Kannada Rajyotsava: ನಿಂತ ನೆಲವೇ ಕರ್ನಾಟಕ!


Team Udayavani, Nov 1, 2024, 10:00 AM IST

11

ಉದ್ಯೋಗ ಮತ್ತು ಹೊಟ್ಟೆಪಾಡಿನ ಕಾರಣಕ್ಕೆ ವಿದೇಶಗಳಿಗೆ ಹೋದವರು ಅಲ್ಲಿಯೂ ಕರ್ನಾಟಕವನ್ನು ಧ್ಯಾನಿಸಿದಾಗ, ಕನ್ನಡವನ್ನು ಉಸಿರಾಡಿದಾಗ ಆದ ಬದಲಾವಣೆಗಳು ಒಂದೆರಡಲ್ಲ. “ನೀ ಮೆಟ್ಟಿದ ನೆಲ- ಅದೆ ಕರ್ನಾಟಕ…’ಎಂಬ ಕವಿವಾಣಿಯಂತೆಯೇ ಬದುಕುತ್ತಿರುವ ಕನ್ನಡಿಗರ ಅಂತರಂಗದ ಮಾತುಗಳಿವು… 

ಕುವೈತ್‌ನಲ್ಲಿ ಕನ್ನಡದ ಕಲರವ

ಬೆಂಗಳೂರು ಜಿಲ್ಲೆ ಹೊಸಕೋಟೆ ನಂದಗುಡಿ ಹೋಬಳಿಯ ನೆಲವಾಗಲು ನನ್ನ ಹುಟ್ಟೂರು. ನೂರಾರು ಕುಟುಂಬಗಳ ಊರಲ್ಲಿ ನಮ್ಮವು ಬೆರಳೆಣಿಕೆಯ ಮುಸ್ಲಿಂ ಕುಟುಂಬಗಳು. ಸಹಜೀವನ ಸಾಮರಸ್ಯಗಳ ಗೂಡು ನನ್ನೂರು. ಸುತ್ತಮುತ್ತಲೂ ಕನ್ನಡದ್ದೇ ಕಂಪು. ಓದಿನ ಪ್ರತಿ ಹಂತದಲ್ಲೂ ಗುರುಗಳ- ಸ್ನೇಹಿತರ ಮಾರ್ಗದರ್ಶನ, ಸಹಾಯಗಳು ನನ್ನ ಕನ್ನಡಪರ ಒಲವನ್ನು ಇನ್ನೂ ಹೆಚ್ಚು ಪ್ರಬಲಗೊಳಿಸಿ ದವು. ನಾಟಕಗಳು, ಚರ್ಚಾಸ್ಪರ್ಧೆಗಳು, ಕವನ, ವಿಜ್ಞಾನ ಲೇಖನಗಳು ಎಲ್ಲವೂ ನಿಂತು ಹೋಗಿ ಉಸಿರು ಕಟ್ಟಿಸುವ ವಾತಾವರಣ ಮೂಡಿದ್ದು 22 ವರ್ಷಗಳ ಭಾರತದ ವೃತ್ತಿ ಜೀವನದಿಂದ ಕೊಲ್ಲಿ ರಾಷ್ಟ್ರ ಕುವೈತ್‌ಗೆ ಬಂದ ಮೇಲೆ. ಆದರೆ, ಕನ್ನಡಪರ ತುಡಿತ ಇದಕ್ಕೂ ಒಂದು ಮಾರ್ಗ ಹುಡುಕಿಕೊಂಡಿದ್ದು, ಇಲ್ಲಿನ ಕುವೈತ್‌ ಕನ್ನಡ ಕೂಟದ ಸಂಪರ್ಕದಿಂದ. ಈ ತುಡಿತವೇ ಫೇಸ್‌ಬುಕ್‌ ಸಮೂಹದ “ಪದಾರ್ಥ ಚಿಂತಾಮಣಿ’ಯನ್ನು ಕಟ್ಟಲು ಕಾರಣವಾಯಿತು. ಇಲ್ಲೂ ನನ್ನ ನಾಡಿನ ಮಿತ್ರರು ಮತ್ತು ಕುವೈತ್‌ನಲ್ಲಿ ನೆಲೆಸಿರುವ ಕನ್ನಡಿಗ ಮಿತ್ರರು ಸಹಾಯ ಮತ್ತು ಸಹಕಾರ ನೀಡಿದರು. ಹೀಗೆ ಮುನ್ನಡೆದ ನಮ್ಮ ಆಸಕ್ತಿಗಳು ಸೃಜನಶೀಲ ವೇದಿಕೆ ಸಾಹಿತ್ಯ ಸಂಪದಕ್ಕೂ ನಾಂದಿ ಹಾಡಿದವು.

