ಭಾರತದಿಂದ ದೂರ ಸರಿಯುತ್ತಿದೆಯೇ ನೇಪಾಳ?


Team Udayavani, Oct 15, 2019, 5:20 AM IST

l-37

ಭಾರತದಲ್ಲಿ ಒಂದು ದಿನದ ಅನೌಪಚಾರಿಕ ಸಭೆ ನಡೆಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಮರುದಿನ ನೇಪಾಳಕ್ಕೆ ತೆರಳಿ ಎರಡು ದಿನದ ಪ್ರವಾಸ ಕೈಗೊಂಡರು. ಈ ಮೂಲಕ 23 ವರ್ಷಗಳ ನಂತರ ಇದೇ ಮೊದಲ ಬಾರಿ ಚೀನಾದ ಅಧ್ಯಕ್ಷರೊಬ್ಬರು ನೇಪಾಳಕ್ಕೆ ಭೇಟಿ ನೀಡಿದಂತಾಗಿದೆ. ಎರಡು ದಿನಗಳಲ್ಲಿ ಈ ಎರಡೂ ರಾಷ್ಟ್ರಗಳ ನಡುವೆ 20ಕ್ಕೂ ಹೆಚ್ಚು ಒಪ್ಪಂದಗಳಾಗಿವೆ. ನೇಪಾಳದ ಹೈವೇ, ಏರ್‌ಪೋರ್ಟ್‌, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕ ಯೋಜನೆಗಳ ನಿರ್ಮಾಣ ಕಾರ್ಯಕ್ಕೆ 3,500 ಕೋಟಿ ರೂಪಾಯಿ ಸಹಾಯವನ್ನೂ ಘೋಷಿಸಿದೆ ಚೀನಾ. ಕೆಲ ವರ್ಷಗಳಿಂದ ನೇಪಾಳ ಭಾರತದಿಂದ ವಿಮುಖವಾಗಿ ಚೀನಾಕ್ಕೆ ಆಪ್ತವಾಗುತ್ತಿರುವುದು ನಿಜಕ್ಕೂ ಆತಂಕದ ವಿಷಯವೇ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶನಂತರ ಚೀನಾ ನೇಪಾಳದಲ್ಲಿ ಗಟ್ಟಿಯಾಗಿ ತನ್ನ ಧ್ವಜ ಊರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ…

ನೇಪಾಳದಲ್ಲಿ ಚೀನಾದ ಪ್ರಭಾವ
ನೇಪಾಳವು ತನ್ನ ಅನೇಕ ಅಗತ್ಯಗಳಿಗಾಗಿ ಭಾರತದ ಮೇಲೆ ಅವಲಂಬಿತವಾಗಿದೆ. ಆದರೆ, ಆ ರಾಷ್ಟ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೀವ್ರತರ ಬದಲಾವಣೆ ಗೋಚರಿಸುತ್ತಿವೆ. ಇನ್ನು ಕೆ.ಪಿ. ಶರ್ಮಾ ಓಲಿ ನೇತೃತ್ವದ ಕಮ್ಯುನಿಸ್ಟ್‌ ಸರ್ಕಾರ ಬಂದ ನಂತರವಂತೂ, ನೇಪಾಳವನ್ನು ಭಾರತದಿಂದ ವಿಮುಖಗೊಳಿಸುವ ಕೆಲಸ ಜೋರಾಗಿ ನಡೆದಿದೆ. ಕಳೆದ ತಿಂಗಳ 26ನೇ ತಾರೀಖೀನಿಂದು ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ಕಾಠ್ಮಂಡುವಿನಲ್ಲಿ ತನ್ನ ಪಕ್ಷದ ಹಿರಿಯ ನಾಯಕರಿಗಾಗಿ ”Xi Jinping Thought”ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಜಿನ್‌ಪಿಂಗ್‌ರ ರಾಜಕೀಯ ಸಿದ್ಧಾಂತದ ಬಗ್ಗೆ ಬೋಧನೆ ಮಾಡಲು ಚೀನಾದಿಂದ 50 ಸದಸ್ಯರ ತಂಡವೊಂದು ನೇಪಾಳಕ್ಕೆ ಬಂದಿತ್ತು! ಆಡಳಿತ ಪಕ್ಷದ ಈ ನಡೆಗೆ ಪ್ರತಿಪಕ್ಷಗಳಿಂದ ಟೀಕೆ ಎದುರಾಯಿತು.

