ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಅಕ್ಷರ ಜ್ಞಾನದಿಂದ ಸಶಕ್ತ ಸಮಾಜ
Team Udayavani, Sep 8, 2022, 6:20 AM IST
ಒಂದು ದೇಶದ ಸಾಕ್ಷರತೆಯ ಪ್ರಮಾಣ ಆ ದೇಶದ ಶ್ರೀಮಂತಿಕೆಯನ್ನು ತೋರಿಸುತ್ತದೆ. “ಶಿಕ್ಷಣವು ಜಗತ್ತನ್ನು ಬದಲಾಯಿಸ ಬಹುದಾದಂತಹ ಪ್ರಬಲವಾದ ಅಸ್ತ್ರ ವಾಗಿದೆ’ ಎನ್ನುವ ನೆಲ್ಸನ್ ಮಂಡೇಲಾ ಅವರ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಸಾಕ್ಷರತೆಯ ಅಗತ್ಯ, ಮಹತ್ವ, ಮತ್ತದರ ಪ್ರಯೋಜನಗಳೇನು? ಎನ್ನುವು ದನ್ನು ಸಾರಲು ಪ್ರತೀ ವರ್ಷ ಸೆಪ್ಟಂಬರ್ 8ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತಾ ಬರ ಲಾಗಿದೆ. ಈ ಮೂಲಕ ಪ್ರತೀ ವ್ಯಕ್ತಿ, ಸಮು ದಾಯ ಮತ್ತು ಸಮಾಜಕ್ಕೆ ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತ ಬರಲಾಗಿದೆ.
ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಓದಲು ಹಾಗೂ ಬರೆಯಲು ತಿಳಿದಿರ ಬೇಕು ಎನ್ನುವುದೇ ವಿಶ್ವ ಸಾಕ್ಷರತಾ ದಿನದ ಆಶಯ. ಇಂದಿಗೂ ಶಿಕ್ಷಣ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಸದ್ಯ ಸಾಕ್ಷರತೆಯ ನಿರೂಪಣೆಯೂ ಬದಲಾ ಗಿದೆ. ಕೊರೊನಾ ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದೆ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸುಮಾರು 24 ಮಿಲಿಯನ್ ವಿದ್ಯಾರ್ಥಿ ಗಳಲ್ಲಿ 11 ಮಿಲಿಯನ್ ಬಾಲಕಿಯರು ಹಾಗೂ ಯುವತಿಯರು ಔಪಚಾರಿಕ ಶಿಕ್ಷಣಕ್ಕೆ ಇನ್ನೂ ಹಿಂದಿರುಗಿಲ್ಲ.
ಸಾಕ್ಷರತಾ ದಿನವನ್ನು ಯುನೆಸ್ಕೋ ಆರಂಭಿಸಿ 5 ದಶಕಗಳು ಕಳೆದರೂ ಪ್ರತಿ ಯೊಬ್ಬ ವ್ಯಕ್ತಿಗೂ ಶಿಕ್ಷಣ ದೊರಕುವಂತೆ ಮಾಡಲು ಇಂದಿಗೂ ಸಾಧ್ಯವಾಗದಿರು ವುದು ಮಾತ್ರ ವಿಪರ್ಯಾಸ. ಸದ್ಯ ವಿಶ್ವದಲ್ಲಿ 750 ಮಿಲಿಯನ್ ಜನರಿಗೆ ಓದಲು ಕೂಡ ಬರುವುದಿಲ್ಲ ಎಂದರೆ ಸೋಜಿಗವೇ ಸರಿ.
ಅಂತಾರಾಷ್ಟ್ರೀಯ
ಸಾಕ್ಷರತಾ ದಿನದ ಹಿನ್ನೆಲೆ
1965ರಲ್ಲಿ ಇರಾನ್‌ನ ಟೆಹರಾನ್‌ನಲ್ಲಿ “ಅನಕ್ಷರತೆಯ ನಿರ್ಮೂಲನೆ’ ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಾಕ್ಷರತಾ ದಿನದ ಕುರಿತ ಕಲ್ಪನೆ ಮೂಡಿಬಂತು. ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಮಹತ್ತರ ಉದ್ದೇಶ ಮತ್ತು ಗುರಿಯೊಂದಿಗೆ ಯುನೆಸ್ಕೋ ನೇತೃತ್ವದಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಪ್ರತೀ ವರ್ಷ ಸೆಪ್ಟಂಬರ್ 8ರಂದು ಆಚರಿಸಲು 1966ರಲ್ಲಿ ನಿರ್ಧರಿಸಲಾಯಿತು.
ಭಾರತದಲ್ಲಿ ಸಾಕ್ಷರತೆ
2001ರಲ್ಲಿ ಶೇ. 12ರಷ್ಟಿದ್ದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 74ಕ್ಕೆ ಏರಿಕೆಯಾಗಿದೆ. ಆದರೂ ವಿಶ್ವದಲ್ಲಿನ ಅನಕ್ಷರಸ್ಥರ ಸಂಖ್ಯೆಯನ್ನು ಪರಿಗಣಿಸಿದಾಗ ಭಾರತ ಸಾಗಬೇಕಾದ ಹಾದಿ ಇನ್ನೂ ದೂರವಿದೆ. ಭಾರತವು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ಕೊಟ್ಟರೂ ಇನ್ನೂ ಗ್ರಾಮೀಣ ಭಾಗಗಳಲ್ಲಿ ಹಲವಾರು ಕಾರಣಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಡತನ, ಮಾಹಿತಿಯ ಕೊರತೆ, ಸಮಾನತೆ ಮೊದಲಾದ ಕಾರಣಗಳಿಂದಾಗಿ ಮಕ್ಕಳು ಶಿಕ್ಷಣದಿಂದ ದೂರವುಳಿಯುವಂತಾಗಿದೆ. ಇನ್ನು ವಯಸ್ಕ ಅನಕ್ಷರಸ್ಥರ ಸಂಖ್ಯೆ ಗಣನೀಯವಾಗಿಯೇ ಇದೆ. ಸಾಕ್ಷರತೆಯ ಪ್ರಮಾಣದಲ್ಲಿ ಕೇರಳ, ಲಕ್ಷದ್ವೀಪ, ಮಿಜೋರಾಂ, ತ್ರಿಪುರಾ, ಗೋವಾ ರಾಜ್ಯಗಳು ಮೊದಲ ಐದು ಸ್ಥಾನಗಳಲ್ಲಿದ್ದರೆ ಬಿಹಾರ, ಅರುಣಾಚಲ ಪ್ರದೇಶ, ರಾಜಸ್ಥಾನ, ಝಾರ್ಖಂಡ್, ಆಂಧ್ರಪ್ರದೇಶ ರಾಜ್ಯಗಳು ಕೊನೆಯ ಐದು ಸ್ಥಾನಗಳಲ್ಲಿವೆ.
ಆಚರಣೆ ಉದ್ದೇಶ
ಸಾಕ್ಷರತೆಯನ್ನು ಉತ್ತೇಜಿಸಲು ಹಾಗೂ ಸಾಮಾಜಿಕ ಮತ್ತು ಮಾನವ ಅಭಿವೃದ್ಧಿಗಾಗಿ ಜನರಿಗೆ ತಮ್ಮ ಹಕ್ಕುಗಳನ್ನು ತಿಳಿಸಲು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಸಾಕ್ಷರತಾ ದಿನದ ಆಚರಣೆಯು ಜನರನ್ನು ನಿರಂತರ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತದೆ.
2022ರ ವಿಶ್ವ ಸಾಕ್ಷರತಾ ದಿನದ ಧ್ಯೇಯ
“ಸಾಕ್ಷರತೆಯ ಕಲಿಕಾ ಸ್ಥಳಗಳನ್ನು ಪರಿವರ್ತಿಸುವುದು’ ಎನ್ನುವ ಧ್ಯೇಯ ದೊಂದಿಗೆ ಈ ಬಾರಿಯ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗು ತ್ತಿದೆ. ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಹೊಸ ಕಲಿಕೆಯ ಸ್ಥಳಗಳನ್ನು ನಿರ್ಮಿಸಲು ತಂತ್ರಗಳನ್ನು ರೂಪಿಸಲು ಯುನೆಸ್ಕೋ ನಿರ್ಧರಿಸಿದೆ.
ಆಚರಣೆಯ ವಿಧಾನಗಳು
-ಸಮುದಾಯ ಗ್ರಂಥಾಲಯಗಳನ್ನು ನಿರ್ಮಿಸುವುದು.
-ವಯಸ್ಕರು, ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು.
-ಡಿಜಿಟಲ್ ಅಥವಾ ಸಾಮಾಜಿಕ ಜಾಲತಾಣಗಳ ಅರಿವಿಲ್ಲದವರಿಗೆ ಡಿಜಿಟಲ್ ಸಾಕ್ಷರತ ಕಾರ್ಯಾಗಾರ ಏರ್ಪಡಿಸುವುದು.
-ಜನರಿಗೆ ಜಾಗೃತಿ ಮೂಡಿಸಲು ಸಾಕ್ಷರತೆಯ ಕೌಶಲಗಳನ್ನು ಬಳಸುವುದು.
ನಾವೇನು ಮಾಡಬಹುದು?
-ಪುಸ್ತಕಗಳನ್ನು ಸಂಗ್ರಹಿಸಿ ಅಗತ್ಯವಿದ್ದವರಿಗೆ ನೀಡಬಹುದು.
-ಅಗತ್ಯವಿದ್ದವರಿಗೆ ಓದಲು ಹಾಗೂ ಬರೆಯಲು ಕಲಿಸಬಹುದು.
-ಸಾಕ್ಷರತಾ ಚಾರಿಟಿಗೆ ದಾನ ನೀಡಬಹುದು.
-ಸಾಕ್ಷರತಾ ಸಂಸ್ಥೆಗಳೊಂದಿಗೆ ಕೈಜೋಡಿಸಬಹುದು.
-ಅಗತ್ಯವಿದ್ದವರಿಗೆ ಪುಸ್ತಕ, ಸಾಮಗ್ರಿಗಳನ್ನು ನೀಡುವುದು.
-ಗ್ರಾಮೀಣ ಪ್ರದೇಶಗಳ ಜನರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿ ಹೇಳುವುದು.
ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ದೇಶ- ಫಿನ್‌ಲ್ಯಾಂಡ್
ಕಡಿಮೆ ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ದೇಶ- ದಕ್ಷಿಣ ಸುಡಾನ್
2021ರಲ್ಲಿ ಭಾರತದ ಸಾಕ್ಷರತೆ ಪ್ರಮಾಣ- ಶೇ. 74.04
ಪುರುಷರ ಸಾಕ್ಷರತಾ ಪ್ರಮಾಣ- ಶೇ.82.14, ಮಹಿಳೆಯರು- ಶೇ.65.46
ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ರಾಜ್ಯ -ಕೇರಳ (ಶೇ.93.91 )
ಅತೀ ಕಡಿಮೆ ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ರಾಜ್ಯ- ಬಿಹಾರ (ಶೇ.63.82)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.