ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ


Team Udayavani, Oct 22, 2021, 6:10 AM IST

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಭಾರತವು ಲಸಿಕೆ ಹಾಕಲು ಆರಂಭಿಸಿದ ಸುಮಾರು 9 ತಿಂಗಳುಗಳಲ್ಲಿ 21ಅಕ್ಟೋಬರ್‌ 2021 ರಂದು 100 ಕೋಟಿ ಡೋಸ್‌ಗಳ ಲಸಿಕೆ ನೀಡಿಕೆ ಯನ್ನು ಪೂರ್ಣಗೊಳಿಸಿದೆ. ಕೋವಿಡ್‌-19 ನಿಗ್ರಹದಲ್ಲಿ ವಿಶೇಷವಾಗಿ 2020ರ ಆರಂಭದಲ್ಲಿದ್ದ ಪರಿಸ್ಥಿತಿಯನ್ನು ನಾವು ನೆನಪಿಸಿಕೊಂಡರೆ ಇದೊಂದು ಅದ್ಭುತ ವಾದ ಪ್ರಯಾಣವಾಗಿದೆ.

ಮನುಕುಲವು 100 ವರ್ಷಗಳ ಅನಂತರ ಇಂತಹ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಮತ್ತು ಈ ವೈರಾಣುವಿನ ಬಗ್ಗೆ ಯಾರಿಗೂ ಹೆಚ್ಚು ತಿಳಿದಿ ರಲಿಲ್ಲ. ಅಪರಿಚಿತ ಮತ್ತು ಅದೃಶ್ಯ ಶತ್ರು ವೇಗವಾಗಿ ಪರಿವರ್ತಿತವಾಗುತ್ತಿದ್ದಂತೆ ಪರಿಸ್ಥಿತಿ ಎಷ್ಟು ಅನಿರೀಕ್ಷಿತವಾಗಿತ್ತು ಎಂಬುದನ್ನು ನಾವು ಮರೆತಿಲ್ಲ.

ಆತಂಕದಿಂದ ಭರವಸೆಯವರೆಗಿನ ಪ್ರಯಾಣವು ಸಂಭವಿಸಿದೆ ಮತ್ತು ನಮ್ಮ ರಾಷ್ಟ್ರವು ಶಕ್ತಿಯುತವಾಗಿ ಹೊರಹೊಮ್ಮಿದೆ. ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ ಧನ್ಯವಾದಗಳು.

ಇದು ಸಮಾಜದ ಬಹು ವರ್ಗಗಳನ್ನು ಒಳಗೊಂಡ ನಿಜವಾದ ಭಗೀರಥ ಪ್ರಯತ್ನವಾಗಿದೆ. ಇದರ ಬೃಹತ್‌ ಪ್ರಮಾಣವನ್ನು ತಿಳಿಯ ಬೇಕಾದರೆ, ಪ್ರತೀ ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರಿಗೆ ಕೇವಲ 2 ನಿಮಿಷಗಳು ಬೇಕಾಗುತ್ತದೆ ಎಂದು ಊಹಿಸಿಕೊಳ್ಳಿ. ಈ ದರದಲ್ಲಿ ಈ ಹೆಗ್ಗುರುತನ್ನು ತಲುಪಲು ಸುಮಾರು 41 ಲಕ್ಷ ಮಾನವ ದಿನಗಳು ಅಥವಾ ಸರಿಸುಮಾರು 11 ಸಾವಿರ ಮಾನವ ವರ್ಷಗಳ ಶ್ರಮ ಬೇಕಾಗುತ್ತದೆ.

