ಗಾಂಧಿ ಈ ಹೊತ್ತು
Team Udayavani, Oct 2, 2019, 6:00 AM IST
ಗಾಂಧೀಜಿಯ ತತ್ವಾದರ್ಶಗಳು ಮತ್ತು ನಾಯಕತ್ವದ ಮಾದರಿ ನಮ್ಮ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ. ಸದಾ ತುಮುಲಗಳಿಂದ ಕೂಡಿದ ಜಗತ್ತಿಗೆ ಗಾಂಧೀವಾದವೇ ಶಾಂತಿ ಮತ್ತು ಸುಭಿಕ್ಷೆಯನ್ನು ತರಬಲ್ಲದು ಎನ್ನುವುದು ವಿಶ್ವ ನಾಯಕರು ಒಪ್ಪಿಕೊಂಡಿರುವ ಸತ್ಯ. ಈ ಕಾರಣದಿಂದಲೇ ಗಾಂಧಿ ಮತ್ತು ಗಾಂಧೀವಾದ ಇಂದು ವಿಶ್ವ ವ್ಯಾಪಿ. ಇಡೀ ಪ್ರಪಂಚವನ್ನು ತನ್ನ ಸರಳತೆ, ಸತ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಭಾವಿಸಿದ ಈ ಆಧುನಿಕ ಸಂತನ 150ನೇ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಒಂದು ಮೆಲುಕು.
ವ್ಯಕ್ತಿಯ ಚಿಂತನೆಗಳು, ಮಾತುಗಳು ಅವನ ಕಾಲದ ಬಳಿಕವೂ ಪ್ರಸ್ತುತ ಎನಿಸಿದರೆ ಅದನ್ನು ಸಿದ್ಧಾಂತ ಎಂದು ಕರೆಯಲಾಗುತ್ತದೆ.ಗಾಂಧಿ ತಣ್ತೀಗಳು ಸಾರ್ವಕಾಲಿಕವಾಗಿ ಅನ್ವಯವಾಗುತ್ತವೆ. ಅವರು ತಮ್ಮ ಜೀವನದ ಉದ್ದಕ್ಕೂ ಸಾಧಿಸಿ ತೋರಿಸಿದ ಸಿದ್ಧಾಂತಗಳು ಇಂದು ಮಾದರಿ.
ಇಂದು ಗ್ಲೋಬಲ್ ವಿಲೇಜ್ ಪರಿಕಲ್ಪನೆಯಿಂದ ಜಗತ್ತು ವಿಮುಖವಾಗಿದ್ದು, ಜಾಗತಿಕವಾದ ಚಿಂತನೆಗಳು ಸ್ವಕೇಂದ್ರಿತವಾಗಿ ಸಂಕುಚಿತಗೊಳ್ಳುತ್ತಿವೆ. ತಾತ್ವಿಕ, ವೈಚಾರಿಕ ಭಿನ್ನತೆಗಳ ಮಧ್ಯೆಯೂ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ಮಾನವ ಕುಲವನ್ನು ಒಂದು ಗೂಡಿಸುವ, ವಸುಧೈವ ಕುಟುಂಬ ಕಂ ಪರಿಕಲ್ಪನೆಯನ್ನು ಕಟ್ಟಿಕೊಡುವ ಅನಿವಾರ್ಯತೆಯಿದೆ. ಈ ನೆಲೆಯಲ್ಲಿ ಚಿಂತಿಸುವುದಾದರೆ ಜಗತ್ತು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಗಾಂಧಿ ಜೀವನದಲ್ಲಿ ಉತ್ತರ ಇದೆ.
