ನೋವು ಪರಿಹರಿಸುವ ವೈದ್ಯ ವೃತ್ತಿಯ ನೋವು ನಿಮಗೆ ಎಷ್ಟು ಗೊತ್ತು?

ಇಂದು ರಾಷ್ಟ್ರೀಯ ವೈದ್ಯರ ದಿನ

Team Udayavani, Jul 1, 2019, 5:00 AM IST

international-doctors-day

ರೋಗಿಗಳಿಗೆ ಕ್ಲಪ್ತ ಸಮಯದ ಊಟ, ನಿಯಮಿತವಾದ ನಿದ್ದೆ, ವಿಶ್ರಾಂತಿ, ವಿರಾಮದ ಬಗ್ಗೆ ಸದಾ ಸಲಹೆ ನೀಡುವ ವೈದ್ಯರು ಮಾತ್ರ ಹೊತ್ತುಗೊತ್ತಿಲ್ಲದ ಊಟ, ನಿದ್ದೆ, ಬಿಡುವಿಲ್ಲದ ದುಡಿಮೆ, ಮನೋರಂಜನೆಯಿಲ್ಲದ ಒತ್ತಡದ ಕೆಲಸ, ಕುಟುಂಬಕ್ಕೆ ಸಮಯ ಕೊಡಲಾಗದ ದುಃಸ್ಥಿತಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳ ಬೇಕಾಗುತ್ತದೆ. ನಿಜ ಹೇಳಬೇಕೆಂದರೆ ವೈದ್ಯರ ಬದುಕು ಆದಿಯಿಂದ ಅಂತ್ಯದವರೆಗೂ ಒತ್ತಡದಿಂದ ಕೂಡಿರುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ 1882, ಜುಲೆ„ 1ರಂದು ಜನಿಸಿ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಸ್ವಾತಂತ್ರೊéàತ್ತರ ಭಾರತದ ಏಳಿಗೆಗೆ ಶ್ರಮಿಸಿದ ಮಹಾಮಾನವತಾವಾದಿ , ಅಪ್ರತಿಮ ವೈದ್ಯ, ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ಡಾ|ಬಿಧಾನಚಂದ್ರ ರಾಯ್‌ (ಡಾ. ಬಿ.ಸಿ. ರಾಯ್‌)ರವರ ಜನುಮದಿನ ಇಂದು. ಅವರು ವೈದ್ಯ ಪರಿವಾರಕ್ಕೆ ಮಾದರಿಯಾಗುವ ಮೇರು ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ನೆನಪಿಗಾಗಿ ಜು.1ನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸಲಾಗುತ್ತಿದೆ. ವೈದ್ಯಕೀಯ ಲೋಕ ಹಾಗೂ ವೈದ್ಯರ ಸ್ಥಿತಿಗತಿಯ ಕುರಿತು ಅವಲೋಕನ ನಡೆಸುವುದು ಈ ಸಂದರ್ಭದಲ್ಲಿ ಪ್ರಸ್ತುತವಾಗಬಹುದು.

ರೋಗಿಗಳಿಗೆ ಕ್ಲಪ್ತ ಸಮಯದ ಊಟ, ನಿಯಮಿತವಾದ ನಿದ್ದೆ, ವಿಶ್ರಾಂತಿ, ವಿರಾಮದ ಬಗ್ಗೆ ಸದಾ ಸಲಹೆ ನೀಡುವ ವೈದ್ಯರು ಮಾತ್ರ ಹೊತ್ತುಗೊತ್ತಿಲ್ಲದ ಊಟ, ನಿದ್ದೆ, ಬಿಡುವಿಲ್ಲದ ದುಡಿಮೆ, ಮನೋರಂಜನೆಯಿಲ್ಲದ ಒತ್ತಡದ ಕೆಲಸ, ಕುಟುಂಬಕ್ಕೆ ಸಮಯ ಕೊಡಲಾಗದ ದುಃಸ್ಥಿತಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳ ಬೇಕಾಗುತ್ತದೆ. ಇವೆಲ್ಲದರ ಜೊತೆಗೆ ವೃತ್ತಿಯಲ್ಲಿ ಸ್ಥಿರತೆ ಕಂಡುಕೊಳ್ಳುವ ಒತ್ತಡ, ಗಳಿಸಿದ ಹೆಸರನ್ನು ಉಳಿಸಿ ಬೆಳೆಸಿಕೊಳ್ಳುವ ಒತ್ತಡ, ಅದೆಲ್ಲದರ ಜತೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಗಳು ಮತ್ತು ಅವರ ಸಂಬಂಧಿ ಕರಿಂದ ಮಾನ, ಪ್ರಾಣ, ಆಸ್ತಿಪಾಸ್ತಿಗಳನ್ನು ಉಳಿಸಿಕೊಳ್ಳುವ ಒತ್ತಡ. ಮಡದಿ ಮಕ್ಕಳಿಗೆ ಸಮಯ ಕೊಡಲಾಗದೆ ಚಡಪಡಿಸುವ, ಅವಹೇಳನಕ್ಕೆ ಗುರಿಯಾಗುವ ಒತ್ತಡ, ಹೀಗೆ ವೈದ್ಯರ ಬದುಕು ಬಹುತೇಕ ಒತ್ತಡದಿಂದಲೇ ನಡೆಯುತ್ತಿರುತ್ತದೆ.

