ಏಕಾಗ್ರತೆ ಇಲ್ಲದೆ ಯಶಸ್ಸು ಸಾಧ್ಯವೆ?


Team Udayavani, Mar 5, 2023, 6:05 AM IST

ಏಕಾಗ್ರತೆ ಇಲ್ಲದೆ ಯಶಸ್ಸು ಸಾಧ್ಯವೆ?

ಏಕಾಗ್ರತೆರಾಹಿತ್ಯ ಮನೋಸ್ಥಿತಿಯ ಬಗ್ಗೆ ವ್ಯಾಪಕವಾದ ಕಳವಳ ಅಥವಾ ಕಳಕಳಿ ವ್ಯಕ್ತವಾಗುತ್ತಿದೆ. ವಯಸ್ಸಿನ ಬೇಧವಿಲ್ಲದೆ ಈ ಸಂಗತಿಯು ಸಮಸ್ಯೆಯ ಕೂಪವನ್ನೇ ತಳೆಯುತ್ತಿದೆ. ಹಾಗೆ ನೋಡಿದರೆ ಭಾರತೀಯ ಪರಂಪರೆ, ಇತಿಹಾಸ, ಪುರಾಣ, ಸಾಹಿತ್ಯ, ಸಂಸ್ಕೃತಿ, ಕಲಾ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಕಾಲಿಕ ಮೌಲ್ಯದ ಸಾಧನೆಯಾಗಿರುವುದು ಈ ರೀತಿಯ ಏಕಾಗ್ರತೆಯನ್ನು ಹೊಂದಿದ ವ್ಯಕ್ತಿಗಳಿಂದ.

ಏಕಾಗ್ರತೆ. Concentration ಎಂದರೇನು? ಒಂದು ರೀತಿಯಲ್ಲಿ ವ್ಯಾಖ್ಯಾನಕ್ಕೆ ಮೀರಿದ ಪ್ರಶ್ನೆ ಇದು ಎಂಬ ತಾರ್ಕಿಕ ಉತ್ತರ ದೊರೆಯ ಬಹುದು. ಆದರೆ, ಪರಂಪರೆ ಅಂತಃಸತ್ವವನ್ನು ಒಂದಿಷ್ಟು ಬಗೆದು ನೋಡಿದರೆ ನಿಜಾರ್ಥವು ಖಂಡಿತವಾಗಿಯೂ ದೊರೆಯುವುದು. ಒಂದು ಪ್ರಾತಿನಿಧಿಕ ವಾದ ಉದಾಹರಣೆಯನ್ನು ನೀಡುವುದಾದರೆ-ಯೋಗ. ದೈಹಿಕ ಮತ್ತು ಮಾನಸಿಕವಾದ ಏಕಾಗ್ರತೆಯನ್ನು ಏಕಕಾಲದಲ್ಲಿ ರೂಪಿಸುವ ಬಗೆ ಇದು. ಆದ್ದರಿಂದ, ಭಾರತದ ಈ ಕೊಡುಗೆ ಈಗ ವಿಶ್ವಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.

ಭಾರತದ ಋಷಿ ಮುನಿಗಳ ಪರಂಪರೆ ಈ ನಿಟ್ಟಿನಲ್ಲಿ ಉಲ್ಲೇಖನೀಯ. ಆಗಿನ ಸಂದರ್ಭದಲ್ಲಿ ಅದು ಸಾಧ್ಯವಾಗಿತ್ತು. ಹೇಗೆಂದರೆ, ಏಕಾಂತದಿಂದ ಏಕಾಗ್ರತೆಯನ್ನು ಸಾಧಿಸಬಹು ದೆಂದು ಅವರು ಅರಿತಿದ್ದರು. ಅದಕ್ಕಾಗಿ, ಪರ್ವತ- ದಟ್ಟ ಅರಣ್ಯ- ನದಿ ತೀರಗಳನ್ನು ಅವರು ಆಶ್ರಯಿಸಿದರು. ಉಸಿ ರಾಡಲು ಗಾಳಿ, ಕುಡಿಯಲು ನೀರು, ಕಂಡ ಮೂಲಾಹಾರಗಳು ಅವರದ್ದಾಗಿತ್ತು. ಏಕಾಗ್ರತೆಯಿಂದ ಅವರು ಸಾಧಿಸಿದ್ದನ್ನು ಮನುಕುಲಕ್ಕೆ ಹಂಚಿದರು.

