ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ
ಲಸಿಕೆಯ ತಂತ್ರಜ್ಞಾನವನ್ನೇ ಉಪಯೋಗಿಸಿ ಈ ಲಸಿಕೆಯನ್ನು ತಯಾರಿಸಿದ್ದಾರೆ.
Team Udayavani, Oct 27, 2021, 11:34 AM IST
ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಪ್ರಮುಖ ಅಸ್ತ್ರ. ಇನ್ನು ಕೆಲವೇ ದಿನಗಳಲ್ಲಿ ಭಾರತ 100 ಕೋಟಿ ಲಸಿಕೆ ಡೋಸ್ ಹಾಕಿದ ಕೀರ್ತಿಗೂ ಪಾತ್ರವಾಗಲಿದೆ. ಇದರ ನಡುವೆಯೇ ಮಕ್ಕಳಿಗೂ ಲಸಿಕೆ ಹಾಕಲು ತಯಾರಿ ನಡೆಯುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ಕೊಡಬಹುದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಲಸಿಕೆ ಹಾಕಿಸಿದರೆ ಯಾವ ರೀತಿಯ ಪರಿಣಾಮ ಬೀರಲಿದೆ? ಏನಾದರೂ ಸೈಡ್ ಎಫೆಕ್ಟ್ಗಳಿವೆಯೇ? ಈ ಕುರಿತಾಗಿ ಆರೋಗ್ಯ ತಜ್ಞರು ಜನರ ಅನುಮಾನಗಳನ್ನು ನಿವಾರಿಸಿದ್ದಾರೆ.
ಮಕ್ಕಳಿಗೆ ಲಸಿಕೆ ಕೊಡಲು ಇದು ಸರಿಯಾದ ಸಮಯವೇ? ಅಥವಾ ಇನ್ನಷ್ಟು ದಿನ ಕಾಯಬೇಕಾ?
ಕೊವ್ಯಾಕ್ಸಿನ್ ಒಂದು ನಿಷ್ಕ್ರಿಯ ವೈರಲ್ ಘಟಕ. ಆದರೂ ಈ ಕುರಿತ ಅಧ್ಯಯನದ ಸಮಗ್ರ ವರದಿ ಇನ್ನೂ ಬಹಿರಂಗವಾಗಿಲ್ಲ. ಮಕ್ಕಳಿಗೆ ನೀಡುವಂಥ ಲಸಿಕೆಯ ತಂತ್ರಜ್ಞಾನವನ್ನೇ ಉಪಯೋಗಿಸಿ ಈ ಲಸಿಕೆಯನ್ನು ತಯಾರಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಈ ಲಸಿಕೆ ಸೇಫ್ ಆಗಿದೆ. ಆದರೂ ಈ ಕುರಿತ ಇನ್ನಷ್ಟು ವರದಿಗಳು ಬರುವ ವರೆಗೆ ಹೆತ್ತವರು ಕಾಯಬಹುದು.
ಎಷ್ಟು ಡೋಸ್ ನೀಡಲಾಗುತ್ತದೆ?
ವಯಸ್ಕರಿಗೆ ನೀಡುವ ಡೋಸ್‌ಗಿಂತ ಅರ್ಧದಷ್ಟು ಕಡಿಮೆ ಡೋಸ್ ಅನ್ನು ಮಕ್ಕಳಿಗೆ ನೀಡಲಾಗುತ್ತದೆ. ಅಂದರೆ ವಯಸ್ಕರಿಗೆ 1 ಎಂಎಲ್ ಡೋಸ್ ನೀಡಲಾಗುತ್ತಿದ್ದರೆ, ಮಕ್ಕಳಿಗೆ 0.5 ಡೋಸ್ ನೀಡಲಾಗುತ್ತದೆ. ಇದು ಇತರೆ ಲಸಿಕೆಗಳ ಹಾಗೆಯೇ ಸ್ನಾಯುವಿಗೆ ನೀಡುವಂಥ ಇಂಜಕ್ಷನ್. ಮಕ್ಕಳಿಗೆ ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುತ್ತದೆ.
ಮಕ್ಕಳಿಗೆ ಲಸಿಕೆ ಕೊಟ್ಟರೆ, ನಾವು ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆದ್ದಂತೆಯೇ?
