ಲಸಿಕೆ ಬರಲು 2-3 ವರ್ಷಗಳು ಬೇಕು


Team Udayavani, Oct 9, 2020, 6:20 AM IST

ಲಸಿಕೆ ಬರಲು 2-3 ವರ್ಷಗಳು ಬೇಕು

ಕೋವಿಡ್‌ ವಿರುದ್ಧ ಸಕ್ಷಮ ಲಸಿಕೆ ಸಿದ್ಧವಾಗಲು ಅಪಾರ ಸಂಖ್ಯೆಯಲ್ಲಿ ಜನರ ಮೇಲೆ ಪ್ರಯೋಗ ಮಾಡಬೇಕಾಗುತ್ತದೆ, ಫ‌ಲಿತಾಂಶ ಪಡೆಯಲು ಸಮಯ ಹಿಡಿಯುತ್ತದೆ. ಎಷ್ಟೇ ತ್ವರಿತ ಪ್ರಯತ್ನಗಳನ್ನು ನಡೆಸಿದರೂ ಸಕ್ಷಮವಾಗಿ ಲಸಿಕೆ ಸಿದ್ಧವಾಗಲು 2-3 ವರ್ಷ ಸಮಯ ಬೇಕು ಎನ್ನುತ್ತಾರೆ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಆ್ಯಂಡ್‌ ಮಾಲಿಕ್ಯುಲಾರ್‌ ಬಯಾಲಜಿಯ ನಿರ್ದೇಶಕ, ವಿಜ್ಞಾನಿ ಡಾ| ರಾಕೇಶ್‌ ಮಿಶ್ರಾ ಅವರು. ರೆಡಿಫ್ ಜಾಲತಾಣಕ್ಕೆ ಡಾ| ಮಿಶ್ರಾ ನೀಡಿರುವ ಸಂದರ್ಶನದ ಆಯ್ದ ಭಾಗವಿದು.

ಅತ್ತ ಯುರೋಪ್‌ ಮತ್ತು ಬ್ರಿಟನ್‌ನಲ್ಲಿ ಕೊರೊನಾದ ಎರಡನೆಯ ಅಲೆಯ ಬಗ್ಗೆ ಮಾತನಾಡಲಾಗುತ್ತಿದೆ. ಭಾರತ, ಅಮೆರಿಕ ಮತ್ತು ಬ್ರೆಜಿಲ್‌ನಂಥ ರಾಷ್ಟ್ರಗಳು ಇನ್ನೂ ಮೊದಲ ಅಲೆಯನ್ನೇ ಎದುರಿಸುತ್ತಿದ್ದು, ಪ್ರಕರಣಗಳು ಏರುತ್ತಲೇ ಸಾಗುತ್ತಿವೆ. ಹಾಗಿದ್ದರೆ ಕೊರೊನಾ ಪ್ರಕರಣಗಳು ತಗ್ಗುವುದು ಯಾವಾಗ?

ಕೋವಿಡ್‌ ಪ್ರಕರಣಗಳು ಕಡಿಮೆಯಾಗಬೇಕೆಂದರೆ, ಮೊದಲು ಅದು ಉತ್ತುಂಗಕ್ಕೇರಬೇಕು (-peak). ಪೀಕ್‌ ತಲುಪಿದೆಯೋ ಇಲ್ಲವೋ ಎನ್ನುವುದನ್ನು ಪತ್ತೆಹಚ್ಚಲು ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ಮಾಡಬೇಕಾದ ಅಗತ್ಯವಿದೆ. ಆದರೆ ನಾವು ಸಾಗಬೇಕಾದ ದಾರಿ ಇನ್ನೂ ದೂರವಿದೆ. ಕೋವಿಡ್‌ನ‌ ಪಾಸಿಟಿವಿಟಿ ದರ 2-3 ಪ್ರತಿಶತವಿದೆ ಎಂದರೆ, ಸಾಕಷ್ಟು ಪ್ರಮಾಣದಲ್ಲಿ ಪರೀಕ್ಷೆಗಳು ಆಗುತ್ತಿವೆ ಎಂದರ್ಥ. ಆದರೆ, ನಮ್ಮಲ್ಲಿ ಪಾಸಿಟಿವಿಟಿ ದರ ಈಗಲೂ 15-20 ಪ್ರತಿಶತವಿದ್ದು, ಅಗತ್ಯ ಪ್ರಮಾಣದಲ್ಲಿ ಪರೀಕ್ಷೆಗಳು ಆಗುತ್ತಿಲ್ಲ.

