ಟಿಪ್ಪು ಜಯಂತಿ ಮಾಡುವುದು ಸರಿಯೇ?


Team Udayavani, Nov 10, 2017, 5:23 AM IST

10-11.jpg

ನಾವೇನು ಮುಸಲ್ಮಾನರ ವಿರೋಧಿಗಳಲ್ಲ. ಸಾಧ್ಯವಾದರೆ ಸರ್ಕಾರವೇ ಮುಂದೆ ನಿಂತು ಸಂತ ಶಿಶುನಾಳ ಶರೀಫಜ್ಜನ ಜಯಂತಿ ಮಾಡಲಿ, ಇಡೀ ಕನ್ನಡ ಕುಲವೇ ಹೆಮ್ಮೆಯಿಂದ ಹಬ್ಬ ಆಚರಣೆ ಮಾಡುತ್ತದೆ. ಡಾ.ಅಬ್ದುಲ್‌ ಕಲಾಂ ಅವರ ಜನ್ಮ ಜಯಂತಿ ಮಾಡಲಿ ಬೇಕಾದರೆ, ಮನೆ ಮನೆಗೆ ಕಲಾಂರ ಬದುಕಿನ ಪ್ರೇರಣೆಯ ಕತೆಯನ್ನು ತಲುಪಿಸುವ ಕೆಲಸ ನಾವು ಮಾಡುತ್ತೇವೆ.

ಕಳೆದ ಮೂರು ವರ್ಷಗಳ ತೀವ್ರ ವಿರೋಧ, ಕುಟ್ಟಪ್ಪ ಹತ್ಯೆ, ಮಡಿಕೇರಿ ಗಲಭೆ, ಮರುವರ್ಷ ಮೈಸೂರಿನ ರವಿ ಮಾಕಳಿ ಹತ್ಯೆ, ಒಡೆದ ಮನಸ್ಸುಗಳ ನಡುವೆ ಕೂಡಾ ಟಿಪ್ಪು ಜಯಂತಿ ನಡೆಸಿಯೇ ಸಿದ್ಧ ಎಂದು ಮುಖ್ಯಮಂತ್ರಿಗಳು ಶಪಥ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಕಾಳಜಿ ಇಲ್ಲದ ನಡೆಗಳಿಗೆ ಜನಾಕ್ರೋಶ ಉಂಟಾದರೂ ಉದ್ಧಟತನ ಪ್ರದರ್ಶನ ಮಾಡುವುದಕ್ಕೆ ನಮ್ಮ ಮುಖ್ಯಮಂತ್ರಿಗಳನ್ನಲ್ಲದೆ ಬೇರೆ ಉದಾಹರಣೆಗಳನ್ನು ಕೊಡಬಹುದು ಎಂದು ಅನಿಸು ತ್ತಿಲ್ಲ. ರಾಜ್ಯ ಸರ್ಕಾರದ ಕ್ರಮ ಮತ್ತು ಮುಖ್ಯಮಂತ್ರಿಗಳ ವರ್ತನೆ ಗಳನ್ನು ನೋಡಿದರೆ ಪ್ರಜಾಪ್ರಭುತ್ವದ ಮೇಲಿರುವ ಖ್ಯಾತ ವ್ಯಾಖ್ಯಾನ ಮಕಾಡೆ ಮಲಗಿದಂತೆ ಭಾಸವಾಗುತ್ತಿದೆ. ಸರ್ಕಾರ ಪ್ರಜೆಗಳ ವಿರೋಧದ ನಡು ವೆಯೂ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಪ್ರಜಾಪ್ರಭುತ್ವ ದಲ್ಲಿ ಚಳವಳಿಗಳು ಜಾತಿ ಆಧಾರಿತವಾಗಿ ನಡೆಯಬಾರದು. ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವೂ ಆಗಬಾರದು. ವಿಚಿತ್ರ ವೆಂದರೆ ಸಿದ್ದರಾಮಯ್ಯ ಸರಕಾರದಲ್ಲಿ ಚಳವಳಿಗಳು, ಪ್ರತಿಭಟನೆಗಳು ಅನಿವಾರ್ಯವಾಗಿ ಜಾತಿ ಸಮೂಹಗಳಿಂದ, ಜಾತಿ ಸಂಘಟನೆಗಳಿಂದ ನಡೆಯುತ್ತಿವೆ! ಚಿತ್ರದುರ್ಗದ ಓಬವ್ವನ ವಂಶಸ್ಥರು, ಮದಕರಿ ನಾಯಕನ ವಂಶಸ್ಥರು, ಕೊಡವರು, ಕೆನರಾ ಕ್ರಿಶ್ಚಿಯನ್ನರು, ಮಂಡಯಂ ಅಯ್ಯಂಗಾರರೆಲ್ಲರೂ ಜಾತಿ ವೇದಿಕೆಗಳ ಮೂಲಕ ಸರಕಾರದ ಕ್ರಮವನ್ನು ಟೀಕಿಸಲಾರಂಭಿಸಿದ್ದಾರೆ! ಹಾಗಾದರೆ ರಾಜ್ಯದಲ್ಲಿ ಉಳಿದಿರುವ ಡೆಮಾಕ್ರಸಿಯೆಷ್ಟು? ಜನರನ್ನು ಜಾತಿವಾರು ವಿಂಗಡಿಸಿ, ಅವರ ಆಶಯಕ್ಕೆ ವಿರುದ್ಧ ವಾಗಿ ಟಿಪ್ಪು ಜಯಂತಿ ಆಚರಣೆ ಮಾಡುವ ಸಿದ್ದರಾಮಯ್ಯ ನವರದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮವಲ್ಲವೇ?

ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವವರಿಗೆ ನನ್ನ ಪ್ರಶ್ನೆಯಿದೆ. ಈ ದೇಶದಲ್ಲಿ ಬ್ರಿಟಿಷರು ಬರದಿದ್ದರೆ ನಮ್ಮ ಯುದ್ಧ ಯಾರ ವಿರುದ್ಧ ಇರುತ್ತಿತ್ತು ಹೇಳಿ ನೋಡೋಣ. ಒಂದು ಚರ್ಚೆಯಲ್ಲಿ ಯು.ಆರ್‌. ಅನಂತಮೂರ್ತಿಯವರಿಗೆ ಇದೆ ಪ್ರಶ್ನೆ ಇಟ್ಟಾಗ ನಿರುತ್ತರರಾಗಿದ್ದರು, ಯಾಕೆಂದರೆ ಅವರಿಗೂ ಗೊತ್ತಿತ್ತು ಬ್ರಿಟಿಷರು ಬರದಿದ್ದರೆ ನಮ್ಮ ಯುದ್ಧ ಮೊಘಲರ ವಿರುದ್ಧವೇ ಇರುತಿತ್ತು ಎಂದು. ಮೊಘಲರ ಬೀಜದಂತೆ ಹರಡಿದ ಟಿಪ್ಪುವಿನ ಪರಂಪರೆ ನಮ್ಮ ನಾಡನ್ನು ಲೂಟಿ ಮಾಡಿಲ್ಲ ವೇನು? ನಮ್ಮ ಮೈಸೂರು ಅರಸರನ್ನು ಗೃಹಬಂಧನದಲ್ಲಿ ಇಟ್ಟಿರಲಿಲ್ಲವೇನು? ಹೀಗಿದ್ದೂ ಟಿಪ್ಪುವಿನ ಆರಾಧನೆ ಈ ನಾಡಿನಲ್ಲಿ ಏಕೆ ಬೇಕಿತ್ತು? ಬ್ರಿಟಿಷರ ವಿರುದ್ಧ ಹೋರಾಡಿದ್ದ ಎನ್ನುವ ಕಾರಣಕ್ಕೆ ಟಿಪ್ಪು ಸ್ವಾತಂತ್ರ ಹೋರಾಟಗಾರ ಆಗುವುದಾ ದರೆ ಈ ದೇಶದಲ್ಲಿ ಡಚ್ಚರು ಹಾಗೂ ಫ್ರೆಂಚರು ಕೂಡ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಅವರಿಗೆ ಯಾವ ಪಟ್ಟ ಕಟ್ಟುತ್ತೀರಿ ಸಿದ್ದರಾಮಯ್ಯನವರೆ ಹಾಗೂ ಟಿಪ್ಪು ಸಮರ್ಥಕರೆ? ನಮ್ಮ ದೇಶವನ್ನು ಲೂಟಿ ಮಾಡುತಿದ್ದ ಫ್ರೆಂಚರ ಸಹಾಯ ಪಡೆದು ನಮ್ಮ ಕೊಡವರನ್ನು ಕೊಂದ ಟಿಪ್ಪು ಅದು ಹೇಗೆ ದೇಶ ಪ್ರೇಮಿ ಆಗುತ್ತಾನೆ, ಅದೆ ಫ್ರೆಂಚರ ಸಹಾಯದಿಂದ ಬ್ರಿಟಿಷರ ವಿರುದ್ಧ ತನ್ನ ಅಧಿಕಾರ ಉಳಿಸಿಕೊಳ್ಳಲು ಯುದ್ಧ ಮಾಡಿದ್ದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದೆ. ಟಿಪ್ಪು ತನ್ನ ಅಧಿಕಾರ ಉಳಿಸಿ ಕೊಳ್ಳಲು ಬೇರೆಯವರ ಸಹಾಯ ಹೇಗೆ ಪಡೆದನೊ ಹಾಗೆ ಮೈಸೂರು ಅರಸರು ಟಿಪ್ಪುವಿನ ಮತಾಂಧ ಕ್ರೌರ್ಯಕ್ಕೆ ಪೂರ್ಣ ವಿರಾಮ ನೀಡಲು ಬ್ರಿಟಿಷರ ಸಹಾಯವನ್ನು ಕೇಳಿದ್ದರು ಎನ್ನುವ ಇತಿಹಾಸ ಸತ್ಯವನ್ನು ಏಕೆ ಮುಚ್ಚಿಡುತ್ತೀರಿ? ಸ್ವತಃ ಈ ರಾಜ್ಯದ ಘನವೆತ್ತ ನ್ಯಾಯಾಲವೇ ಟಿಪ್ಪು ತನ್ನ ರಾಜ್ಯ ಹಾಗೂ ಅಧಿಕಾರ ಉಳಿಸಿಕೊಳ್ಳಲು ಹೋರಾಡಿ¨ªಾನೆ ಹೊರತು ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ ಮೇಲೂ ಆತನ ಗುಣಗಾನ ಜಯಂತಿ ಯಾಕಾಗಿ ಮುಖ್ಯ ಮಂತ್ರಿಗಳೇ? ದೇವಟ್ಟಿಪರಂಬಿನಲ್ಲಿ ಜಲಿಯನ್‌ ವಾಲಾಬಾಘ… ಹತ್ಯಾಕಾಂಡವನ್ನು