ಯಾವುದೇ ಪ್ರಯತ್ನದಲ್ಲಿ ವೇಗ ಮತ್ತು ಪ್ರಮಾಣವನ್ನು ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಎಲ್ಲ ಪಾಲುದಾರರ ವಿಶ್ವಾಸವು ನಿರ್ಣಾಯಕವಾಗಿದೆ. ಈ ಅಭಿಯಾನದ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ, ಅಪನಂಬಿಕೆ ಮತ್ತು ಭಯವನ್ನು ಸೃಷ್ಟಿಸುವ ಹಲವಾರು ಪ್ರಯತ್ನಗಳ ನಡುವೆಯೂ ಜನರು ಲಸಿಕೆಯ ಬಗ್ಗೆ ತೋರಿಸಿದ ವಿಶ್ವಾಸ ಮತ್ತು ಲಸಿಕೆ ನೀಡಿಕೆಯಲ್ಲಿ ಅನುಸರಿಸಲಾದ  ಪ್ರಕ್ರಿಯೆ.

ನಮ್ಮಲ್ಲಿ ಕೆಲವರು ದೈನಂದಿನ ಅಗತ್ಯಗಳಿಗೂ ಸಹ ವಿದೇಶಿ ಬ್ರಾಂಡ್‌ಗಳನ್ನು ಮಾತ್ರ ನಂಬುತ್ತಾರೆ. ಆದಾಗ್ಯೂ ಕೋವಿಡ್‌ -19 ಲಸಿಕೆಯಂತಹ ನಿರ್ಣಾ ಯಕವಾದ ವಿಷಯ ಬಂದಾಗ, ಭಾರತದ ಜನರು ಸರ್ವಾನುಮತ ದಿಂದ ‘ಮೇಡ್‌ ಇನ್‌ ಇಂಡಿಯಾ’ ಲಸಿಕೆಗಳ ಮೇಲೆ ವಿಶ್ವಾಸವಿಟ್ಟರು.  ಇದೊಂದು ಮಹತ್ವದ ಮಾದರಿ ಬದಲಾವಣೆಯಾಗಿದೆ.

ಜನರ ಭಾಗವಹಿಸುವಿಕೆಯ ಉತ್ಸಾಹದಲ್ಲಿ ನಾಗರಿಕರು ಮತ್ತು ಸರಕಾರವು ಒಂದು ಸಾಮಾನ್ಯ ಗುರಿಯೊಂದಿಗೆ ಒಗ್ಗೂಡಿದರೆ ಭಾರತವು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭಾರತದ ಲಸಿಕೆ ಅಭಿಯಾನ ಒಂದು ಉದಾಹರಣೆಯಾಗಿದೆ. ಭಾರತವು ತನ್ನ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಅನೇಕರು 130 ಕೋಟಿ ಭಾರತೀಯರ ಸಾಮರ್ಥ್ಯ  ವನ್ನು ಅನುಮಾನಿಸಿದರು. ಭಾರತವು ಲಸಿಕೆ ನೀಡಲು 3-4 ವರ್ಷಗ ಳನ್ನು ತೆಗೆದುಕೊಳ್ಳುತ್ತದೆ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುವುದಿಲ್ಲ ಎಂದರು.

ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ತಪ್ಪು ನಿರ್ವಹಣೆ ಮತ್ತು ಅವ್ಯವಸ್ಥೆ ಇರುತ್ತದೆ ಎಂದು ಹೇಳಿದವರೂ ಇದ್ದರು. ಕೆಲವರು ಭಾರತವು ಪೂರೈಕೆ ಸರಪಳಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು. ಆದರೆ ಜನತಾ ಕರ್ಫ್ಯೂ ಮತ್ತು ಅನಂತರದ ಲಾಕ್‌ಡೌನ್‌ಗಳಂತೆಯೇ, ಭಾರತದ ಜನರು ತಮ್ಮನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದರೆ ಫಲಿತಾಂಶಗಳು ಎಷ್ಟು ಅದ್ಭುತವಾಗಿರುತ್ತವೆ ಎಂಬುದನ್ನು ತೋರಿಸಿಕೊಟ್ಟರು.

