ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ: ಸದಾ ಇರಲಿ ಹೊಸತನದ ತುಡಿತ
Team Udayavani, Oct 1, 2021, 6:30 AM IST
ವ್ಯಕ್ತಿಯೋರ್ವನಿಗೆ ವಯಸ್ಸಾಯಿತು ಎನ್ನುವುದರ ಹಿಂದೆ ಸಾವಿರ ಅರ್ಥಗಳಿರುತ್ತವೆ. ಬದುಕಿನ ಏರಿಳಿತಗಳಲ್ಲಿ ವಯಸ್ಸು ಎಂಬ ಚಕ್ರ ಸದಾ ಉರುಳುತ್ತಲೇ ಇರುತ್ತದೆ. ಹುಟ್ಟಿದ ಮೇಲೆ ವೃದ್ಧಾಪ್ಯ ಬರುವುದು ಶತಃಸಿದ್ಧ. ಹಾಗೆಂದು ವೃದ್ಧಾಪ್ಯವನ್ನು ಅಲಕ್ಷಿಸಲಾಗದು. ನಮ್ಮ ಬಾಲ್ಯದಲ್ಲಿ ಹೆತ್ತವರು ಹೇಗೆ ನಮಗೆ ಆಸರೆಯಾಗಿರುತ್ತಾರೋ ಹಾಗೆಯೇ ನಾವು ನಮ್ಮ ಹಿರಿಯರ ಸಂಧ್ಯಾಕಾಲದಲ್ಲಿ ಅವರಿಗೆ ಆಸರೆಯಾಗಬೇಕು. ಹಿರಿಯ ನಾಗರಿಕರ ಬಗೆಗೆ ವಹಿಸಬೇಕಾದ ಕಾಳಜಿಯ ಕುರಿತಂತೆ ಜನರಲ್ಲಿ ಅದರಲ್ಲೂ ಯುವಮನಸ್ಸುಗಳಲ್ಲಿ ಅರಿವು ಮೂಡಿಸಲು ಮತ್ತು ಹಿರಿಯ ನಾಗರಿಕರನ್ನು ಹೆಚ್ಚಾಗಿ ಕಾಡುವ ಒಂಟಿತನವನ್ನು ದೂರಮಾಡುವ ಉದ್ದೇಶದಿಂದ ಪ್ರತೀ ವರ್ಷ ಅ. 1ರಂದು ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ :
ಈ ವರ್ಷ “ಎಲ್ಲ ವಯಸ್ಸಿನವರಿಗೆ ಡಿಜಿಟಲ್ ಸಮಾನತೆ’ ಎಂಬ ಧ್ಯೇಯದೊಂದಿಗೆ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಹಿರಿಯ ನಾಗರಿಕರ ಸಹಿತ ಎಲ್ಲರೂ ಡಿಜಿಟಲ್ ಜಗತ್ತನ್ನು ಪ್ರವೇಶಿಸಲಿ ಎಂಬ ಅಶಯ ಇದರ ಹಿಂದಿದೆ. ಕೈಗಾರಿಕ ಕ್ರಾಂತಿ ಮತ್ತು ಡಿಜಿಟಲ್ ರಂಗದಲ್ಲಾಗುತ್ತಿರುವ ಬೆಳವಣಿಗೆಯಿಂದಾಗಿ ಸಮಾಜ ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ. ಸದ್ಯ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಜನರು ಆಫ್ಲೈನ್‌ನಲ್ಲಿದ್ದಾರೆ. ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳು (ಶೇ.87) ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ (ಶೇ.19) ನಡುವೆ ತಂತ್ರಜ್ಞಾನ ಬಳಕೆಯಲ್ಲಿ ತುಂಬಾ ಅಂತರವಿರುವುದು ಕಂಡುಬಂದಿದೆ.
ಇಂಟರ್‌ನ್ಯಾಶನಲ್ ಟೆಲಿಕಮ್ಯೂನಿಕೇಶನ್ ನಡೆಸಿದ ವರದಿ ಹೇಳುವ ಪ್ರಕಾರ ಇತರ ವ್ಯಕ್ತಿಗಳಿಗೆ ಹೋಲಿಸಿದರೆ ಮಹಿಳೆಯರು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಪ್ರಮಾಣದ ಅಸಮಾನತೆಯನ್ನು ಅನುಭವಿಸುತ್ತಿದ್ದಾರೆ. ಅವರು ತಂತ್ರಜ್ಞಾನಗಳಿಗೆ ಇನ್ನೂ ಹೊಂದಿಕೊಂಡಿಲ್ಲ ಮತ್ತು ಅದರ ಅವಕಾಶಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿಯೇ ಇಲ್ಲ. ಇಡೀ ಸಮಾಜವನ್ನು ಡಿಜಿಟಲ್ ಕ್ಷೇತ್ರದ ವ್ಯಾಪ್ತಿಯೊಳಗೆ ತರುವ ಜತೆಯಲ್ಲಿ ಹಿರಿಯ ನಾಗರಿಕರಿಗೆ ಡಿಜಿಟಲ್ ಸುರಕ್ಷೆ ಒದಗಿಸುವುದೂ ಸೇರಿದೆ.
