ಕನ್ನಡದಲ್ಲಿ ವಿಜ್ಞಾನ ಕಟ್ಟುವ ಅರಿವಿನ ಮುನ್ನೋಟ


Team Udayavani, Nov 9, 2018, 3:40 AM IST

kannada.jpg

ಜಗತ್ತಿನ ಏಳಿಗೆ ಹೊಂದಿರುವ ನಾಡುಗಳನ್ನು ನೋಡಿದರೆ ಎಲ್ಲಕ್ಕಿಂತ ಮುಖ್ಯವಾಗಿ ಕಂಡುಬರುವುದೇನೆಂದರೆ ಅಲ್ಲೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಒತ್ತು ಕೊಡಲಾಗಿರುತ್ತದೆ ಮತ್ತು ಆ ಕಲಿಕೆ ಆಯಾ ನಾಡಿನ ನುಡಿಗಳಲ್ಲಿರುತ್ತದೆ. ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್‌, ಫಿನ್ಲ್ಯಾಂಡ್ ಹೀಗೆ ಮುಂದುವರೆದ ಯಾವುದೇ ನಾಡುಗಳ ಉದಾಹರಣೆಗಳನ್ನು ತೆಗೆದುಕೊಂಡರೂ ಈ ಸತ್ಯ ಎದ್ದುಕಾಣುತ್ತದೆ. ತಮ್ಮ ನುಡಿಯನ್ನು ಹೊಸ ಹೊಸ ಅರಿವಿನ ಕವಲುಗಳಿಗೆ ಅಲ್ಲಿನ ನುಡಿ ಸಮುದಾಯ ಸಜ್ಜುಗೊಳಿಸುತ್ತಾ ಬಂದಿದೆ. 1641ರಿಂದ 1853ರವರೆಗೆ (ಮುಂದೆಯೂ ಕೂಡ), ಜಪಾನಿನಲ್ಲಿ ನಡೆದ ರಂಗಾಕು (Rangaku) ಎಂಬ ವಿಜ್ಞಾನ ಕಲಿಕೆಯ ಚಳವಳಿ ಈ ನಿಟ್ಟಿನಲ್ಲಿ ವಿಶೇಷವಾದುದು. ಬೇರೆ ದೇಶಗಳೊಂದಿಗೆ ಸಂಬಂಧ ಕಡಿದುಕೊಂಡಿದ್ದ ಜಪಾನ್‌, ವ್ಯಾಪಾರಕ್ಕಾಗಿ ಡಚ್ಚರನ್ನು ತುಸು ಒಳಗೆ ಬಿಟ್ಟುಕೊಟ್ಟಿತ್ತು. ಡಚ್ಚರು ತಮ್ಮೊಡನೆ ಟೆಲಿಸ್ಕೋಪ್‌, ಮೈಕ್ರೋಸ್ಕೋಪ್‌, ವೈದ್ಯಕೀಯ ಉಪಕರಣಗಳು ಮುಂತಾದ ವೈಜ್ಞಾನಿಕ ಸಲಕರಣೆಗಳನ್ನು, ತಿಳಿವನ್ನು ಜಪಾನಿಗೆ ಹೊತ್ತು ತಂದರು. ಡಚ್ಚರಿಂದ ಒದಗಿದ ಈ ಹೊಸ ತಿಳಿವನ್ನು ತಮ್ಮದಾಗಿಸಿಕೊಳ್ಳಲು ಜಪಾನಿಗರೆಲ್ಲರೂ ಡಚ್ಚರ ಭಾಷೆಯನ್ನು ಕಲಿಯಲಿಲ್ಲ, ಬದಲಾಗಿ ತಮ್ಮ ಜಪಾನೀಸ್‌ ನುಡಿಯನ್ನು ಸಜ್ಜುಗೊಳಿಸಲು ತೊಡಗಿದರು. ಈ ಕೆಲಸದಲ್ಲಿ ಜಪಾನಿಯರು ಒಂದು ನುಡಿ ಸಮುದಾಯವಾಗಿ ತೊಡಗಿಕೊಂಡರು. ಜಪಾನೀ ನುಡಿಯಲ್ಲಿ ವೈಜ್ಞಾನಿಕ ಪದಕಟ್ಟಣೆ, ಬರಹಗಳು, ಚರ್ಚೆಗಳು ಹೀಗೆ ನುಡಿ ಸಜ್ಜುಗೊಳಿಸುವಿಕೆಯ ಕೆಲಸ ಜಪಾನಿನಲ್ಲಿ ಎಡೆಬಿಡದೇ ನಡೆಯಿತು. ಅದರ ಫ‌ಲ ಈಗ ನಮ್ಮ ಮುಂದಿದೆ, ಜಪಾನ್‌ ಮುಂಚೂಣಿ ನಾಡುಗಳ ಸಾಲಲ್ಲಿ ನಿಂತಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಎತ್ತರದ ಸಾಧನೆಗಳನ್ನು ಮಾಡುತ್ತಿರುವ ಫಿನ್‌ ಲ್ಯಾಂಡ್ನ‌ಂತಹ ನಾಡುಗಳಲ್ಲಿ ನಡೆದ ನುಡಿ ಹಮ್ಮುಗೆ (language  planning) ಕೆಲಸಗಳು ಅವರ ತಾಯ್ನುಡಿಯನ್ನು ವಿಜ್ಞಾನ ಕಲಿಕೆಗೆ ಅಣಿಗೊಳಿಸುತ್ತಾ ಬಂದಿದೆ. 