ವಯಸ್ಕರಿಗೆ ಹೋಲಿಕೆ ಮಾಡಿದರೆ, ಮಕ್ಕಳ ಮೇಲೆ ಕೊರೊನಾ ಬೀರಿದ ಅಪಾಯ ಕಡಿಮೆಯೇ. ಆದರೂ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಎದುರಿಸುತ್ತಿರುವವರಲ್ಲಿ ಮಕ್ಕಳೂ ಇದ್ದಾರೆ. ಅಲ್ಲದೆ ಒಂದು ವೇಳೆ ಮಕ್ಕಳಿಗೆ ಕೊರೊನಾ ಬಂತು ಎಂದರೆ, ಇವರು ಸೂಪರ್ ಸ್ಪ್ರೆಡರ್ಸ್ ಆಗುತ್ತಾರೆ. ಇದರಿಂದಾಗಿ ವೈರಸ್ ರೂಪಾಂತರ ಹೊಂದಿ ಹೆಚ್ಚಿನ ಅಪಾಯಕ್ಕೂ ಕಾರಣವಾಗಬಹುದು. ಹೀಗಾಗಿ ಈ ಸೋಂಕು ಇನ್ನಷ್ಟು ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಮಕ್ಕಳಿಗೆ ಲಸಿಕೆ ಕೊಡುವುದು ಸೂಕ್ತ. ಸದ್ಯ ಭಾರತದಲ್ಲಿ ಶೇ.25ರಿಂದ 30ರಷ್ಟು 18 ವರ್ಷ ಒಳಗಿನವರು ಇದ್ದಾರೆ. ಕರ್ನಾಟಕವೊಂದರಲ್ಲೇ 1.7 ಕೋಟಿ 18 ವರ್ಷದ ಒಳಗಿನವರು ಇದ್ದಾರೆ. ಹೀಗಾಗಿ ಈ ಮಕ್ಕಳಿಗೆ ಲಸಿಕೆ ಕೊಟ್ಟರೆ ಸೋಂಕನ್ನೂ ತಡೆಗಟ್ಟಬಹುದು, ಸೋಂಕು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹಬ್ಬುವುದನ್ನೂ ತಡೆಯಬಹುದು.
ಲಸಿಕೆ ಪಡೆದ ಅನಂತರ ಮಕ್ಕಳ ಮೇಲೆ ಯಾವುದಾದರೂ ಪರಿಣಾಮಗಳು ಬೀರುತ್ತವೆಯೇ? ಅಂಥ ಪರಿಣಾಮ ಬೀರಿದರೆ ಏನು ಮಾಡಬೇಕು?
ಇತರ ಲಸಿಕೆಗಳಂತೆಯೇ ಈ ಲಸಿಕೆ ಪಡೆದ ಮೇಲೂ ಜ್ವರ, ಮೈಕೈನೋವುವಿನಂಥ ಸಮಸ್ಯೆಗಳು ಕಾಣಿಸಬಹುದು. ಆದರೆ ಇದರಿಂದ ಗಂಭೀರವಾದ ಪರಿಣಾಮವೇನೂ ಆಗದು. ಲಸಿಕೆ ಉತ್ತಮ ಪರಿಣಾಮ ಬೀರುತ್ತದೆ ಎಂದಾದರೆ, ಸಣ್ಣಪುಟ್ಟ ನೋವುಗಳನ್ನು ಸಹಿಸಿಕೊಳ್ಳಬಹುದು.
ಇದನ್ನೂ ಓದಿ:2 ಡೋಸ್ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು
ಭಾರತದ ಪರಿಸ್ಥಿತಿ ಹೇಗಿದೆ?
