ಅಕ್ಷರ ಜಾತ್ರೆಗೆ ಹಣಕೊಟ್ಟರಷ್ಟೇ ಸಾಲದು


Team Udayavani, Jan 5, 2023, 6:20 AM IST

tdy-43

85 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಇದುವರೆಗೂ ನಡೆದು ನೂರಾರು ನಿರ್ಣಯ ಕೈಗೊಂಡಿದ್ದರೂ ಸಾಕಾರಗೊಂಡಿರುವುದು ಬೆರಳಣಿಕೆಯಷ್ಟು ಮಾತ್ರ. 1915ರಲ್ಲಿ ಬೆಂಗಳೂರಿನಲ್ಲಿ ಎಚ್‌.ವಿ. ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗಿ ಹಿರಿಯ ಸಾಹಿತಿ  ಎಚ್‌.ಎಸ್‌.ವೆಂಕಟೇಶ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ  ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವರೆಗೂ ಕನ್ನಡ ಪರವಾದ ಹಲವು ನಿರ್ಣಯಗಳನ್ನು ಸಮ್ಮೇಳನಗಳಲ್ಲಿ  ಕೈಗೊಳ್ಳಲಾಗಿದೆ. ಆದರೆ ಆರಂಭದಲ್ಲಿ ಕನ್ನಡಪರ ನಿರ್ಣಯಗಳು ಜಾರಿಯಾಗಿರುವುದನ್ನು ಬಿಟ್ಟರೆ ಈವರೆಗೂ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ನಿರ್ಣಯಗಳಾಗಿಯೇ ಪುಸ್ತಕಗಳಲ್ಲಿ ಉಳಿದುಕೊಂಡಿವೆ. ಸಾಹಿತ್ಯ ಸಮ್ಮೇಳನದ ಭಾಷಣಕ್ಕಾಗಿಯೇ ಸರ್ವಾಧ್ಯಕ್ಷರು ತಿಂಗಳುಗಟ್ಟಲೆ ಕಾಲ ಕುಳಿತು ಸಿದ್ದಪಡಿಸುತ್ತಾರೆ. ಹಳೆಯ ಅಧ್ಯಕ್ಷರ ಭಾಷಣಗಳನ್ನು ತಿರುವಿ ಹಾಕಿ ತಾವೇನು ಕನ್ನಡಕ್ಕಾಗಿ ಭಾಷಣದಲ್ಲಿ ಬೆಳಕು ಚೆಲ್ಲಬಹುದು ಎಂಬ ಬಗ್ಗೆ ಆಲೋಚನೆ ಮಾಡುತ್ತಾರೆ. ಎಷ್ಟೇ ಆಲೋಚನೆ, ಚಿಂತನೆ ಮಾಡಿ ಸಿದ್ಧಪಡಿಸಿದ ಭಾಷಣಗಳು ಸಮ್ಮೇಳನ ಮುಗಿದ ತತ್‌ಕ್ಷಣ ಕೇವಲ ಭಾಷಣದ ಸರಕಾಗಿ ಉಳಿಯುತ್ತಿವೆ. ಈ ಬಗ್ಗೆ  ಈಗಾಗಲೇ ಸಮ್ಮೇಳನಾಧ್ಯಕ್ಷರಾದವರಿಗೂ ಬೇಸರವಿದೆ. ಸರಕಾರ ಅಕ್ಷರ ಜಾತ್ರೆಗೆ ಹಣಕೊಟ್ಟರಷ್ಟೇ ಸಾಲದು. ನಿರ್ಣಯ ಜಾರಿಗೂ ದಿಟ್ಟ ಹೆಜ್ಜೆಯಿಡಬೇಕು. ಜತೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸರಕಾರದ ಬೆನ್ನ ಹಿಂದೆ ಬೀಳಬೇಕು ಎಂದು ಸಲಹೆ ನೀಡುತ್ತಾರೆ.