ಗಾಂಧೀನೋಕಾಮಿಕ್ಸ್
ಮಹಾತ್ಮ ಗಾಂಧಿಯವರು ಅರ್ಥಶಾಸ್ತ್ರದ ಮೇಲೆ ವಿಶೇಷ ಅಧ್ಯಯನ ಮಾಡಿದವರಲ್ಲ. ಆದರೆ ಅವರು ಜೀವನದಲ್ಲಿ ಕಾಡುವ ಹಲವು ಆರ್ಥಿಕ ಸಮಸ್ಯೆಗಳನ್ನು ಅರಿತಿದ್ದರು. ಇದು ಅವರಲ್ಲಿ ಅರ್ಥಶಾಸ್ತ್ರದ ಜ್ಞಾನವನ್ನು ಬಿತ್ತಲು ನೆರವಾಗಿದ್ದವು. ಇವರ ಅನುಭವ ಗಳನ್ನು ಒಂದೇ ಸೂತ್ರದಡಿ ತಂದರೆ ಒಂದು ಆರ್ಥಿಕ ಸಿದ್ಧಾಂತವೇ ರೂಪು ತಳೆಯಬಹುದು.
ಗಾಂಧೀಜಿಯವರು ತಮ್ಮ ಜೀವನವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡದೆ ಸಮಷ್ಠಿ ಯಲ್ಲಿ ಪರಿಭಾವಿಸುತ್ತಿದ್ದರು. ನಮ್ಮ ವಿಕಾಸಕ್ಕೆ ಪೋಷಕ ವಾಗುವಂತೆ ಆಧ್ಯಾತ್ಮಿಕ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ತತ್ವಗಳನ್ನು ಅನ್ವಯಿಸಿಕೊಳ್ಳಬೇಕೆಂಬುದು ಅವರ ವಾದವಾಗಿತ್ತು. ಅರ್ಥಾತ್ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ವಿಚಾರಪೂರ್ವಕ, ನಿಷ್ಠಾವಂತ ಅನ್ವಯವೇ ಅವರ ಸಿದ್ಧಾಂತದ ಮೂಲಸೂತ್ರ.
ಅರ್ಥವನ್ನು ಧರ್ಮ ನೀತಿಗಳಿಂದ ಬೇರ್ಪಡಿಸಿ, ಕೇವಲ, ಸಂಪತ್ತಿನ ಉತ್ಪಾದನೆ ವಿತರಣೆಗಳ ದೃಷ್ಟಿ ಯಿಂದ ಅರ್ಥಶಾಸ್ತ್ರದ ವ್ಯಾಖ್ಯೆ ಮಾಡುವುದನ್ನು ಎಂದೂ ಗಾಂಧಿ ಬಯಸಿದವರಲ್ಲ. ಅರ್ಥಶಾಸ್ತ್ರ ನಿಯ ಮಗಳು ಯಾವತ್ತೂ ಧರ್ಮನಿಷ್ಠವಾಗಿರಬೇಕು. ಉದಾತ್ತ ಜೀವನ ನಿರ್ವಹಣೆಗೆ ಅನುವಾಗಬೇಕು. ಉದಾತ್ತ ಜೀವನವೆಂದರೆ ಸರಳಜೀವನ (ಸಿಂಪಲ್ ಲೈಫ್). ಉಚ್ಚವಿಚಾರಗಳ ಸೂತ್ರಕ್ಕೆ ಬದ್ಧವಾ ಗಿರುವಂಥದು ಎಂದರ್ಥ. ಅಂದರೆ ಇಂದಿನ ಜೀವನ ಶೈಲಿಗೆ ಹೋಲಿಸುವುದಾದರೆ ಜೀವನವೆಂದರೆ ಧನ, ಕನಕ ಸಂಪತ್ತುಗಳ ಸಂಗ್ರಹವಲ್ಲ. ಸರಳ ಜೀವನದ ನಿರ್ವಹಣೆಗೆ ಅಗತ್ಯವಿದ್ದಷ್ಟೆ ಖರ್ಚು ಮಾಡುವುದು. ವಸ್ತುವನ್ನು ಶ್ರಮಪಟ್ಟು ಸಂಪಾದಿಸಬೇಕು.
