ಇಂಟರ್ನೆಟ್ ಭಾರತ 2ನೇ ಅತೀ ದೊಡ್ಡ ರಾಷ್ಟ್ರ
Team Udayavani, Jan 21, 2020, 6:05 AM IST
ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆ ಈಗ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾತ್ರವಲ್ಲದೇ ಮೂಲ ಆವಶ್ಯಕತೆಯಾಗಿ ಮಾರ್ಪಡುತ್ತಿದೆ. ದಿನನಿತ್ಯ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 50 ಕೋಟಿ ದಾಟಿದೆ.
560 ಮಿಲಿಯನ್ ಇಂಟರ್‌ನೆಟ್ ಬಳಕೆದಾರರು
133 ಕೋಟಿ ದೇಶದ ಒಟ್ಟು ಜನ ಸಂಖ್ಯೆ
56 ಕೋಟಿ ಈಗಿನ ಇಂಟರ್ನೆಟ್ ಬಳಕೆ
31 ಕೋಟಿ ಸಾಮಾಜಿಕ ಜಾಲತಾಣ ಬಳಕೆ
ಅತೀ ದೊಡ್ಡ ಮಾರುಕಟ್ಟೆ
ಇತ್ತೀಚಿನ ವರ್ಷಗಳಲ್ಲಿ ಭಾರತದ ಆನ್‌ಲೈನ್ ಮಾರುಕಟ್ಟೆ ಹೆಮ್ಮರವಾಗಿ ಬೆಳೆ ಯುತ್ತಿದೆ. ಚೀನದ ಬಳಿಕ ಭಾರತ ಇದ್ದು, ಜಗತ್ತಿನ 2ನೇ ಅತೀ ದೊಡ್ಡ ರಾಷ್ಟ್ರ.
ಅಮೆರಿಕಕ್ಕಿಂತ ದುಪ್ಪಟ್ಟು
ಭಾರತದ ಒಟ್ಟು ಇಂಟರ್ನೆಟ್ ಬಳಕೆದಾರರು ಅಮೆರಿಕಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅಮೆರಿಕದಲ್ಲಿ ಸುಮಾರು 31 ಕೋಟಿಯಷ್ಟು ಎಂದು ಅಂದಾಜಿಸಲಾಗುತ್ತಿದೆ.
4 ರಾಷ್ಟ್ರ = ಭಾರತ
ಇಂಡೋನೇಶ್ಯಾ, ಬ್ರೆಜಿಲ್, ನೈಜೀರಿಯಾ ಮತ್ತು ಜಪಾನ್ ದೇಶಗಳ ಒಟ್ಟು ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ಭಾರತದ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಸಮವಾಗಿದೆ. ಈ ರಾಷ್ಟ್ರಗಳು ಅತೀ ಹೆಚ್ಚು ಇಂಟರ್ನೆಟ್ ಬಳಸುವ ರಾಷ್ಟ್ರಗಳ ಪೈಕಿ ಟಾಪ್ 10ರಲ್ಲಿವೆ.
56 ಕೋಟಿ
2020ರ ಆರಂಭದಲ್ಲಿ ಒಟ್ಟು 560 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಭಾರತ ಹೊಂದಿದೆ.
60 ಕೋಟಿ
2021ರ ಸುಮಾರಿಗೆ ದೇಶದಲ್ಲಿ ಒಟ್ಟು 600 ಮಿಲಿಯನ್ ಅಥವ 60 ಕೋಟಿ ಅಂತರ್ಜಾಲ ಬಳಕೆದಾರರು ಇರಲಿದ್ದಾರೆ. ಇದು 2016ರಲ್ಲಿ ಇದ್ದ ಇಂಟರ್‌ನೆಟ್ ಬಳಕೆದಾರರಿಗಿಂತ ದುಪ್ಪಟ್ಟು.
44.8 ಕೋಟಿ
ಈಗ ಬಳಸಲಾಗುತ್ತಿರುವ ಇಂಟರ್ನೆಟ್ ಸೇವೆಯಲ್ಲಿ ಸುಮಾರು 44.8 ಕೋಟಿ ಬಳಕೆದಾರರು ಮೊಬೈಲ್‌ಗಳಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ.
ನಗರಗಳಲ್ಲಿ ಹೆಚ್ಚು
ಇಂಟರ್‌ನೆಟ್ ಸೇವೆ ದೇಶದ ಮೂಲೆ ಮೂಲೆಯಲ್ಲಿ ಲಭ್ಯವಿದ್ದರೂ, ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ.
ಶೇ. 71ಪುರುಷರು
ದೇಶದಲ್ಲಿನ ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಶೇ. 71 ರಷ್ಟು ಮಂದಿ ಪುರುಷರಾಗಿದ್ದಾರೆ. ಶೇ. 29ರಷ್ಟು ಮಾತ್ರ ಮಹಿಳೆಯರು ಇದ್ದಾರೆ ಎಂದು ವರದಿಯೊಂದು ಹೇಳಿದೆ.
31 ಕೋಟಿ ಸಾಮಾಜಿಕ ಜಾಲತಾಣ
ಒಟ್ಟು ಅಂತರ್ಜಾಲ ಬಳಕೆಯಲ್ಲಿ 31 ಕೋಟಿ ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಈ ಸಂಖ್ಯೆ 2023ರ ವೇಳೆಗೆ 40 ಕೋಟಿಗೆ ಹೆಚ್ಚಾಗುವ ಸಾಧ್ಯತೆ ಇದೆ.
ಕೇರಳ, ತಮಿಳುನಾಡು
ಕೇರಳ, ತಮಿಳುನಾಡು ಮತ್ತು ದಿಲ್ಲಿಗಳಲ್ಲಿ ಮಹಿಳಾ ಇಂಟರ್ನೆಟ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ 2/3ನೇ ಇಂಟರ್ನೆಟ್ ಬಳಕೆದಾರರು 12 ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ. ಈ ವಯಸ್ಸಿನ ಹೆಚ್ಚಿನ ಪ್ರಮಾಣ ಗ್ರಾಮೀಣ ಭಾರತದಲ್ಲಿ ಕಂಡುಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.