ಅಮೆರಿಕವನ್ನೂ ಕೇರ್‌ ಮಾಡುತ್ತಿಲ್ಲ
ಅಮೆರಿಕ ಕೂಡ ನೇಪಾಳಕ್ಕೆ ಹತ್ತಿರವಾಗುವ ಪ್ರಯತ್ನ ನಡೆಸಿದೆ. ಒಂದೆಡೆ ಚೀನಾ ತನ್ನ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಯ ಚಿಂತನೆಯಲ್ಲಿದ್ದರೆ, ಇನ್ನೊಂದೆಡೆ ಅಮೆರಿಕ ಇಂಡೋ-ಪೆಸಿಫಿಕ್‌ ನೀತಿಯ ಮೇಲೆ ಕೆಲಸ ಮಾಡುತ್ತಿದೆ. ಇದೇ ವರ್ಷದ ಜೂನ್‌ ತಿಂಗಳಲ್ಲಿ ಅಮೆರಿಕದ ರಕ್ಷಣಾ ವಿಭಾಗವು ತನ್ನ ಇಂಡೋ-ಪೆಸಿಫಿಕ್‌ ಸ್ಟ್ರಾಟೆಜಿ ರಿಪೋರ್ಟ್‌ನಲ್ಲಿ ನೇಪಾಳದೊಂದಿಗಿನ ಸಹಭಾಗಿತ್ವದ ಪ್ರಾಮುಖ್ಯತೆಯ ಬಗ್ಗೆ ಪ್ರಸ್ತಾಪ ಮಾಡಿದೆ. “ಅಮೆರಿಕವು ನೇಪಾಳದೊಂದಿಗಿನ ತನ್ನ ರಕ್ಷಣಾ ಸಹಯೋಗವನ್ನು ಹೆಚ್ಚಿಸಲು ಬಯಸುತ್ತದೆ. ನಮ್ಮ ಸಹಭಾಗಿತ್ವವು ವಿಪತ್ತು ನಿರ್ವಹಣೆ, ಶಾಂತಿ ಕಾರ್ಯಾಚರಣೆ ಮತ್ತು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಮುಖ್ಯವಾಗುತ್ತದೆ’ ಎಂದು ಅಮೆರಿಕ ಹೇಳಿತ್ತು. ಆದರೆ ನೇಪಾಳ ಸರ್ಕಾರ ಅಮೆರಿಕದ ಈ ಪ್ರಯತ್ನಕ್ಕೆ ಋಣಾತ್ಮಕ ಪ್ರತಿಕ್ರಿಯೆ ನೀಡಿದೆ! “ಚೀನಾದ ವಿರುದ್ಧ ಹೆಜ್ಜೆ ಇಡುವ ಯಾವುದೇ ದೇಶದೊಂದಿಗೂ ನಮಗೆ ಮಿಲಿಟರಿ ಮೈತ್ರಿ ಬೇಡ’ ಎಂದು ಓಲಿ ಸರ್ಕಾರ ಖಡಕ್ಕಾಗಿ ಹೇಳಿತು. ಅಮೆರಿಕದ ಇಂಡೋ-ಪೆಸಿಫಿಕ್‌ ನೀತಿಯಲ್ಲಿ ಪಾಲ್ಗೊಳ್ಳಬೇಡಿ ಎಂದು ನೇಪಾಳಕ್ಕೆ ಚೀನಾ ಸರ್ಕಾರವೇ ವಿನಂತಿ(ಆದೇಶ)ಮಾಡಿತ್ತು.

