ಭಾರತದ ಚತುರ ಹೋರಾಟಕ್ಕೆ ಸಂದ ಜಯ

ಇನ್ನು ಮಸೂದ್‌ ಅಜರ್‌ ವಿರುದ್ಧ ವಿಶ್ವದ ರಾಷ್ಟ್ರಗಳಿಗೆ ಕಠಿಣ ಕ್ರಮ ಕೈಗೊಳ್ಳುವುದು ಸುಲಭ

Team Udayavani, May 2, 2019, 6:00 AM IST

masood

ಅಂತೂ ಇಂತೂ, ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಸಭೆಯಲ್ಲಿ ಈ ಕುರಿತಂತೆ ಘೋಷಣೆ ಹೊರಬಿದ್ದಿದೆ. ಈ ರೀತಿಯ ಘೋಷಣೆ ಮಾಡುವುದರಿಂದ ಆಗುವ ಪ್ರಯೋಜನವೇನು, ಇಂಥ ಹಣೆಪಟ್ಟಿ ಕಟ್ಟಿಕೊಂಡ ಉಗ್ರ ಅಥವಾ ಆತನ ಸಂಘಟನೆ ಯಾವ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ವಿವರಣೆ ಇಲ್ಲಿದೆ. ಜತೆಗೆ, ಮಸೂದ್‌ನನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಭಾರತ ನಡೆಸಿದ ರಾಜತಾಂತ್ರಿಕ ನಡೆಗಳು ಫ‌ಲ ಕೊಟ್ಟಿದ್ದು ಹೇಗೆ ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ.

ಭಾರತದ ತಂತ್ರಗಾರಿಕೆ
2009, 2016, 2017 ಮತ್ತು ಈ ವರ್ಷದ ಮಾರ್ಚ್‌ 13ರಂದು ಯುಎನ್‌ಎಸ್‌ಸಿಯಲ್ಲಿ ಮಸೂದ್‌ಗೆ ಜಾಗತಿಕ ಉಗ್ರನೆಂದು ಘೋಷಿಸುವ ಭಾರತದ ಪ್ರಸ್ತಾವನೆ ಚೀನಾದ ಅಡ್ಡಗಾಲಿನಿಂದಾಗಿ ನನೆಗುದಿಗೆ ಬಿದ್ದಿತ್ತು. ಚೀನಾಕ್ಕೆ ತನ್ನ ಒತ್ತಾಸೆಯನ್ನು ಎಷ್ಟೇ ಮನವರಿಕೆ ಮಾಡಲು ಭಾರತ ಪ್ರಯತ್ನಿಸಿದ್ದರೂ ಅದು ಫ‌ಲ ನೀಡಿರಲಿಲ್ಲ. ಹಾಗಾಗಿ, ಭಾರತ ಈ ಬಾರಿ ರಾಜತಾಂತ್ರಿಕತೆಯ ಮತ್ತೂಂದು ಮಗ್ಗುಲಿಗೆ ಹೊರಳಿತು. ಯುಎನ್‌ಎಸ್‌ಸಿಯ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಯು.ಕೆ. ಮತ್ತು ಫ್ರಾನ್ಸ್‌ ತನ್ನ ಬೆಂಬಲವು ಹೇಗಿದ್ದರೂ ಭಾರತದ ಬೆನ್ನಿಗಿತ್ತು. ಇದರ ಜತೆಗೆ ಭಾರತವು ತನ್ನ ಈ ಪ್ರಸ್ತಾವನೆಯು ಊರ್ಜಿತವಾಗುವ ನಿಟ್ಟಿನಲ್ಲಿ ಚೀನಾ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ತಂತ್ರಗಾರಿಕೆಗೆ ಮುಂದಾಯಿತು. ಜರ್ಮನಿ, ರಷ್ಯಾ ಸೇರಿದಂತೆ ಇನ್ನಿತರ ಐರೋಪ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ತನ್ನ ವಿಶ್ವಾಸಕ್ಕೆ ಪಡೆದ ಭಾರತ, ಆ ದೇಶಗಳ ಮೂಲಕ ಚೀನಾದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ 5ನೇ ಆರ್ಥಿಕತೆಯ ರಾಷ್ಟ್ರವಾಗಿರುವ ಭಾರತದ ಮಾತನ್ನು ಪಾಶ್ಚಿಮಾತ್ಯ ರಾಷ್ಟ್ರಗಳೂ ಕಿವಿಗೊಟ್ಟು ಆಲಿಸಿದವು. ಮಾತ್ರವಲ್ಲ, ಚೀನಾ ಮೇಲೆ ಒತ್ತಡ ಹೇರಲು ಒಪ್ಪಿದವು. ಆ ರಾಷ್ಟ್ರಗಳ ಸಂಘಟಿತ ಪ್ರಯತ್ನದಿಂದಾಗಿ, ಚೀನಾ ಯುಎನ್‌ಎಸ್‌ಸಿಯಲ್ಲಿ ತನ್ನ ಹಠ ಕೈಬಿಡುವಂತಾಯಿತು.