ಮೀರಿಸುವಂತೆ 35 ಸಾವಿರ ಕೊಡವರನ್ನು ನರಮೇಧ ಮಾಡಿದ್ದಕ್ಕೋ? ಮೈಸೂರು ಮಹಾರಾಣಿ ಲಕ್ಷ್ಮಮ್ಮಣ್ಣಿ ಯನ್ನು ಗ್ರಹಬಂಧನದಲ್ಲಿ ಇಟ್ಟು ದಸರಾ ನಿಲ್ಲಿಸಿ ದ್ದಕ್ಕೋ? ಕ್ರಿಶ್ಚಿಯನ್ನರ ನರಮೇಧ ನಡೆಸಿ ನೆತ್ತರ ಕೋಡಿಯೇ ಹರಿದಂಥ “ನೆತ್ತರಕೆರೆ’ ಎಂಬ ಊರೇ ಇಂದು ದಕ್ಷಿಣ ಕನ್ನಡ ದಲ್ಲಿದೆ, ಅದಕ್ಕೋ? ಮಲಬಾರಿನಲ್ಲಿ ನಾಯರ್‌ಗಳ ನರಮೇ ಧಕ್ಕೋ? ಕನ್ನಡವನ್ನು ಸೆರೆಯಲ್ಲಿಟ್ಟು ಉರ್ದು, ಪಾರ್ಸಿ, ಪರ್ಷಿಯನ್‌ ಹೇರಿದ ಸವಿ ನೆನಪಿಗೋ ಅಥವಾ ಸುಮಾರು ಏಳೆಂಟು ಸಾವಿರ ದೇವಸ್ಥಾನಗಳನ್ನು ಕೆಡವಿ ಮಸೀದಿ ಮಾಡಿದ ಕ್ಕಾಗಿ ಟಿಪ್ಪು ಜಯಂತಿ ಮಾಡುತ್ತಿದ್ದೀರೋ? ಮಾತುಮಾತಿಗೆ ಕನ್ನಡ ಕನ್ನಡ ಎನ್ನುವ ಮುಖ್ಯಮಂತ್ರಿಗಳು ಒಂದು ವಿಷಯವನ್ನು ಒಂದು ಕ್ಷಣ ಆಲೋಚಿಸಿದ್ದರೂ ಸತ್ಯ ಅವರಿಗೆ ತಿಳಿಯು ತ್ತಿತ್ತು. ಇಂದಿಗೂ ನಮ್ಮ ಮುಂದೆ ಟಿಪ್ಪು ಮರು ನಾಮಕರಣ ಮಾಡಿದ ಊರಿನ ಹೆಸರುಗಳು ಕಣ್ಣ ಮುಂದಿವೆ. ಸಕಲೇಶಪುರ ಮಂಜ್ರಾಬಾದ್‌ ಆಗಿ, ದೇವನಹಳ್ಳಿ ಯೂಸೂಫಾಬಾದ್‌ ಆಗಿ, ಮೈಸೂರು ನಜರಾಬಾದ್‌ ಆಗಿ, ಮಡಿಕೇರಿ ಜಫರಾಬಾದ್‌ ಆಗಿ, ಚಿತ್ರದುರ್ಗ ಫಾರುಜ ಯಬ್‌ ಹಿಸ್ಸಾರ್‌ ಆಗಿ ಹೀಗೆ ನೂರಾರು ನಗರಗಳಿಗೆ ಇಸ್ಲಾಂ ಹೆಸರುಗಳನ್ನೂ ನಾಮಕರಣ ಮಾಡಿದ್ದಾನೆ. 

ಮಾನ್ಯ ಸಿದ್ದರಾಮಯ್ಯನವರು ನಮಗೆಲ್ಲರಿಗಿಂತಲೂ ಮೈಸೂರನ್ನು ಚೆನ್ನಾಗಿ ಬಲ್ಲವರು. ಶ್ರೀರಂಗಪಟ್ಟಣವನ್ನೇನೂ ಅವರು ಅರಿಯ ದ ವರಲ್ಲ. ಟಿಪ್ಪು ಕ್ರೌರ್ಯಕ್ಕೆ ಕುರುಹುಗಳು ಅವರಿಗೆ ಅರಿವಿ ಲ್ಲವೇ? ಹಳೆ ಮೈಸೂರು ಭಾಗದ ಯಾರಿಗೇ ಆದರೂ ಟಿಪ್ಪು ಕ್ರೂರತೆಯನ್ನು ಓದಿ ತಿಳಿಯಬೇಕೆಂದಿಲ್ಲ. ಶ್ರೀರಂಗಪಟ್ಟಣ ಮಸೀದಿಯ ಹಿನ್ನೆಲೆಯನ್ನು ಕೇಳದ ಮೈಸೂರಿಗರೇ ಇಲ್ಲ. ಸದನದಲ್ಲಿ ಇತಿಹಾಸ, ವ್ಯಾಕರಣದ ಪಾಠ ಮಾಡುವ ಮೇಷ್ಟ್ರಿಗೆ ಅದು ತಿಳಿದಿಲ್ಲ ಎನ್ನುವುದು ಕಷ್ಟ. ಕೆ.ಎಂ. ಮಣಿಕ್ಕರ್‌, ಅರಿವಿದನ್‌ ರಾವ್‌ ಮತ್ತಿತರ ಇತಿಹಾಸಕಾರರು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಟಿಪ್ಪುವಿನ ನೈಜ ಇತಿಹಾಸಕ್ಕೆ ಸಾಕ್ಷಿ. ಶ್ರೀರಂಗಪಟ್ಟಣದ ಮೂಡಲ ಆಂಜನೇಯ ಸ್ವಾಮಿ ದೇವಸ್ಥಾನದ ಐತಿಹ್ಯವೊಂದೇ ಟಿಪ್ಪುವಿನ ನೈಜ ಮುಖವನ್ನು ಅನಾವರಣ ಮಾಡುತ್ತದೆ.  

ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಸಾಗುತ್ತಿ ದ್ದಂತೆಯೇ ನಮಗೆ ಶ್ರೀರಂಗಪಟ್ಟಣವನ್ನು ಪೊರೆಯುತ್ತಿ¨ªಾನೆ ಎನ್ನುವ ರಂಗನಾಥನ ಗೋಪುರಗಳು ಎದ್ದು ಕಾಣಿಸುವುದಿಲ್ಲ. ಎರಡು ದೊಡ್ಡ ಮಿನಾರುಗಳು ಚಿನ್ನದ ಬಣ್ಣದಿಂದ ಮಿನುಗು ತ್ತವೆ. ಅಲ್ಲಿಂದ ಬಲಗಡೆಗೆ ತಿರುಗಿಕೊಂಡರೆ ಕೋಟೆ ಬಾಗಿಲು. ಅರೆಬಿಕ್‌ ಶೈಲಿಯ ಆ ಬಾಗಿಲುಗಳನ್ನು ನೋಡುತ್ತಿದ್ದಂತೆಯೇ ಜನರು ಟಿಪ್ಪು ಕೋಟೆ ಎಂದು ತೀರ್ಪು ಕೊಟ್ಟುಬಿಡುತ್ತಾರೆ. ಕೋಟೆ ಯೊಳಗಿನ ಊರು ದಾಟಿ ಮುಂದೆ ಸಾಗಿದರೆ ಕಾಣಿಸು ವುದೇ ಈ ಚಿನ್ನದ ಬಣ್ಣದ ಮಿನಾರುಗಳ ಮಸೀದಿ. ಅದರ ಮುಂಭಾಗದಲ್ಲಿ ಪುರಾತಣ್ತೀ ಇಲಾಖೆ ನೆಟ್ಟ ಒಂದು ಬೋರ್ಡು. ಆ ಬೋರ್ಡು ಕೂಡಾ ಅದನ್ನು ಟಿಪ್ಪು ಸುಲ್ತಾನ್‌ ಕಟ್ಟಿಸಿದ ಮಸೀದಿ ಎಂದೇ ಹೇಳುತ್ತದೆ. ಯಾವ ಹೊತ್ತಿಗೆ ಹೋದರೂ ಅದರೊಳಗೆ 15 ವರ್ಷದೊಳಗಿನ ಸುಮಾರು 100 ಮಕ್ಕಳು ಖುರಾನ್‌ ಓದುತ್ತಿರುತ್ತಾರೆ. ಅಂದರೆ ಅದು ಮದರಸ ಕೂಡಾ ಹೌದು. ಪುರಾತಣ್ತೀ ಇಲಾಖೆ ನಿಯಮಗಳ ಪ್ರಕಾರ ಪುರಾತನ ಸ್ಮಾರಕಗಳು ಯಥಾಸ್ಥಿತಿಯಲ್ಲಿರಬೇಕು. ಅದು ಶಾಲೆಯಾಗು ವಂತಿಲ್ಲ. ಜನರ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚವಾಗಿ ಅಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅದು ಅನುಮತಿ ಯನ್ನು ನೀಡಬಹುದು. ಆದರೆ ಪುರಾತಣ್ತೀ ಇಲಾಖೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ಮತೀಯ ಶಿಕ್ಷಣಕ್ಕೆ ಅನುಮತಿಯನ್ನು ಕೊಟ್ಟಿದೆ? ಈ ಮಸೀದಿಯ ಪೂರ್ವ ಪರವನ್ನು ಕೆದಕಿದರೆ ಘೋರ ಇತಿಹಾಸವೊಂದು ತೆರೆದುಕೊ ಳ್ಳುತ್ತದೆ. ಊರ ಜನರೆಲ್ಲರೂ ಅದೇ ಕಥೆಯನ್ನು ಹೇಳುತ್ತಾರೆ. 