ಮೇಕ್ ಇನ್ ಹೋಂ
ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಇದು ದೇಶಿಯ ವಿತ್ತ ನಿರ್ವ ಹಣೆಯ ಬಹುದೊಡ್ಡ ಮಾರ್ಗ. ಗಾಂಧಿ ದೃಷ್ಟಿಯಲ್ಲಿ ಸ್ವದೇಶಿ ಎಂದರೆ ತನ್ನ ನೆರೆಹೊರೆಯವರು ಎಂದರ್ಥ. ನೆರೆಹೊರೆಯಲ್ಲಿ ತಯಾರಿಸಿದ ವಸ್ತುಗಳನ್ನು ಕೊಳ್ಳ ಬೇಕು. ಸ್ವದೇಶಿ ಎಂದಮಾತ್ರಕ್ಕೆ ಪರದೇಶಿ ವಸ್ತುವನ್ನು ದ್ವೇಷಿಸಬೇಕೆಂಬುದಲ್ಲ. ಯಾವುದೇ ನೆರೆಹೊರೆಯಲ್ಲಿ ಸ್ಥಳೀಯವಾಗಿ ಅಥವಾ ಸ್ವದೇಶದಲ್ಲಿ ಸಿಗುವುದಿಲ್ಲವೋ ಅದನ್ನು ಬೇರೆಡೆಯಿಂದ ಅಥವಾ ಪರದೇಶಗಳಿಂದ ತರಿಸಿಕೊ ಳ್ಳುವುದನ್ನು ಅವರು ಬೆಂಬಲಿಸುತ್ತಿದ್ದರು. ಅದರೆ ನೆರೆಹೊರೆಯಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳದಿರುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ.
ಅಹಿಂಸಾ ಪಥ
“ಗಾಂಧಿ ಎಂದರೆ ಅಹಿಂಸೆ; ಅಹಿಂಸೆ ಎಂದರೆ ಗಾಂಧಿ’. ಇಂದು ಹಲವು ದೇಶಗಳಲ್ಲಿ ಗಡಿ ಸಮಸ್ಯೆತಾಂಡವಾಡುತ್ತಿದೆ. ಗಡಿ ರಕ್ಷಣೆಗೆ ದೊಡ್ಡ ಮೊತ್ತವನ್ನು ವಿನಿಯೋಗಿ ಸಲಾಗುತ್ತಿದ್ದು, ಯುದ್ಧದ ಭೀತಿ ಸೃಷ್ಟಿಸುತ್ತದೆ. ಮುಂದೆ ಜಾಗತಿಕ ಯುದ್ಧದಂತಹ ಪ್ರಮಾದಗಳು ಸಂಭವಿಸದಂತೆ ತಡೆಗಟ್ಟಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರುತ್ತದೆ. ಇಂದು ಹಲವು ದೇಶಗಳನ್ನು ಯುದ್ಧ ನೆರಳಿನಲ್ಲಿ ಅಥವ ಕೆಲವು ದೇಶಗಳು ಯುದ್ಧದ ಜಪದಲ್ಲೆ ದಿನಕಳೆಯುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಗಾಂಧಿ ತತ್ವದ ಅಡಿಯಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಶಾಂತಿ ಮತ್ತು ಅಹಿಂಸೆಯಿಂದ ಯುದ್ಧದ ಕಾರ್ಮೋಡವನ್ನು ಸರಿಸಬಹುದಾಗಿದೆ. ಬಹುತೇಕ ರಾಷ್ಟ್ರಗಳು ಗಾಂಧಿ ಚಿಂತನೆಯನ್ನು ಒಪ್ಪಿಕೊಂಡಿವೆಯಾದರೂ ಯುದ್ಧ ಮತ್ತು ಗಡಿಯ ರಕ್ಷಣೆಯ ವಿಷಯ ಬಂದಾಗ ಅಹಿಂಸೆ ಮತ್ತು ಶಾಂತಿಯ ಬೋಧನೆಯನ್ನು ಅನುಸರಿಸುವುದಿಲ್ಲ.