ಕುವೆಂಪು ಅವರ ಈ ಸಾಲುಗಳು ಎಷ್ಟು ನಿಜವಲ್ಲವೇ ನಮ್ಮ ಹಿನ್ನೆಲೆಯಲ್ಲಿ… ಕನ್ನಡ ಎನೆ ಕುಣಿದಾಡುವುದೆನ್ನೆದೆ/ಕನ್ನಡ ಎನೆ ಕಿವಿ ನಿಮಿರುವುದು/ಕಾಮನ ಬಿಲ್ಲನು ಕಾಣುವ ಕವಿಯೊಳು/ ತೆಕ್ಕನೆ ಮನ ಮೈ ಮರೆಯುವುದು…

-ಆಜಾದ್‌. ಐ.ಎಸ್‌., ಕುವೈತ್‌

ಭಾಷೆಯೆಂಬುದು ಭಾವದ ಸಾಕ್ಷಾತ್ಕಾರ

ನಾನಿರುವುದು ಅಮೆರಿಕದ ನ್ಯೂಜರ್ಸಿಯಲ್ಲಿ. ನ್ಯೂಜರ್ಸಿ ಸಬ್‌-ಅರ್ಬನ್‌ ಪ್ರದೇಶಗಳಿಂದ ಕೂಡಿದ ರಾಜ್ಯ. ಮೆಟ್ರೋ ಸಿಟಿಯೊಂದಕ್ಕೆ ಹೋಗಬೇಕು ಅಂದರೆ ಪಕ್ಕದಲ್ಲೇ ಇರುವ ನ್ಯೂಯಾರ್ಕ್‌ ನಗರಕ್ಕೆ ಹೋಗಬೇಕು. ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡುವ ಅನೇಕರು ನ್ಯೂಜರ್ಸಿಯ ವಿವಿಧ ಊರುಗಳಲ್ಲಿ ಮನೆ ಕೊಳ್ಳುವುದು ಸಾಮಾನ್ಯ.  ಸಬ್‌-ಅರ್ಬನ್‌ ಪ್ರದೇಶಗಳಲ್ಲಿ ವಾಸವಾಗಿರುವವರು ಎದುರಿಸುವ ಬಹುದೊಡ್ಡ ಕ್ಲೇಶವೆಂದರೆ ಇಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು. ಕರ್ನಾಟಕವೆಂದರೆ ನನಗೆ ಪುಳಕವಾಗುವುದು ಅಲ್ಲಿನ ಲೋಕಲ್‌ ಬಸ್ಸುಗಳನ್ನು ನೆನೆಸಿಕೊಂಡಾಗ. ಲೋಕಲ್‌ ಬಸ್ಸುಗಳಲ್ಲಿ ಹಲವು ರೀತಿಯ ಕನ್ನಡಗಳು ಒಂದೇ ಸಮಯಕ್ಕೆ ಅನಾವರಣಗೊಳ್ಳುತ್ತವೆ. ತಾತ್ಕಾಲಿಕವಾಗಿ ಬಸ್ಸೊಂದರಲ್ಲಿ ಸಮುದಾಯವೊಂದು ರೂಪ ಪಡೆಯುತ್ತದೆ. ಮತ್ತದು ಆ ಬಸ್ಸಿನ ಒಬ್ಬ ವ್ಯಕ್ತಿ ಅಲ್ಲಿಂದ ಇಳಿದರೂ, ಹೊಸದೊಬ್ಬರು ಹತ್ತಿದರೂ ಬೇರೆ ಬಗೆಯ ಕ್ರಮ ಪಲ್ಲಟನೆಗೆ ಒಳಗಾಗುತ್ತದೆ. ವಿವಿಧ ಮನಸ್ಸುಗಳ ಈ ವಿಶಿಷ್ಟ ಸಂಯೋಜನೆ ಸಾರ್ವಜನಿಕ ಸಾರಿಗೆಯಲ್ಲಲ್ಲದೇ ಇನ್ನೆಲ್ಲೂ ಅಷ್ಟು ಸ್ವತ್ಛಂದವಾಗಿ ಕಾಣಸಿಗುವುದಿಲ್ಲ ಅಂತಲೇ ನನಗನ್ನಿಸುವುದು. ಕಿವಿಯಲ್ಲಿ ಮೂಡುವ ಕನ್ನಡ ಮಾರ್ದವದ ನೆನಪಾದರೆ, ಭಾಷೆ ಎನ್ನುವುದು ಒಂದು ಮಾಧ್ಯಮ ಮಾತ್ರವಲ್ಲ- ಅದು ಭಾವದ ಸಾûಾತ್ಕಾರ ಎಂಬ ಅರಿವಾಗುವುದು.

