Indian Economy ; ರೂಪಾಯಿ ಏಕೆ ಬಲಗೊಳ್ಳುತ್ತಿಲ್ಲ?
ಸದ್ಯ ಭಾರತೀಯರೆಲ್ಲರನ್ನು ಕಾಡುತ್ತಿರುವ ಪ್ರಶ್ನೆ...
Team Udayavani, Nov 28, 2023, 5:40 AM IST
ಅಭಿವೃದ್ಧಿಯ ವಿಷಯದಲ್ಲಿ ಭಾರತ ಕೂಡ ನಾಗಾಲೋಟದಲ್ಲಿದೆ. ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಎದುರಾಗಿರುವ ಹಲವಾರು ಎಡರು-ತೊಡರುಗಳ ನಡುವೆ ಕೆಲವು ದೇಶಗಳು ಎಡವುತ್ತಿದ್ದರೆ, ಭಾರತ ಮಾತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ವಿಶ್ವ ಬ್ಯಾಂಕ್ ಸಹಿತ ಪ್ರಮುಖ ಸಂಸ್ಥೆಗಳು ಭಾರತದ ಸಾಧನೆಯ ಹಾದಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ. ಕೊರೊನಾ ಬಳಿಕವಂತೂ ದೇಶವು ಆತ್ಮ ನಿರ್ಭರಗೊಳ್ಳುತ್ತಾ ಪ್ರಪಂಚದ ದೇಶಗಳೆಲ್ಲ ನಿಬ್ಬೆರಗಾಗಿ ನೋಡುವಂತೆ ಅಭಿವೃದ್ಧಿಯ ಪಥದಲ್ಲಿ ಮುನ್ನು ಗ್ಗುತ್ತಿದೆ. ಆದರೆ ಇಷ್ಟೆಲ್ಲದರ ನಡುವೆ ಜಾಗತಿಕ ವ್ಯವಹಾರಕ್ಕೆ ಅಗತ್ಯವಾಗಿರುವ ಡಾಲರ್ ಎದುರು ರೂಪಾಯಿ ಏಕೆ ಸೆಟೆದು ನಿಲ್ಲುತ್ತಿಲ್ಲ ಎಂಬುದು ಸದ್ಯ ಭಾರತೀಯರೆಲ್ಲರನ್ನು ಕಾಡುತ್ತಿರುವ ಪ್ರಶ್ನೆ.
ಹೌದು, ಇಂದು ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುವ ಕಾಲಮಾನವಲ್ಲ. ಜಗತ್ತು ಹತ್ತಿರವಾಗಿವೆ. ನಮ್ಮ ವ್ಯವಹಾರಗಳು ಕೇವಲ ಜಿಲ್ಲೆ, ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ಸಪ್ತ ಸಾಗರದಾಚಿನ ವ್ಯಾಪಾರ- ವ್ಯವಹಾರಗಳೇ ನಮ್ಮ ಆರ್ಥಿಕ ಪ್ರಗತಿಯನ್ನು ನಿರ್ಧ ರಿಸುವ ಸ್ಥಿತಿಯಲ್ಲಿದೆ. ಹಿಂದೆ ನಮ್ಮ ಸಂತೆಕಟ್ಟೆಯೇ ಮಾರುಕಟ್ಟೆ ಕೇಂದ್ರವಾಗಿದ್ದರೆ, ಇಂದು ಅದಕ್ಕೆ ಕೇಂದ್ರ ಎಂಬುದೇ ಇಲ್ಲವಾಗಿದೆ. ದುಂಡಗಿನ ಭೂಮಿ ಪೂರ್ತಿ ವ್ಯಾಪಾರ ಕೇಂದ್ರವಾಗಿದೆ. ಸಾವಿರಾರು ಮೈಲುಗಳ ದೂರದಲ್ಲಿರುವ, ಕಣ್ಣಲ್ಲಿ ಕಂಡೇ ಇರದ ಊರು, ದೇಶಗಳಿಂದ ನಮಗಿಷ್ಟವಾದ ವಸ್ತು, ಸಾಮಗ್ರಿಗಳನ್ನು ಇಂದು ಖರೀದಿಸಬಹುದು. ಆದರೆ ಇದಕ್ಕೆಲ್ಲ ಬೇಕಾ ಗುವುದು ನಮ್ಮ ರೂಪಾಯಿಯಲ್ಲ; ಬದಲಾಗಿ ಜಗತ್ತೇ ಇಷ್ಟಪಟ್ಟುಕೊಂಡಿರುವ ಅಮೆರಿಕನ್ ಡಾಲರ್.