ಪ್ರತಿಯೊಬ್ಬರಿಗೂ ಮಾಲಕತ್ವದ ಮನೋಭಾವ ಬಂದರೆ ಯಾವುದೂ ಅಸಾಧ್ಯವಲ್ಲ. ನಮ್ಮ ಆರೋಗ್ಯ ಕಾರ್ಯಕರ್ತರು ಬೆಟ್ಟಗಳನ್ನು ಹತ್ತಿ, ನದಿಗಳನ್ನು ದಾಟಿ ಕಷ್ಟಕರವಾದ ಭೌಗೋಳಿಕ ಪ್ರದೇಶಗಳನ್ನು ತಲುಪಿ ಜನರಿಗೆ ಲಸಿಕೆ ಹಾಕಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಲಸಿಕೆಯ ಬಗ್ಗೆ ಭಾರತದಲ್ಲಿರುವ ಕನಿಷ್ಠ ಹಿಂಜರಿಕೆಯ ಶ್ರೇಯ ನಮ್ಮ ಯುವಕರು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಿಗೆ ಸಲ್ಲಬೇಕು.

ಲಸಿಕೆ ನೀಡಿಕೆಯಲ್ಲಿ ತಮಗೆ ಆದ್ಯತೆ ನೀಡಬೇಕು ಎಂದು ವಿವಿಧ ಹಿತಾಸಕ್ತಿ ಗುಂಪುಗಳಿಂದ ಸಾಕಷ್ಟು ಒತ್ತಡವಿತ್ತು. ಆದರೆ ನಮ್ಮ ಇತರ ಯೋಜನೆಗಳಂತೆ, ಲಸಿಕೆ ಹಾಕುವಿಕೆಯಲ್ಲೂ ಯಾವುದೇ ವಿಐಪಿ ಸಂಸ್ಕೃತಿಯಿಲ್ಲ ಎಂದು ಸರಕಾರ ಖಚಿತಪಡಿಸಿತು.

2020ರ ಆರಂಭದಲ್ಲಿ ಕೋವಿಡ್‌-19 ಪ್ರಪಂಚದಾದ್ಯಂತ ರುದ್ರನರ್ತನ ಮಾಡುತ್ತಿದ್ದಾಗ, ಈ ಸಾಂಕ್ರಾಮಿಕ ರೋಗವನ್ನು ಅಂತಿಮವಾಗಿ ಲಸಿಕೆಗಳ ಸಹಾಯ ದಿಂದಲೇ ಜಯಿಸಬೇಕಾಗುತ್ತದೆ ಎಂಬುದು ನಮಗೆ ಸ್ಪಷ್ಟ ವಾಗಿತ್ತು. ನಾವು ಬೇಗನೆ ಸಿದ್ಧತೆ ಆರಂಭಿಸಿದೆವು. ನಾವು ತಜ್ಞರ ಗುಂಪುಗಳನ್ನು ರಚಿಸಿದೆವು ಮತ್ತು ಎಪ್ರಿಲ್‌ 2020ರಿಂದಲೇ ಮಾರ್ಗಸೂಚಿಯನ್ನು ತಯಾರಿಸಲು ಪ್ರಾರಂಭಿಸಿದೆವು.

