9 ದಿನಗಳ ಗೋವಾ ಚಲನಚಿತ್ರೋತ್ಸವಕ್ಕೆ ಚಾಲನೆ ಇಂದು
Team Udayavani, Nov 20, 2018, 6:00 AM IST
ಪಣಜಿ: ಒಂಭತ್ತು ದಿನಗಳ 49ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ) ಮಂಗಳವಾರ (ನ.20) ಆರಂಭವಾಗಲಿದ್ದು, ಪ್ರವಾಸಿಗರ ರಾಜ್ಯವಾದ ಗೋವಾದ ಚಿತ್ರನಗರಿ ಪಣಜಿ ಅತ್ಯಂತ ಸಂಭ್ರಮದಿಂದ ಸಿದ್ಧಗೊಂಡಿದೆ.
ನ.20 ರಿಂದ 28 ರವರೆಗೆ ನಡೆಯುವ 49 ನೇ ಇಫಿ ಚಲನಚಿತ್ರೋತ್ಸವದಲ್ಲಿ ಒಟ್ಟು 68 ದೇಶಗಳ 212 ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳುವವು. ಚಿತ್ರೋತ್ಸವದ ಉದ್ಘಾಟನೆ ಅಪರಾಹ್ನ 4.30ಕ್ಕೆ ನಗರದ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೋವಾದ ಗೌರ್ನರ್ ಮೃದುಲಾ ಸಿನ್ಹಾ ಉದ್ಘಾಟಿಸುವರು. ಕೇಂದ್ರ ಸಚಿವ ರಾಜ್ಯವರ್ಧನ್‌ಸಿಂಗ್ ರಾಥೋಡ್, ಗೋವಾದ ಲೋಕೋಪಯೋಗಿ ಖಾತೆ ಸಚಿವ ಸುಧೀರ್ ಮಾಧವ್ ದವಾಲಿಕರ್ ಪಾಲ್ಗೊಳ್ಳುವರು. ಚಿತ್ರೋತ್ಸವದ ಉದ್ಘಾಟನೆ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಲ್ಗೊಳ್ಳುವರು.
ಸ್ಥಳ ಬದಲಿಲ್ಲ: ಈ ಬಾರಿ ಚಲನಚಿತ್ರೋತ್ಸವವನ್ನು ಡೋನಾ ಪೋಲಾದಲ್ಲಿ ನಿರ್ಮಿಸಲಾಗುವ ಹೊಸ ಸಂಕೀರ್ಣದಲ್ಲಿ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿತ್ತಾದರೂ, ಈಗ ಹಿಂದಿನ ಐನಾಕ್ಸ್ ಆವರಣದಲ್ಲೇ ನಡೆಸಲಾಗುತ್ತಿದೆ. ಚಿತ್ರೋತ್ಸವಕ್ಕೆ ದಿ ಎಸ್ಪರ್ನ ಪೇಪರ್ ಎಂಬ ಚಿತ್ರದ ಮೂಲಕ ಚಾಲನೆ ಸಿಗಲಿದೆ. ಈ ಚಿತ್ರವನ್ನು ಅಮೆರಿಕದ ಜೂಲಿಯನ ಲಾಂಡಾಯಿಸ್ ನಿರ್ದೇಶಿಸಿದ್ದು, ಕಾದಂಬರಿಕಾರ ಹೆನ್ರಿ ಜೇಮ್ಸ ರ ಕಾದಂಬರಿ ಆಧಾರಿತವಾದದ್ದು.
ಈ ಬಾರಿಯ ವಿಶೇಷ: ಭಾರತೀಯ ಪನೋರಮಾ ವಿಭಾಗದಲ್ಲಿ ಒಟ್ಟಿ 26 ಕಥಾ ಹಾಗೂ 21 ಕಥೆಯೇತರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಈ ವಿಭಾಗದ ಉದ್ಘಾಟನಾ ಚಿತ್ರವಾಗಿ ಮಲಯಾಳಂನ ನಿರ್ದೇಶಕ ಷಾಜಿ ಎನ. ಕರುಣ್ ನಿರ್ದೇಶಿತ ಚಿತ್ರ ಒಲು ಪ್ರದರ್ಶನಗೊಳ್ಳಲಿದೆ. ಕಥೇತರ ವಿಭಾಗದಲ್ಲಿ ಆದಿತ್ಯ ಸುಹಾಸ್ ಜಂಬಳೆ ಅವರು ನಿರ್ದೇಶಿಸಿದ ಖರ್ವಾಸ್ ಪ್ರದರ್ಶನಗೊಳ್ಳಲಿದೆ. ಬಂಗಾಳಿ, ಮಲಯಾಳಂ, ಮರಾಠಿ ಸೇರಿ ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳು ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.ಬಹಳ ಪ್ರಮುಖವಾಗಿ ಅಂತಾರಾಷ್ಟ್ರೀಯ ಸ್ಪರ್ಧೆಯ ವಿಭಾಗದಡಿ 15 ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಈ ಪೈಕಿ 3 ಭಾರತೀಯ ಚಲನಚಿತ್ರಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಚಲನ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ದೂರದರ್ಶನ ವಾಹಿನಿಯಲ್ಲಿ ಸಂಜೆ 4. 30 ರಿಂದ ನೇರ ಪ್ರಸಾರವಾಗಲಿದೆ.
ತುಳು ಚಲನಚಿತ್ರ ಪ್ರದರ್ಶನ
ಈ ಚಿತ್ರೋತ್ಸವ ತುಳು ಚಲನಚಿತ್ರ ರಂಗಕ್ಕೆ ಮಹತ್ವದ ಮೈಲಿಗಲ್ಲು. ಯಾಕೆಂದರೆ ಭಾರತೀಯ ಪನೋರಮಾ ವಿಭಾಗಕ್ಕೆ ಕನ್ನಡದ ಯಾವ ಚಲನಚಿತ್ರವೂ ಆಯ್ಕೆಯಾಗಿಲ್ಲ. ಪ್ರಾದೇಶಿಕ ಭಾಷಾ ಚಲನಚಿತ್ರ ವಿಭಾಗದಡಿ ಅಭಯಸಿಂಹ ನಿರ್ದೇಶಿಸಿದ ತುಳು ಚಲನಚಿತ್ರ ಪಡ್ಡಾಯಿ ಪ್ರದರ್ಶನಗೊಳ್ಳುತ್ತಿದೆ. ಕರ್ನಾಟಕದ ಪರವಾಗಿ ಎಂಬಂತೆ ಪ್ರದರ್ಶನಗೊಳ್ಳುತ್ತಿರುವ ಏಕೈಕ ಚಲಚನಿತ್ರವಿದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.