ದಶಕದಲ್ಲಿ ಅಂತರ್ಜಾಲ ಬಳಕೆ 12 ಪಟ್ಟು ಹೆಚ್ಚಳ


Team Udayavani, Jan 15, 2021, 7:10 AM IST

Untitled-1

ಚಂದಾದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಆರೋಪಕ್ಕೆ ಗುರಿಯಾಗಿರುವ ಮತ್ತು ಕೆಲವೊಂದು ಪ್ರೈವೆಸಿ ನಿಯಮಾವಳಿಗಳ ಬದಲಾವಣೆ ಹಿನ್ನೆಲೆಯಲ್ಲಿ ವಾಟ್ಸ್‌ ಆ್ಯಪ್‌ ಈಗ ಸುದ್ದಿಯಲ್ಲಿದೆ. ಇದಕ್ಕೆ ಪರ್ಯಾಯ ವಾಗಿ ಇತರ ಆ್ಯಪ್‌ಗ್ಳನ್ನು ಬಳಸಬೇಕು ಎಂಬ ಒಂದಷ್ಟು ವಾದಗಳು ಕೇಳಿ ಬರತೊಡಗಿವೆ. ಆದರೆ ವಾಟ್ಸ್‌ಆ್ಯಪ್‌ ಅನೇಕ ವರ್ಷಗಳಿಂದ ಭಾರತದಲ್ಲಿ ಉತ್ತಮ ಹಿಡಿತವನ್ನು ಕಾಯ್ದುಕೊಂಡಿದೆ. ಪರಿಣಾಮವಾಗಿ 2019ರ ಮಧ್ಯಭಾಗದಲ್ಲಿ ಇದು 40 ಕೋಟಿಗೂ ಹೆಚ್ಚು ಬಳಕೆದಾರರನ್ನು ಸಂಪಾದಿಸಿತ್ತು. ಆ ಸಮಯದಲ್ಲಿ ವಾಟ್ಸ್‌ಆ್ಯಪ್‌ಗೆ ಯೂಟ್ಯೂಬ್‌ ನಿಕಟ ಪ್ರತಿಸ್ಪರ್ಧಿ ಆಗಿತ್ತು. ಅದು ಭಾರತದಲ್ಲಿ ಸುಮಾರು 26 ಕೋಟಿ ಬಳಕೆದಾರರನ್ನು ಹೊಂದಿತ್ತು.  ಈಗ ಯೂಟ್ಯೂಬ್‌ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ವರದಿಯೊಂದರ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ 42.5 ಕೋಟಿ ಸಕ್ರಿಯ ಯೂಟ್ಯೂಬ್‌ ಬಳಕೆದಾರರು ಇದ್ದರು. ಇದೇ ವೇಳೆ ವ್ಯಾಟ್ಸ್‌ಆ್ಯಪ್‌ ಬಳಕೆದಾರರ ಸಂಖ್ಯೆ 42.2 ಕೋಟಿ ಆಗಿತ್ತು.

45.9 ಕೋಟಿ ಸಕ್ರಿಯ  ವಾಟ್ಸ್‌ಆ್ಯಪ್‌ ಬಳಕೆದಾರರು :

ವ್ಯಾಟ್ಸ್‌ಆ್ಯಪ್‌ ಈಗ ಭಾರತದಲ್ಲಿ 45.9 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಪ್ರತಿಸ್ಪರ್ಧಿ ಯೂಟ್ಯೂಬ್‌ ಕೂಡ ತೀವ್ರ ಪೈಪೋಟಿ ನೀಡಿದ್ದು 45.2 ಕೋಟಿ ಬಳಕೆದಾರರನ್ನು ಹೊಂದಿದೆ. ವರದಿಯ ಪ್ರಕಾರ ಯೂ ಟ್ಯೂಬ್‌ ಮತ್ತು ವ್ಯಾಟ್ಸ್‌ಆ್ಯಪ್‌ ಬಳಕೆದಾರರ ಸಂಖ್ಯೆ ಶೀಘ್ರದಲ್ಲಿಯೇ 50 ಕೋಟಿ ತಲುಪಬಹುದು.

60ಕೋಟಿ  ಇಂಟರ್ನೆಟ್‌ ಬಳಕೆದಾರರು :

ಭಾರತ 2010ರಲ್ಲಿ ಭಾರತದಲ್ಲಿ ಸುಮಾರು 5 ಕೋಟಿ ಇಂಟರ್ನೆಟ್‌ ಬಳಕೆದಾರರನ್ನು ಹೊಂದಿತ್ತು. ಆದರೆ 2020ರ ಅಂತ್ಯದ ವೇಳೆಗೆ ಈ ಸಂಖ್ಯೆ 60 ಕೋಟಿಗಳಿಗೆ ತಲುಪಿದ್ದು ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಈ ಪರಿ ಏರಿಕೆ ಕಾಣಲು ಗೂಗಲ್‌ ಮತ್ತು ಫೇಸ್‌ಬುಕ್‌ನ ಪಾತ್ರ ಅತೀ ಮಹತ್ವದ್ದಾಗಿದೆ. 400 ರೈಲ್ವೇ ನಿಲ್ದಾಣಗಳಿಗೆ ವೈ-ಫೈ ಸಂಪರ್ಕ ಒದಗಿಸುವ ಯೋಜನೆಯನ್ನು ಗೂಗಲ್‌ ಕೈಗೆತ್ತಿಕೊಂಡಿದೆ. ಅಲ್ಲದೆ ಇದನ್ನು ಇತರ ಸಾರ್ವಜನಿಕ ಸ್ಥಳಗಳಿಗೆ ತಲುಪಿಸುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಿದೆ. ಫೇಸ್‌ಬುಕ್‌ ಭಾರತದಲ್ಲಿ ಫ್ರೀ ಬೇಸಿಕ್ಸ್‌ ಅನ್ನು ಪ್ರಾರಂಭಿಸಿದೆ. ಆದರೆ ಇದನ್ನು ಭಾರತದಲ್ಲಿ ನಿಷೇಧಿಸಿದಾಗ ಕಂಪೆನಿಯು ಎಕ್ಸ್‌ಪ್ರೆಸ್‌ ವೈ-ಫೈ ಅನ್ನು ಪ್ರಾರಂಭಿಸಿತು. ಇತ್ತೀಚೆಗೆ ಈ ಎರಡೂ ಕಂಪೆನಿಗಳು ಮುಖೇಶ್‌ ಅಂಬಾನಿಯ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ ಗಳಲ್ಲಿ ಹೂಡಿಕೆ ಮಾಡಿವೆ. ಜಿಯೋ ದೇಶದಲ್ಲಿ 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ.