ಎಲ್ಲಿಂದ ಎಲ್ಲಿಗೆ ಬಂತು?: ಡಾಲರ್ ಹಿಂದಿನಿಂದಲೂ ಈ ಅಂತರದ ಸ್ಥಿತಿಯಲ್ಲೇನೂ ಇರಲಿಲ್ಲ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಮೊದಲು ಬ್ರಿಟಿಷ್ ಪೌಂಡ್ ಮೂಲಕವೇ ಭಾರತದ ವ್ಯವಹಾರ ನಡೆಯುತ್ತಿತ್ತು. ಸ್ವಾತಂತ್ರ್ಯ ಪಡೆಯುವ ಸ್ವಲ್ಪ ಮೊದಲು ರೂಪಾಯಿ ಮತ್ತು ಡಾಲರ್ ಸಮಾನವಾಗಿತ್ತು. 1947ರಲ್ಲಿ ಸ್ವಾತಂತ್ರ್ಯ ದೊರಕಿದ ಬಳಿಕ ಭಾರತೀಯ ರೂಪಾ ಯಿಯೇ ಸ್ವತಂತ್ರವಾಗಿ ಜಾಗತಿಕ ಕರೆನ್ಸಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಆಗ ಒಂದು ಡಾಲರ್‌ಗೆ ರೂಪಾಯಿ ಮೌಲ್ಯ 3.30 ರೂ.ಗಳಷ್ಟಿತ್ತು. ಅನಂತರ ಮೌಲ್ಯ ಕಳೆದುಕೊಳ್ಳುತ್ತಾ ಸಾಗಿದರೂ ಅದು ಹೇಳಿಕೊಳ್ಳುವಂತಹ ಮಟ್ಟದಲ್ಲಿರಲಿಲ್ಲ. 1990ರ ದಶಕದಲ್ಲಿ ಅದು 17 ರೂ.ಗಳ ಆಸುಪಾಸಿಗೆ ಬಂದಿತ್ತು.
1991ರಲ್ಲಿ ಭಾರತವು ಆರ್ಥಿಕ ಸುಧಾರಣೆಗಾಗಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿತು. ಮುಖ್ಯವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡಿತು. ಹಣಕಾಸು ನೀತಿಯಲ್ಲೂ, ವಿದೇಶಿ ವಿನಿಮಯ ನಿಯಮಾವಳಿಗಳಲ್ಲೂ ಬದಲಾವಣೆ ತಂದಿತು. ಇದು ಅಂದಿನ ಅನಿವಾರ್ಯವಾಗಿದ್ದರೂ ಇದೇ ವೇಳೆ ಜಾಗತಿಕವಾಗಿ ಎದುರಾದ ಆರ್ಥಿಕ ಹಿಂಜರಿತ, ಏಷ್ಯಾದಲ್ಲಿನ ಏರು-ಪೇರುಗಳಿಂದಾಗಿ 2000 ಇಸವಿಯವರೆಗೂ ರೂಪಾಯಿ ಮೇಲೆ ಭಾರೀ ಹೊಡೆತವೇ ಬಿದ್ದಿತು. ಹಾಗೆಂದು 21ನೇ ಶತಮಾನದ ಆರಂಭದಲ್ಲಿಯೂ ಡಾಲರ್ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. 2020ರ ವೇಳೆಗೆ ಅದು 75 ರೂ.ಗಳಿಗೆ ಏರಿ ದೇಶದ ಅರ್ಥವ್ಯವಸ್ಥೆಗೆ ಒಂದು ರೀತಿಯಲ್ಲಿ ಮಗ್ಗುಲ ಮುಳ್ಳಾಗಿಯೇ ಉಳಿಯಿತು. ಈಗ 83ರ ಆಸುಪಾಸಿನಲ್ಲಿ ತೊಯ್ದಾಡುತ್ತಿದೆ.
