್‌ಜಿಡಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪಾಲನ್ನು ಭಾರತ ಹೊಂದಲಿದ್ದು, ಸುಮಾರು 7 – 8 ಬಿಲಿಯನ್‌ ಡಾಲರ್‌ ಮೌಲ್ಯದ ಎಲ್‌ಜಿಡಿ ರಫ್ತಿನ ಮೂಲಕ ದೇಶದ ಜಿಡಿಪಿಗೆ ಮಹತ್ತರವಾದ ಕೊಡುಗೆ ನೀಡಲಿದೆ.

ಭಾರತದಲ್ಲಿ
ಬೇಡಿಕೆ ಹೇಗಿದೆ?
ಹೊರದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವಜ್ರಗಳ ಖರೀದಿದಾರರು ಕಡಿಮೆ. ಸದ್ಯ ಶೇ.4ರಷ್ಟು ಜನರು ಮಾತ್ರ ದೇಶ ದಲ್ಲಿ ವಜ್ರ ಖರೀದಿಸುತ್ತಾರೆ. ವಜ್ರಾಭರಣಗಳು ದುಬಾರಿ ಯಾಗಿರುವುದರಿಂದ ದೇಶದಲ್ಲಿ ಖರೀದಿದಾರರು ಕಡಿಮೆ. ಅತೀ ಹೆಚ್ಚು ಯುವಜನರನ್ನು ಹೊಂದಿರುವ ಭಾರತ ಭವಿಷ್ಯದಲ್ಲಿ ದೊಡ್ಡ ವಜ್ರ ಗ್ರಾಹಕ ಮಾರುಕಟ್ಟೆಯನ್ನು ಹೊಂದಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಸ್ವಾವಲಂಬನೆಗೆ ಒತ್ತು
ವಜ್ರ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ವಜ್ರಗಳ ತಯಾರಿಕೆಗೆ ಬೇಕಾಗುವ ಉಪಕರಣಗಳನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಉಪಕರಣ ಗಳನ್ನು ದೇಶದಲ್ಲಿಯೇ ತಯಾರಿ ಸುವ ಮೂಲಕ ಸ್ವಾವಲಂಬಿ ಯಾಗುವ ಆವಶ್ಯಕತೆಯಿದೆ. ಈ ಉದ್ದೇಶದಿಂದ ಎಲ್‌ಜಿಡಿ ಸೀಡ್‌ ಹಾಗೂ ಯಂತ್ರೋಪಕರಣ ಗಳ ತಯಾರಿಕೆಗಾಗಿ ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಘೋಷಿಸಲಾಗಿದೆ. ಐಐಟಿ ಮದ್ರಾಸ್‌ನಲ್ಲಿ ಸಂಶೋಧನ ಕೇಂದ್ರ ತಲೆ ಎತ್ತಲಿದ್ದು ಮುಂದಿನ ಐದು ವರ್ಷಗಳ ಸಂಶೋಧನೆಗೆ ಅಂದಾಜು 242.96 ಕೋ.ರೂ ಧನಸಹಾಯವನ್ನು ಕೇಂದ್ರ ಸರಕಾರ ಘೋಷಿಸಿದೆ. ವಜ್ರದ ದೇಶಿಯ ಉತ್ಪಾದನೆಗೆ ಪ್ರೋತ್ಸಾಹಿಸುವುದು, ಕೈಗಾರಿಕೆ ಹಾಗೂ ಉದ್ಯಮದಲ್ಲಿ ತಾಂತ್ರಿಕ ಸಹಾಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

- ವಿಧಾತ್ರಿ ಭಟ್‌ ಉಪ್ಪುಂದ

ಟಾಪ್ ನ್ಯೂಸ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.