ಅಗ್ನಿವೀರರು ನಾವು… : ಭಾರತೀಯ ಸೇನೆಯ ಟೂರ್ ಆಫ್ ಡ್ನೂಟಿ
Team Udayavani, Jun 15, 2022, 6:10 AM IST
ಈಗಾಗಲೇ ವಿದೇಶಗಳಲ್ಲಿ ಪ್ರಚಲಿತದಲ್ಲಿರುವ ಸೇನೆಯಲ್ಲಿನ ಅಲ್ಪಾವಧಿ ಸೇವೆಯ ಸದವಕಾಶ ಭಾರತದಲ್ಲೂ ಜಾರಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಸೇನೆಗೆ ಸುಮಾರು 45 ಸಾವಿರ ಅಗ್ನಿವೀರರು ನೇಮಕವಾಗಲಿದ್ದಾರೆ. ಇವರು ಪೂರ್ಣಾವಧಿ ಯೋಧರಲ್ಲ. ಬದಲಿಗೆ ನಾಲ್ಕು ವರ್ಷಗಳ ಸೇವೆಗಾಗಿ ತೆರಳಲಿರುವವರು. ಮಂಗಳವಾರ ಈ ಬಗ್ಗೆ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಹಾಗಿದ್ದರೆ, ಏನಿದು ಅಗ್ನಿಪಥ ಯೋಜನೆ? ಯಾರು ಅಗ್ನಿವೀರರು? ಇಲ್ಲಿದೆ ಮಾಹಿತಿ…
ಏನಿದು ಅಗ್ನಿಪಥ ಯೋಜನೆ?
ಸರಳವಾಗಿ ಹೇಳಬೇಕು ಎಂದರೆ, ಇದೊಂದು ಶಾರ್ಟ್ ಟರ್ಮ್ ಅವಧಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಅವಕಾಶ. 17.5-21 ವರ್ಷದೊಳಗಿನ ಸದೃಢ ಯುವಕ/ಯುವ ತಿ ಯರು ಈ ಅಗ್ನಿಪಥ ಯೋಜನೆಗೆ ಸೇರಬಹುದು. ಒಮ್ಮೆ ಇಲ್ಲಿಗೆ ಸೇರಿದ ಮೇಲೆ ಸೇನಾಪಡೆಯಲ್ಲಿ ಸೇರಿ ಕೆಲಸ ಮಾಡಬಹುದು. 4 ವರ್ಷ ಮುಗಿದ ಬಳಿಕ ಶೇ. 25ರಷ್ಟು ಮಂದಿಯನ್ನು ಸೇನೆ ಹಾಗೆಯೇ ಉಳಿಸಿಕೊಂಡು ಉಳಿದವರನ್ನು ಬೇರೆ ಉದ್ಯೋಗಕ್ಕಾಗಿ ವಾಪಸ್ ಕಳುಹಿಸಬಹುದು.
ಯಾರ ಆಲೋಚನೆ ಇದು?
ಈ ಬಗ್ಗೆ ತುಂಬಾ ಹಿಂದೆಯೇ ಚರ್ಚೆಗಳಾಗಿದ್ದವು. ಹಾಗೆಯೇ ಇದು 3 ಪಡೆಗಳ ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ಅವರು ಹರಿಯಬಿಟ್ಟಿದ್ದ ಯೋಚನೆ. ಜಗತ್ತಿನ ಉಳಿದ ದೇಶಗಳಲ್ಲಿಯೂ ಇಂಥದ್ದೊಂದು ಯೋಜನೆಗಳಿದ್ದು ಇದನ್ನು ಇಲ್ಲೂ ಬಳಸಿ ಕೊಳ್ಳಬಹುದು ಎಂದಿದ್ದರು.
ಅಗ್ನಿಪಥದ ಉದ್ದೇಶವೇನು?
ಪ್ರಮುಖವಾಗಿ ಹೇಳಬೇಕು ಎಂದರೆ, ಕಳೆದ 3 ವರ್ಷ ಗಳಿಂದ ಸೇನೆಯಲ್ಲಿ ಸರಿಯಾಗಿ ನೇಮಕಾತಿ ಆಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಕೊರೊನಾ. ಹೀಗಾಗಿ ಕೇಂದ್ರ ಸರಕಾರವೇ ಸಂಸತ್‌ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ಸೇನೆಯಲ್ಲಿ 9,362 ಮಂದಿ ಸೇನಾಧಿ ಕಾರಿಗಳು ಮತ್ತು 1,13,362 ಯೋಧರ ಕೊರತೆ ಇದೆ.
