ಸ್ವಾವಲಂಬನೆಗೊಂದು ದಿನ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ
Team Udayavani, Mar 8, 2020, 7:15 AM IST
ಮಾರ್ಚ್ 8ನ್ನು ಮಹಿಳೆಯ ಹಕ್ಕು ಮತ್ತು ಸ್ಥಾನಮಾನವನ್ನು ಗುರುತಿಸುವ ದಿನವೆಂದು ಆಚರಿಸಲಾಗುತ್ತಿದೆ. ಈ ದಿನ ಮಹಿಳೆಗೆ ತನ್ನನ್ನು ತಾನು ಅನಾವರಣಗೊಳಿಸಿ ಕೊಳ್ಳಲು, ತನ್ನ ಹೆಜ್ಜೆಯನ್ನು ಗುರುತಿಸಲು ಸಿಗುತ್ತಿರುವ ಅವಕಾಶವೂ ಹೌದು. ಮಹಿಳೆಯ ನೈಜ ಸಶಕ್ತೀಕರಣವೆಂದರೆ ಅವಳ ಪ್ರಗತಿಯನ್ನು ಒಪ್ಪಿಕೊಂಡು ಸಹಕರಿಸುವಂಥ ಸಮಾಜದ ನಿರ್ಮಾಣವಾಗುವುದೇ ಆಗಿದೆ. ಪುರುಷರಿಗೆಂದೇ ಮೀಸಲಾದ ಹಲವು ಕ್ಷೇತ್ರಗಳಲ್ಲೂ ಈಗ ಭಾರತೀಯ ಮಹಿಳೆ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ಗಡಿ ಕಾಯುವುದರಿಂದ ಹಿಡಿದು ಕ್ಷಿಪಣಿ ಉಡಾಯಿಸುವ ತನಕ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಟ್ಟಿದ್ದಾಳೆ. ಆಕೆಗೆ ಸಾಮಾಜಿಕ ಮಾಧ್ಯಮಗಳ ಆವಿಷ್ಕಾರವೂ ಹಕ್ಕಿನ ಹೋರಾಟಕ್ಕೆ ಇನ್ನಷ್ಟು ಬಲತುಂಬಿದೆ.
ಈ ಆಧುನಿಕ ಯುಗದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ದಿಟ್ಟವಾಗಿ ವೃತ್ತಿ ಮತ್ತು ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿದ್ದಾಳೆ. ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ. ಬಾಳೆಂದರೆ ನೋವು ನಲಿವುಗಳ ಸಮ್ಮಿಲನ ಎಂಬುದನ್ನು ಆಕೆಯ ನಡತೆ ಮತ್ತು ಸಾಧನೆ ಮೂಲಕ ಸಾರಿ ಹೇಳುತ್ತಿದ್ದಾಳೆ.
ಈ ದಿನಕ್ಕೆ ಆ ಒಂದು ಕಾರಣ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ. ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ಕ್ಲಾರಾ ಜೆಟ್ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ ಇದಾಗಿದೆ. ಆದರೆ 1909ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಸಮಾಜವಾದಿ-ರಾಜಕೀಯ ಕಾರ್ಯಕ್ರಮ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮಹತ್ವದ ಮಜಲು. ಅಂದಿನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಜಾಗತಿಕವಾಗಿ ಹೊಸ ಆಯಾಮ ಲಭಿಸಿ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಗುತ್ತಿದೆ.
ಹಿನ್ನೆಲೆ
1977ರಲ್ಲಿ ವಿಶ್ವಸಂಸ್ಥೆಯಿಂದ ಅಳವಡಿಸಿಕೊಳ್ಳಲಾದ ಈ ದಿನಾಚರಣೆಯ ಇತಿಹಾಸ ಪುಟಗಳು ನಮ್ಮನ್ನು 20ನೇ ಶತಮಾನದಲ್ಲಿ ಉತ್ತರ ಅಮೆರಿಕ ಹಾಗೂ ಯುರೋಪ್‌ಗ್ಳಲ್ಲಿ ಪ್ರಾರಂಭವಾದ ಕಾರ್ಮಿಕ ಚಳುವಳಿಗೆ ಕರೆದೊಯ್ಯುತ್ತವೆ. ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳುವುದಕ್ಕೂ ಮುನ್ನ ಮಹಿಳಾ ದಿನವನ್ನು ಸಮಾಜವಾದಿ ಹಾಗೂ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತಿತ್ತು. ಈ ಹಿಂದೆ ಇದನ್ನು ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತಿತ್ತು.