ಇದುವರೆಗೆ, ಬೆರಳೆಣಿಕೆಯ ದೇಶಗಳು ಮಾತ್ರ ತಮ್ಮದೇ ಸ್ವಂತ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ಭಾರತವು 100 ಕೋಟಿ ಡೋಸ್‌ ದಾಟಿದ್ದರೂ 180 ಕ್ಕೂ ಹೆಚ್ಚು ದೇಶಗಳು ಒಂದು ಸೀಮಿತ ಲಸಿಕೆ ತಯಾರಕ ಗುಂಪಿನ ಮೇಲೆ ಅವಲಂಬಿತವಾಗಿವೆ ಮತ್ತು ಡಜನ್‌ ಗಟ್ಟಲೆ ರಾಷ್ಟ್ರಗಳು ಇನ್ನೂ ಲಸಿಕೆಗಳ ಪೂರೈಕೆಗಾಗಿ ಕಾಯುತ್ತಿವೆ! ಭಾರತಕ್ಕೆ ಸ್ವಂತ ಲಸಿಕೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಇಷ್ಟು ದೊಡ್ಡ ಜನಸಂಖ್ಯೆಗೆ ಭಾರತವು ಸಾಕಷ್ಟು ಲಸಿಕೆಗಳನ್ನು ಹೇಗೆ ಪಡೆಯುತ್ತಿತ್ತು ಮತ್ತು ಅದಕ್ಕೆ ಎಷ್ಟು ವರ್ಷಗಳು ಬೇಕಾಗುತ್ತಿದ್ದವು? ಭಾರತೀಯ ವಿಜ್ಞಾನಿಗಳು ಮತ್ತು ಉದ್ಯಮಿಗಳಿಗೆ ಇದರ ಶ್ರೇಯ ಸಲ್ಲಬೇಕು. ಅವರ ಪ್ರತಿಭೆ ಮತ್ತು ಕಠಿನ ಪರಿಶ್ರಮದಿಂದಾಗಿ ಲಸಿಕೆಗಳ ವಿಚಾರದಲ್ಲಿ ಭಾರತವು ನಿಜವಾಗಿಯೂ ಆತ್ಮನಿರ್ಭರವಾಗಿದೆ. ನಮ್ಮ ಲಸಿಕೆ ತಯಾರಕರು, ಇಷ್ಟು ಬೃಹತ್‌ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥರಾಗುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸರಕಾರಗಳೆಂದರೆ ಮುಂದುವರಿಕೆಗೆ ಅಡ್ಡಿಯಾಗುವ ರಸ್ತೆ ತಡೆಗಳು ಎಂದು ಕರೆಯಲಾಗುವ ರಾಷ್ಟ್ರದಲ್ಲಿ, ನಮ್ಮ ಸರಕಾರವು ವೇಗವರ್ಧಕ ಮತ್ತು ಪ್ರಗತಿಯನ್ನು ಸಕ್ರಿಯಗೊಳಿಸುವ ಸಾಧನವಾಗಿದೆ. ಸರಕಾರವು ಮೊದಲ ದಿನದಿಂದಲೇ ಲಸಿಕೆ ತಯಾರಕರೊಂದಿಗೆ ಸಹಭಾಗಿತ್ವ ಹೊಂದಿ ತು. ಅವರಿಗೆ ಸಾಂಸ್ಥಿಕ ನೆರವು, ವೈಜ್ಞಾನಿಕ ಸಂಶೋಧನೆ, ಧನ ಸಹಾಯ, ಹಾಗೂ ನಿಯಂತ್ರಣ ಪ್ರಕ್ರಿಯೆಗಳ ವೇಗವರ್ಧನೆಯ ರೂಪದಲ್ಲಿ ಬೆಂಬಲ ವನ್ನು ನೀಡಿತು. ನಮ್ಮ ‘ಇಡೀ ಸರಕಾರ’ ವಿಧಾನದ ಪರಿಣಾಮವಾಗಿ ಸರಕಾರದ ಎಲ್ಲ ಸಚಿವಾಲಯಗಳು ಲಸಿಕೆ ತಯಾರಕರಿಗೆ ನೆರವಾಗಲು ಮತ್ತು ಎಲ್ಲ ಅಡೆತಡೆಗಳನ್ನು ನಿವಾರಿಸಲು ಒಗ್ಗೂಡಿದವು.

