ಮೈಸೂರ್‍ನಾಗ್ ತೆನೆ ಪಕ್ಸ್‌ದೋರು ಕಮ್ಲ ಹಿಡ್ದು ಮಂಡ್ಯಾದಾಗೆ ಕೈ ಪಕ್ಸ್‌ದೋರು ಕಹಳೆ ಊದವ್ರಾ..
Team Udayavani, May 5, 2019, 8:16 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಎಲ್ಗೊಂಟೋಗಿದ್ಲಾ
ಅಮಾಸೆ: ಎಂಪಿ ಎಲೆಕ್ಸನ್ ಮುಗ್ಸಿ ಬೈ ಎಲೆಕ್ಸನ್ ಇರೋ ಕುಂದ್‌ಗೋಳ, ಚಿಂಚೋಳಿ ಕಡೆ ಹೋಗಿದ್ನಿ ಸಾ..
ಚೇರ್ಮನ್ರು: ಎಂಪಿ ಎಲೆಕ್ಸನ್ ಟೆನ್ಸನ್ಯಾಗೆ ಎಲ್ರೂ ಆವ್ರೆ, ಇನ್ ಬೈ ಎಲೆಕ್ಸನ್ ತಲೆಕೆಡ್ಸ್‌ಕೋತಾರೇನ್ಲಾ
ಅಮಾಸೆ: ಅಂಗನ್‌ಬ್ಯಾಡಿ ಸಾ.., ಬೈ ಎಲೆಕ್ಸನ್‌ನ್ಯಾಗೆ ಎಲ್ಡು ಸೀಟ್ ಇಂಪಾರ್‌ಟೆಂಟು, ಕಮ್ಲ ಪಕ್ಸ್‌ದೋರು ಅದೆಲ್ಡೂ ಗೆದ್ರೆ ಆಪ್‌ರೇಸನ್ ಕಮ್ಲ ಎಲ್ಡ್ ಕಡೆ ಮಾಡೋದ್ ತಪ್‌ತೈತೆ ಅಂತ ಪಿಲಾನ್ ಹಾಕವ್ರೆ
ಚೇರ್ಮನ್ರು:ಎಲ್ಡ್ ಗೆದ್ರೆ ಗೌರ್ಮ್ಮೆಂಟ್ ಬಿಧ್ದೋತೈತೇನ್ಲಾ
ಅಮಾಸೆ: ಬಿಧ್ದೋಗಲ್ಲಾ ಸಾ, ಕೈ-ತೆನೆ ಪಕ್ಸ ಮೆಜಾರಿಟಿ ಕಮ್ಮಿ ಐತದೆ, ಈಸ್ವರ್ ಖಂಡ್ರೆ ಸಾಹೇಬ್ರು, ಕೃಷ್ಣ ಬೈರೇಗೌಡ ಸಾಹೇಬ್ರು ಎಂಪಿ ಎಲೆಕ್ಸನ್‌ನ್ಯಾಗೆ ಗೆದ್ರೆ ಎಲ್ಡ್ ಸೀಟ್ ಕಮ್ಮಿ ಐತದಲ್ಲಾ, ಅದ್ಕೆ ಕಮ್ಲ ಪಕ್ಸ್‌ದೋರು ಎಲ್ಡೂ ಸೀಟ್ ಗೆಲ್ಬೇಕು ಅಂತ ಫೀಲ್ಡ್ಗಿಳಿದವ್ರೆ
ಚೇರ್ಮನ್ರು: ಆದ್ರೂ ಕುಮಾರಣ್ಣೋರು ಸರ್ಕಾರ್ಕೆ 114 ಮೆಜಾರಿಟಿ ಇರ್ತೈತೆ ಬುಡ್ಲಾ