ಈ ಅಂತರ ಏಕೆ?: ಡಾಲರ್ ಮತ್ತು ರೂಪಾಯಿ ನಡುವಿನ ಈ ರೀತಿಯ ಅಜಗಜಾಂತರಕ್ಕೆ ಹಲವು ಕಾರಣಗಳಿವೆ. ನಮ್ಮ ದೇಶದ ಆಡಳಿತ ಹಲವಾರು ವಿಷಯಗಳಲ್ಲಿ ಎಡವಿದ್ದು (ಅಸ್ಥಿರ ಸರಕಾರಗಳು)ಒಂದು ಕಾರಣವಾದರೆ, ಇನ್ನೊಂದೆಡೆ ಅಮೆರಿಕವು ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಾ ಸಾಗಿದ್ದು. ಅಲ್ಲಿನ ಆರ್ಥಿಕತೆ ಏರುತ್ತಾ ಸಾಗಿ ಜಗತ್ತಿನ ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡರೆ, ನಾವು ಪರಾವಲಂಬಿಯಾಗುತ್ತಾ ಸಾಗಿದ್ದು ಮತ್ತೂಂದು ದುರಂತ. ನಮ್ಮ ರಾಜಕೀಯ ನಾಯಕರು ಮತ್ತು ಆಡಳಿತಶಾಹಿ ಜತೆಗೂಡಿ ದೂರದೃಷ್ಟಿಯ ಯೋಜನೆ ಯನ್ನು ಹಾಕಿಕೊಂಡಿದ್ದರೆ ಬಹುಶಃ ಇಂತಹ ಸ್ಥಿತಿ ಎದುರಾಗುತ್ತಿರಲಿಲ್ಲ. ದೇಶದಲ್ಲಿದ್ದ ಅಮೂಲ್ಯವಾದ ವಸ್ತುಗಳನ್ನು ಕಚ್ಚಾ ವಸ್ತು ರೂಪದಲ್ಲಿ ನಗಣ್ಯ ಎಂಬ ಬೆಲೆಗೆ ವಿದೇಶಗಳಿಗೆ ಕೊಟ್ಟದ್ದು ಬಿಟ್ಟರೆ ಅದನ್ನು ನಮ್ಮ ಲ್ಲಿಯೇ ಮೌಲ್ಯವರ್ಧಿತಗೊಳಿಸುವ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ನಾವು ಕೊಟ್ಟ ಕಚ್ಚಾವಸ್ತುಗಳಿಂದ ತಯಾ ರಾದ ವಸ್ತುಗಳನ್ನು ಹಲವು ಪಟ್ಟು ಹೆಚ್ಚು ಬೆಲೆಗೆ (ಡಾಲರ್‌ಗಳಲ್ಲಿ ನೀಡಿ) ಖರೀದಿಸುವ ದೀನ ಸ್ಥಿತಿ ಬಂದಿತ್ತು. ಅತಿಯಾಗಿ ಡಾಲರ್‌ಗಳನ್ನು ನುಂಗುವ ಇಂಧನ(ಪೆಟ್ರೋಲಿಯಂ ಉತ್ಪನ್ನ)ಕ್ಕೆ ಪರ್ಯಾಯ ಮಾರ್ಗವನ್ನೇ ಹುಡುಕಿರಲಿಲ್ಲ. ಇವೆಲ್ಲವೂ ಡಾಲರ್‌ನ ಓಟಕ್ಕೆ ಗುÉಕೋಸ್ ನೀಡಿದಂತಾಯಿತು.
