ಹಮಾರ ಬಜಾಜ್
Team Udayavani, Feb 13, 2022, 6:10 AM IST
ನೀವೆಲ್ಲರೂ ಡಾ| ರಾಜಕುಮಾರ್ ನಟನೆಯ ಎರಡು ಕನಸು ಸಿನೆಮಾದ “ಎಂದು ನಿನ್ನ ನೋಡುವೆ, ಎಂದು ನಿನ್ನ ಕಾಣುವೆ’ ಎಂಬ ಹಾಡು ನೋಡಿಯೇ ಇರುತ್ತೀರಿ. ಇದರಲ್ಲಿ ಅಣ್ಣಾವ್ರು ತಮ್ಮ ಮಡದಿ ನೋಡಲೆಂದು ಬಜಾಜ್ ಚೇತಕ್‌ನಲ್ಲಿ ಈ ಹಾಡು ಹೇಳಿಕೊಂಡು ಹೋಗುತ್ತಿರುತ್ತಾರೆ…
ಈ ದೃಶ್ಯವನ್ನು ಈಗ ನೆನಪಿಸಿಕೊಂಡರೂ ಹಳೇ ಬಜಾಜ್ ಚೇತಕ್ ಹಾಗೇ ಮನಸ್ಸಿನಲ್ಲಿ ಬಂದು ಹೋಗುತ್ತದೆ. ಹೌದು, ಅದು 1970 ಮತ್ತು 80ರ ದಶಕ. ಆ ಜಮಾನದಲ್ಲಿ ದೇಶದಲ್ಲಿ ಇದ್ದ ಒಟ್ಟಾರೆ ಬೈಕ್‌ಗಳಲ್ಲಿ ಅರ್ಧದಷ್ಟು ಬಜಾಜ್ ಚೇತಕ್ ಇದ್ದವು. ಮಧ್ಯಮ ವರ್ಗದ ಸಂಚಾರ ನಾಡಿಯಾಗಿತ್ತು ಆ ಸ್ಕೂಟರ್. ಆಗಿನಿಂದಲೂ ಇದು ಹಮಾರ ಬಜಾಜ್ ಎಂದೇ ಪ್ರಸಿದ್ಧಿ. ಈ ಸ್ಕೂಟರ್ ಅನ್ನು ದೇಶದಲ್ಲಿ ಪರಿಚಯಿಸಿದ್ದವರು ರಾಹುಲ್ ಬಜಾಜ್. ಬಜಾಜ್ ಕಂಪೆನಿಯ ಮಾಲಕರು.
83 ವರ್ಷದ ರಾಹುಲ್ ಬಜಾಜ್, ಶನಿವಾರ ಪುಣೆಯ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ. 1938ರ ಜೂನ್ 30ರಂದು ಕಲ್ಕತ್ತಾದಲ್ಲಿ ಜನಿಸಿದ್ದ ರಾಹುಲ್ ಬಜಾಜ್, ಜಾಮ್ನಾಲಾಲ್ ಬಜಾಜ್ ಅವರ ಮೊಮ್ಮಗ. 1926ರಲ್ಲಿ ಜಾಮ್ನಾಲಾಲ್ ಬಜಾಜ್ ಅವರು ಬಜಾಜ್ ಕಂಪೆನಿಯನ್ನು ಸ್ಥಾಪಿಸಿದ್ದರು. 1942ರಲ್ಲಿ ಜಾಮ್ನಾಲಾಲ್ ಪುತ್ರ ಕಮಲ್‌ನಯನ್ ಬಜಾಜ್ ಅವರು ಬಜಾಜ್ ಗ್ರೂಪ್‌ನ ಮಾಲಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಕಮಲ್‌ನಯನ್ ಬಜಾಜ್ ಅವರ ಪುತ್ರ ರಾಹುಲ್ ಬಜಾಜ್.