ಸರಕಾರಕ್ಕೀಗ ಮೈ ತುರಿಸಿಕೊಳ್ಳುವುದಕ್ಕೂ ಪುರುಸೊತ್ತು ಇಲ್ಲ :

ನಾನು ಕಲಬುರಗಿಯಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ ಬರೆಯಲು ಆರಂಭಿಸಿ ಮುಗಿಸುವುದರ ಒಳಗೆ ಬರೋಬ್ಬರಿ ಒಂದು ತಿಂಗಳು ಹಿಡಿಯಿತು. ಸಾಹಿತ್ಯ ಸಮ್ಮೇಳನದ ಭಾಷಣ ಬರೆಯಲು ಸಲುವಾಗಿಯೇ ನಾನು ಹಲವು ರೀತಿಯಲ್ಲಿ  ತಯಾರಿ ಮಾಡಿಕೊಂಡಿದ್ದೆ. ಈ ಹಿಂದೆ ಮಾಡಿದ್ದ  ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳ ಬಗ್ಗೆ ತಿರುವಿ ಹಾಕಿದ್ದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಕನ್ನಡ ಸಾಹಿತ್ಯ ಏಳ್ಗೆ ಕುರಿತಂತೆ ಹಲವು ಸೂಚನೆಗಳನ್ನು ನೀಡುತ್ತಾರೆ. ಅದು ಗೊತ್ತುವಳಿಯಾಗಿ ಕೂಡ ತೀರ್ಮಾನ ಆಗುತ್ತೆ. ಆದರೆ ಹೀಗೆ ತಯಾರಾಗುವ ನಿರ್ಣಯಗಳು ಕಾರ್ಯರೂಪಕ್ಕೆ ಬಾರದೇ ಇರುವುದು ಮನಸಿಗೆ ತುಂಬಾ ದುಃಖಕರ ವಿಚಾರವಾಗಿದೆ. ಇದು ಇವತ್ತಿನ ಕಥೆಯಲ್ಲ ಬಿಡಿ. ಇದು ನಿರಂತರವಾಗಿ ನಡೆದುಕೊಂಡು ಬರುತ್ತಲೇ ಇದೆ. ಕಾರಣ ನಿರ್ಣಯ ಮಾಡುವವರು ಬೇರೆ, ಅದನ್ನು ಆಚರಣೆಗೆ ತರುವವರು ಬೇರೆ. ಹೀಗಾಗಿ ಯೋಜನಾ ಶಕ್ತಿ ಬೇರೆ, ನಿಯೋಜನಾ ಶಕ್ತಿ ಬೇರೆ. ಕಾರ್ಯರೂಪಕ್ಕೆ ತರುವುದು ಸರಕಾರ. ಅದಕ್ಕೆ ಮಾತ್ರ ಸಾಮರ್ಥ್ಯವಿದೆ. ಆದರೆ ಸರಕಾರಕ್ಕೆ ಈಗ ಎಷ್ಟು ಸಮಸ್ಯೆಯಿದೆ ಎಂದರೆ ಮೈ ತುರಿಸಿಕೊಳ್ಳುವುದಕ್ಕೂ ಪುರುಸೊತ್ತು ಇಲ್ಲ. ಹೀಗಾಗಿ ಯಾವಾಗಲೂ ಕೂಡ ಇದರ ಜಾರಿ ಹಿಂದೆ ಬೀಳುತ್ತಿದೆ.

ಇದು ಮನಸಿಗೆ ನೋವು ಕೊಡುವ ಸಂಗತಿ. ಈ ಬಗ್ಗೆ ಕಲಬುರಗಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರದ ಗಮನಕ್ಕೆ ತಂದಿದ್ದೆ. ಆಗ ಮಾಡೋಣ ಎಂದು ಹೇಳಿದ್ದರು. ಸಮ್ಮೇಳನದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಭರವಸೆಯನ್ನು ಕೂಡ ನೀಡಲಾಗಿತ್ತು. ಆದರೆ ಈ ವರ್ಷ ಸರಕಾರ ಏನು ಮಾಡುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.-ಎಚ್‌.ಎಸ್‌.ವೆಂಕಟೇಶಮೂರ್ತಿ, ಕಲಬುರಗಿ ಸಮ್ಮೇಳನಾಧ್ಯಕ್ಷರು 

ನಿರ್ಣಯಗಳು ಜಾರಿಯಾಗದೇ ಇರುವುದಕ್ಕೆ ನಿಷ್ಕ್ರಿಯ ಸರಕಾರಗಳು ಕಾರಣ :