ಸ್ವಾವಲಂಬನೆ
ಆರ್ಥಿಕ ನಿಯಮಗಳು ಎಲ್ಲಾ ದೇಶಗಳಿಗೂ ಅನ್ವಯವಾಗು ವುದಿಲ್ಲ. ಒಂದು ದೇಶಕ್ಕೆ ಲಾಭ ವಾಗಬಹುದಾದದ ಆರ್ಥಿಕ ನಿಯಮಗಳು ಮತ್ತೂಂದು ದೇಶಕ್ಕೆ ವ್ಯತಿರಿಕ್ತವಾಗಿರಬಹುದು. ವಿಶೇಷ ವಾಗಿ ಹಳ್ಳಿಗಳ ದೇಶವಾದ ಭಾರತದ ಅರ್ಥವ್ಯವಸ್ಥೆ ಗ್ರಾಮ ಸ್ವಾವಲಂಬನೆಯ ಆಧಾರದ ಮೇಲೆ ನಿರ್ಮಾಣವಾಗಬೇಕು. ಪ್ರತಿ ಹಳ್ಳಿಯೂ ಅದಕ್ಕೆ ಅಗತ್ಯವಾದ ವಸ್ತುಗಳನ್ನು ಉತ್ಪಾದಿಸುವಂತಾಗಬೇಕು. ಗ್ರಾಮ ಅರ್ಥವ್ಯವಸ್ಥೆ ಕೃಷಿ ಮತ್ತು ಗುಡಿ ಕೈಗಾರಿಕೆಗಳ ಆಧಾರದಲ್ಲಿ ನಿಲ್ಲಬೇಕು. ಕೃಷಿ ಗ್ರಾಮೋದ್ಯೋಗಗಳಿಗೆ ಬೇಕಾದ ಉಪಕರಣಗಳು ಗ್ರಾಮದಲ್ಲೇ ತಯಾರಾಗಬೇಕು. ಹೀಗಾದರೆ ಮಾತ್ರ ಗ್ರಾಮೀಣರ ಆರ್ಥಿಕತೆ ಸುಸ್ಥಿರ.
ಉತ್ಪಾದನೆಯ ಗುರಿ ಯಾವತ್ತೂ ಲಾಭ ಸಂಪಾ ದನೆಯಾಗಿರಬಾರದು. ಉತ್ಪಾದನಾ ಕ್ಷೇತ್ರ ಜನರ ಅಗತ್ಯ ಪೂರೈಸುವ ಜತೆಗೆ ಜನರ ಕೈಗೆ ಉದ್ಯೋಗ ಗಳನ್ನೂ ಕೊಡುವಂತಾಗಬೇಕು. ಇಂದು ಕೈಗಾರೀ
ಕರಣಗಳು ಹೆಚ್ಚಾಗುತ್ತಿವೆ. ಕಾರ್ಮಿಕರ ಸಹಕಾರ ವಿಲ್ಲದೆ ಬಂಡವಾಳ ಸಾಧನೆಯಾಗಲು ಸಾಧ್ಯವಿಲ್ಲ.
ಶಾಂತಿ ದೂತನಿಗೆ ನೊಬೆಲ್ ಇಲ್ಲ !
ಮಹಾತ್ಮ ಗಾಂಧೀಜಿ ಅವರಷ್ಟು ದೊಡ್ಡ ಶಾಂತಿಯ ಹರಿಕಾರನನ್ನು ಈ ಜಗತ್ತು ಮತ್ತೆ ಎಂದಿಗೂ ಕಾಣಲು ಸಾಧ್ಯವಿಲ್ಲ. ಅಹಿಂಸೆಯ ಹೋರಾಟದಿಂದಲೇ ಅವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದರು. ಆದರೆ ಗಾಂಧಿ ತಾತನಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರಕಲಿಲ್ಲ. ಗಾಂಧೀಜಿ ಅವರನ್ನು 4 ಬಾರಿ ನೊಬೆಲ್‌ಗೆ ನಾಮನಿರ್ದೇಶನ ಮಾಡಲಾಗಿದ್ದರೂ ಅವರಿಗೆ ಈ ಶ್ರೇಷ್ಠ ಗೌರವ ಮಾತ್ರ ಸಿಗಲೇ ಇಲ್ಲ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನ ರಾದವರೆಲ್ಲಾ “ನನಗೆ ಗಾಂಧಿ ಮಾದರಿ’ಎಂದು ಹೇಳಿದ್ದಾರೆ. ವಿಶ್ವಸಂಸ್ಥೆ ಅ. 2ರಂದು ವಿಶ್ವ ಅಹಿಂಸಾ ದಿನವಾಗಿ ಆಚರಿಸುತ್ತಿದೆ.