ಅಮಾಸೆ: ಇವಾಗೈನೋ ಐತೆ, ಎಂಪಿ ಎಲೆಕ್ಸನ್ ರಿಸಲ್r ಬರ್ಲಿ ಹಾಲಿ ಮಿನಿಸ್ಟ್ರೆಗ್ಳು ಮಾಜಿ ಐತಾರೆ ಅಂತ ಗೋಕಾಕ್ ಸಾವ್‌ಕಾರ್ರು ರಮೇಶ್ ಜಾರ್ಕಿಹೊಳಿ ಸಾಹೇಬ್ರು ಹೇಳಿಲ್ವೆ. ಎಂಪಿ ಎಲೆಕ್ಸನ್ ರಿಸಲ್rನ್ಯಾಗೆ ಕಮ್ಲ ಪಕ್ಸ ಟ್ವೆಂಟಿ ತಕಂಡ್ರೆ ಟೆನ್ ಎಂಎಲ್ಎಗ್ಳು ಜೈ ಮೋದಿ-ಅಮಿತ್ ಸಾ ಅಂತಾರಂತೆ. ಆಗ್ ಮೆಜಾರಿಟಿ 104 ಬತ್ತದೆ. ಬಿಜೆಪಿ ಎಂಎಲ್ಎಗ್ಳು 104 ಇರೋದ್ರಿಂದ, ಎಲ್ಡ್ ಇಂಡಿಪೆಂಡೆಂಟ್ ಸೇರ್ಸಕಂಡು ಸರ್ಕಾರ ಮಾಡೂಮಾ ಅಂತ ಕಮ್ಲ ಪಕ್ಸ್‌ದೋರು ಕಾಯ್ತಾವ್ರೆ
ಚೇರ್ಮನ್ರು:ಅಂಗಾರೆ, ಬಿಜೆಪಿ ಇಲ್ಲೂ ಗೌರ್ನ್ಮೆಂಟ್ ಮಾಡ್ತಾರಾ
ಅಮಾಸೆ: ಮಾಡ್ಬೇಕು ಅಂತ ಅವ್ರುಕು ಆಸೆ, ಆದ್ರೆ ಕುಮಾರಣ್ಣೋರು ಕಮ್ಲ ಪಕ್ಸ ಎಂಎಲ್ಎಗ್ಳ ಜತೆ ಕಾಂಟಾಕ್ಟ್ ಅವ್ರಂತೆ. ಅವ್ರು ಇವ್ರಿಗೆ ಕೈ ಹಾಕಿದ್ರೆ, ಇವ್ರು ಅವ್ರ್ಗೆ ಕೈ ಹಾಕಿ ಫೈವ್ ಎಂಎಎಲ್ಗ್ಳ ಕರ್ಕಂಡ್ ಬತ್ತಾರಂತೆ. ಅದೇ ಯಡ್ಯೂರಪ್ನೋರ್ಗೆ ಟೆನ್ಸನ್
ಚೇರ್ಮನ್ರು: ಯಡ್ಯೂರಪ್ನೋರ್ನ ಸಿಎಂ ಮಾಡಾಕಿಲ್ಲಾ, ಸಂತೋಷ್ ಜೀ ಸಿಎಂ ಆಯ್ತರೆ ಅಂತ ಬಿಜೆಪಿ ಐಕ್ಳು ಹೇಳ್ತಾವ್ರೆ
ಅಮಾಸೆ: ಅಂಗ್ ಮಾಡಿದ್ರೆ ರಾಜಾಹುಲಿ ಯಡ್ಯೂರಪ್ನೋರು ಬುಟ್ಟಾರೆ, ನಿಮ್ ಪಾಲ್ಟಿನೇ ಬ್ಯಾಡ ಅಂತ ಹೊಂಟೋಯ್ತಾರೆ ಅಷ್ಟೆ
ಚೇರ್ಮನ್ರು: ಮಹಾರಾಷ್ಟ್ರ, ಗೋವಾದಾಗೆ ಅಮಿತ್ ಶಾ ಅಣ್ಣೋರು ಬೇಕಾದೋರ್ನ ಸಿಎಂ ಮಾಡ್ಲಿಲ್ವೆ
ಅಮಾಸೆ: ಅಲ್ಲಿ ಮಾಡ್‌ದಂತೆ ಇಲ್ ಮಾಡಾಕಾಯ್ತದಾ ಸಾ.. ಯಡ್ಯೂರಪ್ನೋರು ಫುಲ್ ರಾಂಗ್ ಆಗೋಯ್ತಾರೆ
ಚೇರ್ಮನ್ರು: ಬೈ ಎಲೆಕ್ಸನ್‌ನ್ಯಾಗೆ ಸಿವ್‌ಕುಮಾರಣ್ಣೋರ್ಗೆ ಇನ್‌ಚಾರ್ಜ್ ಕೊಡ್‌ಬಾರ್ಧು ಅಂತ ಸತೀಶ್ ಜಾರ್ಕಿಹೊಳಿ ಸಾವ್‌ಕಾರ್ರು ಹೇಳಿದ್ರಂತೆ ಹೌದೇನ್ಲಾ
