ಲಡಾಖ್‌ನಲ್ಲಿ ಅನಾವರಣವಾಗಲಿದೆ ದೇಶದ ಮೊದಲ ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ
Team Udayavani, Sep 10, 2022, 6:55 AM IST
ಕೆಲವು ದಶಕಗಳ ಹಿಂದೆ “ಬೆಳಕಿನ ಮಾಲಿನ್ಯ’ ಇಷ್ಟು ಘೋರವಾಗಿರದೆ ಇದ್ದಾಗ ರಾತ್ರಿಯಾದರೆ ಕತ್ತಲು ಅಂದರೆ ಕಗ್ಗತ್ತಲು. ಆಗ ವಿಶಾಲ ಆಕಾಶವನ್ನು ನಿಟ್ಟಿಸಿದರೆ ಫಳಫಳ ನಕ್ಷತ್ರಗಳು ಕಣ್ಣನ್ನು ತುಂಬುತ್ತಿದ್ದವು. ಈಗ ರಾತ್ರಿಯಿಂದ ಬೆಳಗಿನ ತನಕವೂ ಎಲ್ಲೆಲ್ಲೂ ದೀಪಗಳು ಉರಿಯುತ್ತವೆ. ಗಾಢ ಕತ್ತಲಿನ ಸೌಂದರ್ಯವನ್ನು ಆಸ್ವಾದಿಸುವ ಅವಕಾಶವೇ ಇಲ್ಲ. ಇದು ಆಕಾಶ ವೀಕ್ಷಣೆ, ಬಾಹ್ಯಾಕಾಶ ಸಂಶೋಧನೆಗೂ ಅಡ್ಡಿಯಾಗಿದೆ. ಹೀಗಾಗಿಯೇ ಜಗತ್ತಿನ ವಿವಿಧ ದೇಶಗಳಲ್ಲಿ ಒಂದಷ್ಟು ವಿಶಾಲ ಪ್ರದೇಶವನ್ನು ಬೆಳಕಿನ ಮಾಲಿನ್ಯದಿಂದ ಮುಕ್ತಗೊಳಿಸಿ “ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ’ (ಡಿಎಸ್‌ಆರ್) ಎಂದು ಘೋಷಿಸಲಾಗಿದೆ. ಭಾರತದಲ್ಲಿ ಲಡಾಖ್‌ನ ಹಾನ್ಲೆಯಲ್ಲಿ ಮೊತ್ತಮೊದಲ ಬಾರಿಗೆ ಇಂತಹ ಪ್ರದೇಶವನ್ನು ರೂಪಿಸಲಾಗುತ್ತಿದೆ. ಈ ಬಗೆಗಿನ ವಿವರಗಳು ಇಲ್ಲಿವೆ.
ಮಣಿಪಾಲ: ಈ ವರ್ಷಾಂತ್ಯದೊಳಗೆ ಲಡಾಖ್‌ನ ಹಾನ್ಲàಯಲ್ಲಿ ದೇಶದ ಮೊದಲ “ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ’ ಅನಾವರಣಗೊಳ್ಳಲಿದೆ. ಇದು ಬಾಹ್ಯಾಕಾಶ ವಿಜ್ಞಾನ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ ಎಂದರೇನು?
“ನಕ್ಷತ್ರಗಳು ಹೊಳೆಯುವ ವಿಶಾಲ ಆಕಾಶದರ್ಶನ ಸಾಧ್ಯವಾಗುವ ಮತ್ತು ರಾತ್ರಿಯ ಶುದ್ಧ ವಾತಾವರಣವನ್ನು ಅನುಭವಿಸಲು ಸಾಧ್ಯಮಾಡಿಕೊಡಬಲ್ಲ ಸಾಕಷ್ಟು ವಿಸ್ತೀರ್ಣವುಳ್ಳ (700 ಚದರ ಕಿ.ಮೀ. ಅಥವಾ ಸುಮಾರು 1,73,000 ಎಕರೆಗಳು) ಖಾಸಗಿ ಅಥವಾ ಸರಕಾರಿ ಸ್ಥಳವಾಗಿದ್ದು, ಇದನ್ನು ಅದರ ವೈಜ್ಞಾನಿಕ, ನೈಸರ್ಗಿಕ, ಶೈಕ್ಷಣಿಕ, ಸಾಂಸ್ಕೃತಿಕ ಪರಂಪರೆಗಾಗಿ ಮತ್ತು ಸಾರ್ವಜನಿಕರ ಮನಸ್ಸಂತೋಷಕ್ಕಾಗಿ ಸಂರಕ್ಷಿಸಿರಬೇಕು’ ಎಂಬುದಾಗಿ ಅಂತಾರಾಷ್ಟ್ರೀಯ ಕಗ್ಗತ್ತಲಿನ ಆಕಾಶ ಸಂಘಟನೆ (ಐಡಿಎಸ್‌ಎ) “ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ’ವನ್ನು ವ್ಯಾಖ್ಯಾನಿಸಿದೆ.