ಸ್ವಾತಂತ್ರಾéನಂತರ ಆಧುನಿಕ ವೈದ್ಯರ ಅರ್ಪಣಾ ಭಾವದ ಸೇವೆ, ವಿವಿಧ ವೈಜ್ಞಾನಿಕ ಆವಿಷ್ಕಾರಗಳು, ವೈದ್ಯಲೋಕದ ಕ್ಷಿಪ್ರಗತಿಯ ಬೆಳವಣಿಗೆಗಳಿಂದ ಜನಸಾಮಾನ್ಯರ ಜೀವಿತಾವ ಧಿಯು ಸರಾಸರಿ ಗಣನೀಯವಾಗಿ ಏರಿಕೆಯಾಗಿದೆ. ಇಂತಹ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿ.

ಡಾ| ಬಿ.ಸಿ. ರಾಯ್‌ ಜನಿಸಿ, ಪ್ರಜ್ವಲಿಸಿದ ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವೈದ್ಯ ಲೋಕವನ್ನೇ ಬೆಚ್ಚಿಬೀಳಿಸಿದೆ. ವೈದ್ಯರ ಮೇಲಿನ ಹಲ್ಲೆಗಳು ದೇಶವ್ಯಾಪಿಯಾಗಿ ಸಾಮಾನ್ಯವಾಗಿರುವುದು ಸಮಾಜಕ್ಕೆ ಮಾರಕ ಮತ್ತು ಗಂಡಾಂತರ. ಎಲ್ಲೋ ಅವಘಡದಲ್ಲಿ ಮೃತಪಟ್ಟು ಆಸ್ಪತ್ರೆಗೆ ಬಂದ ವ್ಯಕ್ತಿಗೆ ಚಿಕಿತ್ಸೆ ಮಾಡಿದ ವೈದ್ಯರ ಮೇಲೆ ಹಲ್ಲೆ, ಮಾರಕ ವ್ಯಾಧಿಯಿಂದ ರೋಗಿ ಮೃತಪಟ್ಟಾಗ ಹಗಲಿರುಳು ಶ್ರಮಿಸಿದ ವೈದ್ಯರನ್ನೆ ಕೊಲೆಗಾರರನ್ನಾಗಿ ಬಿಂಬಿಸುವುದು ಇತ್ಯಾದಿ ಸಾಮಾನ್ಯವಾಗಿದೆ.

ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿಯ ಅಧಃಪತನದಿಂದ ವೈದ್ಯರಿಗೆ ಮಾತ್ರ ನಷ್ಟವಲ್ಲ. ಇದು ಇಡೀ ಮಾನವ ಸಂಕುಲಕ್ಕೆ ತುಂಬಲಾರದ ನಷ್ಟ. ಅಂತಿಮವಾಗಿ ಇದಕ್ಕೆ ಹೆಚ್ಚಿನ ಬೆಲೆ ತೆರಬೇಕಾದವರು ಜನಸಾಮಾನ್ಯರೇ ಆಗಿರುತ್ತಾರೆ. ಚಿಕಿತ್ಸೆ ನೀಡುವ ವೈದ್ಯನೇ ಆತಂಕ ಪರಿಸ್ಥಿತಿಯಲ್ಲಿದ್ದರೆ ರೋಗಿಗಳನ್ನು, ರೋಗಿಗಳ ಬಳಗದವರನ್ನು ಸಮರ್ಪಕವಾಗಿ ಸಂತೈಸಲು ಸಾಧ್ಯವಿಲ್ಲ.