ವಿಶ್ವಕ್ಕೆ ಮಾದರಿ
ಗಾಂಧಿ ಅವರು ಭಾರತೀಯರು ಹೌದು. ಆದರೆ ಅವರ ವಿಚಾರ ಮಾತ್ರ ಜಗತ್ತಿನ ಮೂಲೆ ಮೂಲೆ ಗಳಲ್ಲಿ ಅನುರಣಿಸುತ್ತಿದ್ದವು. ಶಾಂತಿ ಮತ್ತು ಅಹಿಂಸೆ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ್ದರು. ಭಾರತ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಗಾಂಧೀಜಿ ಅವರ ಶಾಂತಿ ಮತ್ತು ಹೋರಾಟದ ಸ್ಫೂರ್ತಿಯಿಂದ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿ ದ್ದವು. ಸುಮಾರು 12 ದೇಶಗಳಿಗೆ ಗಾಂಧೀಜಿ ಹೋರಾಟ ಮಾದರಿಯಾಗಿತ್ತು.
ಪತ್ರ ವ್ಯವಹಾರ
ಗಾಂಧೀಜಿಗೆ ವಿಶ್ವದ ಅನೇಕ ಮಹಾನ್ ವ್ಯಕ್ತಿಗಳ ಜತೆ ಒಳ್ಳೆಯ ಬಾಂಧವ್ಯವಿತ್ತು. ಅಂಥ ವ್ಯಕ್ತಿಗಳ ಜತೆ ಅವರು ಪತ್ರ ವ್ಯವಹಾರವನ್ನೂ ನಡೆಸುತ್ತಿದ್ದರು. ಲಿಯೋ ಟಾಲ್‌ಸ್ಟಾಯ್, ಆಲ್ಬರ್ಟ್ ಐನ್‌ಸ್ಟೆ çನ್, ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತಿತರರ ಜತೆ ಪತ್ರ ವ್ಯವಹಾರ ನಡೆಸುತ್ತಿದ್ದರು.
ಗಾಂಧೀಜಿ ಸ್ಟಾಂಪ್!
ತಮ್ಮ ಜೀವನವನ್ನು ಹೋರಾಟಕ್ಕಾಗಿ ಮುಡಿಪಾಗಿ ಟ್ಟವರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯ ಹರಿಕಾರರಾಗಿದ್ದವರು ಗಾಂಧಿ. ಅಂತಹ ಕಟು ಧೋರಣೆಯ ಬ್ರಿಟಿಷರೇ ಗಾಂಧಿ ವಿರುದ್ಧ ಮೃದು ಧೋರಣೆ ತಾಳಿದ್ದರು. ಗಾಂಧಿ ಹತ್ಯೆ ನಡೆದ 20 ವರ್ಷಗಳ ಬಳಿಕ ಬ್ರಿಟನ್‌ನಲ್ಲಿ ಗಾಂಧೀಜಿ ಅವರಿಗೆ ಗೌರವ ನೀಡುವ ಸಲುವಾಗಿ ಅಂಚೆ ಚೀಟಿಯೊಂದನ್ನು ಬಿಡುಗಡೆಗೊಳಿಸಿತ್ತು. 150ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಅಂಚೆ ಚೀಟಿ ಯನ್ನು ಹೊರತಂದಿವೆ. ಇಷ್ಟು ದೊಡ್ಡ ಗೌರವಕ್ಕೆ ಪಾತ್ರರಾದ ಇನ್ನೊಬ್ಬ ನಾಯಕನಿಲ್ಲ.
