Kannada Rajyotsava 2023: ಶ್ರುತಿ-ತಾಳ ಸಂಗೀತದ ಉಸಿರು,ಕನ್ನಡ ನನ್ನ ಉಸಿರು!


Team Udayavani, Nov 1, 2023, 9:00 AM IST

Kannada Rajyotsava 2023: ಶ್ರುತಿ-ತಾಳ ಸಂಗೀತದ ಉಸಿರು,ಕನ್ನಡ ನನ್ನ ಉಸಿರು!

ಮೂರು ದಶಕಗಳ ನನ್ನ ವೃತ್ತಿ ಜೀವನದಲ್ಲಿ ಬಹುತೇಕ ಕವಿಗಳ, ಸಾಹಿತಿಗಳ ಸಾಹಿತ್ಯಕ್ಕೆ ನಾನು ಧ್ವನಿಯಾಗಿದ್ದೇನೆ. ಪ್ರತಿ ಸಾಲುಗಳನ್ನು ಜೀವಿಸಿ, ಅನುಭವಿಸಿ ಹಾಡುವುದಷ್ಟೇ ಅಲ್ಲದೇ, ಆ ಭಾವ ಜನರ ಮನದಲ್ಲಿ ಬೇರೂರುವುದಕ್ಕೆ ಕಾರಣ ಕನ್ನಡ. ಕನ್ನಡದ ಹಾಡುಗಳನ್ನ ಆಹ್ಲಾದಿಸೋ, ಪ್ರೀತಿಸೋ ಈ ಜನರ ಖುಷಿಯನ್ನ ಕಣಿ¤ಂಬಿಕೊಳ್ಳೋ ಸೌಭಾಗ್ಯ ಸಿಕ್ಕಿದೆ. ಬಹುಶಃ ಬೇರಾವುದೇ ವೃತ್ತಿ ಕ್ಷೇತ್ರದಲ್ಲೂ ನನಗೆ ಇಂಥ ಸಂತೃಪ್ತಿ ಸಿಗುತ್ತಿರಲಿಲ್ಲವೇನೋ, ಅದನ್ನು ದಕ್ಕಿಸಿಕೊಟ್ಟಿರುವುದು ಕನ್ನಡ. ದೇಶ- ವಿದೇಶಗಳನ್ನ ಸುತ್ತಿ, ಸಂಗೀತ ಪ್ರದರ್ಶನ ನೀಡಿರುವ ನನಗೆ ಕನ್ನಡ ಎಂದಿಗೂ ಮೊದಲು…!

ಯಾವುದೇ ಭಾಷೆ, ಕೋಶಗಳನ್ನ ಓದಿದರೂ ನಮ್ಮ ಯೋಚನಾಲಹರಿ, ಚಿಂತನೆಗಳು ಸಾಗುವುದು ಕನ್ನಡದೊಂದಿಗೆ ಮಾತ್ರ.. ಎಲ್ಲಿ ಯಾವುದೇ ಭಾಷಿಗರಿಗಾಗಿ, ಅವರದ್ದೇ ಭಾಷೆಗಳಲ್ಲಿ ಹಾಡುವಾಗಲೂ ಕನ್ನಡದೊಂದು ಹಾಡು ಹಾಡುವಿರಾ? ಎನ್ನುವ ಮಾತೇ ನನಗೆ ಅಪಾರ ಸಂತಸವನ್ನ ನೀಡಿದ್ದಿದೆ. ಕನ್ನಡದ ಹಾಡು ಕೇಳುಗರಿಗೆ ಬರೀ ಮಧುರವಾಗಿ ಕೇಳಿಸುವುದು ಮಾತ್ರವಲ್ಲ , ಹೃದಯಗಳನ್ನು ಬೆಸೆಯುವ, ಆಪ್ತವನ್ನಾಗಿಸುವ ವಿಶೇಷ ಶಕ್ತಿಯೂ ಕನ್ನಡಕ್ಕಿದೆ.

ನಮ್ಮ ನಾಡಿಗೆ ಬಂದವರನ್ನ ತೆರೆದ ತೋಳುಗಳಲ್ಲಿ ಅಪ್ಪುವ ಪ್ರೀತಿ ಕನ್ನಡಿಗರಿಗಿದೆ. ಮಹಾನ್‌ ಸಂಗೀತಗಾರರಿಗೆ ವೇದಿಕೆ ನೀಡಿ, ಪ್ರೀತಿ ನೀಡಿ, ಬದುಕು ನೀಡಿದ್ದು ಇದೇ ಕರುನಾಡು. ಇಲ್ಲಿಗೆ ಬಂದವರೂ ಅದೇ ಪ್ರೀತಿಯೊಂದಿಗೆ ನಮ್ಮ ಭಾಷೆಯನ್ನ ಕಲಿತು ಬೆರೆತರೆ ಅದಕ್ಕಿಂತ ಸಂತಸ ಮತ್ತೂಂದಿಲ್ಲ. ಕನ್ನಡದ ಈ ನಾಡಿನಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ -ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅರ್ಹರಾಗಿರುವ ಮನುಷ್ಯರೇ ನಿಜವಾದ ಮನುಷ್ಯರು! ಇಲ್ಲಿ ಮನುಷ್ಯನಾಗಿ ಹುಟ್ಟುವುದೇ ಅದೃಷ್ಟ! ಅದಾಗದಿದ್ದರೂ ದುಂಬಿಯಾಗಿಯೋ, ಕೋಗಿಲೆಯಾಗಿಯೋ ಹುಟ್ಟಬೇಕು ಅಂತ ಮಹಾನ್‌ ಕವಿ, ಆದಿ ಕವಿ ಪಂಪ ಹೇಳಿದ್ದಾರೆ. ಅಂತಹದರಲ್ಲಿ ಈ ಭವ್ಯ ನಾಡಿನಲ್ಲಿ ಸಂಗೀತಗಾತಿಯಾಗಿಯೇ ನಾನು ಹುಟ್ಟದ್ದೀನಿ, ಅದು ನನ್ನ ಸುಕೃತ. ಮತ್ತೂಂದು ಜನ್ಮವೊಂದಿದ್ದರೆ ಅದೂ ಈ ನಾಡಿನಲ್ಲೇ ಸಿಗಲಿ ಅನ್ನೋದು ನನ್ನ ಅಭಿಲಾಷೆ. ಈ ನೆಲ, ಭಾಷೆ, ಕನ್ನಡಿಗರು ನನಗೆ ಅಪಾರ ಪ್ರೀತಿ, ಗೌರವ, ಗಟ್ಟಿಯಾದ ನೆಲೆ, ಬದುಕನ್ನ ಕೊಟ್ಟಿದ್ದಾರೆ. ಅದಕ್ಕೆಂದಿಗೂ ನಾನು ಋಣಿ! ಕನ್ನಡದ ಶುಭ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಮೊದಲು ನಮ್ಮ ನಮ್ಮ ಮನಗಳಲ್ಲಿ- ಮನೆಗಳಿಂದಲೇ ಕನ್ನಡದ ಮೇಲಿನ ಪ್ರೀತಿ ಪಸರಿಸಲಿ ಅನ್ನೋದು ನನ್ನ ಕೋರಿಕೆ.

-ಅರ್ಚನಾ ಉಡುಪ, ಖ್ಯಾತ ಹಿನ್ನೆಲೆ ಗಾಯಕಿ

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.