ವೈದ್ಯ ದಿನಾಚರಣೆಯ ಈ ಹೊಸ್ತಿಲಲ್ಲಿ ಜನಸಾಮಾನ್ಯರಿಗೆ ಸಂದೇಶ ನೀಡುವುದಿದ್ದರೆ, ವೈದ್ಯರು ನಿಮ್ಮಂತೆ ಹುಲು ಮಾನವರು, ದೇವರಲ್ಲ. ಅವರು ರೋಗವನ್ನು ಗೆಲ್ಲಬಲ್ಲರೇ ಹೊರತು ನೈಸರ್ಗಿಕ ಸಾವನ್ನಲ್ಲ. ಸಾಮಾಜಿಕ ಜಾಲತಾಣಗಳನ್ನು ವೈದ್ಯರ ನಿಂದನೆಗೆ ಉಪಯೋಗಿಸಿಕೊಳ್ಳುವ ಪ್ರವೃತ್ತಿ ಸಾಮಾಜಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸಮಂಜಸವಲ್ಲ.

ವೈದ್ಯರಿಗೆ, ವೈದ್ಯ ಸಂಸ್ಥೆಗಳಿಗೆ ಸೂಕ್ತ ರಕ್ಷಣೆ, ಹಲ್ಲೆಕೋರರಿಗೆ ಸೂಕ್ತವಾದ ಕಠಿನ ಶಿಕ್ಷೆ ನೀಡಬೇಕು. ಸರಕಾರವು ಆರೋಗ್ಯ ಯೋಜನೆಗಳನ್ನು ರೂಪಿಸುವಾಗ ವೈದ್ಯರ ಹಿತಾಸಕ್ತಿಗಳಿಗೆ ಸೂಕ್ತ ಬೆಲೆ ಕೊಡಬೇಕು. ಸಾಮಾಜಿಕ ಜಾಲತಾಣಗಳಿಂದ ಗಳಿಸಿದ ಅಲ್ಪಜ್ಞಾನದಿಂದ ವೈದ್ಯರ ಅನುಭವ ವನ್ನು ಅಳೆಯುವ, ಸಂಶಯಿಸುವ, ಹಿಂಸಿಸುವ ಜನಸಾಮಾನ್ಯರ ಪ್ರವೃತ್ತಿಗೆ ತಿಲಾಂಜಲಿಯಿರಲಿ. ಒಟ್ಟಾರೆ ರೋಗಿ ಮತ್ತು ವೈದ್ಯರ ಸಂಬಂಧ ಹಿಂದಿನಂತೆ ಪ್ರಾಂಜಲವಾಗಿರಬೇಕು.

ಡಾ| ಬಿ.ಸಿ. ರಾಯ್‌ ಆದರ್ಶಗಳು ಮೇಳೈಸಲಿ
ಸರಳ ಮತ್ತು ಉದಾತ್ತ ಜೀವನಕ್ಕೆ ಖ್ಯಾತರಾಗಿದ್ದ ಡಾಕ್ಟರ್‌ ಡಾ| ಬಿಧನ್‌ಚಂದ್ರ ರಾಯ್‌. ಬಡವರ ಪರವಾಗಿ, ನೊಂದ ಜೀವಗಳ ಸಾಂತ್ವ ನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಓರ್ವ ದಾರ್ಶನಿಕ. ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆಯ ಅರ್ಥವನ್ನು ಬದುಕಿನ ಉದ್ದಕ್ಕೂ ಜೀವಂತವಾಗಿರಿಸಿಕೊಂಡವರು.

ಹಲವು ಉಚಿತವಿತ್ತ ಸಾಧಕ
ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಬಹಳ ಪ್ರಭಾವಿ ತರಾಗಿದ್ದ ಅವರು ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರು. ಬಂಗಾಲ ದ ಕೋಲ್ಕತಾದಲ್ಲಿ ಆಸ್ಪತ್ರೆಯನ್ನು ಕಟ್ಟಿದ್ದರು. ಗಾಂಧೀಜಿ ಅವರ ಆಶ ಯದಂತೆ 1948ರಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿಯಾದ ಬಳಿಕ ಹಲವು ಆಸ್ಪತ್ರೆ ಗಳನ್ನು ತೆರೆದಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ಧಾರೆ ಎರೆದ ಮಹಾ ನುಭಾವ. 1962ರ ಜುಲೈ 1ರಂದು ವಿಧಿವಶರಾದರು.