ಹಿಂದೆ ಯಾವಾಗ ಈ ಬಗ್ಗೆ ಚಿಂತಿಸಲಾಗಿತ್ತು?
ಜಗತ್ತಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದು ಎರಡನೇ ಮಹಾಯುದ್ಧದ ವೇಳೆಯಲ್ಲಿ ಮೊಳೆತ ಆಲೋಚನೆ. ಆಗ ಬಹುತೇಕ ರಾಷ್ಟ್ರಗಳು, ಯೋಧರ ಕೊರತೆಯಿಂದಾಗಿ, ಶಾರ್ಟ್ ಟರ್ಮ್ಗೆ ಯುವಕರನ್ನು ನೇಮಕ ಮಾಡಿದ್ದವು. ಅನಂತರದಲ್ಲಿ 1962ರ ಚೀನ ಯುದ್ಧದ ವೇಳೆಯೂ ಭಾರತದಲ್ಲಿ ಇಂಥದ್ದೊಂದು ಆಲೋಚನೆ ಮೂಡಿ ಆಗ 10 ವರ್ಷಗಳ ಅವಧಿಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದು ಈಗಲೂ ಮುಂದುವರಿದಿದೆ.
ಭಾರೀ ಪ್ರಮಾಣದ ವೆಚ್ಚ ಕಡಿತ
ಸದ್ಯ ಸೇನಾಧಿಕಾರಿಗಳು ಮತ್ತು ಯೋಧರಿಗೆ ನೀಡುವ ವೇತನ, ಪಿಂಚಣಿ, ತರಬೇತಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಭಾರೀ ಪ್ರಮಾಣದ ವೆಚ್ಚವಾಗುತ್ತಿದೆ. ಅದರಲ್ಲೂ ನಿವೃತ್ತಿ ವೇತನ ರೂಪದಲ್ಲೇ ಹೆಚ್ಚಾಗಿ ಹಣವನ್ನು ವಿನಿಯೋಗಿಸಲಾಗುತ್ತಿದೆ. ಅಗ್ನಿಪಥ ಯೋಜನೆ ಮೂಲಕ ಈ ವೆಚ್ಚಕ್ಕೆ ಕೊಕ್ಕೆ ಹಾಕಬಹುದು. ಅಂದರೆ 10 ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯ ನಿರ್ವಹಿ ಸುವ ಯೋಧರೊಬ್ಬರಿಗೆ ಒಟ್ಟಾರೆಯಾಗಿ 5.12 ಕೋಟಿ ರೂ. ವೆಚ್ಚವಾಗುತ್ತದೆ. ಹಾಗೆಯೇ 14 ವರ್ಷದ ಅವಧಿಯ ಯೋಧ ರಿಗೆ 6.93 ಕೋಟಿ ರೂ. ವೆಚ್ಚವಾಗುತ್ತದೆ. ಇದರಲ್ಲಿ ವೇತನ, ಪಿಂಚಣಿ ಸೇರಿ ಎಲ್ಲ ರೀತಿಯ ಹಣ ವೆಚ್ಚವಾಗಿರುತ್ತದೆ. ಆದರೆ ಅಗ್ನಿಪಥದಲ್ಲಿ 80ರಿಂದ 85 ಲಕ್ಷ ರೂ.ಗಳ ವೆಚ್ಚವಾಗುತ್ತದೆ.
ಸೇವಾ ನಿಧಿ ಗೌರವ
4 ವರ್ಷಗಳಿಗಾಗಿ ಸೇನೆ ಸೇರುವ ಪ್ರತಿಯೊಬ್ಬರಿಗೂ ಸೇವಾ ನಿಧಿ ಗೌರವ ಸಿಗಲಿದೆ. ಅಂದರೆ, ಪ್ರತಿ ತಿಂಗಳೂ ಇದರಲ್ಲಿ ಆಯ್ಕೆಯಾಗುವ ಯೋಧ ಶೇ.30ರಷ್ಟು ಪರಿಹಾರ ಹಣವನ್ನು ಸೇವಾನಿಧಿಗಾಗಿ ಇಡಬೇಕು. ಇಷ್ಟೆ ಹಣವನ್ನು ಸರಕಾರವೂ ಭರಿಸುತ್ತದೆ. ನಾಲ್ಕು ವರ್ಷಗಳ ಬಳಿಕ ಸೇನೆ ಬಿಡುವ ಯೋಧನಿಗೆ ಒಟ್ಟು 11.71 ಲಕ್ಷ ರೂ. ಪರಿಹಾರ ಸಿಕ್ಕಂತಾಗುತ್ತದೆ. ಇದರಲ್ಲಿ ಇನ್ನೊಂದು ಆಯ್ಕೆಯೂ ಇದೆ. ಸೇನೆ ತೊರೆಯುವಾಗ ಯೋಧ ಬೇಕಾದರೆ ಕೇವಲ 1 ಲಕ್ಷ ರೂ.ಗಳನ್ನು ಪಡೆದು, ಉಳಿದ ಹಣವನ್ನು ತಮ್ಮ ಸ್ವಂತ ಉದ್ಯೋಗ ಅಥವಾ ಇನ್ನಾವುದೇ ಚಟುವಟಿಕೆಗಾಗಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡರೆ ಅದಕ್ಕೆ ಗ್ಯಾರಂಟಿ ರೂಪದಲ್ಲಿ ಇಡಲಾಗುತ್ತದೆ.
