Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗ ಉತ್ತರ ಭಾರತೀಯರದ್ದೇ ಪ್ರಾಬಲ್ಯ...ಕನ್ನಡಿಗರಿಗೇಕೆ ಸಿಗುತ್ತಿಲ್ಲ ನೌಕರಿ?
Team Udayavani, Nov 24, 2024, 6:55 AM IST
ಒಂದು ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಈಗ ಬ್ಯಾಂಕಿಂಗ್ ಕ್ಷೇತ್ರ ಉತ್ತರ ಭಾರತೀಯರ ಪಾಲಾಗಿದೆ. ಅಷ್ಟೇ ಅಲ್ಲ, ಐಎಎಸ್/ ಐಪಿಎಸ್ ಸೇರಿದಂತೆ ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿದ ಕನ್ನಡಿಗರ ಸಂಖ್ಯೆ ಕಡಿಮೆಯೇ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡಿಗರು ತೆಗೆದುಕೊಳ್ಳುತ್ತಿದ್ದಾರೆ ನಿಜ, ಆದರೆ ಯಶಸ್ಸು ಕಾಣುತ್ತಿಲ್ಲ. ಇದಕ್ಕೆ ಕಾರಣವೇನು? ಕನ್ನಡಿಗರಿಗೆ ಕೇಂದ್ರ ಸರಕಾರದ ಹುದ್ದೆಗಳು ದಕ್ಕದಿರಲು ಕಾರಣಗಳೇನು? ಅದಕ್ಕಿರುವ ಪರಿಹಾರವೇನು? ಒಂದು ಅವಲೋಕನ…
ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ಹಲವಾರು ಭಾಷೆ, ಸಂಸ್ಕೃತಿಗಳು ಸಾವಿರಾರು ವರ್ಷಗಳಿಂದ ತಮ್ಮತನವನ್ನು ಕಾಯ್ದುಕೊಂಡು ಬಂದಿವೆ. ದೇಶದಲ್ಲಿ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳಿದು,ª ಆಯಾ ರಾಜ್ಯಗಳು ತಮ್ಮದೇ ಆದ ಭಾಷೆ, ಭೌಗೋಳಿಕ ಸನ್ನಿವೇಶ, ಸಂಸ್ಕೃತಿ, ಜೀವನ ಶೈಲಿ, ಆಚಾರ-ವಿಚಾರ ಹೊಂದಿವೆ. ಸಂವಿಧಾನದ 8ನೇ ಪರಿಚ್ಛೇದದ ಪ್ರಕಾರ ಕನ್ನಡವೂ ಸೇರಿದಂತೆ 22 ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡಲಾಗಿದೆ. ಹೀಗಿದ್ದೂ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ವಿಶೇಷ ಪ್ರಾಧಾನ್ಯ ನೀಡುತ್ತಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಭಾಷೆಗಳನ್ನು ನೋಟಿನ ಮೇಲೆ ಮುದ್ರಣ ಮಾಡಲು ಮಾತ್ರ ಸೀಮಿತಗೊಳಿಸಿರುವುದರಿಂದ ಹಿಂದಿಯೇತರ ಭಾಷೆಗಳು ಸೊರಗಲು ಪ್ರಾರಂಭಿಸಿದವು.
ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಬಗ್ಗೆಯಾಗಲಿ, ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ಪಡೆದವರಿಗೆ ಬದುಕನ್ನು ಕಟ್ಟುವ ಕುರಿತಾಗಲಿ ಗಂಭೀರ ಚರ್ಚೆಗಳು ಈವರೆಗೆ ನಡೆದಿಲ್ಲ. ಹಿಂದಿಯೂ ಭಾರತದ ಒಂದು ಪ್ರಮುಖ ಭಾಷೆ. ಆದರೆ ಅದೊಂದೇ ಭಾರತ ಒಕ್ಕೂಟದ ಪ್ರಮುಖ ಭಾಷೆ ಎಂದು ಬಿಂಬಿಸುವುದು ಸರಿಯಲ್ಲ. ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಕೇಂದ್ರ ಸರಕಾರ ನಡೆಸುವ ಪರೀಕ್ಷೆಗಳನ್ನು ಬರೆಯುವ ಕಾರಣದಿಂದ ಸಾಕಷ್ಟು ಯುವಜನತೆಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದಿಂದ ಬರುವ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್, ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕೆನ್ನುವ ಕಾರಣದಿಂದಲೇ ಇಂತಹ ಪರೀಕ್ಷೆಗಳಿಂದ ದೂರ ಉಳಿದಿದ್ದು, ಭಾಷೆಯ ಸಮಸ್ಯೆಯಿಂದಾಗಿ ಗುರಿ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ.