ಭಾರತದಂತಹ ಬೃಹತ್‌ ದೇಶದಲ್ಲಿ, ಕೇವಲ ಉತ್ಪಾದನೆ ಮಾಡಿದರೆ ಸಾಕಾಗುವುದಿಲ್ಲ. ಕಟ್ಟಕಡೆಯ ವ್ಯಕ್ತಿಗೆ ವಿತರಣೆ ಮತ್ತು ತಡೆರಹಿತ ಲಾಜಿಸ್ಟಿಕ್ಸ್‌ ಮೇಲೆ ಗಮನಹರಿಸಬೇಕು. ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಲಸಿಕೆಯ ಒಂದು ಬಾಟಲಿಯ ಪ್ರಯಾಣವನ್ನು ಕಲ್ಪಿಸಿಕೊಳ್ಳಿ. ಪುಣೆ ಅಥವಾ ಹೈದರಾಬಾದಿನ ಒಂದು ಘಟಕದಿಂದ ಯಾವುದೇ ರಾಜ್ಯದಲ್ಲಿನ ಹಬ್‌ಗ ಬಾಟಲಿಯನ್ನು ಕಳುಹಿಸಲಾಗುತ್ತದೆ, ಅಲ್ಲಿಂದ ಅದನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಅಲ್ಲಿಂದ ಅದು ಲಸಿಕೆ ಕೇಂದ್ರವನ್ನು ತಲು ಪುತ್ತದೆ. ಇದರಲ್ಲಿ ವಿಮಾನಗಳು ಮತ್ತು ರೈಲುಗಳ ಅನೇಕ ಪ್ರಯಾಣಗಳು ಸೇರಿರುತ್ತವೆ. ಈ ಸಂಪೂರ್ಣ ಪ್ರಯಾಣದ ಸಮಯದಲ್ಲಿ, ತಾಪಮಾನ ವನ್ನು ಕೇಂದ್ರೀಯ ಮೇಲ್ವಿಚಾರಣೆ ಮೂಲಕ ಒಂದು ನಿರ್ದಿಷ್ಟ ವ್ಯಾಪ್ತಿ ಯಲ್ಲಿ ನಿರ್ವಹಿಸಬೇಕು. ಇದಕ್ಕಾಗಿ 1 ಲಕ್ಷಕ್ಕೂ ಹೆಚ್ಚು ಶೀತ-ಸರಪಳಿ ಸಾಧನ ಗಳನ್ನು ಬಳಸಲಾಗಿದೆ. ಲಸಿಕೆಗಳ ವಿತರಣ ವೇಳಾಪಟ್ಟಿಯ ಬಗ್ಗೆ ರಾಜ್ಯ ಗಳಿಗೆ ಮುಂಚಿತವಾಗಿ ಸೂಚನೆ ನೀಡಲಾಯಿತು, ಇದರಿಂದ ಅವರು ತಮ್ಮ ಅಭಿಯಾನಗಳನ್ನು ಉತ್ತಮವಾಗಿ ಯೋಜಿಸಿದವು ಮತ್ತು ಪೂರ್ವ ನಿರ್ಧಾರಿತ ದಿನಗಳಲ್ಲಿ ಲಸಿಕೆಗಳು ರಾಜ್ಯಗಳಿಗೆ ತಲುಪಿದವು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇದೊಂದು ಅಭೂತಪೂರ್ವ ಪ್ರಯತ್ನವಾಗಿದೆ.

