Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

ವಿದೇಶಗಳಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿಗರಲ್ಲಿ ಹೆಚ್ಚುತ್ತಿರುವ ಕನ್ನಡ ಅಸ್ಮಿತೆ | ಮಕ್ಕಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ ಪಾಠಕ್ಕೆ ಹೆಚ್ಚು ಆದ್ಯತೆ

Team Udayavani, Nov 23, 2024, 6:40 AM IST

1-kannada

ವಿದೇಶಗಳಲ್ಲಿ ಈಗ ಕನ್ನಡದ ಕೂಗು ಸಾಮಾನ್ಯ ಅನ್ನುವಂತೆ ಕೇಳಿಬರುತ್ತಿದೆ. ವ್ಲಾಗರ್‌ಗಳು ವಿದೇಶಿ ನೆಲದಲ್ಲಿ ಓಡಾಡುತ್ತಾ ಕನ್ನಡದಲ್ಲಿಯೇ ವಿವರಣೆ ಕೊಡುತ್ತಾ ಕೇಳಿಗರ ಸಂಭ್ರಮ ಹೆಚ್ಚಿಸುತ್ತಿದ್ದಾರೆ. ಆದರೆ ಅದು ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ನಾಟಕ, ಕಿರುತೆರೆ ಅಥವಾ ಸಿನೆಮಾದಲ್ಲಿ ವಿದೇಶಿ ಕನ್ನಡಿಗರ ಕಥೆಗಳಿಗೆ ಪ್ರಾಶಸ್ತ್ಯ ದೊರೆಯುತ್ತಿ¤ಲ್ಲ. ಮತ್ತೂಂದು ಕಡೆಯಲ್ಲಿ ವಿದೇಶದಲ್ಲಿರುವ ನಮಗೆ ಕನ್ನಡ ಅನಿವಾರ್ಯವಲ್ಲ ಎಂಬ ಮನೋಭಾವವೂ ಕೆಲವು ಅನಿವಾಸಿ ಕನ್ನಡಿಗರಿಗಿದೆ. ಇಂಥ ಸಮಸ್ಯೆಗಳನ್ನು ನಿವಾರಿಸಿಕೊಂಡು ವಿದೇಶಗಳಲ್ಲಿ “ಕನ್ನಡ ಕಟ್ಟುವ’ ಕೆಲಸ ಆಗಬೇಕಿದೆ.