ಗಾಂಧಿ ದೊಡ್ಡಣ್ಣತ್ತ ಹೋಗಿಲ್ಲ
ಭಾರತದ ಬಳಿಕ ಅತೀ ಹೆಚ್ಚು ಗಾಂಧಿ ಸ್ಮಾರಕಗಳನ್ನು ಹೊಂದಿ ರುವ ದೇಶ ಅಮೆರಿಕ. ಗಾಂಧಿ ವಿಶ್ವದ ಹಲವು ರಾಷ್ಟ್ರಗಳಿಗೆ ಹೋಗಿ ದ್ದರೂ ಒಮ್ಮೆಯೂ ಅಮೆರಿಕಕ್ಕೆ ಭೇಟಿ ನೀಡಿರಲಿಲ್ಲ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿರಬೇಕಾದರೆ ಅಮೆರಿಕಕ್ಕೆ ಸ್ವಾತಂತ್ರ್ಯ
ಲಭಿಸಿ ಶತಮಾನವಾಗಿತ್ತು. ತಾವು ಅಮೆರಿಕಕ್ಕೆ ಭೇಟಿ ನೀಡದಿದ್ದರೂ ಅಭಿಮಾನಿಗಳನ್ನು ಹೊಂದಿದ್ದರು. ಇಂದೂ ಅತೀ ಹೆಚ್ಚು ಗಾಂಧಿ ತಣ್ತೀ ಪಾಲಕರು ಅಮೆರಿಕದಲ್ಲಿದ್ದಾರೆ.
ವಿದೇಶದಲ್ಲಿ ಗಾಂಧಿ ಸ್ಮಾರಕಗಳು
ಭಾರತ ಹೊರತುಪಡಿಸಿದರೆ ಅತಿ ಹೆಚ್ಚು ಮಹಾತ್ಮ ಗಾಂಧಿ ಪ್ರತಿಮೆ ಮತ್ತು ಸ್ಮಾರಕಗಳಿರುವ ದೇಶ ಅಮೆರಿಕ. ವಿಶೇಷವೆಂದರೆ ಅಮೆರಿಕಕ್ಕೆ ಗಾಂಧಿ ಒಮ್ಮೆಯೂ ಭೇಟಿ ನೀಡಿರಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಗಾಂಧಿ ಅವರ 10 ಪ್ರಮುಖ ಪ್ರತಿಮೆಗಳಿದ್ದು, ಹಲವು ಸಮುದಾಯ ಮತ್ತು ಸೇವಾ ಸಂಸ್ಥೆಗಳು ಅವರ ತತ್ವವನ್ನು ಅಳವಡಿಸಿಕೊಂಡಿವೆ.ಯಾವ ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ? ಇಲ್ಲಿದೆ ಮಾಹಿತಿ.
ವಾಷಿಂಗ್ಟನ್
ಬೆಥೆಸಾದಲ್ಲಿ ಇರುವ ಈ ಸ್ಮಾರಕ ಕೇಂದ್ರ ಅಮೆರಿಕದ ಮೊದಲ ಗಾಂಧಿ ನೆನಪಿನ ಸ್ಮಾರಕವಾಗಿದೆ. 1959ರಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಪ್ರತಿಷ್ಠಾನವನ್ನು ಸ್ವಾಮಿ ಪ್ರೇಮಾನಂದ ಅವರು ಸ್ಥಾಪನೆ ಮಾಡಿದ್ದು, ಕ್ಲಾರಾ ಕ್ವಿನ್ ಎಂಬವರು ಈ ಪ್ರತಿಮೆಯ ನಿರ್ಮಾಣಕಾರ.
ನ್ಯೂಯಾರ್ಕ್
ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್ ಪಾರ್ಕ್ ಉದ್ಯಾನದಲ್ಲಿ ಗಾಂಧಿ ಪ್ರತಿಮೆಯನ್ನು 1986ರಲ್ಲಿ ಸ್ಥಾಪಿಸಲಾಗಿದೆ. ಇದು ದೇಶದ ಮೊದಲ ಗಾಂಧಿ ಪ್ರತಿಮೆ ಯೂ ಹೌದು. ಗಾಂಧೀಜಿಯವರ 117ನೇ ಜನ್ಮದಿನೋತ್ಸವದ ಅಂಗವಾಗಿ ಅನಾವರಣವಾಗಿದೆ.
