ವಿಶ್ವಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಕೊಡುತ್ತಿದೆಯೇ ಕೋವಿಡ್?


Team Udayavani, Jun 24, 2020, 7:36 AM IST

world-covid

ಕೋವಿಡ್‌- 19 ಹಾವಳಿ ತಗ್ಗುವ ಸೂಚನೆ ಸಿಗುತ್ತಿಲ್ಲ. ಯುರೋಪ್‌ ಅನಂತರ ಈಗ ಕೋವಿಡ್‌ ಏಷ್ಯನ್‌ ರಾಷ್ಟ್ರಗಳಿಗೆ ಹೆಚ್ಚು ತೊಂದರೆ ಉಂಟುಮಾಡುತ್ತಿದೆ. ಭಾರತದ ವಿಷಯಕ್ಕೆ ಬಂದರೆ, ಗುಣಮುಖರಾದವರ ಸಂಖ್ಯೆ ಈಗಾಗಲೇ 2 ಲಕ್ಷ 48 ಸಾವಿರ ದಾಟಿದೆ. ಆದರೂ, ಇದರ ಮಧ್ಯೆಯೇ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಜೂನ್‌ ತಿಂಗಳ ಆರಂಭದಿಂದಲೂ ಆಗುತ್ತಿರುವ ಹೆಚ್ಚಳ ಆತಂಕಕಾರಿಯಾಗಿದೆ…

ಜೂನ್‌ತಿಂಗಳೊಂದರಲ್ಲೇ 2 ಲಕ್ಷಕ್ಕೂ ಅಧಿಕ ಪ್ರಕರಣಗಳು
ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಮಂಗಳವಾರದ ವೇಳೆಗೆ 4 ಲಕ್ಷ 41 ಸಾವಿರದ ಗಡಿ ದಾಟಿ, 14,028 ಜನ ಅಸುನೀಗಿದ್ದಾರೆ. ಅತಿಹೆಚ್ಚು ಪ್ರಕರಣಗಳು ಲಾಕ್‌ಡೌನ್‌ ನಿರ್ಬಂಧಗಳು ಸಡಿಲಿಕೆಯಾದ ನಂತರದಿಂದಲೇ ಪತ್ತೆಯಾಗಿವೆ. ಅದರಲ್ಲೂ ಜೂನ್‌ 1ರಿಂದ ಜೂನ್‌ 22ರ ನಡುವೆ ಒಟ್ಟು 2 ಲಕ್ಷ 43 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರೆ, ಈ ಅವಧಿಯಲ್ಲೇ ಒಟ್ಟು 8,409 ಜನ ಕೋವಿಡ್‌-19ನಿಂದಾಗಿ ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ 71 ಲಕ್ಷ 37 ಸಾವಿರ ಜನ ಪರೀಕ್ಷೆಗೊಳಪಟ್ಟಿದ್ದರೆ, ಇದರಲ್ಲಿ ಈ 22 ದಿನಗಳಲ್ಲೇ 31 ಲಕ್ಷ 13 ಸಾವಿರ ಜನರನ್ನು ಪರೀಕ್ಷಿಸಲಾಗಿದೆ.

ಬ್ರೆಜಿಲ್‌: 50 ಸಾವಿರ ದಾಟಿದ ಮೃತರ ಸಂಖ್ಯೆ
ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌, ಈಗ ಕೋವಿಡ್‌-19ನಿಂದಾಗಿ 50 ಸಾವಿರಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಿದೆ. ಮಂಗಳವಾರದ ವೇಳೆಗೆ ಬ್ರೆಜಿಲ್‌ನಲ್ಲಿ 11ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರೆ, 51 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ನಿತ್ಯ ಸಾವಿರಕ್ಕೂ ಅಧಿಕ ಜನರು ಕೊರೊನಾದಿಂದಾಗಿ ಮೃತಪಡುತ್ತಿದ್ದಾರೆ. ಈ ದಕ್ಷಿಣ ಅಮೆರಿಕನ್‌ ರಾಷ್ಟ್ರದ ದುಸ್ಥಿತಿಗೆ, ಮುಖ್ಯವಾಗಿ ಅದರ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಅವರ ಕಾರ್ಯವೈಖರಿಯೇ ಕಾರಣ ಎಂಬ ಆರೋಪ ಎದುರಾಗುತ್ತಿದೆ. ಆರಂಭದಿಂದಲೂ ಕೋವಿಡ್‌-19 ಅಪಾಯವನ್ನು ಕಡೆಗಣಿಸುತ್ತಲೇ ಬಂದ ಬೊಲ್ಸೊನಾರೋ, ತಮ್ಮ ದೇಶಕ್ಕೆ ರೋಗ ಪ್ರವೇಶವಾಗಿದ್ದರೂ ಸಹ ಹಲವು ರಾಜಕೀಯ ರ್ಯಾಲಿಗಳನ್ನು ಆಯೋಜಿಸಿದ್ದರು.ರೋಗ ಪ್ರಸರಣ ವೇಗ ಹೆಚ್ಚಿದರೂ ಕೂಡ ಲಾಕ್‌ಡೌನ್‌ ತರಲು ನಿರಾಕರಿಸಿಬಿಟ್ಟರು. ಬೊಲ್ಸೊನಾರೋ ಅವರು, ದೇಶದಲ್ಲಿ ರೋಗ ಉಲ್ಬಣಿಸುತ್ತಿದ್ದಂತೆಯೇ ಆರೋಗ್ಯ ಸಚಿವರ ಮೇಲೆ ತಪ್ಪು ಹೊರಿಸಿ ಅವರ ಜಾಗದಲ್ಲಿ ಮತ್ತೂಬ್ಬರನ್ನು ತಂದು ಕೂರಿಸಿದರು. ಆದರೆ, ಇತ್ತೀಚೆಗೆ ಆ ಹೊಸ ಆರೋಗ್ಯ ಸಚಿವರೂ ಸಹ ಬೊಲ್ಸೊನಾರೋ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇನ್ನು, ಬ್ರೆಜಿಲ್‌ನಲ್ಲಿ ಟೆಸ್ಟಿಂಗ್‌ ಪ್ರಮಾಣವೂ ಅತ್ಯಂತ ಕಡಿಮೆಯೇ ಇದೆ. ಇದುವರೆಗೂ ಆ ದೇಶ ಕೇವಲ 25 ಲಕ್ಷ ಜನರನ್ನಷ್ಟೇ ಪರೀಕ್ಷಿಸಿದೆ. ಅದರಲ್ಲೇ 11 ಲಕ್ಷ ಜನ ಸೋಂಕಿತರು ಪತ್ತೆಯಾಗಿದ್ದಾರೆ! ಇನ್ನೊಂದೆಡೆ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾ 1 ಕೋಟಿ 75 ಲಕ್ಷ ಪರೀಕ್ಷೆಗಳನ್ನು ನಡೆಸಿದೆ.

