Yakshagana ಪ್ರದರ್ಶನಕ್ಕೆ ಕಾಲಮಿತಿ ಬೇಕೇ? ಬೇಡವೇ?


Team Udayavani, Aug 27, 2023, 6:50 AM IST

Yaksha

“ಕಾಲದ ಕರೆಯಾಗಿ ಸ್ವೀಕರಿಸದ ಕಲೆ ಕಾಲಗರ್ಭವನ್ನು ಸೇರುತ್ತದೆ. ಯಕ್ಷಗಾನ ಆರಂಭವಾಗಿದ್ದೇ ಕಾಲಮಿತಿಯಲ್ಲಿ, 11-14ನೇ ಶತಮಾನದ ಮಧ್ಯೆ ಇದೊಂದು ಸಂಜೆ ಬೆಳಕಿನ ಸೇವೆಯಾಗಿತ್ತು. ಬಳಿಕ ಉದ್ದ ಆಗಿ, ತಿರುಗಾಟವಾಗಿ ಈಗ ಮತ್ತೆ ವಾಪಸು ಬರುತ್ತಿದೆ. ಈಗಿನ ಕಾಲಮಿತಿಗೆ 80 ವರ್ಷಗಳ ಇತಿಹಾಸ ಇದೆ. ಯಕ್ಷಗಾನದ ಸ್ವರೂಪ, ಸಂಚಲನೆ, ವಿಚಲನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಯಲ್ಲಿ ಯಾವುದೇ ವಸ್ತು ಸ್ವತಂತ್ರವಾಗಿರದು. ಹೊಸತನವನ್ನು ತರುವಾಗ ವಿಚಲನೆ ಉಂಟಾಗುವುದು ಸ್ವಾಭಾವಿಕ. ರಂಗದಲ್ಲಿ ಕಂಡದ್ದು, ಕಲೆಯಲ್ಲ. ಮನಸ್ಸಿನಲ್ಲಿ ಪೂರ್ಣ ಗೊಳಿಸುವುದೇ ಯಕ್ಷಗಾನ ಕಲೆ. ವಸ್ತುವನ್ನು ಯಕ್ಷಗಾನೀಕರಿಸಬೇಕು, ಹೊರತು ಯಕ್ಷಗಾನ ವನ್ನು ವಸ್ತುವನ್ನಾಗಿಸಬಾರದು.’- ಡಾ| ಎಂ. ಪ್ರಭಾಕರ ಜೋಷಿ.(2023ರ ಫೆ.11 ಮತ್ತು 12ರಂದು ನಡೆದ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಮೊದಲ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಮಾತುಗಳಿವು.)

ಈ ಸಮ್ಮೇಳನ ನಡೆಯುವ ಮೊದಲು ಮತ್ತು ಬಳಿಕವೂ ಯಕ್ಷಗಾನಕ್ಕೆ ಕಾಲಮಿತಿ ಬೇಕೇ, ಬೇಡವೇ? ಎಂಬ ಬಗ್ಗೆ ಸುದೀರ್ಘ‌ ಚರ್ಚೆಗಳು ನಡೆಯುತ್ತಲೇ ಇವೆ. ಸಮ್ಮೇಳನ ದಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಆದರೆ ತಾರ್ಕಿಕವಾಗಿ ಯಾವುದೇ ನಿರ್ಣಯ ಅಥವಾ ಫ‌ಲಿತಾಂಶ ಹೊರಬಿದ್ದಿಲ್ಲ. ಕಾಲಮಿತಿ ವಿಧಿಸಬೇಕು. ಆದರೆ ಯಕ್ಷಗಾನದ ಮೂಲ ಸತ್ವ ಮತ್ತು ಆಚರಣೆಗೆ ಚ್ಯುತಿ ಬರಬಾರದು ಎನ್ನುವುದು ಕೆಲವರ ವಾದ.

ಕಾಲಮಿತಿ ವಿಧಿಸದೇ ಪೂರ್ಣಪ್ರಸಂಗ ಪ್ರದರ್ಶನ ನಡೆಯಬೇಕು. ಆಗ ಮಾತ್ರ ಯಕ್ಷಗಾನದ ಪೂರ್ಣ ಸೌಂದರ್ಯ ಉಳಿಸಿ ಕೊಳ್ಳಲು ಸಾಧ್ಯ. ಪ್ರಸಂಗಳು ಕಾಲಮಿತಿಗೆ ಕಡಿತ ಮಾಡಿದಲ್ಲಿ ಮೂಲ ಸತ್ವಕ್ಕೆ ಧಕ್ಕೆಯಾಗು ತ್ತದೆ ಎಂಬುದು ಇನ್ನೊಂದು ವರ್ಗದ ವಾದ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ಕಾಲಮಿತಿಯ ಯಕ್ಷಗಾನ ಪ್ರದರ್ಶನವೂ ಆಗುತ್ತಿದೆ.