ಈಗ ಎಲ್ಲ ದೇಶಗಳೂ ತಮ್ಮ ಪ್ರಯತ್ನಕ್ಕೆ ವೇಗ ಕೊಟ್ಟಿದ್ದು, ಇನ್ನೂ 3-4 ತಿಂಗಳಲ್ಲೇ ಕೋವಿಡ್‌ ವಿರುದ್ಧದ ಲಸಿಕೆ ಸಿದ್ಧಪಡಿಸುವ ಪ್ರಯತ್ನದಲ್ಲಿ ತೊಡ ಗಿವೆ. ರಷ್ಯಾ ಅಂತೂ ಮೂರನೇ ಹಂತದ ಟ್ರಯಲ್‌ ಕೂಡ ಮುಗಿಸದೇ ಲಸಿಕೆ ಅಭಿವೃದ್ಧಿಯಾಗಿದೆಯೆಂದು ಘೋಷಿಸಿದೆ. ಒಂದು ವೇಳೆ ಇಂಥ ಲಸಿಕೆಯನ್ನು ಬಳಸಿದರೆ ಜನರ ಮೇಲೆ ಯಾವ ರೀತಿಯ ಋಣಾತ್ಮಕ ಪರಿಣಾಮ ಉಂಟಾಗಬಹುದು?

ರಷ್ಯಾದ ವಿಚಾರಕ್ಕೆ ಬಂದರೆ, ಅದು “ನಮ್ಮ ಬಳಿ ಲಸಿಕೆ ಸಿದ್ಧವಿದೆ’ ಎಂದು ಘೋಷಿಸಿ, ಖುಷಿಪಟ್ಟುಕೊಳ್ಳಬಹುದು ಮತ್ತು ಹಣ ಮಾಡಿಕೊಳ್ಳಬಹುದಷ್ಟೆ. ಸತ್ಯವೇನೆಂದರೆ, ಪರೀಕ್ಷೆಗೆ ಒಳಪಡದೇ ಲಸಿಕೆ ಸಿದ್ಧವಾಗಲಾರದು. ನಾನು ಈ ಹಿಂದೆ 5-6 ವರ್ಷಗಳಾದರೂ ಬೇಕು ಎಂದು ಏಕೆ ಹೇಳಿದ್ದೇನೆಂದರೆ, ಲಸಿಕೆಯೊಂದು ನಿಜಕ್ಕೂ ಪ್ರಯೋಜನಕಾರಿಯೇ, ಅದು ಎಷ್ಟು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತಿಳಿದುಕೊಳ್ಳಲು ಅಷ್ಟು ಸಮಯ ಹಿಡಿಯುತ್ತದೆ.