ಏನೇನು ಅಗತ್ಯ?
-ಯಾವುದೇ ಬಗೆಯ ಬೆಳಕಿನ ಮಾಲಿನ್ಯದಿಂದ ಮುಕ್ತವಾದ ಕೇಂದ್ರ ಪ್ರದೇಶ
-ಇಲ್ಲಿಂದ ದೂರದರ್ಶಕಗಳ ಮೂಲಕ ಆಕಾಶ ವೀಕ್ಷಣೆ ಸಾಧ್ಯವಾಗುವಂತಿರಬೇಕು
ಬೇರೆ ಎಲ್ಲೆಲ್ಲಿ ಇವೆ?
-ಯುನೈಟೆಡ್ ಕಿಂಗ್‌ಡಮ್ – 7
-ಫ್ರಾನ್ಸ್ – 4
-ಅಮೆರಿಕ, ಜರ್ಮನಿ – ತಲಾ 2
-ನ್ಯೂಜಿಲ್ಯಾಂಡ್, ಕೆನಡಾ, ನಮೀಬಿಯಾ, ಆಸ್ಟ್ರೇಲಿಯಾ – ತಲಾ 1
ಲಡಾಖ್ ಯಾಕೆ?
– ಹಾನ್ಲೆ ಡಾರ್ಕ್ ಸ್ಕೈ ರಿಸರ್ವ್ (ಎಚ್‌ಡಿಎಸ್‌ಆರ್) ಲಡಾಖ್‌ನ ಛಂಗ್ತಂಗ್ ಸಂರಕ್ಷಿತ ವನ್ಯಧಾಮದ ಒಳಗೆ ಸ್ಥಾಪನೆಗೊಳ್ಳಲಿದೆ
– ಇದು ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿದೆ
-ದೂರದರ್ಶಕಗಳ ಮೂಲಕ ಆಕಾಶ ವೀಕ್ಷಣೆಗೆ ಹೇಳಿಮಾಡಿಸಿದಂತಿದೆ
– ಸಮುದ್ರ ಮಟ್ಟದಿಂದ ತುಂಬ ಎತ್ತರದಲ್ಲಿದೆ, ಜನಸಂಖ್ಯೆ ಕಡಿಮೆ, ಶುಷ್ಕ ಭೂಪ್ರದೇಶ ಆಗಿರುವುದರಿಂದ ದೀರ್ಘಕಾಲಿಕ ಆಕಾಶ ವೀಕ್ಷಣಾಲಯ ಸ್ಥಾಪನೆಗೂ ಸೂಕ್ತವಾಗಿದೆ
-ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಂಗಳೂರಿನ ಭಾರತೀಯ ಖಭೌತಶಾಸ್ತ್ರ ಸಂಸ್ಥೆ (ಐಐಎ)ಗಳು ಈ ಕೇಂದ್ರ ಸ್ಥಾಪನೆಯಲ್ಲಿ ಕೈಜೋಡಿಸಲಿವೆ
– ಹಾನ್ಲೆಯಲ್ಲಿ ಈಗಾಗಲೇ ಇರುವ ಭಾರತೀಯ ಬಾಹ್ಯಾಕಾಶ ವೀಕ್ಷಣಾ ಲಯ (ಐಎಒ)ದ ನಿರ್ವಹಣೆ ಯನ್ನು ಐಐಎ ಮಾಡುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.