ಗಾಂಧೀ ಸಂಸ್ಥಾಪನ
1983ರಲ್ಲಿ ಸುರೂರ್ ಹೋಡಾ ಗಾಂಧಿ ಸಂಸ್ಥಾ ಪನವನ್ನು ಪ್ರಾರಂಭಿಸಿದ್ದು, ಲಂಡನ್‌ನ ಕಿಂಗ್ಸ್‌ಲೆ ಸಮುದಾಯ ಭವನದಲ್ಲಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಗಾಂಧಿ ಪಾಲಿಸಿದ ನಡೆಯನ್ನು ಇಲ್ಲಿ ಬಿಂಬಿಸಲಾಗಿದೆ.
ಕ್ಯಾಲಿಫೋರ್ನಿಯಾ
1950ರಲ್ಲಿ ಕ್ಯಾಲಿ ಫೋರ್ನಿಯಾದ ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 90ಕ್ಕೂ ಹೆಚ್ಚು ಪುಷ್ಪಗಳ ರಾಶಿ ಮಧ್ಯೆ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಗಾಂಧಿ ಚಿಂತನೆಗಳಿಗೆ ಇಲ್ಲಿ ಮನ್ನಣೆ.
ಲಂಡನ್‌ನ ಟ್ಯಾವಿಸ್ಟಾಕ್
ಗಾಂಧಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಫ್ರೆಡ್ಡಾ ಬ್ರಿಲಿಯಂಟ್ ಅವರು 1968ರಲ್ಲಿ ಲಂಡನ್‌ನ ಟ್ಯಾವಿಸ್ಟಾಕ್ ಚೌಕದ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಡಿದ ಗಾಂಧೀಜಿಯವರ ಪ್ರತಿಮೆಯನ್ನು ವಕೀಲ ವೇಷದಲ್ಲಿ ನಿರ್ಮಾಣ ಮಾಡಲಾಗಿದ್ದು, 2003ರಲ್ಲಿ ಅಮೋಸ್ ಮಸೊಂಡೋ ಅವರು ಪ್ರತಿಮೆಯ ಅನಾವರಣಗೊಳಿಸಿದ್ದಾರೆ.
ಚೀನ
ಚೀನದ ಹೆಸರಾಂತ ಶಿಲ್ಪಿ ಮತ್ತು ಕಲಾವಿದ ಯುವಾನ್ ಕ್ಸಿಕುನ್ 2005ರಲ್ಲಿ ಗಾಂಧಿಯ ಪ್ರತಿಮೆಯನ್ನು ಚಾಯಾಂಗ್ ಉದ್ಯಾನವನದಲ್ಲಿ ಸ್ಥಾಪಿಸಿದ್ದು, ಚೀನದಲ್ಲಿ ಗಾಂಧೀಜಿಯ ಸಿದ್ಧಾಂತಗಳಿಗೆ ವಿಶೇಷ ಮಹತ್ವವಿದೆ.
ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾದ ಮಹಾನಗರ ಬುಸಾನ್‌ನಲ್ಲಿ ಗಾಂಧಿ ಪ್ರತಿಮೆ 2014ರಲ್ಲಿ ಅನಾವರಣವಾಗಿದೆ. ಭಾರತ -ಕೊರಿಯಾ ನಡುವಿನ ದೀರ್ಘ ಮತ್ತು ಸ್ಥಿರವಾದ ಸಂಬಂಧಕ್ಕೆ ಬುನಾದಿ ಹಾಕಿ ಕೊಟ್ಟ ಮಹಾತ್ಮ ಗಾಂಧಿಯವರ ನೆನಪಿಗಾಗಿ ಸ್ಥಾಪಿಸಲಾಗಿದೆ.