ಭವಿಷ್ಯವೇನು?: ಈಗಲೂ ಡಾಲರ್ ಮೌಲ್ಯ ಹೆಚ್ಚು ತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ, ಈಗಿನ ವಿದ್ಯಮಾನಗಳನ್ನು ಗಮನಿಸಿದಾಗ ಮುಂದಿನ ವರ್ಷ ದವರೆಗೆ ಅದಕ್ಕೆ ಲಗಾಮು ಬೀಳುವ ಸಾಧ್ಯತೆ ಕಡಿಮೆ. ರೂಪಾಯಿ ಮೌಲ್ಯ ಕುಸಿಯಲು ಮುಖ್ಯ ಕಾರಣ ನಮ್ಮ ಹೆಚ್ಚಿನ ಪ್ರಮಾಣದ ಆಮದು. ರಫ್ತು ಹೆಚ್ಚಾ ದರಷ್ಟೇ ಡಾಲರ್ ನಮ್ಮ ಖಜಾನೆಯಲ್ಲಿ ಶೇಖರಣೆ ಯಾಗುತ್ತದೆ. ನಮ್ಮ ದೇಶದ ಆಮದು ಮತ್ತು ರಫ್ತಿನ ಲೆಕ್ಕಾಚಾರದತ್ತ ಒಮ್ಮೆ ಗಮನ ಹರಿಸಿದರೆ ನಾವೆಲ್ಲಿ ಎಡವಿದ್ದೇವೆ ಎಂಬುದರ್ಥವಾಗುತ್ತದೆ. ಭಾರತವು 2021-22ನೇ ಸಾಲಿನಲ್ಲಿ 613 ಬಿಲಿಯನ್ ಡಾಲರ್ ಮೌಲ್ಯದ ವಸ್ತು ಆಮದು ಮಾಡಿದ್ದರೆ, 2022-23ನೇ ಸಾಲಿನಲ್ಲಿ ಇದು 714 ಬಿಲಿಯನ್ ಡಾಲರ್‌ಗಳಿಗೇರಿತ್ತು. ಇದೇ ಅವಧಿಯಲ್ಲಿನ ರಫ್ತು ಪ್ರಮಾಣ ಅನುಕ್ರಮವಾಗಿ 422 ಬಿಲಿಯನ್ ಡಾಲರ್ ಮತ್ತು 447 ಬಿಲಿಯನ್ ಡಾಲರ್ ಆಗಿತ್ತು. ಈ ಅಂತರ ಹೆಚ್ಚಾದಂತೆ ದೇಶದ ಮೀಸಲು ನಿಧಿಯ ಪ್ರಮಾಣ ಕರಗುತ್ತದೆ. ಇದನ್ನು ಹೊಂದಾಣಿಕೆ ಮಾಡಲು ವಿಶ್ವ ಬ್ಯಾಂಕ್ ಸಹಿತ ಬಲಾಡ್ಯರಿಂದ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಈ ಸಾಲದ ಮೊತ್ತ ಏರಿದಂತೆ ರೂಪಾಯಿ ಮೌಲ್ಯ ಇಳಿಯುತ್ತಾ ಸಾಗುತ್ತದೆ. ಇದೇ ರೀತಿ ಹೂಡಿಕೆಯಲ್ಲಿ ಜಗತ್ತಿಗೆ ತೆರೆದುಕೊಂಡ ಬಳಿಕ ಭಾರತೀಯ ಷೇರು ಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹೂಡಿದ್ದಾರೆ. ಅವರು ಹೂಡಿದಾಗ ದೇಶಕ್ಕೆ ಡಾಲರ್ ಲಭ್ಯವಾಗು ವುದಾದರೂ ಷೇರುಪೇಟೆ ಅಸ್ಥಿರವಾದಾಗ (ಇಸ್ರೇಲ್ ಯುದ್ಧ ಕಾರಣದಿಂದ ಅಕ್ಟೋಬರ್ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ವಾಪಸ್ ಪಡೆದ ಮೊತ್ತ ರೂ. 24,000 ಕೋಟಿಗೂ ಹೆಚ್ಚು !) ಅವರು ಕೋಟಿಗಟ್ಟಲೆ ಮೊತ್ತವನ್ನು ವಾಪಸ್ ಪಡೆದಾಗ ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬಿದ್ದೇ ಬೀರುತ್ತದೆ.
ಇದರ ನಡುವೆ ಇತ್ತೀಚೆಗೆ ಭಾರತವು ಹಲವು ದೇಶಗಳೊಂದಿಗೆ ರೂಪಾಯಿಯಲ್ಲಿಯೇ ವ್ಯವಹಾರ ಆರಂಭಿಸಿದೆ. ಪ್ರಸ್ತುತ ರಷ್ಯಾ, ಇಂಗ್ಲೆಂಡ್, ಇಸ್ರೇಲ್, ಜರ್ಮನಿ, ಯುಎಇ, ಸಿಂಗಾಪುರ, ಆಸ್ಟ್ರೇಲಿಯ ಸಹಿತ 18 ದೇಶಗಳೊಂದಿಗೆ ಈ ರೀತಿಯ ವ್ಯವಹಾರ ನಡೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಎರಡು ದೇಶಗಳ ನಡುವಿನ ಕೊಡು-ಕೊಳ್ಳುವಿಕೆಗೆ ಡಾಲರ್ ಆವಶ್ಯಕತೆ ತಪ್ಪಿಸುವುದೇ ಇದರ ಮೂಲ ಉದ್ದೇಶವಾಗಿದೆ.