ಇಂದು ಬಹುತೇಕ ದೇಶಗಳಲ್ಲಿ ಭಾರತೀಯರು ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿ­ಸುತ್ತಿ¨ªಾರೆ. ಅದರಲ್ಲೂ ಬೆಂಗಳೂ­ರಿನಲ್ಲಿ ವೃತ್ತಿ ಜೀವನ ಆರಂಭಿಸಿದ ಕರ್ನಾಟಕದ ನಾನಾ ಭಾಗಗಳ ಕನ್ನಡಿಗರು ಜಗತ್ತಿನೆÇÉೆಡೆ ಹರಡಿಕೊಂಡಿದ್ದಾರೆ. ಅವರೆಲ್ಲ ತಮ್ಮೊ­ಂದಿಗೆ ಕನ್ನಡವನ್ನೂ ಹೊತ್ತೂ­ಯ್ಯು­­ತ್ತಿ¨ªಾರೆ. ಹೀಗೆ ಹೊರ ದೇಶಗಳಿಗೆ ಬರುತ್ತಿರುವ ಇತ್ತೀಚಿನ ತಲೆಮಾರಿ­ನವರಿಗೆ “ಕನ್ನಡ ಭಾಷೆ’ ಕೇವಲ ಬಳಕೆಗೆ ಮಾತ್ರ ಸೀಮಿತವಾಗಿಲ್ಲ. ಅದು ಸ್ವಾಭಿಮಾನದ ಪ್ರತೀಕವೂ ಆಗಿದೆ. ಹೊರದೇಶಗಳಿಗೆ ಬಂದಾಗ ಭಾರತೀ­ಯರು ಎಂಬ ಗುರುತಿನ ಜತೆಗೆ ನಾವು “ಕನ್ನಡಿಗರು’ ಎಂಬುದನ್ನೂ ಹೆಮ್ಮೆಯಿಂದ ತಿಳಿಸಿ ಕನ್ನಡನಾಡಿನ ಬಗ್ಗೆ ಒಂದಷ್ಟು ತಿಳಿ ಹೇಳುವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಎಲ್ಲದಕ್ಕೂ ಮೊದಲು “ಕನ್ನಡ್‌’ ಅಲ್ಲ “ಕನ್ನಡ’ ಎಂದು ಕನ್ನಡೇತರ ಅನಿವಾಸಿ ಭಾರತೀಯರನ್ನೂ ತಿದ್ದುವ ಕಾರ್ಯ ನಡೆಯುತ್ತಿದೆ. ಹಾಗೆಂದ ಮಾತ್ರಕ್ಕೆ ಅಮೆರಿಕಕ್ಕೆ ಬಂದು ಕನ್ನಡ ಮಾತನಾಡ­ದಿದ್ದರೆ ಹೇಗೆ ಎಂದು ಯೋಚಿಸುವುದು ಬೇಕಿಲ್ಲ. ಇಂಗ್ಲಿಷಿನ ಪ್ರಾವೀಣ್ಯ ಇರುವ ಕನ್ನಡಿಗರು ಕನ್ನಡ ಕಸ್ತೂರಿಯ ಘಮಲನ್ನೂ ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕನ್ನಡ ಕಲಿಕಾ ಕೇಂದ್ರಗಳಿಗೆ ಬೇಡಿಕೆ
ಈ ನಡುವೆ ಭಾರತದಿಂದ ಅಮೆರಿಕಕ್ಕೆ ಬರುತ್ತಿರುವ ಕರ್ನಾಟಕದ ಪೋಷಕರಿಗೆ ಮಕ್ಕಳ ವಿಚಾರದಲ್ಲಿ ಎಲ್ಲಿಲ್ಲದ ಕಾಳಜಿ. ಪಿಟೀಲು, ಪಿಯಾನೋ, ಸಂಗೀತ, ಈಜು, ಟೆಕ್ವಾಂಡೋ ಹೀಗೆ ಇಡೀ ವಾರ ಪೂರ್ತಿ ನಾನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಭರ್ತಿ ಮಾಡಿಸಿ, ಇತರ ಅನಗತ್ಯ “ಚಟುವಟಿಕೆ’ಗಳಲ್ಲಿ ತೊಡಗ­ದಂತೆ ನೋಡಿಕೊಳ್ಳುತ್ತಾರೆ. ಇದ­ರೊಂ­ದಿಗೆ “ಕನ್ನಡ ಕಲಿಸುವ’ ಕೇಂದ್ರಗಳಿಗೆ ಮಕ್ಕಳನ್ನು ಕಡ್ಡಾಯ­ವಾಗಿ ಸೇರಿಸುವ ಪರಿ­ಪಾಠವೂ ಶುರುವಾ­ಗಿದೆ. ಅಮೆರಿಕದಲ್ಲಿ ಬಹುತೇಕ ರಾಜ್ಯಗಳ ಪ್ರಮುಖ ನಗರಗಳಲ್ಲಿ ಕನ್ನಡ ಕಲಿಕಾ ಕೇಂದ್ರ­ಗಳನ್ನು ನಡೆಸಲಾಗುತ್ತಿದೆ. ಅನೇಕ ವರ್ಷಗಳಿಂದ ಇಲ್ಲಿಯೇ ನೆಲೆಸಿರುವ, ಕಲಿಸುವ ಆಸಕ್ತಿ ಹೊಂದಿ­ರುವ ಕೆಲವು ಕನ್ನಡಿಗರು ವಾರಾಂತ್ಯದಲ್ಲಿ ಮಕ್ಕಳಿಗೆ ಕನ್ನಡ ಹೇಳಿಕೊಡುವ ಕೈಂಕರ್ಯ­ದಲ್ಲಿ ತೊಡಗಿದ್ದಾರೆ. ಸ್ವಾರಸ್ಯದ ಸಂಗತಿಯೆಂದರೆ, ಅಮೆರಿಕದ ಕೆಲವು ಸ್ಥಳೀಯ ಹೈಸ್ಕೂಲ್‌ಗ‌ಳಲ್ಲಿ ಕನ್ನಡ ಭಾಷೆ ಕಲಿಕೆಗೆ ಮಾನ್ಯತೆ ನೀಡಲಾಗಿದೆ. ಇದು ಕನ್ನಡ ಕಲಿತ ಮಕ್ಕಳ ಕಾಲೇಜು ಭವಿಷ್ಯಕ್ಕೂ ನೆರವಾಗಲಿದೆ.