ವಿಮೆಯ ಉಪಯೋಗ
ಒಂದು ವೇಳೆ ಈ 4 ವರ್ಷದ ಅವಧಿಯಲ್ಲಿ ಯೋಧನೇನಾದರೂ ಹುತಾತ್ಮನಾದರೆ, ಆಗ 48 ಲಕ್ಷ ರೂ.ಗಳನ್ನು ವಿಮಾ ಪರಿಹಾರ ಮೊತ್ತವಾಗಿ ನೀಡಲಾಗುತ್ತದೆ. ಇದರ ಜತೆಗೆ ಇನ್ನೂ 44 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಂದು ವೇಳೆ ಗುಣ ಪಡಿಸಲಾಗದ ಗಾಯಗಳೇನಾದರೂ ಆದರೆ ಆಗಿರುವಗಾಯದ ಆಧಾರದಲ್ಲಿ 44 ಲಕ್ಷ ಅಥವಾ 25 ಲಕ್ಷ ಅಥವಾ 15 ಲಕ್ಷ ರೂ. ನೀಡಲಾಗುತ್ತದೆ. ಇದೆಲ್ಲದರ ಜತೆಗೆ, ನಾಲ್ಕು ವರ್ಷ ಸೇವೆ ಸಲ್ಲಿಸಿರುವ ಕುರಿತಂತೆ ಪ್ರಮಾಣಪತ್ರವನ್ನೂ ಸೇನೆ ನೀಡುತ್ತದೆ. ಇದರಿಂದ ಬೇರೆ ಕಡೆಗಳಲ್ಲಿ ಕೆಲಸ ಸಿಗಲು ಸಹಕಾರವಾಗುತ್ತದೆ.
ಯೋಜನೆಗೆ ಸ್ವಾಗತ
ಅಗ್ನಿಪಥ ಯೋಜನೆಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ಕಾರ್ಪೊ ರೇಟ್ ಜಗತ್ತು ಸ್ವಾಗತಿಸಿದೆ. ಸೇನಾ ಅಧಿಕಾರಿಯೊಬ್ಬರ ಪ್ರಕಾರ, ಈ ಯೋಜನೆಗೆ ಸೇರುವ ಅಗ್ನಿವೀರರು ತಮಗೆ 26 ವರ್ಷಗಳಾ ಗುವಷ್ಟರಲ್ಲಿ ನಿವೃತ್ತಿಯಾಗುತ್ತಾರೆ. ಅಲ್ಲದೆ ಆಗ ಬೇರೆ ಕಡೆ ಕೆಲಸಕ್ಕೆ ಸೇರಿದರೂ, ಅವರಿಂದ ಹೆಚ್ಚು ಉತ್ಪಾದನೆ ಪಡೆಯಬಹುದು ಎಂದಿದ್ದಾರೆ. ಹಾಗೆಯೇ ಪ. ಬಂಗಾಲ ಮತ್ತು ಸಿಕ್ಕಿಂನ ಎನ್‌ಸಿಸಿ ಘಟಕ ಇದನ್ನು ಸ್ವಾಗತಿಸಿದ್ದು, ಬಹಳಷ್ಟು ಮಂದಿ ದೀರ್ಘಾವಧಿ ವರೆಗೆ ಸೇವೆ ಸಲ್ಲಿಸಲು ಉತ್ಸುಕರಾಗಿರುವುದಿಲ್ಲ. ಆದರೆ ಶಾರ್ಟ್ ಟರ್ಮ್ನಲ್ಲಿ ಸೇವೆ ಸಲ್ಲಿಸಿ ವಾಪಸ್ ಬರಲು ಇಚ್ಛೆ ಹೊಂದಿ ರುತ್ತಾರೆ. ಅವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದಿದೆ.
ಇದರಿಂದ ಉಪಯೋಗವಾಗುತ್ತದೆಯೇ?