ಸಮಾನವಾಗಿ ಉತ್ತೇಜಿಸುವ ಉದ್ದೇಶ ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಸಹಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯದ ಕುರಿತು ಅರಿವು ಮೂಡಿಸುವುದಕ್ಕೂ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.
ಕನಸಿನ ಹೆಜ್ಜೆಗೆ ಗೆಜ್ಜೆ ಕಟ್ಟಿದ ಸಂಧ್ಯಾ ಕಿಣಿ
ಅನನ್ಯ ಕೈರುಚಿಯೊಂದಿಗೆ ಮನೆಯಡುಗೆ ಮೂಲಕ ಮನ ಗೆಲ್ಲುತ್ತಲೇ ಉದ್ಯಮಿಯಾಗಿ ಬದಲಾದ ಸಾಧಕಿ ಸಂಧ್ಯಾ ಕಿಣಿ. ಮೂಲ ದಕ್ಷಿಣ ಕನ್ನಡ. ಪ್ರಸ್ತುತ ಗೋವಾದ ಪಣಜಿ ನಿವಾಸಿ. ಜಾಹೀರಾತು ಕಂಪೆನಿಯೊಂದರ ಶಾಖಾ ಮುಖ್ಯಸ್ಥರಾಗಿ 12 ವರ್ಷ ಸೇವೆ ಸಲ್ಲಿಸಿ ಒಂದು ದಿನ ಮಕ್ಕಳ ಆರೈಕೆಗೆಂದು ತೊರೆದು ಬಂದರು. ಅನಂತರ ತಮ್ಮದೇ ಪಾಕ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ, ಸೂಪರ್ ಮಾರ್ಕೆಟ್ ಕ್ಷೇತ್ರವನ್ನೂ ಪ್ರವೇಶಿಸಿದರು. ಕರ್ನಾಟಕವಲ್ಲದೇ, ಗೋವಾ, ದಿಲ್ಲಿ ಎನ್ನುತ್ತಾ ದೇಶ ಮತ್ತು ವಿದೇಶಗಳಲ್ಲಿ ತಿರುಗಾಡಿ ಸ್ವಾವಲಂಬನೆಯ ಹಾದಿಗೆ ಹೆಗ್ಗುರುತಾದರು.
ಎಳೆಯ ವಯಸ್ಸಿನಲ್ಲೇ ಮದುವೆ. ವಿದ್ಯಾಭ್ಯಾಸ ಮುಂದುವರಿಸಲು ಹಣದ ಕೊರತೆ ಅಡ್ಡಗಾಲಾದರೂ ಗೃಹ ವಿಜ್ಞಾನ ಪದವಿ ಕೈಗೂಡಿತು. ಮೊದಲ ಮಗಳ ಜನನದ ಬೆನ್ನಲ್ಲೇ ಅವರು ಜೀವನೋಪಾಯಕ್ಕಾಗಿ ಖಾಸಗಿ ಸಂಸ್ಥೆಗೆ ಸೇರಿದರು. ಮಕ್ಕಳ ಆರೈಕೆ, ಮನೆಕೆಲಸ ಮತ್ತು ಕಚೇರಿ ಕೆಲಸದ ಮಧ್ಯೆ ಬದುಕು ಸಾಗಿತು.
ಎರಡನೇ ಮಗಳು ಹುಟ್ಟಿದ ಬಳಿಕ ಕೆಲಸಕ್ಕೆ ವಿದಾಯ ಹೇಳಿದರು. ಮಕ್ಕಳ ಆರೈಕೆಯಲ್ಲಿ ತೊಡಗಿದರೂ ಕೆಲಸವಿಲ್ಲದೇ ಕುಳಿತಿದ್ದೇನೆ ಎನಿಸತೊಡಗಿತು. ಅದು ಖನ್ನತೆ-ಹತಾಶೆಗೆ ದೂಡಿತು. ಆಗ ಅವರಿಗೆ ನೆರವಾಗಿದ್ದು ತಂದೆ-ತಾಯಿ ಪ್ರೇರಕ ಶಕ್ತಿಯಾದರು. ಪಾಕಶಾಸ್ತ್ರದ ಬಗೆಗೆ ತಮಗಿದ್ದ ಪ್ರೇಮವನ್ನೇ ಬದುಕಾಗಿಸಿಕೊಳ್ಳಲು ಪ್ರಯತ್ನಿಸಿದರು. ಗ್ರಾಹಕರ ಅಗತ್ಯಕ್ಕನುಗುಣವಾಗಿ ವಿಶೇಷ ಕೇಕ್ ತಯಾರಿಸತೊಡಗಿದರು. ನಿಧಾನವಾಗಿ ಬೇಡಿಕೆ ಹೆಚ್ಚಿತು.