ಗಮನ ಸೆಳೆಯುವ ಸಾಮಾಜಿಕ ಮಾಧ್ಯಮ
ಹೊಸದಾಗಿ ಹೊರದೇಶಗಳಿಗೆ ಬಂದು ನೆಲೆಸುವ ಅನೇಕ ಯುವ ಜನಾಂಗಕ್ಕೆ ಅತ್ಯುತ್ತಮ ಸಾಧನವೆಂದರೆ ಸಾಮಾಜಿಕ ಮಾಧ್ಯಮ. ನೋಡಿದ್ದೆ ಲ್ಲವನ್ನೂ ತಮ್ಮವರಿಗೆ ತಿಳಿಸುವ ಹುಮ್ಮಸ್ಸಿನಲ್ಲಿರುವ ಇವರು ತಾವು ನೋಡಿದ, ಓಡಾಡಿದ, ಆನಂದಿಸಿದ ಪ್ರತೀ ಜಾಗಗಳು, ಊರು ಕೇರಿಗಳು, ತಿಂಡಿ ತಿನಿಸುಗಳು, ಕಾಡು ಮೇಡು ಎಲ್ಲವನ್ನೂ ಮಾತೃಭಾಷೆ ಕನ್ನಡದಲ್ಲಿಯೇ ವಿವರಿಸುತ್ತಾ ವೀಡಿಯೋಗಳನ್ನು ಮಾಡಿ ತಮ್ಮವರಿಗೆ ಪರಿಚಯಿಸುವ ಹುಮ್ಮಸ್ಸಿನಲ್ಲಿ ಲಕ್ಷಾಂತರ ಜನರಿಗೂ(ಎಲ್ಲ ಭಾಷಿಗರು) ಅದು ಮುಟ್ಟುವಂತೆ ಮಾಡುತ್ತಿ¨ªಾರೆ. ಇನ್‌ಸ್ಟಾಗ್ರಾಂ, ಎಕ್ಸ್‌ (ಟ್ವಿಟರ್‌), ಫೇಸ್‌ಬುಕ್‌, ಯುಟ್ಯೂಬ್, ವಾಟ್ಸ್‌ಆ್ಯಪ್‌ ಮುಂತಾದ ಸಾಮಾಜಿಕ ಮಾಧ್ಯಮಗಳ ಆ್ಯಪ್‌ಗ್ಳಲ್ಲಿ ರೀಲ್ಸ್  ಮಾದರಿಯ ವೀಡಿಯೋಗಳು ಇತ್ತೀಚೆಗೆ ತುಂಬ ಜನಪ್ರಿಯವಾಗಿವೆ. ಬೆಂಗಳೂರು, ಮಂಗ­ಳೂರು, ಧಾರವಾಡ, ಕಾರವಾರ, ಶಿರಸಿ, ವಿಜಯಪುರ, ಕಲಬು­ರಗಿ ಮುಂತಾದ ಜಿಲ್ಲೆಗಳ ಸ್ಥಳೀಯ ಆಡುಭಾಷೆಯ ಶೈಲಿಯಲ್ಲೇ ವ್ಲಾಗರ್‌ಗಳು(ವೀಡಿಯೋ ಮಾಡುವವರು) ಮಾತನಾಡುವ ಪ್ರವೃತ್ತಿಯಿಂದಾಗಿ ಕನ್ನಡದ ಸೊಗಡು ಇನ್ನಷ್ಟು ಹೆಚ್ಚಿದೆ. ಇದು ನೋಡುಗರನ್ನು ಆಕರ್ಷಿಸುವ ಜತೆಗೆ ಕನ್ನಡದಲ್ಲಿಯೇ ಹೊರದೇಶದ ಸ್ಥಳೀಯ ವಿಚಾರಗಳನ್ನು ತಿಳಿದುಕೊಳ್ಳುವ ವಿಪುಲ ಅವಕಾಶ ನೀಡುತ್ತಿದೆ.

