ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 102 ವರ್ಷ…ಬೈಸಾಕಿ ಯುಗಾದಿ ದಿನ ಸಂಭವಿಸಿದ್ದು ಮಾರಣಹೋಮ!
ಡೈಯರ್ ನ ಮಾರಣಹೋಮ ಕೃತ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶ, ಖಂಡನೆ ವ್ಯಕ್ತವಾದ ಪರಿಣಾಮ 1920ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ
Team Udayavani, Apr 13, 2021, 11:12 AM IST
ಅಮೃತ್ ಸರ್: ಪಂಜಾಬ್ ನ ಅಮೃತ್ ಸರದಲ್ಲಿರುವ ಜಲಿಯನ್ ವಾಲಾ ಬಾಗ್ ನ ಉದ್ಯಾನದಲ್ಲಿ ನಡೆದ ಹತ್ಯಾಕಾಂಡ ಘಟನೆ ನಡೆದು ಇಂದಿಗೆ(ಏಪ್ರಿಲ್ 13) ಬರೋಬ್ಬರಿ 102 ವರ್ಷಗಳಾಗಿವೆ. ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಭೀಕರ ಮಾರಣಹೋಮ ಇದಾಗಿದೆ. ಅದು ಸಿಖ್ಭರ ಪಾಲಿನ ಯುಗಾದಿ ಬೈಸಾಕಿ ಹಬ್ಬದ ದಿನವೇ ನಡೆದ ಹತ್ಯಾಕಾಂಡ ಘಟನೆಯಾಗಿದೆ.
ಅಂದು ನಡೆದಿದ್ದೇನು?
1919ರ ಏಪ್ರಿಲ್ 13ರಂದು ಇಡೀ ದೇಶ ಯುಗಾದಿ ಸಂಭ್ರಮದಲ್ಲಿತ್ತು. ಅಂದು ಪಂಜಾಬ್ ನಲ್ಲಿ ಸಿಖ್ಖರು ಬೈಸಾಕಿ ಹಬ್ಬದ ಸಂಭ್ರಮ ಆಚರಿಸಲು ಅಮೃತಸರದಲ್ಲಿನ ಜಲಿಯನ್ ವಾಲಾ ಬಾಗ್ ನಲ್ಲಿರುವ ಉದ್ಯಾನದಲ್ಲಿ ಗಂಡಸರು, ಹೆಂಗಸರ, ಮಕ್ಕಳು, ಹಿರಿಯರು ಎಲ್ಲರೂ ಆಗಮಿಸಿದ್ದರು. ಸಂವಹನ ತಂತ್ರಜ್ಞಾನ ತೀರಾ ಹಿಂದುಳಿದಿದ್ದ ಪಂಜಾಬಿನಲ್ಲಿ, ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿ, ಸಮಾಚಾರ ಲಭ್ಯವಾಗಿಲ್ಲವಾಗಿತ್ತು. ಶಾಸನಬದ್ಧವಾಗಿ ಅಂದು ಅಮೃತಸರದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಗೂಡುವಂತಿಲ್ಲ ಎಂದು ಬ್ರಿಟಿಷ್ ಸರ್ಕಾರ ಆಜ್ಞೆ ಹೊರಡಿಸಿತ್ತು.
ಈ ಸಂದರ್ಭದಲ್ಲಿ ಶಸ್ತ್ರಸಜ್ಜಿತವಾದ ಬ್ರಿಟಿಷ್ ಸೈನಿಕರ ತುಕಡಿ ಉದ್ಯಾನವನಕ್ಕೆ ಬಂದಿತ್ತು. ಮೆಷಿನ್ ಗನ್ ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನವನದ ಕಡಿದಾದ ದ್ವಾರದಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾಗಿದ್ದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಯಾವುದೇ ಎಚ್ಚರಿಕೆಯನ್ನೂ ಕೊಡದೇ ಉದ್ಯಾನದೊಳಕ್ಕೆ ಪ್ರವೇಶಿಸಿ ಏಕಾಏಕಿ ಗುಂಡಿನ ದಾಳಿ ನಡೆಸುವಂತೆ ಆದೇಶ ನೀಡಿಬಿಟ್ಟಿದ್ದ!