ಡಾ| ಬಿಧನ್‌ಚಂದ್ರ ರಾಯ್‌ ಅವರ ಅಪ್ರತಿಮ ಸೇವೆಗಾಗಿ ಭಾರತ ಸರಕಾರ 1961ರಲ್ಲಿ ‘ಭಾರತ ರತ್ನ’ ನೀಡಿ ಗೌರವಿಸಿತ್ತು. 1976ರಿಂದ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ‘ಬಿ.ಸಿ.ರಾಯ್‌ ಪ್ರಶಸ್ತಿ’ಯನ್ನು ಆರಂಭಿಸಲಾಯಿತು. ಇದು ವೈದ್ಯಕೀ ಯ ಕ್ಷೇತ್ರದ ಪರಮೋಚ್ಚ ಪ್ರಶಸ್ತಿಯೂ ಹೌದು.

ಭಾರತದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಕೆಲವು ರಾಜ್ಯಗಳಲ್ಲಿ 4 ಸಾವಿರ ಮಂದಿಗೆ ಒಬ್ಬರು ವೈದ್ಯರು ಇದ್ದಾರೆ. ಭಾರತದಲ್ಲಿ ಅಂದಾಜು 10 ಲಕ್ಷಕ್ಕಿಂತ ಅಧಿಕ ವೈದ್ಯರು ಇದ್ದು ಅದರಲ್ಲಿ ಸುಮಾರು 8 ಲಕ್ಷ ವೈದ್ಯರು ಮಾತ್ರ ಸಕ್ರಿಯರಾಗಿದ್ದಾರೆ.

ಕೇರಳದಲ್ಲಿ ಹೆಚ್ಚು ಡಾಕ್ಟರ್‌ಗಳು
ಕೇರಳ ರಾಜ್ಯದಲ್ಲಿ ಮಾತ್ರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್‌ಗಳು ಇದ್ದಾರೆ. ವರ್ಷದ ಹಿಂದೆ 500 ಜನರಿಗೆ ಒಬ್ಬ ಡಾಕ್ಟರ್‌ ಇದ್ದ ರಾಜ್ಯ ಕೇರಳ. ಇದೀಗ ಪರಿಸ್ಥಿತಿ ಬದಲಾಗುತ್ತಿದ್ದು, ಪ್ರತಿ ವರ್ಷ 3,000 ಎಂಬಿಬಿಎಸ್‌ ಪದವೀಧರರು ಕ್ಷೇತ್ರಕ್ಕೆ ಬರುತ್ತಿದ್ದಾರೆ. 2018ರ ಅಂಕಿ ಅಂಶದ ಪ್ರಕಾರ ಕೇರಳದಲ್ಲಿ 70 ಸಾವಿರ ವೈದ್ಯರು ಸೇವೆಯಲ್ಲಿದ್ದಾರೆ.

ಅಪವಾದದಿಂದ ಹೊರ ಬರಲಿ
ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಕ್ರಾಂತಿಗಳು, ಆವಿಷ್ಕಾರ ನಡೆದಿವೆ. ಪ್ರಾಣಕ್ಕೆ ಕುತ್ತು ತರುವ ಹೊಸ ರೋಗಗಳು ಹುಟ್ಟಿಕೊಂಡಾಗ ಅದಕ್ಕೆ ಪ್ರತಿಯಾಗಿ ಔಷಧಗಳನ್ನು ಕಂಡು ಹಿಡಿಯಲಾಗುತ್ತದೆ. ಆದರೆ ರೋಗಿ ಮತ್ತು ವೈದ್ಯರ ನಡುವಿನ ಭಾವನಾತ್ಮಕ ಸಂಬಂಧಗಳು ಮಾತ್ರ ಆರೋಗ್ಯಯುತವಾಗಿಲ್ಲ. ಲಕ್ಷಾಂತರ ರೂಪಾಯಿಗಳನ್ನು ಆಸ್ಪತ್ರೆಯಲ್ಲಿ ವ್ಯಯಿಸಿದ ಬಳಿಕವೂ ಜೀವ ಉಳಿಸಲು ಕಷ್ಟವಾಗುತ್ತಿದೆ. ಇದು ಆಕ್ರೋಶದ ಮಾತುಗಳಿಗೂ ಕಾರಣವಾಗಿದೆ. ವೈದ್ಯಕೀಯ ವೃತ್ತಿಗೆ ಡಾ| ಬಿಧನ್‌ಚಂದ್ರ ರಾಯ್‌ ಅವರ ಆದರ್ಶಗಳು ಮಾದರಿಯಾಗಲಿ.

– ಡಾ| ಹೇಮಂತ ಕುಮಾರ್‌ ಸಾಸ್ತಾನ

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.