ಸಾಮಾಜಿಕ ಜಾಲವನ್ನು ಬಳಸಿಕೊಂಡು ಉಚಿತವಾಗಿ ಅಡುಗೆ ತಂತ್ರಗಳು ಮತ್ತು ತಿನಿಸುಗಳನ್ನು ಹಂಚಿಕೊಳ್ಳತೊಡಗಿದರು. ಬಳಿಕ ಎಸ್.ಕೆ.ಎಂ. ಇನ್ಸ್‌ಸ್ಟಿಟ್ಯೂಟ್ ಆಫ್ ಕಲಿನರಿ ಆರ್ಟ್ಸ್ ಅನ್ನು ಸ್ಥಾಪಿಸಿ ತರಬೇತಿ ನೀಡತೊಡಗಿದರು. ತಮ್ಮಂತೆಯೇ ಮನೆಯಲ್ಲೇ ಉಳಿದಿರುವ ಹಾಗೂ ತಮ್ಮ ಕೌಶಲಗಳನ್ನು ಬಳಸಿ ದುಡಿಯಲು ಇಚ್ಛಿಸುವ ಮಹಿಳೆಯರಿಗೆ ಗೃಹ ಉದ್ಯಮ ಆರಂಭಿಸಲು ನೆರವು ನೀಡಿದರು. ಐದು ವರ್ಷಗಳಿಂದ 70 ಬಗೆಯ ಕೋರ್ಸ್‌ಗಳನ್ನು ನಡೆಸಿ, 5 ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದ್ದಾರೆ.
ಬಳಿಕ ಕರ್ನಾಟಕ/ಗೋವಾ/ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚರಿಸುತ್ತಾ, ಸ್ವಸಹಾಯ ಗುಂಪುಗಳಲ್ಲಿರುವ ಗ್ರಾಮೀಣ ಪ್ರದೇಶದ ಮಳೆಯರಿಗೆ ತರಗತಿಗಳನ್ನು ನಡೆಸಿದ್ದಾರೆ. ವೈವಿಧ್ಯಮಯ ಪಾಕ ಪದ್ಧತಿಗಳ ಅಗತ್ಯಗಳನ್ನು ಪೂರೈಸುವುದೇ ಅವರ ಸಂಸ್ಥೆಯ ವೈಶಿಷ್ಟ್ಯ. ಐದು ವರ್ಷಗಳಲ್ಲಿ ನಾನು ಕಲಿತದ್ದೆಂದರೆ ಅದು ಆತ್ಮ ವಿಶ್ವಾಸ. ಅದು ನನಗಾಗಿ ಮಾತ್ರವಲ್ಲ, ಸಾವಿರಾರು ಮಹಿಳೆಯರಲ್ಲೂ ಪ್ರತಿಫಲಿಸುತ್ತಿದೆ. ನನ್ನ ನಂಬಿಕೆಯಲ್ಲಿ ಅದೇ ಮಹಿಳೆಯರ ಸಶಕ್ತೀಕರಣ ಎನ್ನುತ್ತಾರೆ ಸಂಧ್ಯಾ.ಅವರ ಸಂಸ್ಥೆಯು ಮನೆಯಲ್ಲಿದ್ದುಕೊಂಡೇ ದುಡಿಯಬೇಕೆಂದು ಬಯಸುವ ಮಹಿಳೆಗೆ ಶಾಲೆಯಷ್ಟೇ ಅಲ್ಲ; ಆತ್ಮವಿಶ್ವಾಸವನ್ನು ತುಂಬುವಂಥ ನೆಲೆ.