ಗಾಂಧಿಯಿಂದ ಸ್ಫೂರ್ತಿ ಪಡೆದ ನಾಯಕರು
ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾ
ಆಲ್ಬರ್ಟ್ ಐನ್‌ಸ್ಟೈನ್ ಜರ್ಮನ್
ದಲೈಲಾಮಾ ಅಮೆರಿಕ
ಆರ್. ಠಾಗೂರ್ ಭಾರತ
ಆಂಗ್ ಸ್ಯಾನ್ ಸೂಕಿ ಬರ್ಮಾ
ಜೇಮ್ಸ್ ಲಾಸನ್ ಅಮೆರಿಕ
ಜಾನ್ ಲಿನನ್ ಅಮೆರಿಕ
ಎಂ. ಲೂಥರ್ ಕಿಂಗ್ ಅಮೆರಿಕ
ಬರಾಕ್ ಒಬಾಮಾ ಅಮೆರಿಕ
ಪರ್ಲ್ ಎಸ್.ಬಕ್ ಅಮೆರಿಕ ಅಲ್ ಗೋರ್‌ಅಮೆರಿಕ
ವಿಲ್ ಡ್ಯುರೆಂಟ್ ಅಮೆರಿಕ
1869ಅಕ್ಟೋಬರ್ 2: ಪೋರ್‌ಬಂದರ್‌ನಲ್ಲಿ ಜನನ. ತಂದೆ ಕರಮ ಚಂದ ಗಾಂಧಿ, ತಾಯಿ ಪುತಲೀ ಬಾಯಿ.
1876}ರಾಜ್‌ಕೋಟ್‌ನಲ್ಲಿ ಶಿಕ್ಷಣ ಆರಂಭ.
1883} ಕಸ್ತೂರ್ಬಾ ಜತೆ ವಿವಾಹ
1888}ಉನ್ನತವಿದ್ಯಾಭ್ಯಾಸಕ್ಕೆ ಲಂಡನ್‌ಗೆ
1891}ಕಾನೂನು ಪದವಿಯಲ್ಲಿ ತೇರ್ಗಡೆ
1891}ಲಂಡನ್‌ನಲ್ಲಿ ವಕೀಲರಾಗಿ ಸೇವೆ
1891}ಭಾರತಕ್ಕೆ ವಾಪಸ್
1892}ಮುಂಬಯಿ ಹೈಕೋರ್ಟ್‌ನಲ್ಲಿ ಬ್ಯಾರಿಸ್ಟರ್ ಆಗಿ ಆಯ್ಕೆ
1909} ಹಿಂದ್ ಸ್ವರಾಜ್ ಸ್ಥಾಪನೆ
1921} ಐಎನ್‌ಸಿಯ ನಾಯಕತ್ವ.
1924}ಬೆಳಗಾವಿ ಕಾಂಗ್ರೆಸ್ ಅಧಿವೇಶನ.
1930} ಉಪ್ಪಿನ ಸತ್ಯಾಗ್ರಹ.
1931} ಅಸಹಕಾರ ಚಳುವಳಿ
1934} ಕಾಂಗ್ರೆಸ್ ತೊರೆದ ಗಾಂಧಿ. 1936}ಸೇವಾಗ್ರಾಮ್ ಆಶ್ರಮ ಸ್ಥಾಪನೆ
1942} ಕ್ವಿಟ್ ಇಂಡಿಯಾ ಚಳುವಳಿ 1947} ಆ.15 ಭಾರತಕ್ಕೆ ಸ್ವಾತಂತ್ರ್ಯ
1948} ಜನವರಿ 30ರಂದು ಇಹಲೋಕ ತ್ಯಜಿಸಿದ ಗಾಂಧಿ.
ಗಾಂಧಿ ಶಾಂತಿ ಪ್ರಶಸ್ತಿ
ಈ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿಯವರ ಹೆಸರಿ ನಲ್ಲಿ ನೀಡಲಾಗುತ್ತದೆ. ಸಾಮಾಜಿಕ, ಆರ್ಥಿಕ, ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಭಾರತ ಸರಕಾರ ಈ ಪ್ರಶಸ್ತಿಯನ್ನು ನೀಡುತ್ತದೆ. ಮಹಾತ್ಮ ಗಾಂಧಿಯವರ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಪ್ರಶಸ್ತಿಯನ್ನು 1995ರಲ್ಲಿ ಪ್ರಾರಂಭಿಸಲಾಗಿದೆ.
ಯುವಿ ಟ್ರೆಂಡಿಂಗ್ ರಿಸರ್ಚ್ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.