ಅನನುಕೂಲವೇ ಹೆಚ್ಚು…
ಕೇಂದ್ರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳು ಇದೀಗ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆಗಳನ್ನು ನಡೆಸಲು ಮುಂದಾಗಿವೆ. ಇದರಿಂದ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಸಬೇಕೆಂಬ ಕನ್ನಡ ಪರ ಮನಸ್ಸುಗಳ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇದರಿಂದ ಹೆಚ್ಚು ಸಂಭ್ರಮಿಸಬೇಕಿಲ್ಲ. ಕಾರಣ, ಸಮಸ್ಯೆ ಇನ್ನು ಮುಂದೆ ಆರಂಭವಾಗಲಿದೆ. ಹೇಗೆಂದರೆ, ಇನ್ನು ಮುಂದೆ ಕನ್ನಡದಲ್ಲಿ ಪರೀಕ್ಷೆ ಎಂದಾಕ್ಷಣ ಕೆಟ್ಟ ಗೂಗಲ್ ಭಾಷಾಂತರದ ಪ್ರಶ್ನೆ ಪತ್ರಿಕೆ ನೀಡುವುದರಿಂದ ನಮ್ಮ ರಾಜ್ಯದ ಮಕ್ಕಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ.
2011ರಿಂದಲೇ ರೈಲ್ವೇ ಇಲಾಖೆ ಪರೀಕ್ಷೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಇಂದಿಗೂ ಲಿಖೀತ ಪರೀಕ್ಷೆಯ ಕನ್ನಡ ಮಾಧ್ಯಮ ಪ್ರಶ್ನೆಪತ್ರಿಕೆಗಳನ್ನು ಗೂಗಲ್ ಅನುವಾದ ಮಾಡಲಾಗುತ್ತಿದ್ದು, ಹಲವು ದೋಷಗಳಿಂದ ಕೂಡಿರುತ್ತವೆ. ಇಂಗ್ಲಿಷ್ ಶಬ್ದಗಳನ್ನೇ ಕನ್ನಡೀಕರಣಗೊಳಿಸಿ ವಾಕ್ಯ ರಚನೆ ಮಾಡಲಾಗುತ್ತಿದೆ. ಹೀಗಾಗಿ ರೈಲ್ವೇ ಇಲಾಖೆ ಕನ್ನಡ ಮಾಧ್ಯಮದಲ್ಲಿ ನಡೆಸುತ್ತಿರುವ ಲಿಖೀತ ಪರೀಕ್ಷೆಗಳಿಗೆ ಅನಿವಾರ್ಯವಾಗಿ ಇಂಗ್ಲಿಷ್ ಪ್ರಶ್ನೆಪತ್ರಿಕೆಯ ಮೊರೆಹೋಗಬೇಕಿದೆ.