ಪಾಕ್‌ ಹಠ ಕೈ ಬಿಟ್ಟದ್ದೇಕೆ‌?
ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನ, ದೇಶ ನಡೆಸಲು ಅಗತ್ಯವಿರುವ ಹಣಕ್ಕಾಗಿ ಕಂಡ ಕಂಡ ರಾಷ್ಟ್ರಗಳತ್ತ ಕೈ ಚಾಚುತ್ತಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಂದೆಯೂ ತನ್ನ ಭಿûಾ ಪಾತ್ರೆ ಹಿಡಿದು ನಿಂತಿದೆ. ಹಣ ನೀಡಲು ಐಎಂಎಫ್ ಒಲವು ತೋರಿದೆಯಾದರೂ, ತಾನು ನೀಡುವ ಹಣವನ್ನು ಪಾಕಿಸ್ತಾನ-ಚೀನಾ ನಡುವೆ ಸಿದ್ಧಗೊಳ್ಳುತ್ತಿರುವ ಅಪಾರ ವೆಚ್ಚದ “ಚೀನಾ- ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌’ ಹೆದ್ದಾರಿಗಾಗಿ ಸುರಿಯಬಾರದೆಂದು ಅದು ತಾಕೀತು ಮಾಡಿದೆಯಾದರೂ, ಹಣ ನೀಡುವ ಬಗ್ಗೆ , ಇದೇ ವರ್ಷ ಜೂನ್‌ನಲ್ಲಿ ನಡೆಯಲಿರುವ “ಫಿನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌’ (ಎಫ್ಎಟಿಎ) ಸಂಸ್ಥೆಯ ಸಭೆಯ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದೆ.
ಸದ್ಯಕ್ಕೆ, ಭಯೋತ್ಪಾದನೆಗೆ ವಿವಿಧ ರಾಷ್ಟ್ರಗಳನ್ನು ಗುರುತಿಸಿ ಅವನ್ನು ಕಪ್ಪುಪಟ್ಟಿಗೆ ಸೇರಿಸುವ “ಎಫ್ಎಟಿಎ’ಯ “ಗ್ರೇ ಲಿಸ್ಟ್‌’ನಲ್ಲಿ ಪಾಕಿಸ್ತಾನವಿದೆ.

ಅದನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನಗಳೂ ಸಾಗಿವೆ. ಬರುವ ಜೂನ್‌ನಲ್ಲಿ ನಡೆಯಲಿರುವ ಎಫ್ಎಟಿಎ ಸಭೆಯಲ್ಲಿ ಅದು ನಿರ್ಧಾರವಾಗುತ್ತದೆ. ಅಲ್ಲಿ, ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರ್ಪಡೆಗೊಂಡರೆ ಅದಕ್ಕೆ ಯಾವುದೇ ಅಂತಾರಾಷ್ಟ್ರೀಯ ಹಣಕಾಸಿನ ನೆರವು ಸಿಗದು. ಆಗ, ಅದು ಈಗಿರುವ ದಿವಾಳಿತನದಿಂದ ಬಿಕಾರಿ ರಾಷ್ಟ್ರವಾಗಿ ಬದಲಾಗುತ್ತದೆ. ಈ ಅಪಾಯದ ಮುನ್ಸೂಚನೆ ಇರುವುದ ರಿಂದಲೇ ಪಾಕಿಸ್ತಾನ, ಚೀನಾಕ್ಕೆ ಯುಎನ್‌ಎಸ್‌ಸಿಯಲ್ಲಿ ಮಸೂ ದ್‌ ಬೆಂಬಲಕ್ಕೆ ನಿಲ್ಲದಂತೆ ಮನವಿ ಮಾಡಿದೆೆ.