ಇನ್ನು, ನಮ್ಮ ನಾಡಿನ ವಿಷಯಕ್ಕೆ ಬಂದರೆ, ಮೇಲ್ನೋಟಕ್ಕೆ ಇಂಗ್ಲೀಷ್‌ ಎಲ್ಲೆಡೆ ಚಾಚುತ್ತಿದೆ ಎಂಬಂತೆ ಕಂಡುಬಂದರೂ, ಇಂದಿಗೂ ಸುಮಾರು 65-70% ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿ¨ªಾರೆ. ಇಂಗ್ಲೀಷಿನ ಕಣಟ್ಟು ಇಲ್ಲವಾದೊಡನೆ ಕನ್ನಡ ಸಮುದಾಯ ಕೂಡ ಕನ್ನಡವನ್ನೇ ನೆಚ್ಚಿಕೊಳ್ಳುವುದು ಖಂಡಿತ ಮತ್ತು ಅದೇ ಸರಿಯಾದುದು. ಹಾಗಾಗಿ ಕನ್ನಡದಲ್ಲಿ ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಬೆಟ್ಟದಷ್ಟಿದೆ. ಕನ್ನಡವನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಜ್ಜುಗೊಳಿಸುವ ಕೆಲಸ ಇಂದು ತುರ್ತಾಗಿ ಮತ್ತು ಬಿರುಸಾಗಿ ಆಗಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಪದಕಟ್ಟಣೆಯ ಕಮ್ಮಟಗಳು, ಬರಹಗಳು, ವಿಡಿಯೋಗಳು, ಪ್ರದರ್ಶನಗಳು, ಪ್ರಯೋಗಗಳು, ಮಾತುಕತೆಗಳು ಹೀಗೆ ಹತ್ತು ಹಲವು ಕವಲುಗಳಲ್ಲಿ ಕನ್ನಡದಲ್ಲಿ ವಿಜ್ಞಾನ ಕಟ್ಟುವ ಕೆಲಸ ನಡೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಇಂತಹ ಕೆಲಸಗಳು ನಡೆಯುತ್ತಿರುವುದು ಸಂತಸದ ಸಂಗತಿ. 
“ಅರಿಮೆ’ ಎಂಬ ಹೆಸರಿನಿಂದ ನಮ್ಮ ತಂಡ ಕೂಡ ಕನ್ನಡದಲ್ಲಿ ವಿಜ್ಞಾನ ಕಟ್ಟುವ ಇಂತಹ ಕೆಲವು ಪ್ರಯತ್ನಗಳನ್ನು ಮಾಡುತ್ತಿದೆ. ಅರಿಮೆ (arime.org) ವೆಬ್‌ಸೈಟ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ಮೂಡಿಸುವುದು, ಸಮುದಾಯ ಪಾಲ್ಗೊಳ್ಳುವಿಕೆಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪದಕೋಶಗಳ ಕಟ್ಟಣೆ, ಕನ್ನಡ ಮಾಧ್ಯಮ ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ಮೂಡಿಸುವ ಕಮ್ಮಟಗಳನ್ನು ಹಮ್ಮಿಕೊಳ್ಳುವುದು ಹೀಗೆ ಕೆಲವು ಪುಟ್ಟ ಹೆಜ್ಜೆಗಳನ್ನು ನಮ್ಮ ತಂಡ ಇಡುತ್ತಿದೆ. ಕನ್ನಡದಲ್ಲಿ ವಿಜ್ಞಾನ ಪದಗಳ ಕಟ್ಟಣೆ ಅಂದೊಡನೆ ನಮ್ಮಲ್ಲಿ ಎರಡು ನಡೆಗಳು ಕಂಡುಬರುತ್ತವೆ. ಒಂದು ಕನ್ನಡದಲ್ಲಿ ಕಟ್ಟಲು ಆಗುವುದಿಲ್ಲ ಅನ್ನುವ ಅನಿಸಿಕೆಯಿಟ್ಟುಕೊಂಡು, ಇರುವುದನ್ನೇ ಮುಂದುವರೆಸಿಕೊಂಡು ಹೋಗುವುದು, ಎರಡನೆಯದು ಪದಗಳನ್ನು ಸಂಸ್ಕೃತಭೂಯಿಷ್ಟವಾಗಿಸುವುದು (ಉದಾ: ವಿಜ್ಞಾನ ಪಠ್ಯಪುಸ್ತಕದಲ್ಲಿರುವ ಭುಕ್ತಿ, ಪ್ಲವನತೆ, ಹೃಸ್ವಾಕ್ಷ, ಪೀನ, ನಿಮ್ನ ಮುಂತಾದವು). ಇವೆರಡರಾಚೆ ಕನ್ನಡಕ್ಕೆ ತನ್ನದೇ ಬೇರುಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಟ್ಟುವ ಕಸುವು ಇದೆ ಅನ್ನುವುದನ್ನು ಕನ್ನಡಿಗರು ಮನಗಾಣಬೇಕಿದೆ. ಈ ನಿಟ್ಟಿನಲ್ಲಿ ಸುಲಭವಾಗಿ ತಿಳಿಯಬಲ್ಲ, ಹೆಚ್ಚಾಗಿ ಕನ್ನಡದ ಬೇರುಗಳಿಂದ ಕೂಡಿದ ಪದಗಳನ್ನು ಕಟ್ಟುವ ಮತ್ತು ಚರ್ಚೆಗೆ ತೆರೆದಿಡುವ ಕೆಲಸವನ್ನು ನಮ್ಮ ತಂಡ ಮಾಡುತ್ತಿದೆ. 