ಶ್ರೀರಂಗಪಟ್ಟಣದ ಸಮೀಪ ಇರುವ ಗಂಜಾಂ ಎಂಬಲ್ಲಿ ಟಿಪ್ಪುವಿನ ಬೇಸಿಗೆ ಅರಮನೆ ಎನ್ನುವ ಕಟ್ಟಡವೊಂದಿದೆ. ಪ್ರತೀ ಬೇಸಿಗೆಯಲ್ಲಿ ಟಿಪ್ಪು ಪರಿವಾರ ಸಮೇತನಾಗಿ ಅಲ್ಲಿ ವಾಸ ಮಾಡುತ್ತಿದ್ದನಂತೆ. ಒಂದು ದಿನ ಟಿಪ್ಪುವಿನ ಪತ್ನಿಯರಲ್ಲಿ ಒಬ್ಟಾಕೆ ತನಗೆ ಬೆಳಗ್ಗೆ ಎ¨ªಾಕ್ಷಣ ದೂರದಲ್ಲಿ ಆಂಜನೇಯನ ಮೂರ್ತಿ ಕಾಣುತ್ತಿದೆಯೆಂದೂ ಇದರಿಂದ ತನ್ನ ನಮಾಜಿನ ಏಕಾಕ್ರತೆಗೆ ಭಂಗವಾಗುತ್ತಿದೆಯೆಂದೂ ತಿಳಿಸಿದಳಂತೆ. ಇದರಿಂದ ಕ್ರೋಧ ಗೊಂಡ ಟಿಪ್ಪು ಆ ದಿನವೇ ಹಿಂದುಗಳ ಆ ದೇವಸ್ಥಾನವನ್ನು ಮಸೀದಿ ಮಾಡುವಂತೆ ಆದೇಶ ನೀಡಿದ. ಒಂದೇ ದಿನದಲ್ಲಿ ಮೂಡಲ ಆಂಜನೆಯ ದೇವಸ್ಥಾನ ಮಸೀದಿಯಾಗಿ ಬದಲಾ ಯಿತು. ಇದು ಕಟ್ಟುಕಥೆ ಅನ್ನುವವರು ಇರಬಹುದು. ಆದರೆ ನಿಚ್ಚಳ ವಾಗಿ ದೇವಸ್ಥಾನದ ಕುರುಹುಗಳಿರುವುದಕ್ಕೆ ಏನನ್ನೋಣ? 

ಸ್ವಾತಂತ್ರ್ಯ ನಂತರದ ಸೆಕ್ಯುಲರ್‌ ಸರಕಾರಗಳು ಅದನ್ನು ಪುರಾತನ ಸ್ಮಾರಕ ಎಂದು ಘೋಷಣೆ ಮಾಡಿ ಕೈತೊಳೆದು ಕೊಂಡಿತು. ಆದರೆ ಇಂದಿಗೂ ಶ್ರೀರಂಗಪಟ್ಟಣದ ಸುತ್ತಮುತ್ತಲ ಜನರ ಪಾಲಿಗೆ ಅದಿಂದೂ ಮೂಡಲ ಆಂಜನೇಯನ ಗುಡಿಯೇ. ಪೂರ್ವದ ಕಡೆಗೆ ಆಗಸಕ್ಕೆ ಮುಖ ಮಾಡಿ ನಿಂತ ಹನುಮಂತ ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾದ. ಸರಕಾರ ಅದನ್ನು ಪುರಾತಣ್ತೀ ಇಲಾಖೆಯ ಸುಪರ್ದಿಗೊಪ್ಪಿಸಿದರೂ ಮುಸಲ್ಮಾನ ಸಂಘಟನೆಗಳು ಮತ್ತು ಟಿಪ್ಪು ಅಭಿಮಾನಿ ಸಂಘ ಗಳು ಅದನ್ನು ಹಾಗೇ ಇಡಲು ಬಿಡಲಿಲ್ಲ. ಅದನ್ನು ಮದರಸವ ನ್ನಾಗಿ ಮಾರ್ಪಾಡು ಮಾಡಿದರು. ಇಂದು ಆ ಕಟ್ಟಡವನ್ನು ಸಾಕಷ್ಟು ಮಾರ್ಪಾಡು ಮಾಡಲಾಗಿದೆಯಾದರೂ ದೇವಸ್ಥಾನದ ಲಕ್ಷಣಗಳನ್ನು ಸಂಪೂರ್ಣ ಮುಚ್ಚಿ ಹಾಕಲು ಸಾಧ್ಯವಾಗಿಲ್ಲ. ಹೊಯ್ಸಳ ಶೈಲಿಯನ್ನು ಹೋಲುವ ನಕ್ಷತ್ರಾಕಾರದ ತಳಹದಿ ಈ ದೇವಸ್ಥಾನ ಅತಿ ಪ್ರಾಚೀನವಾದುದೆಂಬುದನ್ನು ಹೇಳುತ್ತದೆ. ಎರಡು ಮಾಳಿಗೆಯ ಈಗಿನ ಕಟ್ಟಡದ ಕೆಳಭಾಗ ಮದರಸವಾ ದರೆ ಮೇಲಿನ ವಿಶಾಲ ಕೊಠಡಿ ನಮಾಜ್‌ ಕೋಣೆ. ಸುತ್ತಲ ಪೌಳಿಯಲ್ಲಾಲ್ಲೂ ಸಣ್ಣ ಮತ್ತು ದೊಡ್ಡ ಗೋರಿಗಳಿವೆ. ಈಗ್ಗೆ ಆರು ತಿಂಗಳ ಹಿಂದಿಗಿಂತಲೂ ಈಗ ಗೋರಿಗಳ ಸಂಖ್ಯೆ ಹೆಚ್ಚಾಗಿದೆ. ಪೌಳಿಗಳ ಸುತ್ತಲೂ ಕಲ್ಲಿನ ಮಂಟಪಗಳಿವೆ. ಕೆಲವು ಕಂಬಗಳ ಲ್ಲಿದ್ದ ಬರಹಗಳನ್ನು ಕೆತ್ತಿ ತೆಗೆದ ಕುರುಹುಗಳಿವೆ. ಹಿಂದೂ ವಾಸ್ತು ಪದ್ಧತಿಯ ಪ್ರಾಥಮಿಕ ತಿಳಿವಳಿಕೆ ಇರುವ ಯಾರಿಗೇ ಆದರೂ ಇದು ತ್ರಿಕುಟಾಚಲ ದೇವಸ್ಥಾನ ಎಂಬುದು ಸುಲಭವಾಗಿ ತಿಳಿಯುತ್ತವೆ. ಸುತ್ತಲೂ ಇರುವ ಕಲ್ಲಿನ ಕಂಬಗಳಲ್ಲಿ ಕಮಲ ಮತ್ತು ಇನ್ನಿತರ ಹೂವುಗಳ ಉಬ್ಬು ಚಿತ್ರಗಳಿವೆ. ಕೆಲವು ಅಸ್ಪಷ್ಟ ಮುಖಗಳೂ ಕಾಣಿಸುತ್ತವೆ. ಇವನ್ನೆಲ್ಲಾ ಸಾಕಷ್ಟು ಉಜ್ಜಿ ತೆಗೆಯಲಾದ ಕುರುಹುಗಳಿವೆ. ಗರುಢಸ್ತಂಭ ಇದ್ದ ಜಾಗದಲ್ಲಿ ದೊಡ್ಡ ಗೋರಿಯನ್ನು ಕಟ್ಟಲಾಗಿದೆ. ಪ್ರಸಾದ ತಯಾರಿಸುವ ಕೋಣೆಯನ್ನು ಇಂದು ದನದ ಮಾಂಸ ತಯಾರಿಸುವ ಕೋಣೆಯಾಗಿ ಮಾಡಲಾಗಿದೆ. ಕಟ್ಟಡದೊಳಗೆ ಪ್ರವೇಶಿಸುತ್ತಿ ದ್ದಂತೆ ಬಲಭಾಗದಲ್ಲಿರುವ ಕೋಣೆ ಮುಲ್ಲಾ ಮೌಲ್ವಿಗಳ ಶಯ ನಾಗೃಹವಾಗಿದೆ. ಅಗತ್ಯ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತದೆ. ಬಣ್ಣ ಬಳಿಯುವ ಮೊದಲು ಹಳೆಯ ಬಣ್ಣವನ್ನು ಕಿತ್ತು ತೆಗೆಯುವ ನೆಪದಲ್ಲಿ ಗೋಡೆಗಳನ್ನು ಉಜ್ಜಲಾ ಗುತ್ತದೆ. ಉಜ್ಜುತ್ತಾ ಉಜ್ಜುತ್ತಾ ಇತಿಹಾಸ ಸವೆದು ಹೋಗುತ್ತದೆ. ಕಟ್ಟಡದ ಎಡಭಾಗದಲ್ಲಿ ಸುಂದರವಾದ ಪುಷ್ಕರಿಣಿಯಿದೆ. ಅದಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಒಂದು ಕಾಲದಲ್ಲಿ ವಿಜೃಂಭಣೆ ಯಿಂದ ತೆಪ್ಪೋತ್ಸವ ನಡೆಯುತ್ತಿದ್ದ ಪುಷ್ಕರಿಣಿ ಯನ್ನು ಶುದ್ಧ ಮಾಡದೆ ಎಷ್ಟೋ ವರ್ಷಗಳು ಕಳೆದು ಹೋಗಿವೆ. ಕಲ್ಲಿನ ಚೌಕಟ್ಟಿನಲ್ಲಿ ಕಟ್ಟಿದ ಒಂದು ಬಾವಿಯೂ ಇದೆ. ಒಂದು ದೇವಸ್ಥಾನದಲ್ಲಿ ಏನೇನಿರಬೇಕೋ ಅವೆಲ್ಲವೂ ಅಲ್ಲಿದೆ. ಒಂದು ದೇವಸ್ಥಾನ ಹೇಗಿರುತ್ತದೋ ಆ ಮದರಸ/ ಮಸೀದಿ ಹಾಗೆಯೇ ಇದೆ. ಮದರಸವೊಂದರಲ್ಲಿ ಏನೇನಿರುವುದಿಲ್ಲವೋ ಅವೆಲ್ಲವೂ ಅದರ ಪ್ರಾಂಗಣದಲ್ಲಿದೆ. ಆದರೂ ಅದು ದೇವಸ್ಥಾನವಲ್ಲ! 

ಕೆಲವು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಕೇಂದ್ರ ಸರಕಾರದ ಮಹತ್ತಾಕಾಂಕ್ಷೆಯ ತುಷ್ಟೀಕರಣ ಯೋಜನೆ ಟಿಪ್ಪು ವಿಶ್ವವಿದ್ಯಾಲಯ ಪ್ರಾರಂಭಿಸಲಾಗುತ್ತದೆ ಎಂದಾಗ ಈ ಕಟ್ಟಡ ಚರ್ಚೆಗೆ ಗ್ರಾಸವಾಗಿತ್ತು. ಆ ಸಮಯದಲ್ಲಿ ನಾನು ವಿ.ವಿ ವಿರುದ್ಧದ ಆಂದೋಲನದಲ್ಲಿ ಈ ಕಟ್ಟಡವನ್ನು ಪ್ರಸ್ತಾಪಿಸಿದ್ದೆ. ಅಲ್ಲಿಗೆ ಭೇಟಿಯನ್ನೂ ಕೊಟ್ಟಿದ್ದೆ. ಆ ಭೇಟಿಯ ನಂತರ ಮದರಸದಲ್ಲಿ ಚಟುವಟಿಕೆಗಳು ತೀವ್ರಗೊಂಡವು ಎಂದು ನಂತರ ನನಗೆ ತಿಳಿಯಿತು. ದೇಶದ ನಾನಾ ಭಾಗಗಳಿಂದ ಈ ಮದರಸಕ್ಕೆ ಓದಲು ಮಕ್ಕಳು ಬರುತ್ತಾರೆ. ಉತ್ತರ ಪ್ರದೇಶ, ಬಿಹಾರ್‌ ಕಡೆಯವರೇ ಹೆಚ್ಚು ಎಂದು ಮದರಸದ ಸಹಾಯಕನೆ ನನ್ನಲ್ಲಿ ಹೇಳಿದ್ದ.  