ಆರೋಗ್ಯ ರಕ್ಷಣೆ :
ಹಿರಿಯ ನಾಗರಿಕರು ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಆರೋಗ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಕ್ರಿಯಾಶೀಲವಾಗಿರುವುದು ಅತೀ ಮುಖ್ಯ. ಯೋಗ, ವಾಕಿಂಗ್ ಅಥವಾ ಒಳಾಂಗಣ ಕ್ರೀಡೆಗಳನ್ನು ದೈನಂದಿನ ಹವ್ಯಾಸವಾಗಿಸಿಕೊಂಡರೆ ಉತ್ತಮ. ವೈಯಕ್ತಿಕ ಸ್ವತ್ಛತೆಗೆ ಆದ್ಯತೆ ನೀಡಿದಲ್ಲಿ ಕಾಯಿಲೆಯಿಂದ ದೂರವಿರಬಹುದು. ಸಮತೋಲಿತ ಆಹಾರ ಸೇವನೆ ಆರೋಗ್ಯ ರಕ್ಷಣೆಗೆ ಪೂರಕ. ಹಸುರು ತರಕಾರಿ, ಹಣ್ಣುಗಳ ಸೇವನೆ ಉಪಯುಕ್ತ.
ಕಾಲಕಾಲಕ್ಕೆ ವೈದ್ಯರ ಭೇಟಿ :
ನನಗೆ ವಯಸ್ಸಾಯಿತು, ಇನ್ನು ನಮ್ಮಿಂದೇನೂ ಆಗದು ಎಂಬ ಹತಾಶ ಭಾವನೆ ಸಲ್ಲದು. ಹೃದಯದ ಸಮಸ್ಯೆ ಅಥವಾ ಇನ್ನಿತರ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ, ಯಾವ ರೀತಿಯ ವ್ಯಾಯಾಮ ನಿಮಗೆ ಸೂಕ್ತ ಎಂಬುದನ್ನು ತಿಳಿದುಕೊಳ್ಳಿ. ವಯಸ್ಸು ಹೆಚ್ಚುತ್ತಾ ಹೋದಂತೆ ಹಲ್ಲಿನ ಸಮಸ್ಯೆ ಸಹಿತ ಮೌಖೀಕ ಅನಾರೋಗ್ಯಗಳು ಕಾಡುವುದು ಸಾಮಾನ್ಯ. ಅಷ್ಟು ಮಾತ್ರವಲ್ಲ ಆರೋಗ್ಯ ಸಂಬಂಧಿ ಬೇರೆ ಬೇರೆ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಆದರೆ ಎಲ್ಲವುಗಳಿಗೂ ಪರಿಹಾರವಿದೆ. ಹಾಗಾಗಿ ಯಾವುದಕ್ಕೂ ಹೆದರುವ ಅಗತ್ಯವಿಲ್ಲ.
ಸಕಾರಾತ್ಮಕ ಚಿಂತನೆ, ಹೊಸತನದತ್ತ ಒಲವು :
ಹಿರಿಯ ನಾಗರಿಕರಾದವರಿಗೆ ಆತ್ಮವಿಶ್ವಾಸವಿರಬೇಕು ಅಷ್ಟೇ. ಅವರ ಮನಃಸ್ಥಿತಿಯ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಸಕಾರಾತ್ಮಕ ಚಿಂತನೆಯಿಂದ ಆರೋಗ್ಯಪೂರ್ಣರಾಗಿರಲು ಸಾಧ್ಯ. ಸಾಧ್ಯವಾದಷ್ಟು ಹೊಸ ಹೊಸ ವಿಷಯ ತಿಳಿದುಕೊಂಡಾಗ ಜೀವನ ಸಂತಸದಿಂದಿರಲು ಸಹಕಾರಿ. ಮನಸ್ಸನ್ನು ಒತ್ತಡಮುಕ್ತವಾಗಿಸಿ, ಹಗುರವಾಗಿಸಿಕೊಂಡು ಚಟುವಟಿಕೆಯಿಂದಿದ್ದಾಗ ಒಂಟಿತನದ ಸಮಸ್ಯೆ ಕಾಡಲಾರದು.
- 1950-2010ರ ನಡುವೆ ವಿಶ್ವದಾದ್ಯಂತ ಮನುಷ್ಯರ ಜೀವಿತಾವಧಿ 46ರಿಂದ 68 ವರ್ಷಗಳಿಗೆ ಏರಿತು.
- 2019ರಲ್ಲಿ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 703 ಮಿಲಿಯನ್ ವ್ಯಕ್ತಿಗಳಿದ್ದರು.
- ಪೂರ್ವ ಏಷ್ಯಾ ಮತ್ತು ಆಗ್ನೆಯ ಏಷ್ಯಾದ ಪ್ರದೇಶಗಳಲ್ಲಿ ಅತೀ ಹೆಚ್ಚು ವೃದ್ಧರಿದ್ದಾರೆ.(261 ಮಿಲಿಯನ್), ಅನಂತರ ಯುರೋಪ್ ಮತ್ತು ಉತ್ತರ ಅಮೆರಿಕ (200 ದಶಲಕ್ಷಕ್ಕೂ ಹೆಚ್ಚು)
- ಮುಂದಿನ ಮೂರು ದಶಕಗಳಲ್ಲಿ ವಿಶ್ವದಾದ್ಯಂತ ವಯಸ್ಸಾದವರ ಸಂಖ್ಯೆ ದ್ವಿಗುಣಗೊಳ್ಳಲಿದೆ.
- ವಿಶ್ವಸಂಸ್ಥೆಯ ಪ್ರಕಾರ 2050ರ ವೇಳೆಗೆ ವಿಶ್ವದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಬಿಲಿಯನ್‌ಗಳಿಗೇರಲಿದೆ. 2015ರಲ್ಲಿ ಇದು 900ಮಿಲಿಯನ್ ಆಗಿತ್ತು. ಸದ್ಯ ವಿಶ್ವದಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 125 ಮಿಲಿಯನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.