ಮನೋರಂಜನ ಕ್ಷೇತ್ರಗಳ ಪ್ರಭಾವ
ಕಳೆದ ಒಂದಷ್ಟು ವರ್ಷಗಳಿಂದ ಅಮೆರಿಕದಲ್ಲೂ ತೆರೆ ಕಂಡಿರುವ ಕನ್ನಡದ ಕೆಲವು ಚಲನಚಿತ್ರಗಳು ಅನೇಕ ಕನ್ನಡ ಪ್ರೇಕ್ಷಕರ ಜತೆಗೆ ಇತರ ಭಾಷಿಗರನ್ನೂ ಚಿತ್ರಮಂದಿರದ ಕಡೆ ಮುಖ ಮಾಡುವಂತೆ ಮಾಡಿವೆ. ಸ‌ದಭಿರುಚಿಯ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡುವ ಅಭ್ಯಾಸ ಹೊಂದಿರುವ ಅನೇಕರು ಉಪಶೀರ್ಷಿಕೆಗಳನ್ನು ಓದಿಕೊಂಡು ಕನ್ನಡ ಚಿತ್ರಗಳನ್ನು ವೀಕ್ಷಿಸಿದ ಉದಾಹರಣೆಗಳಿವೆ. ಇನ್ನು ಕೆಲವರು ಕನ್ನಡ ಬಾರದ ಸ್ಥಳೀಯ (ಭಾರತೀಯರಲ್ಲದವರು) ಗೆಳೆಯರನ್ನು ಕನ್ನಡ ಚಲನಚಿತ್ರ ವೀಕ್ಷಿಸಲು ಜತೆಗೆ ಕರೆದೊಯ್ಯುತ್ತಾರೆ. ಚಿತ್ರದ ಉಪಶೀರ್ಷಿಕೆ (Sub title) ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿರುವ ಕಾರಣ, ಕನ್ನಡ ಬಾರದವರೂ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸುವ ಪರಿಪಾಠ ಆರಂಭಿಸಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಗಮನಿಸಿದಾಗ ಅನಿವಾಸಿ ಕನ್ನಡಿಗರ ಕಥೆಗಳನ್ನಾಧರಿಸಿ ಚಲನಚಿತ್ರಗಳಾಗಲಿ, ನಾಟಕಗಳಾಗಲಿ, ಕಥೆ ಕಾದಂಬರಿಗಳಾಗಲಿ ಹೊರ ಬರುತ್ತಿರುವುದು ತೀರಾ ಕಡಿಮೆ. ಈ ಕ್ಷೇತ್ರಗಳಲ್ಲಿ ಕೆಲವು ಅನಿವಾಸಿ ಕನ್ನಡಿಗರು ಕಾಳಜಿ ವಹಿಸಿ ಶ್ರಮಿಸುತ್ತಿದ್ದರೂ ಪೋ›ತ್ಸಾಹದ ಕೊರತೆ ಕಾಣುತ್ತಿದೆ. ಆಗಾಗ ಕನ್ನಡ ಕಿರುಚಿತ್ರ ನಿರ್ಮಾಣಕ್ಕಾಗಿ ಸ್ಪರ್ಧೆಗಳು ನಡೆಯುತ್ತವಾದರೂ ಬೆರಳೆಣಿಕೆಯಷ್ಟು ಮಾತ್ರ ಲಭ್ಯವಾಗು­ತ್ತವೆ. ಇಂದಿಗೂ ಅನಿವಾಸಿ ಕನ್ನಡಿಗರು, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಚಿತ್ರಗಳನ್ನೇ ಮೆಲುಕು ಹಾಕುತ್ತಿದ್ದಾರೆಯೇ ವಿನಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳಾಗಿದ್ದು ತುಂಬ ಕಡಿಮೆ. ಇತರ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ಹೊರದೇಶಗಳ ಕಥೆಗಳನ್ನಿಟ್ಟುಕೊಂಡು ನಿರ್ಮಿಸಿದ ಚಿತ್ರಗಳು ತುಂಬ ವಿರಳ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ನಡೆಯಬೇಕಿದೆ.