ಕರಾವಳಿ ಕರ್ನಾಟಕದ ಜನಪ್ರಿಯ ಕಲೆ ಗಳಲ್ಲಿ ಒಂದಾದ ಯಕ್ಷಗಾನ ಪ್ರಸ್ತುತ ವಿಶ್ವ ವ್ಯಾಪಿ. ಹೊರ ಜಿಲ್ಲೆ, ರಾಜ್ಯ, ದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ.( ಅಲ್ಲಿನ ವ್ಯವಸ್ಥೆಗೆ ತಕ್ಕಂತೆ ಯಕ್ಷಗಾನ ಮಾರ್ಪಾಟಾಗುತ್ತಿದೆ. ಆ ಮಾರ್ಪಾಟುಗಳಲ್ಲಿ ಕಾಲಮಿತಿಯೂ ಸೇರಿದೆ). ಯಕ್ಷಗುರುಗಳು ವಿದೇಶಕ್ಕೂ ಹೋಗಿ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನ ಕಲಿಯಲು ವಿದೇಶ ದಿಂದಲೂ ಇಲ್ಲಿಗೆ ಬರುವವರಿದ್ದಾರೆ.

ಯಕ್ಷಗಾನವನ್ನು ಇಡೀ ರಾತ್ರಿ ಆಲಿಸಿ, ಅದರ ಸವಿಯನ್ನು ಕಂಡವರು, ಉಂಡವರು ಈಗ ಕಾಲಮಿತಿಗೆ ಒಗ್ಗಿಕೊಳ್ಳಲು ಸುಲಭದಲ್ಲಿ ಒಪ್ಪುವುದಿಲ್ಲ. ಒಪ್ಪಬೇಕು ಎಂಬ ನಿಯಮವೂ ಇಲ್ಲ. ರಾತ್ರಿ ಇಡೀ ಕುಳಿತು ನೋಡುವವರು ಕಡಿಮೆಯಾಗಿದ್ದಾರೆ ಎಂಬ ಸತ್ಯವೂ ಇದರಲ್ಲಿದೆ. ಆಧುನಿಕ ಅನಿವಾರ್ಯತೆಯು ಯಕ್ಷಗಾನವನ್ನು ಕಾಲಮಿತಿಗೆ ತಂದು ನಿಲ್ಲಿಸಿದೆ. ಕಾಲಮಿತಿ ವಿಧಿಸುವುದು ಸರಿಯಲ್ಲ ಎಂಬ ಹೋರಾಟ, ಆಗ್ರಹ ದಶಕಗಳಿಂದಲೂ ನಡೆಯುತ್ತಲೇ ಬಂದಿದೆ.

ದಶಕದ ಹಿಂದೆ(2013 ಆಗಸ್ಟ್‌) ಮಂದಾರ್ತಿಯಲ್ಲಿ ನಡೆದ ಯಕ್ಷಗಾನ ಚಿಂತನ ಸಭೆಯಲ್ಲಿ ಮಂದಾರ್ತಿ ದಶಾವತಾರ ಮೇಳದ ಹರಕೆ ಬಯಲಾಟಗಳಲ್ಲಿ ಕಾಲಮಿತಿ ಪ್ರಯೋಗ ಪ್ರಸ್ತುತತೆಯ ಸುದೀರ್ಘ‌ ಚರ್ಚೆ ನಡೆದಿತ್ತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಪ್ರದರ್ಶವನ್ನು ಕಾಲಮಿತಿಗೆ ಒಳಪಡಿಸುವ ನಿರ್ಧಾರಕ್ಕೆ 2022ರಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗೆ ಹಲವು ಮೇಳಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕಾಲಮಿತಿ ಬೇಕು ಮತ್ತು ಬೇಡ ಎನ್ನುವ ವರ್ಗ ಎಲ್ಲ ಮೇಳಗಳಲ್ಲೂ ಇವೆ.

ಅನಿವಾರ್ಯತೆಗಳ ಮಧ್ಯೆ ಹಲವು ಪ್ರದರ್ಶನಗಳಿಗೆ ಈಗಾಗಲೇ ಕಾಲಮಿತಿ ನಿಗದಿಯಾಗಿದೆ. ಅದಕ್ಕೆ ತಕ್ಕಂತೆ ಪ್ರಸಂಗವನ್ನು ಟ್ರಿಮ್‌ ಮಾಡಲಾಗುತ್ತಿದೆ ಮತ್ತು ಕಾಲಮಿತಿಗೆ ಅನುಗುಣವಾಗಿಯೇ ಪ್ರಸಂಗದ ರಚನೆಯೂ ನಡೆಯುತ್ತಿದೆ.

ಮಹಾನಗರಗಳಿಗೆ ಸೀಮಿತವಾಗಿದ್ದ ಕಾಲಮಿತಿ ಯಕ್ಷಗಾನ ಪ್ರದರ್ಶನ ಈಗ ಹಳ್ಳಿಯೂ ತಲುಪಿದೆ. ರಾತ್ರಿ 12ರ ಅನಂತರ ಯಕ್ಷಗಾನವನ್ನು ನೋಡುವವರು ಇರುವುದಿಲ್ಲ ಎಂಬುದು ಮುಖ್ಯಕಾರಣ. ಇದಕ್ಕೆ ಹೊಂದಿಕೊಂಡು ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಕಲಾಮಿತಿ ಅಗತ್ಯ ಎಂಬುದು ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಸಂಗತಿ. ಅದು ಕಡೆಗಣಿಸುವಂಥದೂ ಅಲ್ಲ.

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.