ಸಾರ್ವಜನಿಕ ಉದ್ದಿಮೆಗಳಲ್ಲಿ ಕನ್ನಡದ ಸ್ಥಿತಿ
ಒಂದು ಕಾಲವಿತ್ತು ಅವಿಭಜಿತ ದಕ್ಷಿಣ ಕನ್ನಡ “ಬ್ಯಾಂಕಿಂಗ್ ತೊಟ್ಟಿಲು’ ಎಂದು ಕರೆಯಿಸಿಕೊಳ್ಳುತ್ತಿತ್ತು. ಇಂದು ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಬಿಟ್ಟರೆ ಕನ್ನಡಿಗರದ್ದು ಎಂದು ಹೇಳಿಕೊಳ್ಳುವ ಯಾವ ಬ್ಯಾಂಕ್ ನಮ್ಮಲ್ಲಿಲ್ಲ. ಭಾರತದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡಿಗರು, ದೇಶದ ಎಲ್ಲ ಶಾಖೆಗಳಲ್ಲಿಯೂ ಕನ್ನಡಿಗರು ದುಡಿಯುತ್ತಿದ್ದರು. ಎಲ್ಲಿ ಹೋದರೂ ಅಲ್ಲಿಯ ಜನರ ಸಂಗಡ ಬೆರೆತು ಕೆಲಸ ಮಾಡುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಎಲ್ಲೆಡೆ ಉತ್ತರ ಭಾರತದ ಅಧಿಕಾರಿಗಳು ತುಂಬಿಕೊಡಿದ್ದಾರೆ. ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲ. ಇತ್ತ ಹಳ್ಳಿಯ ಜನರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಇದು ನಗರ-ಹಳ್ಳಿಗಳೆನ್ನದೆ ಕರ್ನಾಟಕದ ಎಲ್ಲ ಕಡೆಯ ದೊಡ್ಡ ಸಮಸ್ಯೆಯಾಗಿದೆ. ಗ್ರಾಹಕರಿಗೆ ತಿಳಿಹೇಳುವುದಕ್ಕೆ ಹೆಚ್ಚಿನ ಕಡೆಯ ಸಿಬಂದಿಯಲ್ಲಿ ಸಹನೆಯಿಲ್ಲ. ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಕೇಂದ್ರ ಸರಕಾರದ ಎಲ್ಲ ಸಂಸ್ಥೆಗಳಿಗೂ ಅನ್ವಯಿಸುತ್ತದೆ.
ಮೊದಲೆಲ್ಲ ಗುಮಾಸ್ತ ಹುದ್ದೆಗಳಿಗೆ ವಿಭಾಗೀಯವಾರು ನೇಮಕಾತಿ ನಡೆಯುತ್ತಿತ್ತು. ಯಾವುದೇ ಅಕ್ರಮದ ಸೋಂಕೂ ಇಲ್ಲದೆ ನಡೆಯುವ ನೇಮಕಾತಿ ಎಂದು ಖ್ಯಾತಿ ಗಳಿಸಿದ್ದ ಬಿಎಸ್‌ಆರ್‌ಬಿ ಪರೀಕ್ಷೆಯನ್ನು ಹೊಸ ಆರ್ಥಿಕ ನೀತಿಗನುಗುಣವಾಗಿ 2002ರಲ್ಲಿ ವಿಸರ್ಜಿಸಲಾಯಿತು. ಅಲ್ಲಿಂದ ಆಯಾ ಬ್ಯಾಂಕ್‌ಗೆà ನೇಮಕಾತಿಯ ಅಧಿಕಾರ ಕೊಡಲಾಯಿತು. ಇದೇ ಅವಕಾಶಕ್ಕಾಗಿ ಕಾದಿದ್ದ ಬ್ಯಾಂಕ್‌ಗಳು ಕ್ಯಾಂಪಸ್ ಸಂದರ್ಶನದ ಮೂಲಕ ನೇರ ನೇಮಕಾತಿ ಪ್ರಾರಂಭಿಸಿದವು. ಇದು ಅನ್ಯ ರಾಜ್ಯದವರಿಗೆ ವರವಾಯಿತು. ಮುಂದೆ ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆಯೆಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಅಲ್ಲಿಂದ ಈ ಜವಾಬ್ದಾರಿಯನ್ನು ಐಬಿಪಿಎಸ್ ಸಂಸ್ಥೆಗೆ ನೀಡಲಾಯಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಉತ್ತರ ಭಾರತದ ಲಾಬಿಗಳು ಗುಮಾಸ್ತ ಹುದ್ದೆಯನ್ನೂ ಒಳಗೊಳ್ಳುವ ಮೊದಲಿದ್ದ ರಾಜ್ಯವಾರು ನೇಮಕಾತಿಯನ್ನು ಪ್ಯಾನ್ ಇಂಡಿಯಾಗೆ ವಿಸ್ತರಿಸಿದರು. ಇದೀಗ ಎಸ್‌ಬಿಐ ಹಾಗೂ ಯೂನಿಯನ್ ಬ್ಯಾಂಕ್‌ಗಳು ಅಧಿಕಾರಿ ಮಟ್ಟಕ್ಕೂ ಅನ್ವಯಿಸುವಂತೆ ರಾಜ್ಯವಾರು ನೇಮಕಾತಿ ಪ್ರಾರಂ ಭಿಸಿವೆ. ಅದನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೂ ಐಬಿಪಿಎಸ್ ವಿಸ್ತರಿಸಿದರೆ ಗ್ರಾಹಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.