ಈ ಎಲ್ಲ ಪ್ರಯತ್ನಗಳಿಗೆ ಕೋವಿನ್‌ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಒಂದು ದೃಢವಾದ ಬೆಂಬಲ ನೀಡಿತು. ಲಸಿಕೆ ಅಭಿಯಾನವು ನ್ಯಾಯ ಯುತ ಮತ್ತು ಪಾರದರ್ಶಕವಾಗಿರುವುದನ್ನು ಅದು ಖಾತ್ರಿಪಡಿಸಿತು. ಇದು ಯಾವುದೇ ಪಕ್ಷಪಾತ ಅಥವಾ ಸರದಿ ತಪ್ಪಿಸಲು ಅವಕಾಶವಿಲ್ಲದಿರು  ವುದನ್ನು ಖಚಿತಪಡಿಸಿತು. ಒಬ್ಬ ಬಡ ಕಾರ್ಮಿಕನು ತನ್ನ ಹಳ್ಳಿಯಲ್ಲಿ ಮೊದಲ ಡೋಸ್‌ ತೆಗೆದುಕೊಳ್ಳಬಹುದು ಮತ್ತು ಅದೇ ಲಸಿಕೆಯ ಎರಡನೇ ಡೋಸ್‌ ಅನ್ನು ಅವನು ಕೆಲಸ ಮಾಡುವ ನಗರದಲ್ಲಿ ಅಗತ್ಯ ಸಮಯದ ಮಧ್ಯಾಂತರದ ಅನಂತರ ತೆಗೆದುಕೊಳ್ಳಬಹುದು ಎಂದು ಕೋವಿನ್‌ ಖಚಿತಪಡಿಸಿತು. ಪಾರದರ್ಶಕತೆಯನ್ನು ಹೆಚ್ಚಿಸಲು ನೈಜ-ಸಮ ಯದ ಡ್ಯಾಶ್‌ಬೋರ್ಡ್‌ ಜತೆಗೆ ಕ್ಯುಆರ್‌ ಕೋಡ್‌ ಇರುವ ಪ್ರಮಾಣ ಪತ್ರಗಳು ಮಾನ್ಯತೆಯನ್ನು ಖಾತ್ರಿಪಡಿಸುತ್ತವೆ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೂ ಇಂತಹ ಪ್ರಯತ್ನಗಳ ನಡೆದ ಉದಾಹರಣೆಗಳಿಲ್ಲ.

2015ರಲ್ಲಿ ನನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ‘ಟೀಮ್‌ ಇಂಡಿಯಾ’ದ ಕಾರಣದಿಂದ ನಮ್ಮ ದೇಶ ಮುಂದುವರಿಯುತ್ತಿದೆ ಮತ್ತು ಈ “ಟೀಮ್‌ ಇಂಡಿಯಾ’ ನಮ್ಮ 130 ಕೋಟಿ ಜನರ ದೊಡ್ಡ ತಂಡವಾಗಿದೆ ಎಂದು ಹೇಳಿದ್ದೆ. ಜನರ ಭಾಗವಹಿಸುವಿಕೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ. 130 ಕೋಟಿ ಭಾರತೀಯರ ಪಾಲ್ಗೊಳ್ಳುವಿಕೆಯ ಮೂಲಕ ನಾವು ದೇಶವನ್ನು ಮುನ್ನಡೆಸಿದರೆ, ನಮ್ಮ ದೇಶವು ಪ್ರತೀ ಕ್ಷಣವೂ 130 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ. ನಮ್ಮ ಲಸಿಕೆ ಅಭಿಯಾನವು ಮತ್ತೂಮ್ಮೆ ಈ ‘ಟೀಮ್‌ ಇಂಡಿಯಾ’ದ ಶಕ್ತಿಯನ್ನು ತೋರಿಸಿದೆ. ಭಾರತವು ತನ್ನ ಲಸಿಕೆ ಯಶಸ್ಸಿನ ಮೂಲಕ ಇಡೀ ಜಗತ್ತಿಗೆ ‘ಪ್ರಜಾಪ್ರಭುತ್ವವು ಸಾಧಿಸಬಲ್ಲುದು’ ಎಂಬುದನ್ನು ತೋರಿಸಿಕೊಟ್ಟಿದೆ.

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನದಲ್ಲಿ ಸಾಧಿಸಿರುವ ಯಶಸ್ಸು ನಮ್ಮ ಯುವಕರು, ನಮ್ಮ ಆವಿಷ್ಕಾರಕರು ಮತ್ತು ಸರಕಾರದ ಎಲ್ಲ ಹಂತಗಳು ಸಾರ್ವಜನಿಕ ಸೇವೆ ವಿತರಣೆಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಲು ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಲಿದೆ ಎಂಬ ಭರವಸೆ ನನಗಿದೆ.

ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.