ನೇಪಾಳದ ಶಾಲೆಯಲ್ಲಿ ಚೀನಿ ಭಾಷೆ!
ನೇಪಾಳದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಚೀನಾ ಮ್ಯಾಂಡರಿನ್‌ ಭಾಷೆಯನ್ನೂ ಸಕ್ಷಮವಾಗಿ ಬಳಸುತ್ತಿದೆ. ಓಲಿ ಸರ್ಕಾರ ನೇಪಾಳದ ಅನೇಕ ಶಾಲೆಗಳಲ್ಲಿ ಮ್ಯಾಂಡರಿನ್‌ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ನೇಪಾಳದ ಖಾಸಗಿ ಶಾಲೆಗಳಲ್ಲಿ ಮ್ಯಾಂಡರಿನ್‌ ಕಲಿಸುವ ಶಿಕ್ಷಕರಿಗೆ ಚೀನಾ ಸರ್ಕಾರವೇ ಸಂಬಳ ಕೊಡುತ್ತಿದೆ! ಕಾಠ್ಮಂಡುವಿನಲ್ಲಿನ ಚೀನಾ ರಾಯಭಾರ ಕಚೇರಿಯಿಂದಲೇ ಇವರಿಗೆಲ್ಲ ಸಂಬಳ ಸಂದಾಯವಾಗುತ್ತಿದೆ ಎನ್ನುತ್ತದೆ ನೇಪಾಳದ “ಹಿಮಾಲಯನ್‌ ಟೈಮ್ಸ್‌’ ವರದಿ.

ಜಿನ್‌ಪಿಂಗ್‌ ಮೊದಲ ಭೇಟಿ
ಕ್ಸಿ ಜಿನ್‌ಪಿಂಗ್‌ ನೇಪಾಳ ಭೇಟಿಗೆ 1.5 ವರ್ಷಗಳಿಂದ ಸಿದ್ಧತೆ ನಡೆಯುತ್ತಾ ಬಂದಿತ್ತು. ಈ ಅವಧಿಯಲ್ಲಿ ಚೀನಾದ ಉಚ್ಚಸ್ತರದ ಅಧಿಕಾರಿಗಳು ಮತ್ತು ರಾಜಕಾರಣಿಗಳು 9 ಬಾರಿ ನೇಪಾಳಕ್ಕೆ ಬಂದುಹೋಗಿದ್ದರು.

ಆದಾಗ್ಯೂ ಈ ಭೇಟಿಯಲ್ಲಿ ಬೆಲ್ಟ್ ಅಡ್‌ ರೋಡ್‌(ಬಿಆರ್‌ಐ) ಯೋಜನೆಯ ವಿಚಾರದಲ್ಲಿ ಹೆಚ್ಚು ಚರ್ಚೆ ನಡೆಯಬಹುದು ಎಂದು ಭಾವಿಸಲಾಗಿತ್ತಾದರೂ, ಚೀನಾ ನೇಪಾಳದ ಮೇಲೆ ಈ ವಿಷಯವಾಗಿ ಸದ್ಯಕ್ಕಂತೂ ಒತ್ತಡ ಹೇರಿಲ್ಲ. ನೇಪಾಳವು ಬಿಆರ್‌ಐ ಯೋಜನೆಯಲ್ಲಿ ಶಾಮೀಲಾಗಿ ಆಗಲೇ 2 ವರ್ಷಗಳಾಗಿವೆ. ಆದರೆ ಇಲ್ಲಿಯವರೆಗೂ ಹೇಳಿಕೊಳ್ಳುವಂಥ ಕೆಲಸಗಳೇನೂ ಆರಂಭವಾಗಿಲ್ಲ. ಇನ್ನು, ಟಿಬೆಟ್‌ನಿಂದ ತಪ್ಪಿಸಿಕೊಂಡು ನೇಪಾಳಕ್ಕೆ ಓಡಿ ಬಂದವರನ್ನು ಚೀನಾಕ್ಕೆ ಗಡಿಪಾರು ಮಾಡುವ ವಿಚಾರದಲ್ಲೂ ಒಪ್ಪಂದಗಳಾಗಬಹುದು ಎಂಬ ಆತಂಕ ಎದುರಾಗಿತ್ತಾದರೂ (ನೇಪಾಳದಲ್ಲಿ 20 ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರಿದ್ದು, ಇವರೆಲ್ಲ ಚೀನಾದ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಓಡಿಬಂದವರು). ಸದ್ಯಕ್ಕಂತೂ ಇಂಥ “ಕ್ರೂರ’ ನಡೆಗೆ ಎರಡೂ ಸರ್ಕಾರಗಳು ಮುಂದಾಗಿಲ್ಲ. ಹಾಂಗ್‌ಕಾಂಗ್‌ನಲ್ಲಿ ತನ್ನ ಆಡಳಿತ ವಿರುದ್ಧ ಎದುರಾಗಿರುವ ಜನ ಸಮರದಿಂದ ಎಚ್ಚೆತ್ತುಕೊಂಡಿರುವ ಜಿನ್‌ಪಿಂಗ್‌ ಸರ್ಕಾರ, ಈಗ ಟಿಬೆಟಿಯನ್ನರ ತಂಟೆಗೆ ಹೋಗಿ ಕೈಸುಟ್ಟುಕೊಳ್ಳಲು ಮುಂದಾಗಿಲ್ಲವಷ್ಟೆ.