ನಾಲ್ಕು ಬಾರಿ ಪ್ರಯತ್ನ
ಜೈಶ್‌ ಸಂಸ್ಥಾಪಕನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಭಾರತ ಇದುವರೆಗೆ ನಾಲ್ಕು ಬಾರಿ ಪ್ರಯತ್ನ ನಡೆಸಿತ್ತು. 2009, 2016 ಮತ್ತು 2017ರಲ್ಲಿ ದೇಶದಲ್ಲಿ ಕೈಗೊಂಡ ಉಗ್ರ ದಾಳಿಗಳ ಬಗ್ಗೆ ಸಮಗ್ರ ವಿವರಗಳನ್ನು ಸಂಗ್ರಹಿಸಿ, ಪಾಕಿಸ್ತಾನ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐವರು ಶಾಶ್ವತ ಸದಸ್ಯರಿಗೆ ನೀಡಿತ್ತು. ಮಾರ್ಚ್‌ನಲ್ಲಿ ಕೂಡ ಈ ಬಗ್ಗೆ ಪ್ರಯತ್ನ ನಡೆದಿತ್ತು. ಆದರೆ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾ, ಸಾಕ್ಷ್ಯ ಸಾಲದು ಎಂಬ ನೆಪ ಹೇಳಿ ಭಾರತದ ಪ್ರಯತ್ನಕ್ಕೆ ತಣ್ಣೀರು ಎರಚಿತ್ತು.

ಕೊನೆಯ ಬಾರಿ ಭೇಟಿ
ಏಪ್ರಿಲ್‌ 20ರಂದು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಬೀಜಿಂಗ್‌ಗೆ ಉನ್ನತ ಮಟ್ಟದ ನಿಯೋಗದ ಜತೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಇ ಜತೆಗೆ ಅಝರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ವಿಚಾರ ಸೇರಿದಂತೆ ಸಮಗ್ರ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

ಏನಿದು 1267 ಅಲ್‌ ಖೈದಾ ನಿಷೇಧ ಸಮಿತಿ?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ಹೋರಾಟ ನಡೆಸುವ ಮೂರು ಸಮಿತಿಗಳಲ್ಲಿ ಇದೂ ಒಂದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1267 ಅನ್ವಯ 1999ರ ಅ.15ರಂದು ಅಲ್‌-ಖೈದಾ ಮತ್ತು ತಾಲಿಬಾನ್‌ ನಿಷೇಧ ಸಮಿತಿ ಸ್ಥಾಪಿಸಲಾಗಿತ್ತು. 2011ರ ಜೂ.17ರಂದು ಈ ಸಮಿತಿಯನ್ನು ಮತ್ತೂಮ್ಮೆ ವಿಭಜಿಸಿ ಕೇವಲ ತಾಲಿಬಾನ್‌ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಮಾತ್ರ ಪರಿಶೀಲನೆ ನಡೆಸುತ್ತದೆ. ಅಲ್‌ ಖೈದಾ ನಿಷೇಧ ಸಮಿತಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಮಂದಿ ಸದಸ್ಯರು ಇರುತ್ತಾರೆ. ಚೀನಾ, ರಷ್ಯಾ, ಫ್ರಾನ್ಸ್‌, ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಭದ್ರತಾ ಮಂಡಳಿಯ ಶಾಶ್ವತ ಸದಸ್ಯರೂ ಅದರಲ್ಲಿ ಇರುತ್ತಾರೆ. ಸಾಮಾನ್ಯವಾಗಿ ಹೇಳುವುದಿದ್ದರೆ ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಸಮಿತಿಯೇ ಇದು.

ಪುಲ್ವಾಮಾ ಕೊನೆಯ ಮೊಳೆ
ಫೆ.14ರಂದು ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ ಘಟನೆ ಜೈಶ್‌ ಸಂಘಟನೆಗೆ ಕೊನೆಯ ಮೊಳೆಯಾಯಿತು. ಭಾರತ ಸರ್ಕಾರ ವಿಶ್ವಸಂಸ್ಥೆಗೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿದ್ದರೂ ಪಾಕ್‌ನ ಸ್ನೇಹಿ ರಾಷ್ಟ್ರ ಸಾಕ್ಷ್ಯ ಸಾಲದು ಎಂದೂ ಹೇಳಿತ್ತು. ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಬದಲಿ ಕ್ರಮ ಕೈಗೊಳ್ಳುವ ಬಗ್ಗೆ ಪ್ರಬಲವಾಗಿ ಮಾತನಾಡಿದ ಬಳಿಕ ಚೀನಾ ತನ್ನ ನಿಲುವಿನಲ್ಲಿ ಬದಲು ಮಾಡಿಕೊಂಡಿತು. ಅದಕ್ಕಾಗಿಯೇ ಅಮೆರಿಕ ಸರ್ಕಾರದ ಜತೆಗೆ ಭಾರತ ಹಲವು ರೀತಿಯಲ್ಲಿ ಮಾತುಕತೆ ನಡೆಸಿತ್ತು.

ನಮ್ಮ ವಿರುದ್ಧದ ಪಾಕ್‌ ಅಸ್ತ್ರ ಉಗ್ರ ಅಜರ್‌
ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟ ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಮೌಲಾನಾ ಮಸೂದ್‌ ಅಜರ್‌ನನ್ನು ಈವರೆಗೆ ಪಾಕಿಸ್ತಾನವು ಭಾರತದ ವಿರುದ್ಧದ ತನ್ನ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. 1994ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಿಕ್ಕಿ ಬೀಳುವುದಕ್ಕೂ ಮುನ್ನ ಮಸೂದ್‌ ಅಜರ್‌ ಅಫ್ಘಾನಿಸ್ತಾನ ಹಾಗೂ ಇತರ ದೇಶಗಳಲ್ಲಿ ಹರ್ಕತ್‌ ಉಲ್‌ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಅಫ್ಘಾನಿಸ್ತಾನದಲ್ಲಿನ ಹೋರಾಟದಲ್ಲಿ ಗಾಯಗೊಂಡ ನಂತರ ಹೋರಾಟ ಕೈಬಿಟ್ಟು, ಧಾರ್ಮಿಕ ಬೋಧನೆಗೆ ಇಳಿದಿದ್ದ. ಈತ ಇಂಗ್ಲೆಂಡ್‌ ಹಾಗೂ ಯುರೋಪ್‌ ದೇಶಗಳಲ್ಲಿ ಧಾರ್ಮಿಕ ಬೋಧನೆ ಮಾಡುತ್ತಲೇ ಯುವಕರಲ್ಲಿ ಉಗ್ರವಾದದ ವಿಷ ಬೀಜವನ್ನೂ ಬಿತ್ತುತ್ತಿದ್ದ. ಆದರೆ 1994ರಲ್ಲಿ ಜಮ್ಮು ಕಾಶ್ಮೀರದಲ್ಲಿ ಹರ್ಕತ್‌ ಉಲ್‌ ಉಗ್ರ ಸಂಘಟನೆಗಳ ಮಧ್ಯೆ ಸಂಘರ್ಷ ಉಂಟಾದಾಗ ಅವರ ಮಧ್ಯೆ ಸಂಧಾನ ನಡೆಸಲು ಕಾಶ್ಮೀರಕ್ಕೆ ಆಗಮಿಸಿದ್ದ. ಈ ವೇಳೆ ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದ. ಆಗಲೇ ಈತನ ಭಾರತದ ವಿರುದ್ಧ ದ್ವೇಷ ಹುಟ್ಟಿಕೊಂಡಿತ್ತು.

ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡಿಸಿಕೊಂಡ ಈತ ಭಾರತದ ವಿರುದ್ಧದ ದಾಳಿಯನ್ನೇ ಗುರಿಯನ್ನಾಗಿಸಿಕೊಂಡಿದ್ದ. ಇದಕ್ಕೆ ಪಾಕಿಸ್ತಾನ ಸಂಪೂರ್ಣ ನೆರವು ನೀಡುತ್ತಿತ್ತು. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಲು ಈತನಿಗೆ ಪಾಕಿಸ್ತಾನ ನಿರಂತರ ನೆರವು ನೀಡುತ್ತಿತ್ತು. ಪಾಕಿಸ್ತಾನದ ರಾಜಕಾರಣಿಗಳ ಜೊತೆಗೆ ಈತನಿಗೆ ನೇರ ಸಂಪರ್ಕವಿದೆ. ಅಷ್ಟೇ ಅಲ್ಲ, ಈತ ಧಾರ್ಮಿಕ ಮುಖಂಡನ ಸೋಗು ಹಾಕಿ, ವಿವಿಧ ದೇಶಗಳ ಮುಖಂಡರ ಜೊತೆಗೂ ಉತ್ತಮ ನಂಟು ಹೊಂದಿದ್ದಾನೆ. ಹೀಗಾಗಿಯೇ ಈತನ ವಿರುದ್ಧ ಕ್ರಮ ಕೈಗೊಳ್ಳಲು ಚೀನಾ ಎದುರಾಗುತ್ತಿರಲಿಲ್ಲ.

ಹೆಡ್‌ಮಾಸ್ತರನ ಪುತ್ರ!
ಪಾಕಿಸ್ತಾನದ ಬಹಾವಲ್ಪುರದಲ್ಲಿ 1968 ಜುಲೈ 10 ರಂದು ಜನಿಸಿರುವ ಉಗ್ರ ಮಸೂದ್‌ ಅಜರ್‌, 11 ಮಕ್ಕಳ ಪೈಕಿ ಮೂರನೆಯವನು. ಅಚ್ಚರಿಯ ಸಂಗತಿಯೆಂದರೆ, ಮಸೂದ್‌ ಅಜರ್‌ನ ತಂದೆ ಸರ್ಕಾರಿ ಶಾಲೆಯಲ್ಲಿ ಹೆಡ್‌ಮಾಸ್ತರರಾಗಿದ್ದರು. ಅಷ್ಟೇ ಅಲ್ಲ, ದಿಯೋಬಾಂದ್‌ ಮಸೀದಿಯಲ್ಲಿ ಮೌಲ್ವಿ ಕೂಡ ಆಗಿದ್ದರು. ಜಾಮಿಯಾ ಉಲೂಮ್‌ ಇಸ್ಲಾಮಿಕ್‌ ಸ್ಕೂಲ್‌ನಲ್ಲಿ ಮಸೂದ್‌ ಅಜರ್‌ 8ನೇ ತರಗತಿಯವರೆಗೆ ಓದಿದ್ದ. ಈತ ಓದುತ್ತಿದ್ದ ಮದರಸಾ ಬಳಿಯೇ ಹರ್ಕತ್‌ ಉಲ್‌ ಉಗ್ರ ಸಂಘಟನೆಯ ಕೇಂದ್ರವಿತ್ತು. ಹೀಗಾಗಿ ಈತ ಉಗ್ರ ಸಂಘಟನೆಗೆ ಸೇರಿಕೊಂಡ.