ವಿದೇಶಗಳ ಅವಲಂಬನೆ ತಪ್ಪಿಸುವುದಕ್ಕಾಗಿ ನಡೆಯುತ್ತಿರುವ ದೇಶೀಯ ವಸ್ತುಗಳ ಆಂದೋಲನ, ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳು ನಿಧಾನಕ್ಕೆ ಫಲ ನೀಡಲಾರಂಭಿಸಿವೆ ಯಷ್ಟೇ. ಇದಕ್ಕೆ ಇನ್ನಷ್ಟು ನೀರು-ಗೊಬ್ಬರ ದೊರೆತರೆ ಒಟ್ಟಾರೆ ಆಮದು ಇಳಿಕೆಯಾಗಿ ರಫ್ತು ಏರಿಕೆಯಾ ಗುತ್ತದೆ. ಈಗಾಗಲೇ ಹಲವಾರು ವಿದೇಶಿ ಕಂಪೆನಿಗಳು ಭಾರತದಲ್ಲಿ ವಸ್ತುಗಳ ತಯಾರಿಯಲ್ಲಿ ತೊಡಗಿಸಿ ಕೊಂಡಿವೆ. ಮೂಲೆಗುಂಪಾಗುತ್ತಿದ್ದ ಎಚ್‌ಎಎಲ್ ಈಗ ಜಗತ್ತಿನ ಕಣ್ಮಣಿ. ವಿದೇಶದಿಂದಲೇ ಬರುತ್ತಿದ್ದ ಐಫೋನ್‌ಗಳು ಈಗ ಇಲ್ಲಿಂದಲೇ ವಿದೇಶಕ್ಕೆ ರವಾನೆಯಾಗುತ್ತಿದೆ.
ಅಣುಬಾಂಬ್ ದಾಳಿ ನಡೆದ ಬಳಿಕ ಜಪಾನ್ ಪುಟಿದೆದ್ದ ರೀತಿ ಎಲ್ಲರಿಗೂ ಮಾದರಿ. ತಮ್ಮ ದೇಶದ ಜನರಿಗೆ ಕೌಶಲ ತರಬೇತಿ ನೀಡಿ ಜನಶಕ್ತಿ ಆರ್ಥಿಕ ಶಕ್ತಿ ಯಾಗಿ ಬದಲಾಗಬೇಕು. ದುಡಿಯುವ ಕೈಗಳು ಹೆಚ್ಚಾಗಿ ಉತ್ಪಾದನ ವಲಯ ಉತ್ತುಂಗಕ್ಕೇರಬೇಕು. ಆ ಮೂಲಕ ಆಮದು ಇಳಿಕೆಯಾಗಿ ರಫ್ತು ಹೆಚ್ಚಾಗಲು ಸಾಧ್ಯ. ಇದರ ಜತೆಗೆ ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಅದ್ಭುತವಾದ ಅಸಂಖ್ಯ ಪ್ರವಾಸಿ ತಾಣಗಳು ನಮ್ಮಲ್ಲಿವೆ. ಇವುಗಳ ಸುಸ್ಥಿರ ಅಭಿವೃದ್ಧಿ ಮತ್ತು ಉನ್ನತ ಮಟ್ಟದ ಆತಿಥ್ಯ ಒದಗಿಸುವ ಮೂಲಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದರೆ ಅದೂ ಡಾಲರ್‌ಗಳ ಹರಿವಿಗೆ ನೆರವಾಗುತ್ತದೆ.
ಒಟ್ಟಾರೆಯಾಗಿ ಪರಾವಲಂಬನೆ ಕಡಿಮೆಯಾಗಿ ಪರರು ನಮ್ಮನ್ನು ಅವಲಂಬಿಸುವಂತಾದರೆ ಡಾಲರ್, ಭಾರತದ ರೂಪಾಯಿ ಎದುರು ಮಂಡಿಯೂರು ವುದರಲ್ಲಿ ಸಂಶಯವೇ ಇಲ್ಲ.

ಕೆ. ರಾಜೇಶ್ ಮೂಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.