ರಾಹುಲ್ ಬಜಾಜ್ ಅವರು, ದಿಲ್ಲಿಯ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ, ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದಿದ್ದರು. ಬಳಿಕ ಅಮೆರಿಕದಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಮುಗಿಸಿದ್ದರು. 1968ರಲ್ಲಿ ತಮ್ಮ ತಂದೆಯ ಅನಂತರ ರಾಹುಲ್ ಬಜಾಜ್ ಅವರೇ ಕಂಪೆನಿಯ ಸಿಇಒ ಹುದ್ದೆ ವಹಿಸಿಕೊಂಡರು.
1970 ಮತ್ತು 1980 ದಶಕಗಳು ಬಜಾಜ್ ಕಂಪೆನಿ ಪಾಲಿಗೆ ಸುವರ್ಣ ಕಾಲ. ತಮ್ಮ ತಂದೆಯ ಕಾಲದಲ್ಲಿ ಬಜಾಜ್ ಆಟೋ, ಬಜಾಜ್ ಎಲೆಕ್ಟ್ರಿಕಲ್ ಮತ್ತು ಬಜಾಜ್ ಸಿಮೆಂಟ್ ಕಂಪೆನಿಯನ್ನು ಆರಂಭಿಸಲಾಗಿತ್ತು. ಮೊದಲಿಗೆ ಇಟಲಿಯ ವಿಸ್ಪಾ ಕಂಪೆನಿ ಜತೆಗೂಡಿ ಬಜಾಜ್ ಸ್ಕೂಟರ್ ಅನ್ನು ಪರಿಚಯಿಸಲಾಗಿತ್ತು. ಆದರೆ 1970ರಲ್ಲಿ ಇಟಲಿಯ ವಿಸ್ಪಾದ ಕಂಪೆನಿ ಬಜಾಜ್‌ನ ಪರವಾನಿಗೆ ವಿಸ್ತರಿಸಲು ನಿರಾಕರಿಸಿತು. ಇದನ್ನೇ ಸವಾಲಾಗಿ ತೆಗೆದುಕೊಂಡ ರಾಹುಲ್ ಬಜಾಜ್ ಅವರು, ಭಾರತದಲ್ಲಿ ಬಜಾಜ್ ಚೇತಕ್ ಮತ್ತು ಸೂಪರ್ ಎಂಬ ಮಾಡೆಲ್‌ಗಳನ್ನು ಪರಿಚಯಿಸಿದರು.
ಬಜಾಜ್ ಚೇತಕ್ ಅಂತೂ 70 ಮತ್ತು 80ರ ದಶಕದಲ್ಲಿ ದೊಡ್ಡ ಮೋಡಿಯನ್ನೇ ಮಾಡಿದವು. ವಿಶೇಷವೆಂದರೆ, ಮದುವೆಯ ವೇಳೆ ವಧುವಿನ ಕಡೆಯವರು, ವರನಿಗೆ ಪ್ರೀತಿಯಿಂದ ಬಜಾಜ್ ಚೇತಕ್ ನೀಡುತ್ತಿದ್ದ ವಾಡಿಕೆಯೂ ಇತ್ತು. ಅಷ್ಟೇ ಅಲ್ಲ, ಮಕ್ಕಳಿಗೆ ಉಡುಗೊರೆಯಾಗಿ ಚೇತಕ್ ಅನ್ನೇ ನೀಡಲಾಗುತ್ತಿತ್ತು. ಈ ಪ್ರಮಾಣದಲ್ಲಿ ಈ ಸ್ಕೂಟರ್ ಪ್ರಸಿದ್ಧಿ ಪಡೆದುಕೊಂಡಿತ್ತು. ಹಾಗೆಯೇ ಬಜಾಜ್ ಗ್ರೂಪ್ ಕೂಡ ಬಿಲಿಯನೇರ್‌ಗಳ ಗುಂಪಿಗೆ ಸೇರಿತು.