ಕೆಲವು ವರ್ಷ ಜನರ ಮೇಲೆ ಪ್ರಯೋಗಿಸಿದ ಅನಂತರವೇ ನಮಗೆ ಅದರ ಪ್ರಯೋಜನ ತಿಳಿಯುತ್ತದೆ. ನೀವು ಎಷ್ಟೇ ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸಬಹುದು. ಆದರೆ “ಈ ಲಸಿಕೆ ಕೋವಿಡ್‌-19 ವಿರುದ್ಧ ಪರಿಣಾಮಕಾರಿ’ ಎಂದು ಮುಂದಿನ ವರ್ಷದ ಅಂತ್ಯದವರೆಗಾದರೂ ಹೇಳಲು ಬರುವು ದಿಲ್ಲ. ತಾವು ಲಸಿಕೆಯನ್ನು ಸಿದ್ಧಪಡಿಸಿರುವುದಾಗಿ ಯಾರಾದರೂ ಘೋಷಿಸಬಹುದು. ಆದರೆ ಲಸಿಕೆ ಪಡೆದ ವ್ಯಕ್ತಿಗೆ ಆರು ತಿಂಗಳಲ್ಲೋ ಅಥವಾ ವರ್ಷದಲ್ಲೋ ಮತ್ತೆ ಸೋಂಕು ಹರಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಕೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಅಥವಾ ಲಸಿಕೆ ಎಲ್ಲರಿಗೂ ಸಹಾಯ ಮಾಡುತ್ತದೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ಈ ಎಲ್ಲ ಮಾಹಿತಿಯನ್ನು ಪಡೆಯಲು ಸಮಯ ಹಿಡಿಯುತ್ತದೆ. ಏಕೆಂದರೆ ಲಸಿಕೆಯನ್ನು ಬೃಹತ್‌ ಸಂಖ್ಯೆಯ ಜನರ ಮೇಲೆ ಪ್ರಯೋಗಿಸಬೇಕಾಗುತ್ತದೆ. ಲಸಿಕೆ ಪಡೆದ ವ್ಯಕ್ತಿಯ ಮೇಲೆ ಅದು ಪರಿಣಾಮ ಬೀರುತ್ತಿದೆಯೇ ಎಂದು ತಿಳಿದುಕೊಳ್ಳಲು ಹಲವು ತಿಂಗಳುಗಳು ಹಿಡಿಯುತ್ತದೆ.

ಸರಿಯಾದ, ಉತ್ತಮವಾದ ಲಸಿಕೆ ಬರಬೇಕೆಂದರೆ ಕನಿಷ್ಠ 2-3 ವರ್ಷಗಳು ಹಿಡಿಯುತ್ತವೆ. ಈ ನಡುವೆಯೇ ಕೆಲವು ಉತ್ಪನ್ನಗಳು ಮಾರುಕಟ್ಟೆಗೆ ಬಂದು, ಜನರು ಅದನ್ನು ಲಸಿಕೆ ಎಂದು ಭಾವಿಸಬಹುದು. ಅದು ನಿಮಗೆ 50 ಪ್ರತಿಶತ ಸುರಕ್ಷತೆಯನ್ನು ಒದಗಿಸಬಹುದು. ಆದರೆ 50 ಪ್ರತಿಶತ ಸುರಕ್ಷತೆ ಎನ್ನುವುದು ಭಾರತದಂಥ ಬೃಹತ್‌ ಜನಸಂಖ್ಯೆಯ ದೇಶಕ್ಕೆ ಅರ್ಥಹೀನವಾದದ್ದು. ಅದು ಇದ್ದೂ ಇಲ್ಲದಂತೆ.

ಲಸಿಕೆ ಹೊರಬರುತ್ತಿದ್ದಂತೆಯೇ ಅದನ್ನು ಪಡೆಯುವುದರಿಂದ ಏನಾದರೂ ಅಪಾಯ ಆಗುವ ಸಾಧ್ಯತೆ ಇರುತ್ತದೆಯೇ?
ಹೌದು, ಇರುತ್ತದೆ. ನೋಡಿ ಆಕ್ಸ್‌ಫ‌ರ್ಡ್‌ ಲಸಿಕೆಯ ಪ್ರಯೋಗವನ್ನು ಅವರು ಅರ್ಧದಲ್ಲಿ ನಿಲ್ಲಿಸಬೇಕಾಯಿತು. ಏಕೆಂದರೆ ಅದನ್ನು ಪಡೆದ ವ್ಯಕ್ತಿ ಅಸ್ವಸ್ಥನಾದ. ಇಂಥ ವಿಚಾರದಲ್ಲಿ ಬಹಳ ಜಾಗೃತಿ ವಹಿಸಲಾಗುತ್ತಿದೆ ಎನ್ನುವುದು ಒಳ್ಳೆಯ ಸಂಕೇತ. ಕೆಲವು ನಿರ್ದಿಷ್ಟ ರೋಗಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಲಸಿಕೆ ಅಪಾಯಕಾರಿಯಾಗಿ ಬದಲಾಗಿಬಿಟ್ಟರೆ ಹೇಗೆ ಎಂದು ಊಹಿಸಿ ನೋಡಿ. ಒಟ್ಟಿನಲ್ಲಿ ಇವೆಲ್ಲ ಗೊತ್ತಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರ ಮೇಲೆ ಪ್ರಯೋಗಗಳಾದ ಅನಂತರವೇ. ನೀವು ಕೇವಲ 10 ಸಾವಿರದಿಂದ 20 ಸಾವಿರ ಜನರನ್ನಷ್ಟೇ ಪರೀಕ್ಷಿಸುತ್ತೀರಿ ಎಂದರೆ, ಎಲ್ಲ ವೇರಿಯಂಟ್‌ಗಳೂ ನಿಮಗೆ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ನಿಜವಾದ ಟ್ರಯಲ್‌ ದೀರ್ಘ‌ಕಾಲದವರೆಗೆ ಮುಂದುವರಿಯಲಿದೆ. ಆನಂತರವೇ ನಮಗೆ ಪೂರ್ಣ ಡಾಟಾ ಸಿಗುತ್ತದೆ.

