30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ
ಈ ಪ್ರಮಾಣದ ಅರಣ್ಯವನ್ನು ತೆರವುಗೊಳಿಸಿ ನಗರ ನಿರ್ಮಿಸಲಾಗುತ್ತದೆ.
Team Udayavani, Jan 21, 2022, 1:03 PM IST
ಮಹತ್ವದ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಿಸಲು ಹೊರಟಿದೆ. ಈಗಿರುವ ಜಕಾರ್ತದಿಂದ 2,000 ಕಿ.ಮೀ. ದೂರದಲ್ಲಿರುವ ನುಸಂತರಾಗೆ ಸ್ಥಳಾಂತರಿಸಲು ನಿರ್ಧರಿಸಿದೆ. 2022ರಿಂದಲೇ ಮೊದಲ ಹಂತದ ಕಾಮಗಾರಿ ಶುರುವಾಗಲಿದೆ. ದಿಢೀರನೇ ರಾಜ ಧಾನಿ ಬದಲಿಸಲು ಕಾರಣವೇನು ಎಂಬುದರ ಕುರಿತ ಒಂದು ನೋಟ ಇಲ್ಲಿದೆ.
ರಾಜಧಾನಿ ಸ್ಥಳಾಂತರ ಏಕೆ? ಸರಿಯಾಗಿ ಇನ್ನು ಮೂವತ್ತು ವರ್ಷಗಳಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ. ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮಟ್ಟ ಏರಲಿದೆ. ಇದಕ್ಕೆ ಬಲಿ ಯಾಗುವ ಮೊದಲ ನಗರ ಎಂಬ ಕುಖ್ಯಾತಿಗೂ ಜಕಾರ್ತಾ ಪಾತ್ರವಾಗಲಿದೆ. ಮುಂದಿನ ದಿನಗ ಳಲ್ಲಿ ಇಲ್ಲಿ ಹೆಚ್ಚೆಚ್ಚು ಪ್ರವಾಹಗಳೂ ಆಗಲಿವೆ. ಅಲ್ಲದೆ ಈ ನಗರದ ಮಾಲಿನ್ಯ ಪ್ರಮಾಣವೂ ಹೆಚ್ಚಾಗಿಯೇ ಇದೆ. ಈ ನಗ ರದ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ
ಈ ಬದಲಾವಣೆ ಮಾಡಲಾಗುತ್ತಿದೆ.
ಇಡೀ ನಗರವೇ ಶಿಫ್ಟ್ ಆಗುತ್ತಾ? ಇಲ್ಲ, ಇಡೀ ಜಕಾರ್ತವೇ ಅಲ್ಲಿಗೆ ಹೋಗುವುದಿಲ್ಲ. ಆಡಳಿತಾ ತ್ಮಕ ಕಟ್ಟಡಗಳಷ್ಟೇ ನುಸುಂತರಾಗೆ ವರ್ಗವಾಗಲಿವೆ. ಉಳಿದಂತೆ ವಾಣಿಜ್ಯ ಮತ್ತು ಹಣಕಾಸು ರಾಜಧಾನಿಯಾಗಿ ಜಕಾರ್ತಾ ಉಳಿಯಲಿದೆ.
ಹೊಸ ಪ್ರದೇಶ ಹೇಗಿದೆ? ಕಾಳಿ ಮಂಥನ ಎಂಬ ದೊಡ್ಡ ಕಾಡುಗಳಿರುವ ದ್ವೀಪವೊಂದರಲ್ಲಿ ಹೊಸ ರಾಜಧಾನಿ ನಿರ್ಮಾಣವಾಗಲಿದೆ. ಇದಕ್ಕೆ ಅಲ್ಲಿನ ಅಧ್ಯಕ್ಷರು ನುಸುಂತಾರಾ ಎಂಬ ಹೆಸರಿಟ್ಟಿ ದ್ದಾರೆ. ಈ ಪ್ರದೇಶ ಅತ್ಯುತ್ತಮ ನೈಸರ್ಗಿಕ ಸಂಪನ್ಮೂಲವನ್ನೂ ಹೊಂದಿದೆ. ರಾಜಧಾನಿ ಬದ ಲಾವಣೆ ಮಾಡುತ್ತಿರುವ ಮೊದಲ ದೇಶವೇ? ಇಲ್ಲ, ಈಗಾಗಲೇ ಬ್ರೆಜಿಲ್, ಮ್ಯಾನ್ಮಾರ್, ಈಜಿಪ್ಟ್, ಕಜ ಕಿಸ್ಥಾನ್ ದೇಶಗಳು ರಾಜಧಾನಿ ಬದಲಾವಣೆ ಮಾಡಿಕೊಂಡಿವೆ.
ಹೊಸ ರಾಜಧಾನಿಯ ವಿಸ್ತಾರವೇನು?
ಒಟ್ಟಾರೆ 256,143 ಹೆಕ್ಟೇರ್ ಪ್ರದೇಶದಲ್ಲಿ ಹೊಸ ನಗರ ನಿರ್ಮಾಣಗೊಳ್ಳಲಿದೆ. ಈ ಪ್ರಮಾಣದ ಅರಣ್ಯವನ್ನು ತೆರವುಗೊಳಿಸಿ ನಗರ ನಿರ್ಮಿಸಲಾಗುತ್ತದೆ.
ಎಷ್ಟು ವೆಚ್ಚವಾಗಬಹುದು?
ಸರಿ ಸುಮಾರು 32 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗುವ ನಿರೀಕ್ಷೆ ಇದೆ. ಒಟ್ಟಾರೆ ಐದು ಹಂತಗಳಲ್ಲಿ ಈ ರಾಜಧಾನಿಯ ನಿರ್ಮಾಣವಾಗಲಿದ್ದು, 2022ರಲ್ಲೇ ಮೊದಲ ಹಂತ ಶುರುವಾ ಗಲಿದೆ
2050ಕ್ಕೆ ಏನಾಗಲಿದೆ?
ಜಾಗತಿಕ ಹಣಕಾಸು ಸಂಸ್ಥೆಯ ವರದಿ ಪ್ರಕಾರ, 2050ರ ವೇಳೆಗೆ ಜಾವಾ ದ್ವೀಪದಲ್ಲಿರುವ ಜಕಾರ್ತಾದ ಉತ್ತರ ಭಾಗದ ಶೇ.95ರಷ್ಟು ಭೂಮಿ ಸಮುದ್ರದಲ್ಲಿ ಮುಳುಗಡೆಯಾಗಲಿದೆ. ಇಲ್ಲಿ ಒಂದು ಕೋಟಿ ಜನ ಸಂಖ್ಯೆ ಇದ್ದು, ಇವರೆಲ್ಲರೂ ಕಷ್ಟಕ್ಕೆ ಸಿಲುಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.