100% ಬಳಕೆ :

ದೇಶದಲ್ಲಿ ವಾಟ್ಸ್‌ಆ್ಯಪ್‌ ಶೇ.100 ಬಳಕೆದಾರ ಸಕ್ರಿಯ ಅಪ್ಲಿಕೇಶನ್‌ ಆಗಿದೆ. ಭಾರತದಲ್ಲಿ ವಾಟ್ಸ್‌ಆ್ಯಪ್‌ ಡೌನ್‌ಲೋಡ್‌ ಈಗ ನಿಧಾನವಾಗಿದ್ದರೂ ಹಳೆಯ ಬಳಕೆದಾರರು ಅದರ ಮೇಲೆ ಇನ್ನೂ  ನಂಬಿಕೆ ಉಳಿಸಿಕೊಂಡಿದ್ದಾರೆ. ಭಾರತದಲ್ಲಿ ಅದರ ಮಾಸಿಕ ಶೇ. 95ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರು ಪ್ರತೀ ದಿನ ವಾಟ್ಸ್‌ಆ್ಯಪ್‌ ಅನ್ನು ಬಳಸುತ್ತಾರೆ. ಇಷ್ಟಲ್ಲದೇ ಶೇ. 100 ವಾಟ್ಸ್‌ಆ್ಯಪ್‌ ಬಳಕೆದಾರರು ವಾರಕ್ಕೊಮ್ಮೆಯಾದರೂ ಇದನ್ನು ಬಳಸುತ್ತಾರೆ. ಅದೇ ಸಮಯದಲ್ಲಿ ಭಾರತದಲ್ಲಿ ಯೂಟ್ಯೂಬ್‌ನ ಒಟ್ಟು ಬಳಕೆದಾರರಲ್ಲಿ  ಮೂರರಲ್ಲಿ ನಾಲ್ಕು ಭಾಗದಷ್ಟು ಜನರು ಇದನ್ನು ಪ್ರತೀ ದಿನ ಬಳಸುತ್ತಾರೆ.

32.5 ಕೋಟಿ : ಫೇಸ್‌ಬುಕ್‌ ಸಕ್ರಿಯ ಬಳಕೆದಾರರು :

ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಆಗಿ ಗೂಗಲ್‌ ಕೆಲಸ  ಮಾಡುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದಲ್ಲಿ ಕ್ರೋಮ್‌ ಮತ್ತು ಯೂಟ್ಯೂಬ್‌ ಮಾಸಿಕ ಸಕ್ರಿಯ ಬಳಕೆದಾರರ ಪ್ರಮಾಣ 40 ಕೋಟಿಗಳನ್ನು ಮೀರಿದೆ. ಕಳೆದ ತಿಂಗಳು ದೇಶದಲ್ಲಿ ಸುಮಾರು 32.5 ಕೋಟಿಗಳಷ್ಟು ಮಂದಿ ಫೇಸ್‌ಬುಕ್‌ನ ಸಕ್ರಿಯ ಬಳಕೆದಾರರಾಗಿದ್ದರು.

ಮಾರುಕಟ್ಟೆ ಆದಾಯದ ಶೇ. 43ರಷ್ಟು ಪಾಲು :

ಸಂಶೋಧನ ವರದಿ “ಮೀಡಿಯಾ ಪಾರ್ಟ್‌ನರ್ ಏಷ್ಯಾ’ ಅಂದಾಜಿನ ಪ್ರಕಾರ ಕಳೆದ ವರ್ಷ ಭಾರತದಲ್ಲಿ  ಆನ್‌ಲೈನ್‌ ವೀಡಿಯೋ ಮಾರುಕಟ್ಟೆ ಆದಾಯದಲ್ಲಿ ಯೂಟ್ಯೂಬ್‌ ಶೇ. 43ರಷ್ಟು ಪಾಲನ್ನು ಹೊಂದಿದೆ.  ಡಿಸ್ನಿ + ಹಾಟ್‌ಸ್ಟಾರ್‌ ಶೇ. 16 ಮತ್ತು ನೆಟ್‌ಫ್ಲಿಕ್ಸ್‌ ಶೇ. 14ರಷ್ಟು ಗಳಿಕೆಯನ್ನು ಹೊಂದಿದೆ.

 

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.