ಕತ್ತೆ ಹಾಲಿನ ಹೈನುಗಾರಿಕೆಯತ್ತ ಹೊರಳಿದ ಭಾರತ
Donkey milk dairy farming
Team Udayavani, Aug 11, 2020, 5:55 AM IST
ಸಾಂದರ್ಭಿಕ ಚಿತ್ರ
ಹರ್ಯಾಣದ ಹಿಸ್ಸಾರ್‌ನಲ್ಲಿ ಭಾರತೀಯ ಅಶ್ವ ಜಾತಿಯ ಪ್ರಾಣಿಗಳ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ಕತ್ತೆಗಳ ಪಶು ಸಂಗೋಪನಾ ಕೇಂದ್ರವನ್ನು ಆರಂಭಿಸಲು ನಿರ್ಧರಿಸಿದೆ. ಅವುಗಳಲ್ಲಿ ಹಲಾರಿ ತಳಿಯ ಕತ್ತೆ ಹಾಲಿನ ಹೈನುಗಾರಿಕೆ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಆ ತಳಿಯ 10 ಕತ್ತೆಗಳನ್ನು ತಂದು ಅವುಗಳನ್ನು ಎನ್‌ಆರ್‌ಸಿಇ ಕೇಂದ್ರದಲ್ಲಿ ಸಾಕಲಾಗುತ್ತಿದೆ.
ಕತ್ತೆ ಹೈನುಗಾರಿಕೆ ಏಕೆ?
ಕತ್ತೆ ಹಾಲಿನಲ್ಲಿ ಮನುಷ್ಯರಿಗೆ ಅನೇಕ ಉಪಯುಕ್ತ ಪೋಷಕಾಂಶಗಳನ್ನು ಒಳಗೊಂಡಿದೆ. ಜೊತೆಗೆ ಅದರ ಉಪಯೋಗದಿಂದ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಅಗಾಧವಾಗಿ ಹೆಚ್ಚಾಗುವುದು ಪ್ರಯೋಗಗಳಿಂದ ದೃಢಪಟ್ಟಿದೆ. ಹಾಗಾಗಿ, ಕತ್ತೆ ಹಾಲಿನ ಹೈನುಗಾರಿಕೆಗೆ ಹೊಸ ಒತ್ತು ನೀಡಲು ನಿರ್ಧರಿಸಲಾಗಿದೆ.
ಬೆಲೆ ಎಷ್ಟಿರುತ್ತೆ?
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ಲೀಟರ್ ಕತ್ತೆ ಹಾಲಿಗೆ 2,000 ರೂ.ಗಳಿಂದ 7,000 ರೂ.ವರೆಗೆ ಬೆಲೆ ಇದೆ. ಕತ್ತೆ ಹಾಲಿನ ಹೈನುಗಾರಿಕೆ ದೇಶದ ತುಂಬೆಲ್ಲಾ ವ್ಯಾಪಿಸಿ ಅಗಾಧವಾಗಿ ಹಾಲು ಉತ್ಪಾದನೆಯಾದರೆ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ.
ಹಲಾರಿ ತಳಿಯ ಮಹತ್ವವೇನು?
ಗುಜರಾತ್‌ನಲ್ಲಿ ಕಾಣಬರುವ ಈ ತಳಿಯ ಕತ್ತೆಗಳ ಹಾಲು ಔಷಧೀಯ ಅಂಶಗಳ ನಿಧಿ ಎಂದೇ ಕರೆಯಲಾಗುತ್ತದೆ. ಇದರ ಹಾಲಿನಲ್ಲಿ ಕ್ಯಾನ್ಸರ್, ಬೊಜ್ಜುತನ, ಸೋಂಕುಗಳ ವಿರುದ್ಧ ಹೋರಾಡುವ ಅಂಶಗಳಿವೆ. ಅವುಗಳ ಹಾಲನ್ನು ಮಕ್ಕಳಿಗೆ ನೀಡಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಮ್ಮೊಮ್ಮೆ ಕೆಲವು ಮಕ್ಕಳಿಗೆ ಹಸುವಿನ ಹಾಲು ಅಲರ್ಜಿಯಾದರೂ ಹಲಾರಿ ಕತ್ತೆಗಳ ಹಾಲು ಎಂದೂ ಅಲರ್ಜಿಯಾಗದು. ಈ ಹಾಲಿನಲ್ಲಿ ಆ್ಯಂಟಿ ಆಕ್ಸಿಡಂಟ್ಸ್ ಹಾಗೂ ಆ್ಯಂಟಿ ಏಜಿಂಗ್ ಅಂಶ ಅಲ್ಪ ಪ್ರಮಾಣದಲ್ಲಿರುತ್ತವೆ. ಹಾಗಾಗಿ, ಇದು ಸೋಪು, ಲಿಪ್ ಬಾಮ್, ಬಾಡಿ ಲೋಷನ್, ಕಾಸ್ಮೆಟಿಕ್ಸ್‌ಗಳ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.