ಆದರೆ 2001ರಲ್ಲಿ ಬಜಾಜ್ ಚೇತಕ್‌ಗೆ ದೊಡ್ಡ ಸವಾಲು ಎದುರಾಯಿತು. ವಿದೇಶಿ ಕಂಪೆನಿಗಳಾದ ಹೋಂಡಾ, ಯಮಹಾ, ಸುಜುಕಿ ಭಾರತಕ್ಕೆ ಪ್ರವೇಶಿಸಿದವು. ನಿಧಾನಗತಿಯಲ್ಲಿ ಚೇತಕ್ ಕೂಡ ಮೊದಲಿನ ಪ್ರಸಿದ್ಧಿ ಕಳೆದುಕೊಂಡಿತು. ಆದರೆ ಅನಂತರದ ದಿನಗಳಲ್ಲಿ ಬಜಾಜ್‌ಗೆ ಮತ್ತೆ ಸ್ಫೂರ್ತಿ ನೀಡಿದ್ದು ಬಜಾಜ್ ಪಲ್ಸರ್ ಬೈಕ್.
2008ರಲ್ಲಿ ಬಜಾಜ್ ಗ್ರೂಪ್ ಅನ್ನು ಮೂರು ಭಾಗಗಳನ್ನಾಗಿ ಮಾಡಲಾಯಿತು. ಅಂದರೆ ಬಜಾಜ್ ಆಟೋ, ಬಜಾಜ್ ಫೈನಾನ್ಸ್ ಮತ್ತು ಒಂದು ಹೋಲ್ಡಿಂಗ್ ಕಂಪೆನಿಯನ್ನಾಗಿ ಮಾಡಲಾಯಿತು. ಇದರ ಹೊಣೆಯನ್ನು ತಮ್ಮ ಪುತ್ರರಿಗೆ ವಹಿಸಿದರು.
ರಾಹುಲ್ ಬಜಾಜ್ ಎಂದರೆ, ಕಾರ್ಪೋರೆಟ್ ವಲಯದಲ್ಲಿ ನಿರ್ಭೀತ ವ್ಯಕ್ತಿ ಎಂದೇ ಕರೆಯುತ್ತಿದ್ದರು. ಯಾವ ವಿಚಾರಕ್ಕೂ ಅವರು ಹೆದರುತ್ತಿರಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಇದ್ದ ಲೈಸೆನ್ಸ್ ರಾಜ್ ಅನ್ನು ತೆಗೆಯುವಲ್ಲಿಯೂ ರಾಹುಲ್ ಬಜಾಜ್ ಅವರ ಪಾತ್ರ ದೊಡ್ಡದು. ಏಕೆಂದರೆ ವ್ಯಕ್ತಿಯೊಬ್ಬ ಸ್ಕೂಟರ್ ಖರೀದಿಸಿದ ಮೇಲೆ ಇದಕ್ಕೆ ಪರವಾನಿಗೆ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಅಷ್ಟೇ ಅಲ್ಲದೆ ಕೊರೊನಾ ಮೊದಲ ಅಲೆ ವೇಳೆ ಹೇರಲಾಗಿದ್ದ ಲಾಕ್‌ಡೌನ್ ವಿರುದ್ಧವೂ ಕಿಡಿಕಾರಿದ್ದಲ್ಲದೆ, ಈಗಿನ ಸರಕಾರದ ವಿರುದ್ಧವೂ ಟೀಕೆ ಮಾಡುತ್ತಿದ್ದರು.
ರಾಹುಲ್ ಬಜಾಜ್ ಅವರು 1986ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದರು. 2001ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ, 2006ರಲ್ಲಿ ರಾಜ್ಯಸಭೆಗೆ ಮಹಾರಾಷ್ಟ್ರದಿಂದ ಕಳುಹಿಸಲಾಗಿತ್ತು. 2005ರಲ್ಲಿ ಇವರು ಬಜಾಜ್ ಗ್ರೂಪ್‌ನ ಮುಖ್ಯಸ್ಥ ಸ್ಥಾನದಿಂದ ಇಳಿದರು. ಬಳಿಕ ಪುತ್ರ ರಾಜೀವ್ ಬಜಾಜ್ ಈ ಸ್ಥಾನ ವಹಿಸಿಕೊಂಡರು. ಕಳೆದ ವರ್ಷವಷ್ಟೇ ನಾನ್-ಎಕ್ಸಿಕ್ಯೂಟಿವ್ ನಿರ್ದೇಶಕ ಸ್ಥಾನದಿಂದಲೂ ಕೆಳಗಿಳಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.