ಆದರೆ, ಅಂತಹ ಹಿನ್ನೆಲೆ ಈಗೆಲ್ಲಿದೆ ? ಒಂದು ರೀತಿಯಲ್ಲಿ ಪ್ರತೀ ಕ್ಷಣವೂ ಏಕಾಂತಕ್ಕೆ ಅಥವಾ ಏಕಾಗ್ರತೆಗೆ ಭಂಗ ಉಂಟಾ ಗುವ ಜೀವನ ಶೈಲಿಯು ಅಯಾಚಿತವಾಗಿ ಅಥವಾ ಅನಿ ವಾರ್ಯವಾಗಿ ನಮಗೆ ಬಂದೊದಗಿದೆ. ಸಾಧನೆಯ ಹಾದಿ ಯಲ್ಲಿ ಏಕಾಗ್ರತೆಯನ್ನು ಕ್ಷಣಕ್ಷಣಕ್ಕೂ ಕಳೆದುಕೊಳ್ಳುವಂತಾಗಿದೆ.ಹಾಗೆಂದು, ಸಮಕಾಲೀನವಾದ ಜಗತ್ತಿನಲ್ಲಿ ಏಕಾಗ್ರತೆಯೇ ಇಲ್ಲ; ಹೊಸತನಗಳನ್ನು ಒದಗಿಸುವ ಸಾಧನಗಳೇ ಆಗಿಲ್ಲ ಎಂದು ಅರ್ಥವಲ್ಲ. ಈ ಚಿಂತನೆಗಳಿಗೆ ಸಾರ್ವತ್ರಿಕ ರೂಪ ದೊರೆಯಬೇಕು ಎಂಬ ಆಶಯ.

ಏಕಾಗ್ರತೆಗೆ ಮತ್ತು ಗುರಿಸಾಧನೆಗೆ ಸಂಬಂಧಿತ ಮಹಾ ಭಾರತದ ಕತೆಯೊಂದನ್ನು ಇಲ್ಲಿ ಉಲ್ಲೇಖೀಸುವುದು ಸೂಕ್ತವಾಗ ಬಹುದು. ಮರದ ತುದಿ ರೆಂಬೆಯಲ್ಲಿದ್ದ ಪಕ್ಷಿಯ ಕಣ್ಣನ್ನು ಬಾಣಕ್ಕೆ ಗುರಿಯಾಗಿ ಗುರುಗಳು ನೀಡಿದ್ದಾರೆ. ಉಳಿದವರಿಗೆಲ್ಲ ಮರ, ಎಲೆ, ರೆಂಬೆ, ಹಕ್ಕಿ ಕಾಣಿಸಿದರೆ ಅರ್ಜುನನಿಗೆ ಹಕ್ಕಿಯ ಕಣ್ಣು ಮಾತ್ರ ಗೋಚರಿಸಿದೆ. ಹೀಗಾಗಿ, ಅನೇಕ ಸಾಧ್ಯತೆಗಳನ್ನು ಮತ್ತು ಹೊಂದಬೇಕಾದ ಏಕೈಕ ಗುರಿಯ ಬಗ್ಗೆ ವಿವರಿಸುವ ಕಥಾನಕವಿದು.

ಸಮಕಾಲೀನ ಸಂದರ್ಭದಲ್ಲಿ ಅನೇಕ ಸಾಧ್ಯತೆಗಳು ಏಕಕಾಲಕ್ಕೆ ಲಭ್ಯ ಆಗಿರುವುದೇ ಆಧುನಿಕ ರೀತಿಯ ಅಸಹಜ ಒತ್ತಡಗಳಿಗೆ ಕಾರಣವಾಗಿದೆ.