ಅವರ ಬದುಕಿನ ಎರಡನೇ ಸಾಹಸವೆಂದರೆ ವ್ಯಾಪಾರಕ್ಕೆ ಇಳಿದದ್ದು. ಯಶಸ್ವಿ ವ್ಯಾಪಾರಸ್ಥರಾಗಿದ್ದ ಅವರ ತಂದೆಯ ಬಹುದಿನಗಳ ಕನಸೂ ಅದಾಗಿತ್ತು. ತಂದೆಯ ಮಾರ್ಗದರ್ಶನ, ಸಲಹೆಗಳಿಂದ ಸೂಪರ್ ಸ್ಟೋರ್ ತೆರೆದರು. ಅಂದಿನಿಂದ ಪ್ರತಿ ದಿನವೂ ಹೊಸ ಕಲಿಕೆಯೇ. ದಿಲ್ಲಿಯ ಕಲಾಕಾರ್ ಫೌಂಡೇಷನ್‌ನ ಪ್ರಶಸ್ತಿ, ನಾರೀ ಗೌರವ್ ಸಮ್ಮಾನ್ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ.
ಈ ವರ್ಷದ ಥೀಮ್
ಪ್ರತೀ ವರ್ಷವೂ ಒಂದು ಭಿನ್ನ ವಿಷಯವನ್ನು ಇಟ್ಟುಕೊಂಡು ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ “ಥಿಂಕ್ ಈಕ್ವಲ್, ಬಿಲ್ಡ್ ಸ್ಮಾರ್ಟ್, ಇನೋವೇಟ್ ಫಾರ್ ಚೇಂಜ್’ ಮಹಿಳಾ ದಿನಾ ಚರಣೆಯ ಥೀಮ್ ಆಗಿದೆ.
ಸ್ಮಾರಕಗಳಿಗೆ ಉಚಿತ ಪ್ರವೇಶ
ಇದೇ ಮೊತ್ತ ಮೊದಲ ಬಾರಿಗೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಪುರಾತಣ್ತೀ ಇಲಾಖೆ ಅಡಿಯಲ್ಲಿ ಬರುವ ಸ್ಮಾರಕಗಳಿಗೆ ಭೇಟಿ ನೀಡುವ ಎಲ್ಲ ಮಹಿಳೆಯರಿಗೆ ಪ್ರವೇಶ ನೀಡುವುದಾಗಿ ಸಂಸ್ಕೃತಿ ಇಲಾಖೆ ತಿಳಿಸಿದೆ. ರವಿವಾರ ಸ್ಮಾರಕಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ಉಚಿತ ಪ್ರವೇಶ ನೀಡುತ್ತಿರುವುದಾಗಿ ಸಚಿವಾಲಯ ಆದೇಶ ಹೊರಡಿಸಿದೆ.
ಮಹಿಳೆಯರಿಗೆ ಮೀಸಲು
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ರವಿವಾರ ಮಹಿಳೆಯರಿಗೆ ಹಸ್ತಾಂತರಿ ಸುವುದಾಗಿ ಘೋಷಿಸಿದ್ದರು. ದೇಶದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವ ಮೊದಲಿನಿಂದಲೂ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ, ಈ ಬಾರಿ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. 21 ವರ್ಷದ ಆಡ್ಲಿನ್ ಕ್ಯಾಸ್ಟಲೀನೋ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಕೂಡ ಪಡೆದಿದ್ದಾರೆ.
ಮರಗಿಡಗಳು ಮತ್ತು ಗಿಡಮೂಲಿಕೆ ಗಳನ್ನು ಪ್ರೀತಿಸಿ, ಪೋಷಿಸಿದ ಅಂಕೋಲಾ ತಾಲೂಕಿನ ಹೊನ್ನಾಲಿ ಗ್ರಾಮದ 73 ವರ್ಷದ ತುಳಸಿ ಗೌಡ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇದುವರೆಗೂ ಅವರು 40 ಸಾವಿರಕ್ಕೂ ಹೆಚ್ಚು ಮರಗಳನ್ನು ಪೋಷಿಸಿದ್ದಾರೆ. ಅವರ ಪರಿಸರ ಪ್ರೇಮ ನಿಜಕ್ಕೂ ಪ್ರೇರಣಾದಾಯಕ .