ಅಮಾಸೆ:ಅಂಗೇನೂ ಇಲ್ಲ, ಇಬ್ರೂ ಒಂದೇ ಪಾಲ್ಟಿ, ಇಬ್ರೂ ಸೇರಿ ಒಟ್ಗೆ ಕೆಲ್ಸ ಮಾಡ್ತೀವಿ ಅಂತ ಸತೀಶ್ ಜಾರ್ಕಹೊಳಿ ಸಾವ್‌ಕಾರ್ರೆ ಹೇಳವ್ರೆ. ಒಸಿ ಕಮ್ಯುನಿಕೇಸನ್ ಪ್ರಾಬ್ಲಿಂ
ಚೇರ್ಮನ್ರು: ಸಿವ್‌ಕುಮಾರಣ್ಣೋರು ಇನ್‌ಚಾರ್ಜ್ ಇದ್ರೂ ರೆಬಲ್ ಕ್ಯಾಂಡೇಟ್‌ಗ ಜತೆ ಜಮೀರ್ ಅಣ್ಣೋರು ರಾಜಿ ಮಾಡಿದ್ರಾ
ಅಮಾಸೆ: ಸಿದ್ರಾಮಣ್ಣೋರು-ದಿನೇಶಣ್ಣೋರು ಜಮೀರ್ ಅಣ್ಣೋರ್ಗೆ ಹೇಳಿದ್ರಂತೆ. ಮುಸ್ಲಿಂ ರೆಬಲ್ ಸೇರಿ ಆರೇಳ್ ಜನ ನಿಂತ್‌ಕಂಡ್ ಬಿಟ್ಟವ್ರೆ, ಅಂಗೆ ಬಿಟ್ರೆ ನಮ್ ಕ್ಯಾಂಡೇಟ್ ಹೊಗೆ ಪ್ರೋಗ್ರಾಮು, ಹೋಗಿ ವಸಿ ಮಾತಾಡಿ ಅಂತ. ಅದ್ಕೆ ಜಮೀರಣ್ಣೋರು, ನಮ್ದೂಕೆ ಮಾತಾಡ್ತದೆ, ನೀವ್ ಡೋಂಟ್ ವರಿ ಮಾಡ್‌ಬ್ಯಾಡಿ ಎಂದು ಹೋಗಿ ರಾಜಿ ಕಬೂಲಿ ಮಾಡಿ ಬಂದವ್ರಂತೆ. ಟ್ರಬಲ್ ಶೂಟರ್ ಸಿವ್‌ಕುಮಾರಣ್ಣೋರ್ ಟೈಟ್ಲು ಈಗ ಜಮೀರಣ್ಣೋರ್ ಪೇಟೆಂಟ್ ಆಗೈತಂತೆ
ಚೇರ್ಮನ್ರು: ಕೈ ಪಕ್ಸ್‌ದೋರು ಎಲ್ರೂ ಕುಂದ್‌ಗೋಳದಾಗೆ ಅವ್ರಂತೆ, ಚಿಂಚೋಳಿನ್ಯಾಗೆ ಯಾರೂ ಇಲ್ವಂತೆ
ಅಮಾಸೆ:ಚಿಂಚೋಳಿ ಇನ್‌ಚಾರ್ಜು ಪರಮೇಸ್ವರಣ್ಣೋರು, ಅಲ್ಲಿ ದೊಡ್ ಖರ್ಗೆ ಸಾಹೇಬ್ರು, ಚಿಕ್ ಖರ್ಗೆ ಸಾಹೇಬ್ರು ಅವ್ರೆ ನೋಡ್ಕೋತಾರೆ, ಎಲ್ರೂ ಇಲ್ಲೇ ಇದ್‌ಬುಡಿ ಅಂತ ಸಿದ್ರಾಮಣ್ಣೋರು ಹೇಳಿದ್ರಂತೆ, ಅದ್ಕೆ ಎಲ್ರೂ ಇಲ್ಲೇ ಅವ್ರಂತೆ. ಅಲ್ಲೇನಾದ್ರು ಹೊಗೆ ಹಾಕ್‌ಕೊಂಡ್ರೆ, ನಮ್ದೇನಿಲ್ಲಾ ಸಿವನೇ ಚೆಂಬುಲಿಂಗಾ ಅಂತಾರೆ
ಚೇರ್ಮನ್ರು: ಸಿದ್ರಾಮಣ್ಣೋರು ಸೀಕ್ರೆಟ್ ಮೀಟಿಂಗ್ ಮಾಡವ್ರಂತೆ ಏನ್ಲಾ ಅದು