ಹಬ್ಬಗಳ ಸಡಗರ, ಕನ್ನಡದ ಕಲರವ
ಹಿಂದೊಂದು ಕಾಲವಿತ್ತು. ವಿದೇಶಗಳಲ್ಲಿದ್ದ ಕನ್ನಡಿಗರು ಮನಸ್ಸಿನಲ್ಲಿ ಮಂ­ಡಿಗೆ ಸವಿಯೋ ಹಾಗೆ ಕರ್ನಾಟಕದ ತಿಂಡಿ ತಿನಿಸುಗಳನ್ನು ನೆನಪು ಮಾಡಿ­ಕೊಂಡು ಕೊರಗುತ್ತಾ ಕೂರಬೇಕಿತ್ತು. ಈಗ ಹಾಗಿಲ್ಲ. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಕಡುಬು, ಹೋಳಿಗೆ ಏನು ಬೇಕಾದರೂ ಮೂರ್‍ನಾಲ್ಕು ದಿನಗಳಲ್ಲಿ ಭಾರತದಿಂದ ಪಾರ್ಸೆಲ್‌ ಆಗಿ ವಿದೇಶಗಳಿಗೆ ಬರುತ್ತದೆ. ವ್ಯವಸ್ಥೆ ಹೀಗಿರು­ವಾಗ ಹಬ್ಬಗಳನ್ನು ಆಚರಿಸಿ ಕನ್ನಡ ಗೆಳೆಯರೆಲ್ಲರನ್ನು ಒಂದೆಡೆ ಸೇರಿಸಲು ಯಾರು ತಾನೆ ಹಿಂದೆ ಮುಂದೆ ನೋಡುತ್ತಾರೆ? ಗೆಳೆಯರು ಒಂದೆಡೆ ಸೇರಲು ನೆಪ ಬೇಕು ಅಷ್ಟೇ. ಹಬ್ಬ ಬಂತೆಂದರೆ ಸಾಕು; ಬಾಳೆಎಲೆ ಊಟ ಖಾಯಂ. ಹೀಗೆ ಪ್ರತಿಯೊಂದು ಹಬ್ಬಕ್ಕೂ ಒಬ್ಬೊಬ್ಬರ ಮನೆಯಲ್ಲಿ ಭೇಟಿ ಆಗುವ ಹಿನ್ನೆಲೆಯಲ್ಲಿ ಅವರವರ ಮಕ್ಕಳು ಸಹ ಆತ್ಮೀಯರಾಗುತ್ತಾರೆ. ಸಂ­ಪ್ರ ದಾಯಗಳನ್ನೂ ತಿಳಿದುಕೊಳ್ಳುತ್ತಿದ್ದಾರೆ. ಇದರ ನಡುವೆ ಕನ್ನಡ ಮಕ್ಕಳು ಪರಸ್ಪರ ಇಂಗ್ಲಿಷಿನಲ್ಲಿ ಸಂಭಾಷಣೆ ಮಾಡುವಾಗ ಹಿರಿಯರು ಬಂದು “ಯಾಕ್ರೋ ನಾವೆಲ್ಲ ಕನ್ನಡದವರು ಅಲ್ಲವೇನ್ರೊ? ಇಂಗ್ಲಿಷ್‌ ಬಿಟ್ಟು ಕನ್ನಡ ಮಾತಾಡಿ’ ಎಂದು ಗದರಿಸುವುದನ್ನು ನೋಡೋಕೆ ಒಂದು ಆನಂದ.