ಮಸೂದ್‌ ಅಜರ್‌ನ ರಕ್ತಸಿಕ್ತ ಹೆಜ್ಜೆ…
1979 - 89: ಸೋವಿಯತ್‌-ಆಫ‌^ನ್‌ ಯುದ್ಧದಲ್ಲಿ ಗಾಯಗೊಂಡ ನಂತರ, ಹರ್ಕತ್‌ ಉಲ್‌ ಅನ್ಸರ್‌ನಲ್ಲಿ ಧಾರ್ಮಿಕ ಬೋಧಕನಾದ
1990 ರ ಆರಂಭ: ಹರ್ಕತ್‌ ಉಲ್‌ ಅನ್ಸರ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
1993: ಕೀನ್ಯಾದಲ್ಲಿ ಅಲ್‌ ಖೈದಾ ಮುಖಂಡರ ಭೇಟಿ
1994: ದ್ವೇಷ ಭಾಷಣ ಮಾಡಿದ್ದಕ್ಕೆ ಜಮ್ಮು ಕಾಶ್ಮೀರದಲ್ಲಿ ಬಂಧನ
1994 1995: ಬಿಡುಗಡೆಯಾದ ಉಮರ್‌ ಶೇಖ್‌ ನಾಲ್ವರು ಯುರೋಪಿಯನ್ನರನ್ನು ದೆಹಲಿಯಿಂದ ಅಪಹರಿಸಿ ಅಜರ್‌ ಬಿಡುಗಡೆಗೆ ಯತ್ನ
1999  -2000: ಕಂದಹಾರ್‌ ಪ್ರಕರಣದಲ್ಲಿ ಬಿಡುಗಡೆಗೊಂಡು ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಸ್ಥಾಪನೆ
2000 ಏಪ್ರಿಲ್‌: ಬದಾಮಿ ಬಾಘ… ಕಂಟೋನ್ಮೆಂಟ್‌ನಲ್ಲಿ ಕಾರ್‌ ಬಾಂಬ್‌ ದಾಳಿ – 30 ಸಾವು
2000 ಜೂನ್‌: 3 ಜಮ್ಮು ಕಾಶ್ಮೀರ ಪೊಲೀಸರನ್ನು ಹತ್ಯೆಗೈದ ಜೈಶ್‌ ಉಗ್ರರು
2000 ಡಿಸೆಂಬರ್‌: ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಬಿಎಸ್‌ಎಫ್ ವಾಹನದ ಮೇಲೆ ದಾಳಿ, ಯೋಧ ಹುತಾತ್ಮ
2001 ಅಕ್ಟೋಬರ್‌: ಜಮ್ಮು ಕಾಶ್ಮೀರ ವಿಧಾನಸಭೆ ಮೇಲೆ ಬಾಂಬ್‌ ದಾಳಿ – 31 ಸಾವು
2001 ಡಿಸೆಂಬರ್‌: ಸಂಸತ್‌ ಮೇಲೆ ದಾಳಿ
2002 ಜನವರಿ: ಕರಾಚಿಯಲ್ಲಿ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಕರ್ತ ಡೇನಿಯಲ್‌ ಪರ್ಲ್ ಅಪಹರಣ, ಹತ್ಯೆ
2002 ಜೂನ್‌: ಕರಾಚಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಜೈಶ್‌ ದಾಳಿ
2003 ಜನವರಿ: ಬತ್ಮಲೂ ಬಸ್‌ ಸ್ಟಾಂಡ್‌ನ‌ಲ್ಲಿ ಬಿಎಸ್‌ಎಫ್ ಸಿಬ್ಬಂದಿ ಹತೆಗೈದ ಜೈಶ್‌
2005 ನವೆಂಬರ್‌: ಗುಲಾಂ ನಬಿ ಆಜಾದ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ನೌಗಾಂವ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ. 10 ಸಾವು
2006 ಮಾರ್ಚ್‌: ಪುಲ್ವಾಮಾದಲ್ಲಿ ಗ್ರೆನೇಡ್‌ ದಾಳಿಯಲ್ಲಿ 23 ನಾಗರಿಕರು, 2 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ
2006 ಮೇ: ಶ್ರೀನಗರದಲ್ಲಿ ಮಾನವ ಹಕ್ಕುಗಳ ಆಯೋಗದ ಬೆಂಗಾವಲು ವಾಹನದ ಮೇಲೆ ಗ್ರೆನೇಡ್‌ ದಾಳಿ
2008 ಜುಲೈ: ಸೋಪೋರೆ ಬಂಡಿಪೋರಾ ರಸ್ತೆಯಲ್ಲಿ ಎಸ್‌ಪಿಒ ಹತ್ಯೆಗೈದ ಜೈಶ್‌ ಉಗ್ರರು
2014 ಮಾರ್ಚ್‌: ಬಾರಾಮುಲ್ಲಾದಲ್ಲಿ ಸೇನೆ ಕರ್ನಲ್‌ ವಾಹನದ ಮೇಲೆ ದಾಳಿ
2016 ಜನವರಿ: ಪಠಾಣ್‌ ಕೋಟ್‌ ದಾಳಿ ಸಂಚು
2016 ಆಗಸ್ಟ್‌: ಬಾರಾಮುಲ್ಲಾದಲ್ಲಿ ಸೇನೆ ಮೇಲೆ ದಾಳಿ, 2 ಹುತಾತ್ಮ
2018 ಸೆಪ್ಟೆಂಬರ್‌: ಉರಿ ಸೇನಾ ನೆಲೆ ಮೇಲೆ ದಾಳಿ, 18 ಯೋಧರು ಹುತಾತ್ಮ
2019 ಫೆಬ್ರವರಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ದಾಳಿ, 40 ಯೋಧರು ಹುತಾತ್ಮ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.