ಹಾಗಿದ್ದರೆ 2021 ಸಹ 2020ರಂತೆಯೇ ಇರಲಿದೆಯೇ?
ಈಗ ವೈರಸ್‌ನ ಜತೆಯಲ್ಲೇ ಹೇಗೆ ಬದುಕಬೇಕು ಎನ್ನುವುದನ್ನು ನಾವು ಅರಿತಿರುವುದರಿಂದ, ಸಮಾಜದಲ್ಲಿ ಆತಂಕ ಕಡಿಮೆಯಾಗಬಹುದು! ನಾವು ವೈರಸ್‌ ಅನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆಯೇ ಅದರ ಪ್ರಸರಣವನ್ನೂ ತಗ್ಗಿಸಬಲ್ಲೆವು. ನಾನು ಹೇಳುವುದೇನೆಂದರೆ ಶಿಸ್ತು ಪಾಲಿಸಿ, ಮಾಸ್ಕ್ ಧರಿಸಿ, ಓಡಾಡುವುದನ್ನು ಕಡಿಮೆ ಮಾಡಿ ಮತ್ತು ಸಾಮಾಜಿಕ ಅಂತರದ ಪಾಲನೆ ಮಾಡಿ. ನಾವು ರೋಗ ಪ್ರಸರಣದ ಸಾಧ್ಯತೆಯನ್ನು ಕಡಿಮೆ ಮಾಡಬೇಕು. ಇನ್ನೊಬ್ಬರಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ವೈರಸ್‌ನ ಜತೆಗೆ ಬದುಕುವುದು ಎಂದರೆ ಇದೇ!

ಅಮೆರಿಕದಲ್ಲಿ ಆಶ್ರಯ ಪಡೆದಿರುವ ಚೀನ ಮೂಲದ ವಿಜ್ಞಾನಿ ಡಾ| ಲಿ ಮಿಂಗ್‌ “ಕೊರೊನಾ ಮಾನವ ನಿರ್ಮಿತ ವೈರಸ್‌’ ಎನ್ನುತ್ತಿದ್ದಾರಲ್ಲ? ಒಬ್ಬ ವಿಜ್ಞಾನಿಯಾಗಿ ನೀವು ಈ ವೈರಸ್‌ನ ಮೇಲೆ ಅಧ್ಯಯನ ನಡೆಸಿದ್ದೀರಿ. ನಿಮ್ಮ ಅಭಿಪ್ರಾಯವೇನು?
ಇದು ಮಾನವ ನಿರ್ಮಿತ ವೈರಸ್‌ ಅಲ್ಲ ಎನ್ನುವುದು ಬಹುತೇಕ ವಿಜ್ಞಾನಿಗಳ ಅಭಿಪ್ರಾಯ. ಬಹುಶಃ ಅದು ಬಾವಲಿಗಳಿಂದ ಬಂದಿರಬಹುದು. ಆದಾಗ್ಯೂ ಮನುಷ್ಯನಿಗೆ ಪ್ರಯೋಗಾಲಯದಲ್ಲಿ ವೈರಸ್‌ಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆಯಾದರೂ ಕೊರೊನಾ ವೈರಸ್‌ ಪ್ರಯೋಗಾಲಯದಲ್ಲಿ ಸಿದ್ಧವಾಗಿದೆ ಎನ್ನುವುದಕ್ಕೆ ಯಾವುದೇ ಆಧಾರ ಸಿಕ್ಕಿಲ್ಲ. ಈ ವೈರಸ್‌ನ ಮೇಲೆ ಕೇವಲ ಒಬ್ಬನೇ ವಿಜ್ಞಾನಿ ಅಥವಾ ಒಂದೇ ಪ್ರಯೋಗಾಲಯ ಅಧ್ಯಯನ ನಡೆಸುತ್ತಿಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಪ್ರಯೋಗಾಲಯಗಳು ಮತ್ತು ವಿಜ್ಞಾನಿಗಳು ಈ ವೈರಸ್‌ನ ಜೀನೋಮನ್ನು ಪರೀಕ್ಷಿಸಿದ್ದಾರೆ. ಜಗತ್ತಿನಲ್ಲೇ ಒಂದು ವೈರಸ್‌ನ ಜೀನೋಮ್‌ ಅತೀ ಹೆಚ್ಚು ಅಧ್ಯಯನಕ್ಕೊಳಗಾಗಿದೆ ಎಂದರೆ ಅದು ಕೊರೊನಾ ವೈರಸ್‌ನದ್ದೇ ಆಗಿದೆ. ಡಾ| ಲಿ ಮಿಂಗ್‌ಗೆ ಬೇರೆಯವರಿಗೆ ಕಾಣಿಸದ್ದು ಅದೇನು ಕಂಡಿತೋ ನನಗಂತೂ ತಿಳಿಯುತ್ತಿಲ್ಲ.