ಕನ್ನಡ ಮಾಧ್ಯಮ ಶಾಲೆಯ ಮಕ್ಕಳಲ್ಲಿ ವಿಜ್ಞಾನ ಕಮ್ಮಟಗಳನ್ನು ನಡೆಸಿದಾಗ ಕಂಡುಬಂದ ಇನ್ನೊಂದು ಅಂಶವೆಂದರೆ, ವಿಜ್ಞಾನವನ್ನು ಮಕ್ಕಳು ಪಠ್ಯಕ್ರಮದ ಒಂದು ವಿಷಯ ಎಂಬಂತೆ ತಿಳಿದಿ¨ªಾರೆಯೇ ಹೊರತು ಅದು ತಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಅನ್ನುವುದನ್ನು ಗಮನಿಸಿದಂತಿಲ್ಲ (ಅವರಿಗೆ ಕಲಿಸಿದಂತಿಲ್ಲ). ಇದರಿಂದಾಗಿ ವಿಜ್ಞಾನ ಕಲಿಕೆ ರಸವಿಲ್ಲದ ಪರೀಕ್ಷೆ ಬರೆದು ಪಾಸಾಗುವುದಕ್ಕೆ ಸೀಮಿತವಾಗಿದೆ. ವಿಜ್ಞಾನಕ್ಕೂ ನಮ್ಮೆಲ್ಲರ ಬದುಕಿಗೂ ಇರುವ ನಂಟನ್ನು ತೋರಿಸುವ, ಹೆಚ್ಚೆಚ್ಚು ಪ್ರಯೋಗಗಳನ್ನು ಅಳವಡಿಸಿಕೊಂಡು ಮಾಡಿ ಕಲಿ ಮೂಲಕ ವಿಜ್ಞಾನವನ್ನು ಕಲಿಸುವ ಕೆಲಸವಾಗಬೇಕು.