ಇತ್ತೀಚೆಗಷ್ಟೇ, ಭಾರತದ ಲಸಿಕಾ ತಜ್ಞರ ಸಮಿತಿ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ನೀಡಬಹು ದೆಂದು ಒಪ್ಪಿಗೆ ನೀಡಿದೆ. ಈಗಾಗಲೇ ಈ ವಯೋಮಿತಿಯ ಮಕ್ಕಳ ಮೇಲೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗಿದ್ದು ಅದು ಯಶಸ್ವಿಯಾಗಿದೆ. 12 ವರ್ಷದವರ ಮೇಲೆ ಝೈಡಸ್ ಕ್ಯಾಡಿಲಾ ಲಸಿಕೆಯನ್ನು ನೀಡುವ ಪ್ರಸ್ತಾವನೆಯ ಬಗ್ಗೆ ತಜ್ಞರು ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಜತೆಗೆ ಈ ಅಭಿಯಾನಕ್ಕೆ ಕೈ ಜೋಡಿಸಲು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ಬಯೋ ಲಜಿಕಲ್-ಇ ಸಂಸ್ಥೆಗಳ ಲಸಿಕೆಗಳ ಪ್ರಸ್ತಾವನೆ ಬಗ್ಗೆಯೂ ಚರ್ಚೆಗಳು ನಡೆದಿವೆ. 12ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಎಸ್‌ಐಐ ಸಂಸ್ಥೆ ತಯಾರಿಸಿರುವ ಕೊವೊವ್ಯಾಕ್ಸ್ (ನೊವೊವ್ಯಾಕ್ಸ್‌ನ ದೇಶೀಯ ಆವೃತ್ತಿ) ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈಗಾಗಲೇ 1000 ಮಕ್ಕಳ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು ಅದು ಸುರಕ್ಷಿತವೆಂದು ಪ್ರಮಾಣೀಕರಿಸಲ್ಪಟ್ಟಿದೆ. ಇನ್ನು, ಬಯೋಲಜಿಕಲ್ ಕಂಪೆನಿ, 5ರಿಂದ 18 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಸಂಶೋಧಿಸಲಾಗಿದ್ದು, ಅದರ ಕ್ಲಿನಿಕಲ್ ಟ್ರಯಲ್‌ನ 2ನೇ ಹಂತ ಈಗ ಚಾಲ್ತಿಯಲ್ಲಿದೆ. ಅದರ ಫಲಿತಾಂಶದ ಆಧಾರದ ಮೇಲೆ ಈ ಕಂಪೆನಿ ಸರಕಾರಕ್ಕೆ ಲಸಿಕೆ ಉಪಯೋಗಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಬಹುದು.
ಬೇರೆ ದೇಶಗಳಲ್ಲಿ ಲಸಿಕೆ ಪ್ರಕ್ರಿಯೆ?
ಭಾರತದಲ್ಲಿ ಈಗಷ್ಟೇ ಮಕ್ಕಳಿಗೆ ಲಸಿಕೆ ನೀಡುವ ಕೆಲಸ ಆರಂಭವಾಗಿದೆ. ಆದರೆ ಜಗತ್ತಿನ ಬೇರೆ ಬೇರೆ ದೇಶಗಳು ಈಗಾಗಲೇ ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ಪ್ರಯೋಗ ಮಾಡಿ, ಲಸಿಕೆ ಕೊಡುವ ಕೆಲಸವನ್ನೂ ಶುರು ಮಾಡಿವೆ. ಅಂಥ ದೇಶಗಳೆಂದರೆ,
ಹಂಗೇರಿ : 16ರಿಂದ 18 ವರ್ಷ
ಡೆನ್ಮಾರ್ಕ್: 12ರಿಂದ 15 ವರ್ಷ
ಸ್ಪೇನ್ : 12ರಿಂದ 19 ವರ್ಷ
ಫ್ರಾನ್ಸ್ : 12ರಿಂದ 17 ವರ್ಷ
ಜರ್ಮನಿ : 12 ವರ್ಷ ದಾಟಿದವರಿಗೆ
ಸ್ವೀಡನ್ : 12ರಿಂದ 15 ವರ್ಷ (ಇತರೆ ರೋಗಗಳಿದ್ದವರು)
ಇಟಲಿ : 12ರಿಂದ 15 ವರ್ಷ
ಬ್ರಿಟನ್ : 12ರಿಂದ 15 ವರ್ಷ
ಸ್ವಿಜರ್ಲೆಂಡ್ : 5ರಿಂದ 15 ವರ್ಷ
ಇಸ್ರೇಲ್ : 12 ವರ್ಷ ಮೇಲ್ಪಟ್ಟವರು
ಯುಎಇ : 3ರಿಂದ 17 ವರ್ಷ
ನ್ಯೂಜಿಲೆಂಡ್ : 12ರಿಂದ 15 ವರ್ಷ
ಆಸ್ಟ್ರೇಲಿಯಾ: 12 ವರ್ಷ ಮೇಲ್ಪಟ್ಟವರು
ಚೀನ : 3ರಿಂದ 17 ವರ್ಷ
ಜಪಾನ್ : 12 ವರ್ಷ ಮೇಲ್ಪಟ್ಟವರು
ಅಮೆರಿಕ : 5ರಿಂದ 11 ವರ್ಷ
ಕೆನಡಾ : 12ರಿಂದ 15 ವರ್ಷ
ಕ್ಯೂಬಾ : 2 ವರ್ಷ ಮೇಲ್ಪಟ್ಟವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.