ಹೆಚ್ಚಲಿದೆ ಜಾಗತಿಕ ಬಡತನ ಪ್ರಮಾಣ
ಕೋವಿಡ್‌-19ನಿಂದಾಗಿ ವಿಶ್ವದ ಆರ್ಥಿಕತೆಗೆ ಬೃಹತ್‌ ಪೆಟ್ಟು ಬಿದ್ದಿದ್ದು, ಪ್ರತಿಯೊಂದು ದೇಶವೂ ವೈರಸ್‌ ಹೊಡೆತದಿಂದ ಚೇತರಿಸಿಕೊಳ್ಳಲು ಕಷ್ಟಪಡುತ್ತಿವೆ. ಆರಂಭದಲ್ಲಿ ಯುರೋಪಿಯನ್‌ ರಾಷ್ಟ್ರಗಳು ಮತ್ತು ಅಮೆರಿಕದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಅಧಿಕವಿದ್ದ ಕೋವಿಡ್‌-19 ಹಾವಳಿ, ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅಧಿಕವಾಗಿದೆ. ಪರಿಣಾಮವಾಗಿ, ಜಾಗತಿಕ ಬಡತನ ಪ್ರಮಾಣದಲ್ಲಿ ಅಪಾರ ಹೆಚ್ಚಳ ಕಾಣಿಸಿಕೊಳ್ಳುತ್ತಿದೆ. ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌ನ ಅಂಕಿ ಅಂಶಗಳನ್ನು ಆಧರಿಸಿ “ದಿ ಎಕಾಲಾಜಿಕ್ಸ್‌’ ವಿತ್ತ ಅಧ್ಯಯನ ಸಂಸ್ಥೆಯು ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಸೆಪ್ಟೆಂಬರ್‌ವರೆಗೆ ಕೋವಿಡ್‌-19 ಇದೇ ವೇಗದಲ್ಲೇ ಮುಂದುವರಿದರೆ, ಜಾಗತಿಕವಾಗಿ ತೀವ್ರ ಬಡತನದಲ್ಲಿರುವವರ ಸಂಖ್ಯೆ 112 ಕೋಟಿಗೆ ಏರಲಿದೆ ಎನ್ನುತ್ತದೆ(2018ರಲ್ಲಿ ಈ ಸಂಖ್ಯೆ 72.7 ಕೋಟಿಯಷ್ಟಿತ್ತು).