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಸಿದ್ಧಪಡಿಸಲು ನಾನು ಕೋವಿಡ್‌ ಸಮಯವನ್ನು ಸದ್ಬಳಕೆ ಮಾಡಿಕೊಂಡೆೆ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣಗಳನ್ನು ತಿರುವಿ ಹಾಕಿದೆ. ಸಮ್ಮೇಳನಾಧ್ಯಕ್ಷರು ಏನೆಲ್ಲ ಕನ್ನಡ ಏಳ್ಗೆ, ಸಂಕಷ್ಟಗಳ ಕುರಿತು ಮಾತನಾಡಿದ್ದಾರೆ ಎಂಬುದನ್ನು ನಾನು ಅರಿತುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಕೂಡ ಸುಮಾರು 60ರಿಂದ 70 ಪುಟಗಳಷ್ಟು ಭಾಷಣ ಸಿದ್ಧಪಡಿಸಿದ್ದೆ. ಅದನ್ನು ಈಗ 40ರಿಂದ 42 ಪುಟಕ್ಕೆ ಇಳಿಕೆ ಮಾಡಿದ್ದೇನೆ. ಕನ್ನಡ ಭಾಷೆಯ ಹಲವು ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ್ದೇನೆ.

ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಓದಿದಾಗ ಸುಮಾರು 20 ರಿಂದ 25 ವರ್ಷದ ಹಿಂದೆ ಆದಂತಹ ನಿರ್ಣಯಗಳು ಮತ್ತೆ ಮತ್ತೆ ಮರುಕಳಿಸಿವೆ. ಈ ಎಲ್ಲ ನಿರ್ಣಯಗಳು ಜಾರಿಯಾಗದೇ ಇರುವುದಕ್ಕೆ ನಿಷ್ಕ್ರಿಯ ಸರಕಾರಗಳು ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರ ಕ್ರಿಯಾತ್ಮಕವಾಗಬೇಕು. ಸಾಹಿತ್ಯ ಸಮ್ಮೇಳನಗಳ ನಿರ್ಣಯ ಜಾರಿಗೊಳಿಸುವ ನಿಟ್ಟಿನಲ್ಲಿ  ಪರಿಷತ್ತು ಕೂಡ ಸರಕಾರದ ಮೇಲೆ ಪದೇ ಪದೆ ಒತ್ತಡ ಹೇರಬೇಕು. ಸರಕಾರ ಕೂಡ ಇದನ್ನು ಅವಗಣನೆ ಮಾಡದೆ ನಿರ್ಣಯ ಜಾರಿಗಾಗಿ ದಿಟ್ಟ ಹೆಜ್ಜೆಯಿರಿಸಬೇಕು. -ಡಾ| ದೊಡ್ಡರಂಗೇಗೌಡ, ಹಾವೇರಿ ಸಮ್ಮೇಳನಾಧ್ಯಕ್ಷರು 

ಪರಿಷತ್ತು, ಸರಕಾರದ ನಡೆ ತೃಪ್ತಿಯನ್ನು ಕೊಟ್ಟಿಲ್ಲ :

ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲಿ ಒಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇಡೀ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ನಡೆದು ನಾಡು, ನುಡಿ, ಜಲ  ಭಾಷೆ ಸಂಸ್ಕೃತಿ ಸಹಿತ ಕನ್ನಡ ಕಳಕಳಿಯ ನಿರ್ಣಯಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುತ್ತದೆ. ನಾನು ಕೂಡ ಮೂಡುಬಿದಿರೆಯಲ್ಲಿ ನಡೆದ 71ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಪರವಾದಂತಹ ನಿರ್ಣಯಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡಿದ್ದೆ.