ಅಮಾಸೆ:ಎಂಪಿ ಎಲೆಕ್ಸನ್‌ನ್ಯಾಗೆ ಮೈಸೂರ್, ಮಂಡ್ಯ, ತುಮ್ಕೂರ್, ಕೋಲಾರ್, ಚಿಕ್‌ಬಳ್ಳಾಪುರ್, ಹಾಸ್ನ ರಿಸಲ್ಟಾ ಏನ್ ಬರ್‌ಬೋದು, ಆಮ್ಯಾಕೆ ಏನ್ ಆಗ್‌ಬೋದು, ನಾವ್ ಏನ್ ಮಾಡ್ಬೇಕು ಅಂತೆಲ್ಲಾ ಮೀಟಿಂಗ್ ಮಾಡವ್ರಂತೆ. ಅದ್ಕೆ ಟಿವಿಯೋರು, ಸಿದ್ರಾಮಣ್ಣೋರು ಇನ್ನೊಂದಪ ಸಿಎಂ ಆಯ್ತಾರೆ ಅಂತಾನೂ ಬ್ರೇಕಿಂಗ್ ಬಿಟ್ಟವ್ರೆ
ಚೇರ್ಮನ್ರು: ಅದ್ಕೆ ಸಿದ್ರಾಮಣ್ಣೋರು ಏನಂದವ್ರೆ
ಅಮಾಸೆ:ಅವ್ರು ಏನೂ ಅಂದಿಲ್ಲ, ರಿಸಲ್r ಬರ್ಲಿ ಅಂತ ಕಾಯ್ತಾವ್ರಂತೆ, ಕಮ್ಲ ಪಕ್ಸ್‌ದೋರು ಕೈ-ತೆನೆ ಪಕ್ಸ್‌ದೋರ್ನ ಆಪ್‌ರೇಸನ್ ಮಾಡಿ ಗೌರ್ನ್ಮೆಂಟ್ ಮಾಡ್ಬೇಕು ಅಂತ ಕಾಯ್ತಾವ್ರೆ. ಯಾರ್ ಏನ್ ಮಾಡ್ತಾರೋ
ಚೇರ್ಮನ್ರು: ದೇವೇಗೌಡ್ರು ಯಾಕ್ಲಾ ಸೈಲಂಟಾಗವ್ರೆ
ಅಮಾಸೆ:ಅವ್ರು ಎಲ್ಲಾದ್ರೂ ಸೈಲಂಟಾಗಿರ್ತಾರಾ ಸಾ… ಉಡ್‌ಪಿ ರೆಸಾರ್ಟ್‌ನ್ಯಾಗೆ ಪಂಚಕರ್ಮ ಮಾಡ್ಸ್‌ಕಂಡು ಅಲ್ಲಿಂದ್ಲೇ ಟಿಆರ್‌ಎಸ್, ವೈಎಸ್‌ಆರ್, ಎಸ್‌ಪಿ-ಬಿಎಸ್‌ಪಿ, ಟಿಎಂಸಿ, ಎಲ್ಜೆಪಿ, ಎಎಪಿ ಲೀಡ್ರಗ್ಳ ಜತೆ ಟಾಕಿಂಗ್‌ನಲ್ಲವ್ರಂತೆ. ರಿಸಲ್r ಬಂದ್‌ಮ್ಯಾಕೆ ನಾವೆಲ್ಲಾ ಸೇರಿ ಏನ್ ಮಾಡ್ಬೇಕು ಅಂತ ಅವ್ರ್ನೇ ಕೇಳಿ ಹಲ್ವಾ ಕೊಟ್ಟವ್ರೆ. ಅದ್ಕೆ ಎಲ್ರೂನೂವೇ ನೀವ್ ಎಂಗ್ ಹೇಳ್ತಿರೋ ಅಂಗೆ ಅಂದವ್ರಂತೆ. ನೋಡುಮಾ ಏನ್ ಆಯ್ತದೆ ಅಂತ. ನನ್ ಹೆಂಡ್ರು ಮೀನ್ ತತ್ತಾ ಅಂದವೆ ಬತ್ತೀನಿ ಸಾ….
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.