-ಕಾವ್ಯಾ ಕಡಮೆ, ನ್ಯೂಜೆರ್ಸಿ,ಅಮೆರಿಕ

ಭಾವನಾತ್ಮಕ ನಲುಗುವಿಕೆ

ಕರ್ನಾಟಕ ಎಂದ ಕೂಡಲೆ ಮನಸ್ಸಿನಲ್ಲಿ ಮೂಡುವುದು ಸಂಭ್ರಮ. ಕರ್ನಾಟಕ ಎಂದಾಗ ಅದು “ನಮ್ಮ ರಾಜ್ಯ’ ಎಂಬ ಆತ್ಮೀಯತೆ ಮೂಡುತ್ತದೆ. ಕನ್ನಡಿಗರು ಎಂಬ ಪದ ಕೇಳಿಸಿದಾಗ “ಅದು ನಾನೇ’ ಎಂಬ ಅಸ್ಮಿತೆಯ ಕರುಳ ಮಿಡಿತದ ಅನುಭವವಾಗುತ್ತದೆ. ಅದರಲ್ಲೂ ಕರ್ನಾಟಕದಿಂದ ದೂರವಿರುವ ಅನಿವಾಸಿ ಕನ್ನಡಿಗರಿಗೆ ಇದೊಂದು ಭಾವಾನಾತ್ಮಕ ನಲುಗುವಿಕೆ. ಕರ್ನಾಟಕ ಎಂದರೆ ಅದು ತವರೂರು. ಅದು ನಮ್ಮನ್ನು ನೇರ ಕರೆದೊಯ್ಯು­ವುದು ನಮ್ಮ ಬಾಲ್ಯಕ್ಕೆ. ಹುಟ್ಟಿ ಬೆಳೆದ ಊರಿಗೆ. ನನಗೆ ಮೊದಲು ನೆನಪಾಗುವುದು ನನ್ನ ಬಾಲ್ಯದ ತುಮಕೂರು ನಂತರ ಪದವಿ ಓದಿದ ಬೆಂಗಳೂರು. ತಾಯಿ-ತಂದೆ ಬಂಧುಗಳು ಮತ್ತು ಸ್ನೇಹಿತರು. ಮಾಡಿದ ಕೀಟಲೆಗಳು ಇತ್ಯಾದಿ ನೆನಪಾಗುತ್ತವೆ. ಕರ್ನಾಟಕವೆಂ­ದರೆ ಅದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರ. ಇತ್ತೀಚೆಗೆ ಇಲ್ಲಿನ “ಕರಿಸ್‌’ ಎನ್ನುವ ಎಲೆಕ್ಟ್ರಾನಿಕ್‌ ಉಪಕರಣ ಮಾರುವ ಜಾಗಕ್ಕೆ ಹೋಗಿದ್ದೆವು. ಅಲ್ಲಿನ ಸೇಲ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ನಾವು ಕನ್ನಡದಲ್ಲಿ ಮಾತಾಡುವುದನ್ನು ಕೇಳಿ, ತಾನೂ ಕನ್ನಡತಿಯೆಂದು ಪರಿಚಯಿಸಿ­ಕೊಂಡಳು. ಸತತ 30 ನಿಮಿಷ ಮಾತಾಡಿಸಿ ಬಹುತೇಕ ಆಕೆಯ ಬದುಕನ್ನೇ ತೆರೆದಿಟ್ಟಳು. ನಾವೂ ಆಕೆಯನ್ನು ಮನೆಗೆ ಊಟಕ್ಕೆ ಕರೆದೆವು. ಸಂಪೂರ್ಣ ಅಪರಿಚಿತರು ಕ್ಷಣಮಾತ್ರದಲ್ಲಿ ಬೆಸೆದುಕೊಂಡದ್ದು ಕನ್ನಡ ಭಾಷೆಯ ಮೂಲಕ.