ಈ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟು ಹಿಡಿದು ಸಾಹಿತ್ಯ ಸಮ್ಮೇಳನದ ನಿರ್ಣಯಗಳ ಜಾರಿಗೆ ಸರಕಾರದ ಮುಂದೆ ಪಟ್ಟು ಹಿಡಿದು ನಿಲ್ಲಬೇಕು.ಇನ್ನು ಕೆಲವು ಸರಕಾರದಿಂದ ನಿರ್ಣಯಗಳು ನೆರವೇರಬೇಕಾಗುತ್ತೆ. ನಾವು ಈ ವಿಚಾರದಲ್ಲಿ ಸರಕಾರವನ್ನು ದೂರುವುದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಆದರೆ ಸರಕಾರ ಅದನ್ನು ಪ್ರಮುಖ ಒಂದು ಕಾಳಜಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಇನ್ನೂ ನನಗೆ ಇದೆ.  ಯಾವುದೇ ಸಮ್ಮೇಳನ ಆಗಿರಲಿ. ಅಲ್ಲಿ ಕೆಲವು ಸರಕಾರದ ಲೋಪದೋಷಗಳು ಎತ್ತಿ ಮಾತನಾಡುವುದು ನಿಜ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವಂತಹ ನಿರ್ಣಯಗಳು ಏನಿದೆ ಅದರ ಜಾರಿ ಮುಖ್ಯವಾಗಿದೆ. ಹೆಚ್ಚು ಕಮ್ಮಿ ಮೂರು ವಾರಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ ಸಿದ್ಧಪಡಿಸಲು ತೆಗೆದುಕೊಂಡಿದ್ದೆ.  ನಾನು ಯಾರ ಅಭಿಪ್ರಾಯವನ್ನು ಕೂಡ ಕೇಳಲಿಲ್ಲ. ನನಗೆ ತೋಚಿದಂಥ ಆವತ್ತಿನ ಸಮಸ್ಯೆಗಳು ಏನಿತ್ತೋ ಅವುಗಳನ್ನು ಮಾತ್ರ ತೆಗೆದು ಕೊಂಡು ಭಾಷಣ ಸಿದ್ಧಪಡಿಸಿದ್ದೆ. ಅದರಲ್ಲಿ ರೈತರ ಸಮಸ್ಯೆಗಳ ಬಗ್ಗೆ ಭಾಷಣದಲ್ಲಿ ಬೆಳಕು ಚೆಲ್ಲಿದೆ. ಇಡೀ ಭಾಷಣವನ್ನು ನಾಡಿನ ರೈತರಿಗೆ ಅರ್ಪಣೆ ಮಾಡಿದೆ. ಕಂಪ್ಯೂಟರ್‌ ಸೈನ್ಸ್‌ ಸಹಿತ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೆ. ಸುಮಾರು 32 ಪುಟಗಳನ್ನು ಸಿದ್ಧಪಡಿಸಿದ್ದೆ. ಸುಮಾರು ಒಂದೂವರೆ ಗಂಟೆ ಮಾತನಾಡಿದ್ದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯಗಳ ಜಾರಿ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರದ ನಡೆ ನನಗೇನೂ ತೃಪ್ತಿಯನ್ನು ಕೊಟ್ಟಿಲ್ಲ.-ಕಮಲಾ ಹಂಪನಾ, ಮೂಡುಬಿದಿರೆ ಸಮ್ಮೇಳನಾಧ್ಯಕ್ಷರು

ಭರವಸೆ ಇಡೋಣ:

ಸಾಹಿತ್ಯ ಸಮ್ಮೇಳನದ ನಿರ್ಣಯಗಳು ನಿರ್ಣಯಗಳಾಗಿ ಉಳಿದಿವೆ. ಆದರೆ ಈ ಬಾರಿ ಸಮ್ಮೇಳನದ ನಿರ್ಣಯ ಜಾರಿಯ ಬಗ್ಗೆ ಸರಕಾರ ಯಾವ ರೀತಿಯ ಹೆಜ್ಜೆ ಇಡುತ್ತದೆಯೋ ಎಂಬುದನ್ನು ಕಾದುನೋಡೋಡ ಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಅವರು ಪರಿಷತ್ತಿನಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಹೀಗಾಗಿ ಸಮ್ಮೇಳನದ ನಿರ್ಣಯ ಜಾರಿ ವಿಚಾರದಲ್ಲಿ ಕಾದು ನೋಡೋಣ.-ಚಂದ್ರಶೇಖರ ಕಂಬಾರ,ಧಾರವಾಡ ಸಮ್ಮೇಳನಾಧ್ಯಕ್ಷರು

ಸರಕಾರ ಸಮ್ಮೇಳನಕ್ಕೆ ಹಣ ನೀಡಿದರಷ್ಟೇ ಸಾಲದು: 