ಬಂದರು ಬಳಸಿ ಎಂದ ಚೀನಾ
ಇಂದು ಚೀನಾ-ನೇಪಾಳದ ಸಂಬಂಧಗಳಲ್ಲಿ ಯಾವ ರೀತಿಯ ಪ್ರಗತಿ ಆಗಿದೆ ಎಂದರೆ, ಚೀನಾವು ತನ್ನ ಬಂದರುಗಳನ್ನು ಬಳಸಿಕೊಳ್ಳಲು ನೇಪಾಳಕ್ಕೆ ಅನುಮತಿ ನೀಡಿದೆ. ಚೀನಾದ ಥಿಯಾಂಜಿನ್‌, ಶೆಂಜೆನ್‌, ಲಿಯಾನ್ಯುಕ್‌ ಮತ್ತು ಶ್ಯಾಂಜಿಯಾಂಗ್‌ ಬಂದರುಗಳನ್ನು ನೇಪಾಳ ಬಳಸಿಕೊಳ್ಳಲಾರಂಭಿಸಿದೆ.

ನೇಪಾಳಕ್ಕೆ ನೋಟ್‌ಬಂದಿಯ ಪೆಟ್ಟು
2015ರಲ್ಲಿ ನೇಪಾಳ ಹೊಸ ಸಂವಿಧಾನವನ್ನು ಅಳವಡಿಸಿಕೊಂಡಿತು. ನವ ಸಂವಿಧಾನದಲ್ಲಿನ ಕೆಲ ಬದಲಾವಣೆಗಳ ಬಗ್ಗೆ ಭಾರತಕ್ಕೆ ತಕರಾರು ಇತ್ತು. ಈ ಅಸಮಾಧಾನವನ್ನು ಭಾರತ “ಅನಧಿಕೃತ ಆರ್ಥಿಕ ದಿಗ್ಬಂಧನದ’ ಮೂಲಕ ಹೊರಹಾಕಿತು ಎಂದು ನೇಪಾಳ ಹೇಳುತ್ತದೆ. 2 ತಿಂಗಳು ನೇಪಾಳದೊಂದಿಗಿನ ಭಾರತದ ವಹಿವಾಟು ನಿಂತೇ ಹೋಯಿತು. ಆ ಆರ್ಥಿಕ ಸಂಕಟವು ನೇಪಾಳವನ್ನು ವಿಪರೀತ ಕಂಗೆಡಿಸಿದ್ದು ಸುಳ್ಳಲ್ಲ. ಆಗ ಪೆಟ್ರೋಲ್‌, ಆಹಾರ ಸೇರಿದಂತೆ ಅನೇಕ ರೀತಿಯಲ್ಲಿ ಚೀನಾದಿಂದ ಭರಪೂರ ನೆರವು ನೇಪಾಳಕ್ಕೆ ಸಿಕ್ಕಿತ್ತು. ಇನ್ನು ಅದೇ ವರ್ಷವೇ ಆ ರಾಷ್ಟ್ರಕ್ಕೆ ತೀವ್ರತರ ಭೂಕಂಪವೂ ಬಂದಪ್ಪಳಿಸಿತ್ತು. ಆಗಲೂ ಭಾರತ ನೇಪಾಳದ ಸಹಾಯಕ್ಕೆ ಮುಂದಾಯಿತಾದರೂ, ನೇಪಾಳದ ಜನರು ಭಾರತ ಸರ್ಕಾರ, ಭಾರತೀಯ ಮಾಧ್ಯಮಗಳ ವಿರುದ್ಧ ಸಿಡಿದೆದ್ದರು. ಸಹಾಯ ಮಾಡುವ ಹೆಸರಲ್ಲಿ ಭಾರತ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲೇ ನಿರತವಾಗಿದೆ ಎಂಬ ಆರೋಪ ಎದುರಾಯಿತು(ಆದಾಗ್ಯೂ ಈ ರೀತಿಯ ಆಕ್ರೋಶವು ಕಮ್ಯುನಿಸ್ಟ್‌ ಸರ್ಕಾರದ ಅಪಪ್ರಚಾರವಷ್ಟೇ, ಸಾಮಾನ್ಯ ನೇಪಾಳಿಗರಿಗೆ ಭಾರತದ ಮೇಲೆ ಮುನಿಸಿಲ್ಲ ಎಂಬ ವಾದವೂ ಇದೆ). ಭೂಕಂಪದ ಸಮಯದಲ್ಲೂ ನೇಪಾಳಕ್ಕೆ ಚೀನಾ ಭರಪೂರ ಸಹಾಯ ಮಾಡಿದ್ದಂತೂ ಸುಳ್ಳಲ್ಲ. ಇನ್ನು 2016ರ ನೋಟ್‌ಬಂದಿ ಕೂಡ ನೇಪಾಳದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿತು(ನೇಪಾಳದಲ್ಲಿ ಭಾರತದ ನೋಟುಗಳು ಚಲಾವಣೆಯಲ್ಲಿವೆ. ಭಾರತ ಸರ್ಕಾರವು ಹಳೆಯ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ವಿಚಾರದಲ್ಲಿ ವಿಳಂಬ ತೋರಿದ್ದರಿಂದ, ನೇಪಾಳವು ಭಾರತದ 2000, 500 ನೋಟ್‌ಗಳನ್ನೇ ಈಗ ಬ್ಯಾನ್‌ ಮಾಡಿದೆ.) ಭಾರತ-ನೇಪಾಳದ ನಡುವೆ ಇಂಥ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಆ ಅವಕಾಶವನ್ನು ಬಹಳ ಚಾತುರ್ಯದಿಂದ ಬಳಸಿಕೊಂಡಿದ್ದೇ ಚೀನಾದ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ ವಿಶ್ಲೇಷಕರು. ಇನ್ನು ಭಾರತ-ನೇಪಾಳದ ಮಧ್ಯೆ ಗಡಿ ಸಮಸ್ಯೆಯೂ ಇದ್ದು, ಈ ವಿಚಾರದಲ್ಲೂ ಚೀನಾ ಓಲಿ ಸರ್ಕಾರದ ಬೆನ್ನಿಗೆ ನಿಂತಿದೆ.