20 ವರ್ಷಗಳ ಹಿಂದೆ ಇಲ್ಲದ ಎಲ್ಲ ಬಗೆಯ ಸಂವಹನ ಸಂಪರ್ಕ ಈಗಿರುವ ಕಾರಣ, ಕರ್ನಾಟಕ ನಮ್ಮಿಂದ ಬಹಳ ದೂರವಿದೆ ಎಂಬ ಭಾವನೆಗಳು ಕಡಿಮೆಯಾಗಿವೆ. ಕನ್ನಡಿಗರೂ ಹೆಚ್ಚಾಗಿ ಸಿಗುತ್ತಾರೆ. ಕರ್ನಾಟಕದಲ್ಲಿ ನಡೆವ ವಿದ್ಯಮಾನಗಳನ್ನು ತಲುಪಿಸ ಬಲ್ಲ ಮಾಧ್ಯಮಗಳು, ಸೋಶಿಯಲ್‌ ಮೀಡಿಯಾ ಗಳು ಇವೆ. ಹೀಗಾಗಿ 8000 ಕಿ.ಮೀ. ದೂರದ ಕರ್ನಾಟಕ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ.

-ಡಾ.ಪ್ರೇಮಲತ. ಬಿ. ಇಂಗ್ಲೆಂಡ್‌

ಕಡಲಾಚೆಯಲ್ಲಿ ಕರುನಾಡು

ಕೆಲಸ ಮತ್ತು ಹೊತ್ತಿನ ಬುತ್ತಿಗಾಗಿ ನಾಡು ನುಡಿ ಬಿಟ್ಟು ಅರಬರ ನಾಡಿಗೆ ಬಂದವರು ನಾವು. ನಮ್ಮನ್ನು ಕೂಡಿಸುವುದೇ ನಮ್ಮ ಕನ್ನಡ.. ಕರ್ನಾಟಕ.

ಯಾಕಾದರೂ ನಾಡು ಬಿಟ್ಟು ಬಂದೆವೋ ಅನ್ನಿಸುವ ವೇಳೆಯಲ್ಲಿ, ಯಾವುದೋ ತರಕಾರಿ ಅಂಗಡಿಯಲ್ಲಿ ಕನ್ನಡ ಮಾತಾಡು­ ವುದನ್ನ ಕೇಳಿ ಕೆಲವರು ಗೆಳೆಯರಾದರು, ಅವರಿಂದ ಮತ್ತೂಂದಷ್ಟು ಗೆಳೆಯರು ಕೂಡಿಕೊಂಡರು! ಮೊದಮೊದಲು ಕೇವಲ ರೊಟ್ಟಿ, ಮಂಡಕ್ಕಿ-ಮಿರ್ಚಿ, ಬೋಂಡ ತಿನ್ನೋಕೆ ಸೇರುತಿದ್ದ ನಾವು “ಕನ್ನಡಬುತ್ತಿ’ ಎಂಬ ಗುಂಪು ಮಾಡಿಕೊಂಡು ಸೇರತೊಡಗಿ­ ದೆವು. ಈಗ ಕರ್ನಾಟಕದ ಎಲ್ಲ ಭಾಗದಿಂದ ಬಂದ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಸೇರಿಕೊಂಡಿವೆ. ಅಣ್ಣ ತಮ್ಮಂದಿರಂತೆ ಇದ್ದೇವೆ. ಹಬ್ಬ- ಹುಣ್ಣಿಮೆಗಳನ್ನು ಆಚರಿಸುತ್ತೇವೆ. ಅಷ್ಟೇ ಅಲ್ಲ, ಬದುಕಿನ ಬವಣೆಗಳಿಗೆ ಮಿಡಿಯುತ್ತೇವೆ, ಹೆಗಲು ಕೊಟ್ಟು ನಿಲ್ಲತ್ತೇವೆ.

ಲಕ್ಷಾಂತರ ಜನ ನೂರಾರು ಸಂಘಗಳನ್ನು ಕಟ್ಟಿಕೊಂಡು ಕನ್ನಡವ್ವನ ಸೇವೆ ಮಾಡುತ್ತಿದ್ದಾರೆ. ಇಲ್ಲಿನ “ಕನ್ನಡ ಮಿತ್ರರು’ ಗುಂಪು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಕೂಸುಗಳಿಗೆ ಕನ್ನಡ ಕಲಿಸುವ ಮಹೋನ್ನತ ಕಾಯಕ ಮಾಡುತ್ತಿದೆ. ಜಾತಿ, ಮತ, ಧರ್ಮ, ಊರು-ಕೇರಿ, ಅಂತಸ್ತು ಈ ಎಲ್ಲ ಎಲ್ಲೆಗಳ ಮೀರಿ ಕನ್ನಡ – ಕರ್ನಾಟಕದ ಸಲುವಾಗಿ ಎಲ್ಲರೂ ಸೇರಿ ಒಂದಾಗಿ ಕಡ ಲಾಚೆ ಕರುನಾಡು ಕಟ್ಟಿಕೊಂಡಿದ್ದೇವೆ.

-ಪ್ರಭು ಹರಕಂಗಿ, ದುಬೈ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.