ಕನ್ನಡ ಸಾಹಿತ್ಯ ಪರಿಷತ್ತು ನೂರಾರು ಮಹಾನುಭವರ ಶ್ರಮದಿಂದ ಕಟ್ಟಿರುವಂತಹದ್ದಾಗಿದೆ. ಸರಕಾರವನ್ನೇ ಅಲುಗಾಡಿಸುವ ಶಕ್ತಿ ಇದಕ್ಕಿರಬೇಕಾಗಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಆ ಶಕ್ತಿ ಇಲ್ಲದಂತಾಗಿ ಹೋಗಿದೆ. ಪ್ರತೀ ವರ್ಷ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ. ಆದರೆ ಆಯಾ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ನಿರ್ಣಯಗಳಾಗಿಯೇ ಉಳಿದಿರುವುದು ಬೇಸರದ ಸಂಗತಿ.

2014ರಂದು ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷನಾಗಿದ್ದೆ. ಆಗ ನನಗೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳು ನಿರ್ಣಯಗಳಾಗಿಯೇ ಉಳಿಯುತ್ತವೆ; ಯಾವುದೇ ನಿರ್ಣಯ ಕೈಗೊಳ್ಳಬೇಡಿ ಎಂಬ ಸಲಹೆ ಕೂಡ ಬಂದಿತ್ತು. ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವುದು ಒಂದು ಪದ್ಧತಿಯಾಗಷ್ಟೇ ಉಳಿದು ಹೋಗಿರುವುದು ಖೇದಕರ ವಿಚಾರ. ಅನಂತರ ಸಂಬಂಧಪಟ್ಟ ಇಲಾಖೆ ಅದನ್ನು ಆಧರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.ಸರಕಾರ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಸಂಬಂಧ ಹೊಣೆ ಹೊರಬೇಕು. ಸರಕಾರ ಆಯಾ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಸಹಾಯ ನೀಡಿದರಷ್ಟೇ ಸಾಲದು. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿಗಳಲ್ಲಿ  ಕನ್ನಡಪರ ಏನೇನು ಸಲಹೆಗಳು ಸರಕಾರಕ್ಕೆ ನೀಡಲಾಗುತ್ತದೆಯೋ ಅದನ್ನು ದಾಖಲಿಸಲು ಸರಕಾರ ಕೂಡ ಅಧಿಕಾರಿಗಳನ್ನು ಸಮ್ಮೇಳನಕ್ಕಾಗಿ ನೇಮಕ ಮಾಡಬೇಕು.  ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸಾಹಿತ್ಯ ಸಮ್ಮೇಳನ ಆದ ತತ್‌ಕ್ಷಣ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬಾರದು. ಆಯಾ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯಗಳ ಜಾರಿಗಾಗಿ ಸರಕಾರದ ಬೆನ್ನುಹತ್ತಿ ಹೋಗಬೇಕು. ನಾನು ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಕ್ಕಾಗಿ 15 ರಿಂದ 20 ದಿನ ತೆಗೆದುಕೊಂಡೆ. ಆ ಭಾಷಣದಲ್ಲಿ ಕನ್ನಡ ನಾಡು, ನುಡಿ, ನೆಲ ಜಲ, ಭಾಷೆ, ಸಂಸ್ಕೃತಿ, ಶಿಕ್ಷಣ ಉದ್ಯೋಗದ ವಿಚಾರವಾಗಿ ಸರಕಾರಕ್ಕೆ ಹಲವು ರೀತಿಯ ಸಲಹೆ ನೀಡಿದೆ. ಆದರೆ ಸಮ್ಮೇಳನ ಮುಗಿದ ತತ್‌ಕ್ಷಣ ಸಮ್ಮೇಳನಾಧ್ಯಕ್ಷರಂತೆ ಆ ಭಾಷಣ ಕೂಡ ಹಳೆಯದಾಗುತ್ತದೆ. ಈ ವಿಚಾರ ನನ್ನ ಮನಸಿನಲ್ಲಿ ಬೇಸರ ಮೂಡಿಸಿದೆ. ಪರಿಷತ್ತು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಬೇಕು.-ನಾ.ಡಿಸೋಜ, ಮಡಿಕೇರಿ ಸಮ್ಮೇಳನಾಧ್ಯಕ್ಷರು

 

-ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.