ಸೇನಾ ಅಧಿಕಾರಿಗಳ ಪ್ರಕಾರ, ಈ ಯೋಜನೆಯಿಂದ ಉಪಯೋಗವೇ ಹೆಚ್ಚು. ಅಂದರೆ
1. ಸಶಸ್ತ್ರ ಸೇನಾಪಡೆಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾದ ಬಳಿ ಹೊರಗೆ ಹೆಚ್ಚು ಉದ್ಯೋಗಾವಕಾಶಗಳು ಸಿಗುತ್ತವೆ.
2. ಭರ್ತಿ ಮಾಡಿಕೊಂಡ ಶೇ.25 ಮಂದಿಯನ್ನು ಮುಂದಿನ 15 ವರ್ಷಗಳ ಅವಧಿಗೆ ಶಾಶ್ವತವಾಗಿ ಉಳಿಸಿಕೊಳ್ಳಬಹುದು.
3. ನಾಲ್ಕು ವರ್ಷ ಮುಗಿಸಿ ಹೊರಬರುವವರಿಗೆ ಸೇನೆಯೇ ಸಹಕಾರ ನೀಡಿ ಉದ್ಯೋಗ ಸಿಗಲು ಅವಕಾಶ ಮಾಡಿಕೊಡುತ್ತದೆ.
4. ಅಗ್ನಿವೀರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಲವಾರು ಕಾರ್ಪೋರೇಟ್‌ಗಳು, ದೊಡ್ಡ ಎಂಎನ್‌ಸಿಗಳು ಆಸಕ್ತಿ ವ್ಯಕ್ತ ಪ ಡಿ ಸಿವೆ.
5. ಶಿಸ್ತುಬದ್ಧ ಜೀವನ ಮತ್ತು ಪರ್ಸನಲ್ ಗ್ರೋಥ್ ಹೆಚ್ಚಿಸುವಲ್ಲಿ ಸೇನೆಯ ತರಬೇತಿ ನೆರವಾಗುತ್ತದೆ.
6. ಸೇನೆಯಲ್ಲಿನ ಉತ್ತಮ ತರಬೇತಿಯಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ.
7. ಅಗ್ನಿವೀರರಿಗೆ 30ರಿಂದ 40 ಸಾವಿರ ವೇತನ, 48 ಲಕ್ಷ ರೂ.ಗಳ ವಿಮೆ ಸಿಗುತ್ತದೆ.
8. ನಾಲ್ಕು ವರ್ಷಗಳ ಸೇವೆ ಮುಗಿಸಿ ವಾಪಸ್ ಹೋಗುವಾಗ 11.71 ಲಕ್ಷ ರೂ.ಗಳ ಸೇವಾ ನಿಧಿ ಪ್ಯಾಕೇಜ್ ನೀಡಲಾಗುತ್ತದೆ. ಆದರೆ, ಇದರಲ್ಲಿ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ವೇತನ ಇರುವುದಿಲ್ಲ.
ವಿದ್ಯಾರ್ಹತೆ ಏನು?
1. ಸಾಮಾನ್ಯ ಕರ್ತವ್ಯದ ಯೋಧ: 10ನೇ ತರಗತಿ ಶೇ.45 ಅಂಕಗಳೊಂದಿಗೆ ಪಾಸ್ ಆಗಿರಬೇಕು.
2. ತಾಂತ್ರಿಕ ಯೋಧ: 10+2, ವಿಜ್ಞಾನ ವಿಷಯದಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯ ಓದಿರಬೇಕು.
3. ಯೋಧ ಕ್ಲರ್ಕ್/ಸ್ಟೋರ್ ಕೀಪರ್ ತಾಂತ್ರಿಕ: 10+2. ಯಾವುದೇ ವಿಷಯದಲ್ಲಿ ಪಿಯುಸಿ ಮುಗಿಸಿರಬೇಕು. ಒಟ್ಟಾರೆ ಶೇ.50 ಮತ್ತು ಈ ನಾಲ್ಕು ವಿಷಯಗಳಲ್ಲಿ ತಲಾ ಶೇ.40ರಷ್ಟು ಅಂಕ ಪಡೆದಿರಬೇಕು.
4. ಯೋಧ ನರ್ಸಿಂಗ್ ಸಹಾಯಕ: 10+2, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಇಂಗ್ಲಿಷ್ ಓದಿರಬೇಕು. ಒಟ್ಟಾರೆ ಶೇ.50 ಮತ್ತು ವಿಷಯಗಳಲ್ಲಿ ಶೇ.40 ಅಂಕ ಪಡೆದಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.