ಇನ್ನೊಂದು ಪುಟ್ಟ ಹೆಜ್ಜೆಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ತಿಂಗಳಿಗೊಂದರಂತೆ ಬೆಂಗಳೂರಿನ ಬಸವನಗುಡಿಯಲ್ಲಿರುವ “ಮುನ್ನೋಟ’ ಪುಸ್ತಕ ಮಳಿಗೆಯೊಂದಿಗೆ ಸೇರಿಕೊಂಡು ನಮ್ಮ ತಂಡ ನಡೆಸುತ್ತಿದೆ. ಕಳೆದ ಒಂದೂವರೆ ವರುಷದಿಂದ ಎಡೆಬಿಡದೇ ನಡೆಯುತ್ತಿರುವ “ಅರಿಮೆ ಮುನ್ನೋಟ’ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಕರು ತಮ್ಮ ವೈಜ್ಞಾನಿಕ ತಿಳುವಳಿಕೆಯನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತಿ¨ªಾರೆ. ಐನ್‌ಸ್ಟಿàನ್‌ರ ಥಿಯರಿ ಆಫ್ ರಿಲೇಟಿವಿಟಿ, ಹೊಸಗಾಲದ ಕ್ವಾಂಟಂ ಫಿಸಿಕÕ… ಕುರಿತಾದ ತಿಳುವಳಿಕೆಯಲ್ಲದೇ ಇತ್ತೀಚಿಗೆ ಮುನ್ನೆಲೆಗೆ ಬರುತ್ತಿರುವ ಆಯ….ಓ.ಟಿ. (ಐಟಖ), ಕಟ್ಟು ಜಾಣ್ಮೆ (artificial inteligence & AI), ಇಲೆಕ್ಟ್ರಿಕ್‌ ಕಾರುಗಳಂತಹ ಹಲವು ಬಗೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರಗಳನ್ನು ಕನ್ನಡದಲ್ಲಿ ತಿಳಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. 
ಈ ಮಾತುಕತೆಯಲ್ಲಿ ವಿಜ್ಞಾನ ವಿಷಯದ ಆಸಕ್ತರು, ಮಕ್ಕಳು, ಜನಸಾಮಾನ್ಯರು ಕೇಳುಗರಾಗಿ ಪಾಲ್ಗೊಳ್ಳುತ್ತಿ¨ªಾರೆ.  ಒಟ್ಟಾರೆ ಯಾಗಿ ಸಮುದಾಯ ಪಾಲ್ಗೊಳ್ಳುವಿಕೆಯ ಮೂಲಕ ಕನ್ನಡದಲ್ಲಿ ವಿಜ್ಞಾನವನ್ನು ಕಟ್ಟುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಜತೆಗೆ ವಿಜ್ಞಾನ ಪದಕಟ್ಟಣೆಯನ್ನು ಮುಂದುವರೆಸುವುದು, ವಿಜ್ಞಾನಕ್ಕೆ ಸಂಬಂಧಿಸಿದ ಈಗಾಗಲೇ ಇರುವ ವಿಡಿಯೋಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದು ಮತ್ತು ಹೊಸ ವಿಡಿಯೋಗಳನ್ನು ತಯಾರಿಸುವುದು ಮುಂತಾದ ಕೆಲಸಗಳಿಗೆ ನಮ್ಮ ತಂಡ ತೊಡಗಿಸಿಕೊಳ್ಳಲಿದೆ. ಕನ್ನಡ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕವೇ ಈ ಕೆಲಸಗಳೂ ನಡೆಯಬೇಕಿದ್ದು, ಆಸಕ್ತರು ಈ ನಿಟ್ಟಿನಲ್ಲಿ ನಮ್ಮ ತಂಡದೊಂದಿಗೆ ಕೈಜೋಡಿಸಬಹುದು. ಕನ್ನಡದಲ್ಲಿ ವಿಜ್ಞಾನ ಕಟ್ಟುವ ಕೆಲಸ ಹಲವೆಡೆ ನಡೆಯುವಂತಾಗಲಿ, ಇದರಲ್ಲಿ ಕನ್ನಡಿಗರು ಒಂದು ನುಡಿ ಸಮುದಾಯವಾಗಿ ತೊಡಗಿಕೊಳ್ಳುವಂತಾಗಲಿ, ಆ ಮೂಲಕ ಕನ್ನಡಿಗರು ನಿಜವಾದ ಏಳಿಗೆಯತ್ತ ಸಾಗಲಿ.

 ಪ್ರಶಾಂತ ಸೊರಟೂರ

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.