ನಾನು ಭೇಟಿ ನೀಡಿದ ಸಮಯದಲ್ಲಿ ಪ್ರಾಂಗಣದಲ್ಲಿದ್ದ  ಬಾವಿ ಕಟ್ಟೆಯಲ್ಲಿ ಹಲವು ಭಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಇವೇನು ಎಂದು ಕೇಳಿದಾಗ ಅವು ಉತ್ತರ ಪ್ರದೇಶದ ಬರ್ಹಾನ್‌ಪುರದಲ್ಲಿ ನಡೆಯುವ ಉರೂಸ್‌ ಹಬ್ಬದ್ದು ಎಂದು ಆತ ಹೇಳಿದ. ಎಲ್ಲಿಯ ಬರ್ಹಾನ್‌ಪುರ? ಎಲ್ಲಿಯ ಶ್ರೀರಂಗಪಟ್ಟಣ? ಶ್ರೀರಂಗಪಟ್ಟಣದಲ್ಲಿ ಆಗಾಗ್ಗೆ ಕೋಮು ಬೆಂಕಿ ಹೊತ್ತಿಕೊಳ್ಳುವ ಬರ್ಹಾನ್‌ಪುರದ ಭಿತ್ತಿ ಪತ್ರಗಳಿವೆ ಅಂದರೆ ಮದರಸಗಳಲ್ಲಿ ಏನು ಕಲಿಸಲಾಗುತ್ತದೆ? ಬರ್ಹಾನ್‌ಪುರದ ಮತಾಂಧರಿಗೂ ಇಲ್ಲಿಗೂ ಏನು ಸಂಬಂಧ? ಅಂಥವರನ್ನು ಬಗಲಲ್ಲಿ ಕಟ್ಟಿಕೊಂಡ ಸರಕಾರ ಏನನ್ನು ಸಾಧಿಸಲು ಹೊರಟಿದೆ? ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ತೊಡೆತಟ್ಟುವ ಮುಖ್ಯಮಂತ್ರಿಗೂ ಮೂಡಲ ಆಂಜನೆಯನನ್ನು ಕೆಡವಿ ಮಸೀದಿ ಮಾಡಿದ ಟಿಪ್ಪುವಿಗೂ ದಟ್ಟವಾದ ಹೋಲಿಕೆಗಳು ಕಾಣಿಸುತ್ತಿವೆ.

ಮೂಡಲ ಆಂಜನೇಯ ಸ್ವಾಮಿ ಮಾತ್ರವಲ್ಲ, ಭಾಗಮಂಡ ಲದ ಮುರಿದ ಎರಡು ಕಲ್ಲಿನ ಆನೆಗಳು, ಕೊಡಗಿನಲ್ಲಿ ಇನ್ನೂ ಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನಗಳ ಐತಿಹ್ಯಗಳೆಲ್ಲವೂ ಟಿಪ್ಪುವಿನ ಇತಿಹಾಸವನ್ನು ಹೇಳುತ್ತಿವೆ. ಕೊಡಗಿನಲ್ಲಿ ಮತಾಂತರ ವಾದ ಕೊಡವ ಮಾಪಿಳ್ಳೆಗಳು ಇಂದಿಗೂ ತಮ್ಮ ಪೂರ್ವಜರು ಕೊಡವರು ಎಂದೇ ಹೇಳುತ್ತಾರೆ. ಕೊಡಗಿನ ನಾಪೋಕ್ಲು ಮತ್ತು ಮಲಾಬಾರ್‌ ಕೋಟೆಗಳಲ್ಲಿರುವ ಮದ್ದುಗುಂಡುಗಳು ಹೇಳು ವುದು ಎಂಥಾ ಇತಿಹಾಸ. ಯುದ್ಧಾಕಾಂಕ್ಷಿ ಅರಸನಿಗೆ ಅಸಹಿಷ್ಣುತೆ ಇದ್ದರೆ ಅತ ಜನಾನುರಾಗಿಯಾಗಿರಲು ಸಾಧ್ಯವಿಲ್ಲ. ಆದರೆ ಟಿಪ್ಪುವಿಗೆ ಮತೀಯ ಅಸಹಿಷ್ಣುತೆಯಿತ್ತು. ಆತ ಜನಾನುರಾಗಿ ಹೇಗಾಗಬಲ್ಲ? ಜನಾನುರಾಗಿ ಅರಸನ ಅನುಯಾಯಿಗಳೂ ಇಂದು ಅಸಹಿಷ್ಣುತೆಯನ್ನು ಹೊತ್ತುಕೊಂಡು ಆತನ ಅಚರಣೆಗೆ ಮುಂದಾಗಿದ್ದಾರೆ. ಹಿಂಸಾಚಾರದ ಮೂಲಕವಾದರೂ ಜನ್ಮ ದಿನಾಚರಣೆ ನಡೆಯಬೇಕು ಎನ್ನುವ ಮನೋಭಾವ ಒಬ್ಬ ಸಜ್ಜನ ಅರಸನ ಬಗ್ಗೆ ಮೂಡಲು ಎಂದಾದರೂ ಸಾಧ್ಯವೇ?

