ಗೃಹಲಕ್ಷ್ಮೀಗೆ ಆಹ್ವಾನ; ನೋಂದಣಿ ಪ್ರಕ್ರಿಯೆ ಹೇಗೆ? ಇಲ್ಲಿವೆ ಮಾಹಿತಿ…
Team Udayavani, Jul 24, 2023, 8:15 AM IST
ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದ ಕಾಂಗ್ರೆಸ್‌ನ ಪ್ರಣಾಳಿಕೆಯ ಐದು ಭರವಸೆಗಳಲ್ಲಿ ಗೃಹಲಕ್ಷಿ$¾à ಯೋಜನೆಯೂ ಒಂದಾಗಿದೆ. ಜು.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ ಆ.15 ಅಥವಾ ಆ. 20ರ ಅನಂತರ ಮಹಿಳೆಯರು ತಿಂಗಳಿಗೆ 2 ಸಾವಿರ ರೂ.ಗಳನ್ನು ರಾಜ್ಯ ಸರಕಾರದಿಂದ ಪಡೆಯಬಹುದಾಗಿದೆ. ಒಂದು ವರ್ಷದವರೆಗೆ ನೋಂದಣಿ ಮುಂದುವರಿಯಲಿದ್ದು ಮನೆಯ “ಯಜಮಾನಿ’ಯನ್ನು ಆಯಾ ಕುಟುಂಬವೇ ಆಯ್ಕೆ ಮಾಡಬೇಕಿದೆ. ಒಂದು ವೇಳೆ ಒಂದೇ ಕುಟುಂಬದಲ್ಲಿ ಹಲವು ಮಹಿಳೆಯರು ಇದ್ದರೂ ಒಬ್ಬರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಹಾಗೆಯೇ ಪಡಿತರ ಚೀಟಿಯಲ್ಲಿ ಮನೆಯ “ಯಜಮಾನಿ’ ಆಗಿದ್ದು ಆಧಾರ್‌ಕಾರ್ಡ್‌ನಲ್ಲಿ ಪತಿ/ ತೃತೀಯ ಲಿಂಗಿ ಆಗಿದ್ದರೆ, ಸಮೀಪದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಯಾರ್ಯಾರು ಅರ್ಹರು?
-ಬಿಪಿಎಲ್, ಎಪಿಎಲ್, ಅಂತ್ಯೋದಯ ಕುಟುಂಬಗಳ ಮನೆ ಮುಖ್ಯಸ್ಥರಾಗಿರುವ ಮಹಿಳೆಯರು
-ಆದಾಯ ತೆರಿಗೆ ಪಾವತಿಸುವ ಮಹಿಳೆಯರು, ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಂತಹವರ ಪತ್ನಿಯರು ಈ ಯೋಜನೆಗೆ ಅರ್ಹರಲ್ಲ.
-1.1 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯಡಿ ಪ್ರಯೋಜನ ಪಡೆಯಲಿದ್ದು 18 ಸಾವಿರ ಕೋಟಿ ರೂ.ಗಳನ್ನು ಸರಕಾರ ಮೀಸಲಿಟ್ಟಿದೆ.
ಅರ್ಜಿ ಸಲ್ಲಿಸುವುದು ಎಲ್ಲಿ?
-ಗ್ರಾಮ ಒನ್
-ಕರ್ನಾಟಕ ಒನ್
-ಬೆಂಗಳೂರು ಒನ್
-ಬಾಪೂಜಿ ಸೇವಾ ಕೇಂದ್ರ
ಬೇಕಾಗುವ ದಾಖಲೆಗಳು?
-ಫಲಾನುಭವಿ ಮತ್ತು ಪತಿಯ ಆಧಾರ್‌ಕಾರ್ಡ್
-ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್
-ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಪುಸ್ತಕ
ನೋಂದಣಿ ಪ್ರಕ್ರಿಯೆ ಹೇಗೆ?
ಗೃಹಲಕ್ಷ್ಮೀ ಯೋಜನೆಗೆ ಅರ್ಹ ಆಯಾ ಕುಟುಂಬದ “ಯಜಮಾನಿ’ಯ ಮನೆಗೆ ಸರಕಾರದ “ಪ್ರಜಾಪ್ರತಿನಿಧಿ’ ಸ್ವಯಂ ಸೇವಕರು ಆಗಮಿಸಿ ಉಚಿತವಾಗಿ ನೋಂದಣಿ ಮಾಡುತ್ತಾರೆ. ಇದಕ್ಕೆ ಯಾವುದೇ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ. ಹಾಗೆಯೇ ಸೇವಾ ಕೇಂದ್ರಗಳಿಗೆ ಹೋಗದೆಯೇ ನೋಂದಣಿ ಮಾಡಬಹುದಾಗಿದೆ. ಪ್ರಥಮವಾಗಿ ಸರಕಾರದಿಂದ ನೇಮಕವಾದ ಪ್ರಜಾಪ್ರತಿನಿಧಿಯು ನಿಮ್ಮ ಮನೆಗೆ ಆಗಮಿಸಿ ದಾಖಲೆ ಪರಿಶೀಲಿಸಿ ನೋಂದಾಯಿಸುತ್ತಾರೆ. ಬಳಿಕ ಫಲಾನುಭವಿಯ ಮೊಬೈಲ್‌ಗೆ ಮೆಸೇಜ್ ಅಥವಾ ಎಸ್‌ಎಂಎಸ್ ಬರಲಿದೆ. ಅನಂತರ ಸೇವಾ ಕೇಂದ್ರಗಳಿಗೆ ಹೋಗಿ ನೋಂದಣಿ ದಿನಾಂಕದ ಮೆಸೇಜ್ ತೋರಿಸಿ ಅಧಿಕೃತವಾಗಿ ದಾಖಲೆ ಸಲ್ಲಿಸಬೇಕಿದೆ.
ಹೆಚ್ಚಿನ ಮಾಹಿತಿಗೆ
ಸಹಾಯವಾಣಿ 1902ಕ್ಕೆ ಕರೆ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, ಅಥವಾ 8147500500/ 8277000555 ಎಸ್‌ಎಂಎಸ್ ಅಥವಾ ವ್ಯಾಟ್ಸ್ ಆ್ಯಪ್ ಮೂಲಕ ನಿಮ್ಮ ಪಡಿತರ ಚೀಟಿಯ 12 ಅಂಕೆಯ ಸಂಖ್ಯೆಗಳನ್ನು ಕಳುಹಿಸಿ ವಿವರಗಳನ್ನು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.