ಭಾಷೆ, ಸಂಸ್ಕೃತಿಯ ಪರಿಚಯವಾಗಲಿ…
ಈ ಹಿಂದಿನ ತಲೆಮಾರಿನ ಕೆಲವು ಕನ್ನಡ ಮೂಲದವರು, ವಿದೇಶಗಳಲ್ಲಿ ನೆಲೆಸಿದವರಿಗೆ ಕನ್ನಡ ಏಕೆ ಅನಿವಾರ್ಯ? ಎಂಬಂಥ ಧಾಟಿಯಲ್ಲಿ ತಮ್ಮದೇ ತರ್ಕ ಮಾಡಿ ಇದೀಗ ಅತ್ತ ಸ್ಥಳೀಯ ಕನ್ನಡೇತರರೊಂದಿಗೂ ಗುರುತಿಸಿಕೊಳ್ಳಲಾಗದೇ ಇತ್ತ ಅನಿವಾಸಿ ಕನ್ನಡಿಗರ ಸಮೂಹದಲ್ಲೂ ಇರಲಾರದೇ ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಈ ಜನರ 2ನೇ ತಲೆಮಾರು ಹಾಗೂ 3ನೇ ತಲೆಮಾರಿಗೆ “ನಾವು ಕನ್ನಡಿಗರು’ ಎಂಬ ಅಸ್ಮಿತೆಯೇ ಇಲ್ಲದಂತಾಗಿದೆ. ಪ್ರಸ್ತುತ ಅನಿವಾಸಿ ಕನ್ನಡಿಗ ಪೋಷಕರು ಈ ವಿಚಾರದಲ್ಲಿ ಜಾಗರೂಕರಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದಷ್ಟು ಕನ್ನಡಿಗರ ಸಮೂಹದಲ್ಲೇ ಹೆಚ್ಚು ಗುರುತಿಸಿಕೊಂಡು ಕನ್ನಡ ಕುಟುಂಬಗಳ ಜತೆಗೆ ಹೆಚ್ಚು ಒಡನಾಟ ಹೊಂದಿದ್ದಾರೆ. ಇದು ಸ್ಥಳೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯಕ್ಕೂ ಸಹಕಾರಿಯಾಗಲಿದೆ. ಶಾಲೆಗಳಲ್ಲಿ ಸ್ಪ್ಯಾನಿಷ್‌, ಫ್ರೆಂಚ್‌, ಮ್ಯಾಂಡರಿನ್‌, ಲ್ಯಾಟಿನ್‌ ಭಾಷೆಗಳನ್ನು ಕಲಿಯುತ್ತಿರುವ ಮಕ್ಕಳಿಗೆ “ಕನ್ನಡ’ ಭಾಷೆ ಕಬ್ಬಿಣದ ಕಡಲೆ ಆಗಿಯೇನೂ ಕಾಣುತ್ತಿಲ್ಲ. ಇತ್ತ ವಿದ್ಯಾಭ್ಯಾಸ, ಕೆಲಸ ಕಾರ್ಯಗಳ ನಿಮಿತ್ತ ವಿದೇಶಗಳಿಗೆ ಬಂದು ನೆಲೆಸಿ ಅನಿವಾಸಿಗಳಾಗುತ್ತಿರುವ ಹೊಸ ತಲೆಮಾರಿನ ಕನ್ನಡಿಗರೂ ಹೊಸ ಆಲೋಚನೆಗಳೊಂದಿಗೆ ಭಾಷೆಯನ್ನು ಬೆಳೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಒಟ್ಟಾಗುತ್ತಿದ್ದಾರೆ. ಕನ್ನಡ ಸಂಘ, ಕನ್ನಡ ಕೂಟಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇತರ ಕನ್ನಡಿಗರೊಂದಿಗೆ ಬೆರೆಯುತ್ತಿದ್ದಾರೆ. ಪ್ರಾಚೀನ ಭಾಷೆಯಾದ ಕನ್ನಡದ ಮಹತ್ವವನ್ನು ಅರಿತಿರುವ ಅನಿವಾಸಿ ಕನ್ನಡಿಗರು, ಇನ್ನು ಮುಂದೆ ಕನ್ನಡ ಗೊತ್ತಿಲ್ಲದ ವಿದೇಶಿಗರಿಗೂ (ಸ್ಥಳೀಯರು) ಕನ್ನಡ ನಾಡು, ಭಾಷೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯದಲ್ಲಿ ಸಕ್ರಿಯರಾಗಬೇಕಿದೆ.

ಆಗಬೇಕಾದ್ದೇನು?
1ಹೊರದೇಶದ ಕಥೆಗಳನ್ನು ಇಟ್ಟುಕೊಂಡು ಕನ್ನಡ ಸಿನೆಮಾಗಳ ನಿಮಾಣ ಹೆಚ್ಚೆಚ್ಚು ಆಗಬೇಕು.
2ವಿದೇಶಿಯರಿಗೆ ಕನ್ನಡ ನಾಡು, ಭಾಷೆ, ಸಂಸ್ಕೃತಿ ಪರಿಚಯಿಸುವ ಪ್ರಯತ್ನ ನಡೆಯಬೇಕು.
3ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ನಡೆಯುವ ಅನಿವಾಸಿ ಕನ್ನಡಿಗರ ಪ್ರಯತ್ನಗಳಿಗೆ ರಾಜ್ಯ ಸರಕಾರ ಮತ್ತು ಜನರಿಂದ ಹೆಚ್ಚು ಬೆಂಬಲ ಸಿಗಬೇಕು.
4 ವಿದೇಶಗಳಲ್ಲಿ ಇರುವವರಿಗೆ ಕನ್ನಡ ಭಾಷೆಯು ಅನಿವಾರ್ಯವಲ್ಲ ಎಂಬ ಮನಃಸ್ಥಿತಿಯಿಂದ ಅನಿವಾಸಿ ಕನ್ನಡಿಗರು ಹೊರಬರಬೇಕು.
5ವಿದೇಶಿ ಕನ್ನಡಿಗರ ಕಥೆ ಆಧರಿಸಿ ನಾಟಕ, ಕಿರುಚಿತ್ರ ತಯಾರಿಸುವ ಮೂಲಕ ಅವರ ಕನ್ನಡ ಕಾಳಜಿಯನ್ನು ಬೆಂಬಲಿಸ ಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಹೆಚ್ಚಾಗಬೇಕುಘಿ

ಅನಿಲ್‌ ಭಾರದ್ವಾಜ್‌, ಅನಿವಾಸಿ ಕನ್ನಡಿಗ, ಫೀನಿಕ್ಸ್, ಅಮೆರಿಕ

 

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.