ಕೊರೊನಾದ 2ನೇ, 3ನೇ ಅಲೆಯೂ ಬರಬಹುದೇ?
ನಾವಿನ್ನೂ ಮೊದಲ ಅಲೆಯನ್ನೇ ಎದುರಿಸುತ್ತಿರುವುದರಿಂದ 2ನೇ ಅಲೆ ಯಾವಾಗ ಬರುತ್ತದೆ ಎನ್ನುವುದು ತಿಳಿಯದು. ನಾವು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಯುರೋಪ್‌ನಲ್ಲಿ ಪಬ್‌, ರೆಸ್ಟೋರೆಂಟ್‌ಗಳು, ಬೀಚ್‌ಗಳನ್ನು ಓಪನ್‌ ಮಾಡುತ್ತಿದ್ದಂತೆಯೇ 2ನೇ ಅಲೆ ಆರಂಭವಾಯಿತು. ನಮ್ಮಲ್ಲೂ ಜನ ಮುಕ್ತವಾಗಿ ಸಿನೆಮಾ ಹಾಲ್‌ಗಳಿಗೆ, ಬೀಚ್‌ಗಳಿಗೆ, ಮಾಲ್‌ಗಳಿಗೆ ಓಡಾಡಲಾರಂಭಿಸಿದರೆ 2ನೇ ಅಲೆ ಆರಂಭವಾಗಬಹುದು. ನನ್ನ ಅಂದಾಜಿನ ಪ್ರಕಾರ ಇನ್ನೂ 3-4ತಿಂಗಳುಗಳಲ್ಲಿ ಎದುರಾಗಬಹುದು. 2ನೇ ಅಲೆ ಚಿಕ್ಕದಾಗಿರಲಿ, ಬೇಗನೇ ತಗ್ಗಲಿ ಎಂದು ಆಶಿಸೋಣ. ನೆನಪಿರಲಿ, ನಾನು ವೈಜ್ಞಾನಿಕ ಆಧಾರಗಳ ಮೇಲೆ ಇದನ್ನು ಹೇಳುತ್ತಿಲ್ಲ, ಜನರ ವರ್ತನೆಯನ್ನು ಆಧರಿಸಿ ಅಂದಾಜು ಮಾಡುತ್ತಿದ್ದೇನೆ.

ಡಾ| ರಾಕೇಶ್‌ ಮಿಶ್ರಾ ವಿಜ್ಞಾನಿ-ಸಿಎಸ್‌ಐರ್‌ ನಿರ್ದೇಶಕ

ಟಾಪ್ ನ್ಯೂಸ್

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.