ಟಿಪ್ಪು ಜಯಂತಿ ವಿರೋಧಿಸಿದ ತಕ್ಷಣ ಕಾಂಗ್ರೆಸಿಗರು ಧುತ್ತನೆ ಎದ್ದು ನಮ್ಮನ್ನು ಕೋಮುವಾದಿಗಳು ಎಂದು ಜರಿಯುತ್ತಾರೆ, ಒಬ್ಬ ಮತಾಂಧನನ್ನು, ಕ್ರೂರಿಯನ್ನು, ಕನ್ನಡ ವಿರೋಧಿಯನ್ನು, ಅತ್ಯಾಚಾರಿಯನ್ನು ಸಮರ್ಥನೆ ಮಾಡಿ ಆತನ ಹಬ್ಬ ಮಾಡುವ ಪ್ರಸಂಗ ಬಂದಾಗ ಅದನ್ನು ಸಮರ್ಥಿಸಿ ಸೆಕ್ಯುಲರ್‌ ಎಂದು ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಇತಿಹಾಸದ ಸತ್ಯವನ್ನು ಮುಂದಿಟ್ಟು ಇಂತಹ ಐತಿಹಾಸಿಕ ಕಪ್ಪು ಚುಕ್ಕೆಗಳನ್ನು ವಿರೋಧಿಸಿ ಕೋಮುವಾದಿ ಎಂದು ಕರೆಸಿಕೊಳ್ಳುವುದರಲ್ಲಿ ಒಂದು ರೀತಿ ಹೆಮ್ಮೆ ಇದೆ. ಕೇವಲ ಓಟ್‌ ಬ್ಯಾಂಕಿಗೋಸ್ಕರ ರಾಜ್ಯವನ್ನು ಮೂರೂ ವರ್ಷಗಳಿಂದ ಕೋಮುದಳ್ಳುರಿಯಲ್ಲಿ ಬೇಯಿಸುತ್ತಿರುವ ಸಿದ್ದರಾಮಯ್ಯನವರೆ ನೀವು ಟಿಪ್ಪು ಜಯಂತಿ ಮಾಡಿದ್ದರ ಪರಿಣಾಮ ನಾವು ಬಿಜೆಪಿ ಹಾಗೂ ಆರೆಸ್ಸೆಸ್‌ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ, ನಾಡಿನಲ್ಲಿ ಐಸಿಸ್‌ ಸ್ಲಿಪರ್‌ ಸೆಲ್‌ಗ‌ಳು ನಿಧಾನವಾಗಿ ತಲೆ ಎತ್ತುತ್ತಿವೆ. ರಾಷ್ಟ್ರದ ಹಿತದೃಷ್ಟಿಯಿಂದ, ನಾಡಿನ ಆಂತರಿಕ ಭದ್ರತೆ ದೃಷ್ಟಿಯಿಂದ ಇನ್ನಾದರೂ ಓಲೈಕೆ ರಾಜಕಾರಣ ನಿಲ್ಲಿಸಿ ಆತ್ಮ ವಿಮರ್ಶೆ ಮಾಡಿಕೊಳ್ಳಿ. ನಾವೇನು ಮುಸಲ್ಮಾನರ ವಿರೋಧಿಗಳಲ್ಲ ಸಾಧ್ಯವಾದರೆ ಸರ್ಕಾರವೇ ಮುಂದೆ ನಿಂತು ಸಂತ ಶಿಶುನಾಳ ಶರೀಫಜ್ಜನ ಜಯಂತಿ ಮಾಡಲಿ, ಇಡಿ ಕನ್ನಡ ಕುಲವೆ ಹೆಮ್ಮೆಯಿಂದ ಹಬ್ಬ ಆಚರಣೆ ಮಾಡುತ್ತದೆ. ಡಾ.ಅಬ್ದುಲ… ಕಲಾಂ ಅವರ ಜನ್ಮ ಜಯಂತಿ ಮಾಡಲಿ ಬೇಕಾದರೆ ಮನೆ ಮನೆಗೆ ಕಲಾಂ ರ ಬದುಕಿನ ಪ್ರೇರಣೆಯ ಕತೆಯನ್ನು ತಲುಪಿಸುವ ಕೆಲಸ ನಾವು ಮಾಡುತ್ತೇವೆ. ಎಲ್ಲರೂ ಸಂಭ್ರಮಿಸುವವರ ಜಯಂತಿ ಮಾಡುವುದನ್ನು ಬಿಟ್ಟು ಕನ್ನಡ ವಿರೋಧಿ, ಮತಾಂಧನ ಜಯಂತಿ ಮಾಡುವುದು ಸರಿಯೇ?

ಸಿ.ಟಿ. ರವಿ, ಶಾಸಕರು, ಚಿಕ್ಕಮಗಳೂರು ಹಾಗೂ ರಾಜ್ಯ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.