ಈ ಬಗ್ಗೆ ಕೇವಲ 25-30 ವರ್ಷ ಹಿಂತಿರುಗಿ ನೋಡಿದರೆ ಸಾಕು. ಆ ಕಾಲಕ್ಕೆ ಒಂದು ಕಾದಂಬರಿಯ, ದೈನಿಕ ಸಹಿತ ಎಲ್ಲಾ ನಿಯತಕಾಲಿಕ ಗಳ, ಸಾಹಿತ್ಯ ಕೃತಿಗಳ ಓದುವಿಕೆ ಒಂದೇ ಹಂತದಲ್ಲಿ ಪೂರ್ಣ ವಾಗುತ್ತಿತ್ತು. ಅಂದರೆ, ಒಂದು ಕಾದಂಬರಿಯನ್ನು ಓದಲು ಕೈಗೆತ್ತಿ ಕೊಂಡರೆ, ಅದರ ಮೊದಲ ಪುಟದಿಂದ ಕೊನೆಯ ಪುಟದ ತನಕದ ಓದು ಸತತವಾಗಿರುತ್ತಿತ್ತು. ಇದೇ ಮಾತು ಭಜನೆ, ಸಂಕೀರ್ತನೆ, ಸಂಗೀತಗೋಷ್ಠಿ, ಯಕ್ಷಗಾನ, ಹರಿಕತೆ ಮುಂತಾದ ಎಲ್ಲಾ ಲಲಿತ ಕಲೆಗಳ ವೀಕ್ಷಣೆ- ಕೇಳುವಿಕೆಗೂ ಅನ್ವಯ.

ರೇಡಿಯೋಗದಲ್ಲಿನ ನಿರ್ದಿಷ್ಟ ಕಾರ್ಯ ಕ್ರಮಗಳನ್ನು ಆಲಿಸು ವುದು; ಟಿವಿಯ ಆರಂಭಿಕ ವರ್ಷಗಳಲ್ಲಿ ಧಾರಾವಾಹಿಗಳ ವೀಕ್ಷಣೆ ಕೂಡಾ. ಎಲ್ಲವೂ ಏಕಾಗ್ರತೆಯ ಚೌಕಟ್ಟಿನಲ್ಲಿರುತ್ತಿತ್ತು. ಈ ಮೂಲಕ ಏನು ಸಾಧನೆಯಾಯಿತು ಎಂಬ ಪ್ರಶ್ನೆ ಉದ್ಭವಿಸಿದರೆ, ಅದಕ್ಕೆ ಉತ್ತರ: ಮನಸ್ಸನ್ನು ಅರಳಿಸುವ ರಸಗ್ರಹಣ.

ಆದರೆ, ಈಗ ನೂರಾರು ಅಡಚಣೆಗಳು. ಕಾದಂಬರಿ ಅಥವಾ ಸಾಹಿತ್ಯ ಕೃತಿಯನ್ನು ಓದಲು ಆರಂಭಿಸಿದ ಅಥವಾ ಮಧುರ ವಾದ ಸಂಗೀತ ಆಸ್ವಾದಿಸಲು ಆರಂಭವಾದ‌ ರಿಂಗಣಗೊಳ್ಳುವ ಸೆಲ್‌ಫೋನ್‌, ವಾಟ್ಸಾಪ್‌- ಇನ್‌ಸ್ಟಾಗ್ರಾಂ ಸಂದೇಶಗಳು, ಸ್ನೇಹಿತರ ಕರೆಗಳು ಇತ್ಯಾದಿ! ಹೀಗೆ, ಕಾದಂಬರಿಯ ಮೊದಲ ಪುಟವನ್ನೇ ಹತ್ತಾರು ಬಾರಿ ಓದಿದವರಿರಬಹುದು; ಇದು ಆಕ್ಷೇಪಣೆಯಲ್ಲ; ನಾವು ಕಳೆದುಕೊಳ್ಳುವ ಸಹೃದಯಿ ಅನುಸಂಧಾನದ ಬಗೆಗಿನ ಆತಂಕ ಅಷ್ಟೆ! ಇತ್ತೀಚೆಗೆ ವಿವಿಧೆಡೆ ಆರಂಭವಾಗಿರುವ ಏಕಾಗ್ರತಾ ಜಾಗೃತಿಯ ಶಿಬಿರಗಳು ಈ ಮಾತನ್ನು ಪುಷ್ಟೀಕರಿಸುತ್ತದೆ.

ಅಂದಹಾಗೆ: ಇದು ಓದಿದ ನೆನಪು ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನೆಸಿ, ಮರು ಮುಂಜಾನೆ ತಿಂದರೆ, ನೆನಪಿನ ಶಕ್ತಿ ವೃದ್ಧಿಸುತ್ತದೆ. ಆತ ಬಾದಾಮಿಯನ್ನು ತಂದ. ಆದರೆ, ರಾತ್ರಿ ನೀರಲ್ಲಿ ನೆನೆಯ ಹಾಕಲು ಮರೆತ !

-ಮನೋಹರ ಪ್ರಸಾದ್‌

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.