ಮನೆಗಳೆಷ್ಟು ಸುರಕ್ಷಿತ?
ಅಮೆರಿಕ ಹಾಗೂ ಯುರೋಪ್‌ನ ಸಂಶೋಧಕರು, ಕೋವಿಡ್‌- 19ನಿಂದ ಸುರಕ್ಷತೆ ಒದಗಿಸುವಂಥ ವ್ಯವಸ್ಥೆ ಮನೆಗಳಲ್ಲಿ ಹೇಗಿರಬೇಕು ಎನ್ನುವ ಕುರಿತು ಎಚ್‌ಇಪಿ(Home environments for protection) ಎಂಬ ಸೂಚಿಯನ್ನು ಸಿದ್ಧಪಡಿಸಿದ್ದು, ಇದು ಹಲವು ಮಾನದಂಡಗಳನ್ನು ಒಳಗೊಂಡಿದೆ.
1) ಮನೆಯಲ್ಲಿರುವವರಿಗೆ ಆರೋಗ್ಯ ಮಾರ್ಗಸೂಚಿಗಳು ಮತ್ತು ಸರಕಾರದ ಕಾರ್ಯಕ್ರಮಗಳ ಬಗ್ಗೆ ಟಿ.ವಿ., ರೇಡಿಯೋ ಅಥವಾ ಇಂಟರ್ನೆಟ್‌ ಮುಖಾಂತರ ಮಾಹಿತಿ ತಲುಪುತ್ತಿದೆಯೇ?
2) ಮನೆಯಲ್ಲಿರುವವರಿಗೆ ಪರಸ್ಪರ ಅಂತರ ಕಾಯ್ದುಕೊಳ್ಳುವಂಥ (ಉದಾಹರಣೆಗೆ, ಒಂದು ಕೋಣೆಯಲ್ಲಿ ಕೇವಲ ಇಬ್ಬರೇ ಮಲಗುವಷ್ಟು ) ಅನುಕೂಲವಿದೆಯೇ?
3) ಮನೆಗೆ ಪ್ರತ್ಯೇಕ ಟಾಯ್ಲೆಟ್‌ ವ್ಯವಸ್ಥೆ ಇದೆಯೇ?
4) ಮನೆಯಲ್ಲಿ ನಲ್ಲಿ ನೀರಿನ ಸೌಲಭ್ಯ ಇದೆಯೇ?
5) ಸೋಪಿನಿಂದ ಕೈತೊಳೆಯಲು ಪ್ರತ್ಯೇಕ ವ್ಯವಸ್ಥೆ-ಜಾಗ ಇದೆಯೇ?

4ಜಿ ಕ್ರಾಂತಿಯ ಕಾರಣದಿಂದಾಗಿ ದೇಶದಲ್ಲಿ ಮನೆಮನೆಗೂ ಇಂಟರ್ನೆಟ್‌ ಸೌಲಭ್ಯ ದೊರೆಯುವಂತಾಗಿರುವುದರಿಂದಾಗಿ ದೇಶದಲ್ಲಿ, ಮಾಹಿತಿಯ ಸಕ್ಷಮ ಪ್ರಸರಣಕ್ಕೆ ಅನುಕೂಲವಾಗಿದೆ. ಈ ಕಾರಣಕ್ಕಾಗಿಯೇ ಭಾರತವು ಮೊದಲ ಮಾನದಂಡದಲ್ಲಿ ಉತ್ತಮ ಸಾಧನೆ ತೋರಿದೆ. ಆದರೆ ಉಳಿದ ವಿಚಾರಗಳಲ್ಲಿ ಪರಿಸ್ಥಿತಿ ಆಶಾದಾಯಕವಾಗಿ ಇಲ್ಲ. ಭಾರತದ ಅನೇಕ ಮನೆಗಳಲ್ಲಿ ಹೆಚ್ಚೆಂದರೆ ಒಂದರಿಂದ, ಎರಡು ಪ್ರತ್ಯೇಕ ಕೋಣೆ ಗಳಿರುತ್ತವೆ. ಈಗಲೂ ದೇಶದಲ್ಲಿ ಕೂಡು ಕುಟುಂಬಗಳ ಸಂಖ್ಯೆ ಅಧಿಕವಿರುವ ಕಾರಣ, ಮನೆಯಲ್ಲೇ ಪರಸ್ಪರ ಸುರಕ್ಷಿತ ಅಂತರವನ್ನು ಪಾಲಿಸುವುದು ಕಷ್ಟವೇ ಸರಿ. ಇನ್ನು ಕೆಲ ವರ್ಷಗಳಿಂದ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸುವ ಪ್ರಯತ್ನ ವೇಗಪಡೆದಿದೆಯಾದರೂ, ಈಗಲೂ ಅನೇಕ ಕುಟುಂಬಗಳಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯಿಲ್ಲ. ಇನ್ನು ಎಲ್ಲಾ ಮನೆಗಳಿಗೂ ನಲ್ಲಿ ನೀರಿನ ವ್ಯವಸ್ಥೆ ಇರದ ಕಾರಣ, ಕೈತೊಳೆದುಕೊಳ್ಳುವ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಪಾಲಿಸಲು ಕಷ್ಟವಾಗುತ್ತಿದೆ. ಅಚ್ಚರಿಯ ವಿಷಯವೆಂದರೆ, ಈ ಎಲ್ಲಾ ವ್ಯವಸ್ಥೆಯಿದ್ದರೂ ಅಮೆರಿಕ ಮತ್ತು ಯುರೋಪಿಯನ್‌ ರಾಷ್ಟ್ರಗಳು ಕೊರೊನಾದಿಂದಾಗಿ ಹೆಚ್ಚು ತತ್ತರಿಸಿವೆ ಎನ್ನುವುದು.

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.