ಒಂದು ಕಾಲದಲ್ಲಿ ಭಾರತದ ಪರವಿದ್ದರು ಓಲಿ
ಒಂದು ಕಾಲದಲ್ಲಿ ಓಲಿಯವರನ್ನು ಭಾರತದ ಸಮರ್ಥಕರು ಎಂದೇ ಗುರುತಿಸಲಾಗುತ್ತಿತ್ತು. 1996ರಲ್ಲಿ ಮಹಾಕಾಲಿ ನದಿಯ ಅಭಿವೃದ್ಧಿಗಾಗಿ ಭಾರತ ಮತ್ತು ನೇಪಾಳದ ನಡುವೆ ಆದ ಐತಿಹಾಸಿಕ ಒಪ್ಪಂದದಲ್ಲಿ ಓಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2007ರಲ್ಲಿ ಅವರು ನೇಪಾಳದ ವಿದೇಶಾಂಗ ಸಚಿವರಾದಾಗಲೂ ಭಾರತಕ್ಕೆ ಆಪ್ತರಾಗಿದ್ದರು. ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಓಲಿ ದೆಹಲಿಯ ಪತ್ರಿಕಾಗೋಷ್ಠಿಯನ್ನು ಸಂಬೋಧಿಸುತ್ತಾ ಕೇಳಿದ್ದರು-“”ಭಾರತೀಯ ಹೂಡಿಕೆದಾರರೂ ಪ್ರಪಂಚದಾದ್ಯಂತ ಹೂಡಿಕೆ ಮಾಡುತ್ತಾರೆ. ಆದರೆ ನೇಪಾಳದಿಂದ ಮಾತ್ರ ದೂರವಿದ್ದಾರೆ. ಯಾಕೆ ಹೀಗೆ? ನಾವೆಲ್ಲ ಭೌಗೋಳಿಕವಾಗಿ ಹತ್ತಿರದಲ್ಲಿದ್ದೇವೆ, ಓಡಾಟವು ಬಹಳ ಸುಲಭವಾಗಿದೆ, ಸಾಂಸ್ಕೃತಿಕ ಸಮಾನತೆಯೂ ಇದೆ. ಹೀಗಿದ್ದರೂ ನಮ್ಮಲ್ಲೇಕೆ ನೀವು ಹೂಡಿಕೆ ಮಾಡುತ್ತಿಲ್ಲ?”. ಇನ್ನೊಂದೆಡೆ ಚೀನಾ ಕೆಲ ವರ್ಷಗಳಿಂದ ನೇಪಾಳದಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಮೂಲಸೌಕರ್ಯಾಭಿವೃದ್ಧಿ ಯೋಜನೆಯಿಂದ ಹಿಡಿದು, ರಸ್ತೆ, ಆಸ್ಪತ್ರೆ, ಕಾಲೇಜು, ಮಾಲ್ಸ್‌, ರೈಲ್ವೆ ಲೈನ್‌ ಅಭಿವೃದ್ಧಿಗೂ ಚೀನಾ ಹಣ ಹೂಡುತ್ತಿದೆ ಮುಂದಿನ ದಿನಗಳಲ್ಲಿ ನೇಪಾಳದ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಜಿನ್‌ಪಿಂಗ್‌ ಈಗ ಭರವಸೆ ನೀಡಿದ್ದಾರೆ. ಈ ಎಲ್ಲಾ ಬದಲಾವಣೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಲೇಬೇಕಿದೆ. ಅತ್ತ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಬಂದು ಕುಳಿತಿರುವ ಚೀನಿಯರು ಈಗ ನೇಪಾಳಕ್ಕೂ ಬಂದು ಭಾರತವನ್ನು ಪೂರ್ಣವಾಗಿ ಸುತ್ತುವರಿಯುವುದು ಯಾವುದೇ ಕಾರಣದಿಂದಲೂ ಒಳ್ಳೆಯದಲ್ಲ.

ಸಮರಾಭ್ಯಾಸಕ್ಕೂ ಸೈ
ಇದೇ ವರ್ಷ ಭಾರತವು ಬಿಮ್‌ಸ್ಟೆಕ್‌ ದೇಶಗಳ ಸೈನ್ಯ ಅಭ್ಯಾಸದಲ್ಲಿ ಪಾಲ್ಗೊಳ್ಳಲು ನೇಪಾಳಕ್ಕೆ ಆಹ್ವಾನ ನೀಡಿತ್ತು. ಪುಣೆಯಲ್ಲಿ ಆಯೋಜಿತವಾದ ಈ ಸೇನಾಭ್ಯಾಸದಲ್ಲಿ ಭಾಗವಹಿಸಲು ನೇಪಾಳ ನಿರಾಕರಿಸಿತು. ಇದಾದ, ಕೇವಲ 12 ದಿನಗಳಲ್ಲಿ ಅದು ಚೀನಾದೊಂದಿಗೆ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿತು. ತನ್ಮೂಲಕ ಈಗ ತಾನೂ ಚೀನಾದೊಂದಿಗಿದ್ದೇನೆ ಎಂಬ ಸಂದೇಶವನ್ನು ನೇಪಾಳ ಭಾರತಕ್ಕೆ ಕಳುಹಿಸಿತು.

3500 ಕೋಟಿ ರೂ.
ನೇಪಾಳದ ಅಭಿವೃದ್ಧಿ ಯೋಜನೆಗಳಿಗಾಗಿ ಮುಂದಿನ 2 ವರ್ಷಗಳಲ್ಲಿ ಚೀನಾ ಒದಗಿಸಲಿರುವ ಹಣ.

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.