ಸರಳತೆಯ ಸಾಕಾರಮೂರ್ತಿಯಂತಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಕನ್ನಡ ಮನಸ್ಸುಗಳಲ್ಲಿ ದೊಡ್ಡ ಸ್ಥಾನ ಪಡೆದಿದ್ದಾರೆ. ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ರೋಲ್ ಮಾಡೆಲ್ ಆಗಿರುವ ಸುಧಾಮೂರ್ತಿ, ಮಹಿಳೆಯ ಶಕ್ತಿ ಸಾಮರ್ಥ್ಯಕ್ಕೆ ಒಂದು ಅಪೂರ್ವ ಉದಾಹರಣೆ.
ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಸಾಧನೆ ಮಾನವ ಜನಾಂಗಕ್ಕೇ ಪ್ರೇರಕ. ಶತಾಯುಷಿ ತಿಮ್ಮಕ್ಕನವರು ಈಗಲೂ ದಣಿವರಿಯದೇ ಪರಿಸರ ಪಾಠಗಳನ್ನು ಕಲಿಸುತ್ತಲೇ ಇದ್ದಾರೆ.
ವೇದಾ ಕೃಷ್ಣಮೂರ್ತಿ ಎಂಬ ಹೆಸರು ಕ್ರಿಕೆಟ್ ಲೋಕದಲ್ಲಿ ಜನಪ್ರಿಯ. ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ 27 ವರ್ಷದ ಇವರು ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಭಾರತ ವಿಶ್ವಕಪ್ ಟಿ20 ಕ್ರಿಕೆಟ್ ತಂಡದಲ್ಲೂ ಆಡುತ್ತಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ವೇದಾ ಪ್ರಮುಖ ಆಸರೆ.
ವಿಜಯಮ್ಮ ಎಂದೇ ಚಿರಪರಿಚಿತರಾಗಿರುವ ಹಿರಿಯ ಲೇಖಕಿ, ಪತ್ರಕರ್ತೆ ಡಾ| ವಿಜಯಾ ಅವರ ಆತ್ಮಕಥನ “ಕುದಿ ಎಸರು’ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು. ಕನ್ನಡ ಸಾರಸ್ವತ ಲೋಕದಲ್ಲಿ ಅವರ ಆತ್ಮಕಥನ ಬಹಳ ಸದ್ದು ಮಾಡುತ್ತಿದೆ.
ರಾಜೇಶ್ವರಿ ಶಿವಾನಂದ ಗಾಯಕ್ವಾಡ್ರ ಸ್ಪಿನ್ ದಾಳಿಗೆ ತತ್ತರಿಸದ ಬ್ಯಾಟ್ಸ್‌ವುಮನ್‌ಗಳಿಲ್ಲ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಿಜಾಪುರ ಮೂಲದ ರಾಜೇಶ್ವರಿ 2017ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಭಾರತ ತಂಡದಲ್ಲಿದ್ದರು.
24 ವರ್ಷದ ಐಶ್ವರ್ಯ ಪಿಸ್ಸೆ ಯುವ ಮಹಿಳಾ ಮೋಟರ್‌ಸೈಕಲ್ ರೇಸರ್. ಎಫ್ಐಎಂ ಚಾಂಪಿಯನ್‌ಶಿಪ್ ಗೆದ್ದು, ಮೋಟಾರ್ ನ್ಪೋರ್ಟ್ಸ್ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಹಿಳೆ.
ನನ್ನ ಕಥೆ ತುಂಬಾ ಸರಳ. ಇದುವರೆಗೂ ನಾನು ಮಾಡಿದ ಎಲ್ಲ ಪ್ರಯತ್ನಗಳ ಬಗ್ಗೆ ಹೆಮ್ಮೆ ಇದೆ. ಉತ್ತಮ ಜೀವನ ಬಯಸುವ ಸಣ್ಣ ನಗರಗಳಲ್ಲಿನ ಪ್ರತಿ ಮಹಿಳೆಗೂ ನಿಮ್ಮ ಗುರುತಿಸುವಿಕೆ, ಮೆಚ್ಚುಗೆಯ ಮಾತು ಪ್ರೇರಕ ಶಕ್ತಿಯಾಗಬಲ್ಲದು
– ಸಂಧ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.