ಸುಮಾರು 15 ನಿಮಿಷಗಳ ಕಾಲ ಸತತವಾಗಿ ಜನರ ಮೇಲೆ ಗುಂಡಿನ ಮಳೆಗರೆದಿದ್ದರು! ಜೀವಭಯದಿಂದ ಕಂಗಾಲಾದ ಜನರು ಗೋಡೆ ಹತ್ತಿ ಹಾರಲು ಪ್ರಯತ್ನಿಸಿದ್ದರು. ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದೊಳಗಿದ್ದ ಬಾವಿಯೊಳಕ್ಕೆ ಹಾರಿದ್ದರಂತೆ. ಈ ಹತ್ಯಾಕಾಂಡ ಸ್ಮಾರಕದಲ್ಲಿ ಉಲ್ಲೇಖಿಸಿದಂತೆ ಅಂದು ಬಾವಿಯೊಂದರಿಂದಲೇ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತಂತೆ. ಸರ್ಕಾರಿ ಮೂಲಗಳ ಪ್ರಕಾರ ಸಾವನ್ನಪ್ಪಿದವರ ಸಂಖ್ಯೆ ಬರೇ 379. ಆದರೆ ಅನಧಿಕೃತ ಅಂಕಿಅಂಶದ ಪ್ರಕಾರ ಅಂದು ಸಾವಿರಾರು ಜನರ ಮಾರಣ ಹೋಮ ನಡೆಸಲಾಗಿತ್ತಂತೆ. ಆದರೆ ರಾಜಕೀಯ ಕಾರಣಗಳಿಂದಾಗಿ ಈ ಅಂಕಿಅಂಶ ಎಂದಿಗೂ ದೃಢಪಟ್ಟಿಲ್ಲ.
ಕೊನೆಗೆ 1920ರಲ್ಲಿ ಹಂಟರ್ ವರದಿಯ ಬಿಡುಗಡೆ ನಂತರ ಸಂಭವಿಸಿದ ಜನರ ಆಕ್ರೋಶದ ಮಧ್ಯೆ ಡೈಯರ್ ನನ್ನು ನಿಷ್ಕ್ರಿಯ ಅಧಿಕಾರಿಗಳ ಪಟ್ಟಿಗೆ ಸೇರಿಸಲಾಯಿತು. ತುಕಡಿ ನಿಯಂತ್ರಿಸುವ ಅಧಿಕಾರ ಡೈಯರ್ ಗೆ ಇಲ್ಲದ ಕಾರಣ ಆತನ ಪದವಿಯನ್ನು ಕಮಾಂಡರ್ ಇನ್ ಚೀಫ್ ನಿಂದ ಕರ್ನಲ್ ಪದವಿಗೆ ಇಳಿಸಲಾಯಿತು. ನಂತರ ಡೈಯರ್ ನನ್ನು ಹಡಗಿನಲ್ಲಿ ಇಂಗ್ಲೆಂಡ್ ಗೆ ಕಳುಹಿಸಿಕೊಡಲಾಗಿತ್ತು. ಡೈಯರ್ ನ ಮಾರಣಹೋಮ ಕೃತ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶ, ಖಂಡನೆ ವ್ಯಕ್ತವಾದ ಪರಿಣಾಮ 1920ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದ.
ಅಂದು ಜಲಿಯನ್ ವಾಲಾ ಬಾಗ್ ನಲ್ಲಿ ನಡೆದ ಸಿಖ್ಖರ ಹತ್ಯಾಕಾಂಡದ ಘಟನೆ ಬೂದಿಮುಚ್ಚಿದ ಕೆಂಡದಂತೆ ಇದ್ದಿದ್ದು, 1940ರ ಮಾರ್ಚ್ 13ರಂದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಉದಮ್ ಸಿಂಗ್, ಹತ್ಯಾಕಾಂಡದ ಹಿಂದಿನ ಪ್ರಧಾನ ರೂವಾರಿ ಎನ್ನಲಾದ ಮೈಕೇಲ್ ಓಡೈರ್ ನನ್ನು ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು. 1940ರ ಜುಲೈ 31ರಂದು ಉದಮ್ ಸಿಂಗ್ ಅವರನ್ನು ನೇಣುಗಂಬಕ್ಕೆ ಏರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.