ಪ್ರಾದೇಶಿಕ ಭಾಷೆಗಳಿಗೆ ಕಿಮ್ಮತ್ತಿಲ್ಲ
ಕೆಎಎಸ್ ಹಾಗೂ ಐಎಎಸ್ ಪ್ರಾಥಮಿಕ ಪರೀಕ್ಷೆಗಳು ಬಹುತೇಕ ಒಂದೇ ಪಠ್ಯಕ್ರಮ ಹೊಂದಿರುತ್ತವೆ. ಯುಪಿಎಸ್‌ಸಿ ಪರೀಕ್ಷೆಗಳು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳೆಂಬ ಮೂರು ಹಂತಗಳಲ್ಲಿ ನಡೆಯುತ್ತವೆ. ಕೆಎಎಸ್ ಪರೀಕ್ಷೆ ಬರೆಯುವ ನೂರು ಅಭ್ಯರ್ಥಿಗಳಲ್ಲಿ ಸರಾಸರಿ ತೊಂಬತ್ತೈದು ಜನ ಐಎಎಸ್ ಪರೀಕ್ಷೆ ತೆಗೆದುಕೊಳ್ಳುವುದಿಲ್ಲ, ಕಾರಣ, ಭಾಷೆಯ ತೊಡಕು. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯನ್ನು ಸಂವಿಧಾನ ಮಾನ್ಯ ಮಾಡಿರುವ ಎಲ್ಲ ಭಾಷೆಗಳಲ್ಲಿಯೂ ಬರೆಯಬಹುದು. ಈ ಸೌಲಭ್ಯ ಸಹಜವಾಗಿಯೇ ಕನ್ನಡ ಭಾಷೆಗೂ ಇದೆ. ಆದರೆ ಯುಪಿಎಸ್‌ಸಿಯ ಪ್ರಾಥಮಿಕ ಪರೀಕ್ಷೆಗಳಲ್ಲಿ ಇಂಗ್ಲಿಷ್, ಹಿಂದಿ ಎಂಬ ದೊಡ್ಡ ಉಕ್ಕಿನ ಬೇಲಿಯೇ ಇರುತ್ತದೆ. ಅದನ್ನು ದಾಟಲು ದೇಸಿ ಭಾಷೆಗಳಲ್ಲಿ ಪಡೆದ ಜ್ಞಾನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಹಜವಾಗಿ ಹಿಂದಿ ಮಾಧ್ಯಮ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಉತ್ತರ ಭಾರತೀಯರಿಗೆ ಇದು ವರದಾನವಾಗಿದೆ. ಮೊದಲ ಹಂತದ ಯುಪಿಎಸ್‌ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದ ಮೇಲೆ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೊಟ್ಟರೆ ಏನು ಪ್ರಯೋಜನ?
ಆಗಬೇಕಾದದ್ದು ಏನು?
ಕೇಂದ್ರ ಸರಕಾರ ನಡೆಸುವ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಬಹುದು ಎಂದಾಕ್ಷಣ ಕನ್ನಡಿಗನಿಗೆ ಉದ್ಯೋಗ ಸಿಗುವುದಿಲ್ಲ. ಕಾರಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಳಸುವ ಪಾರಿಭಾಷಿಕ ಪದಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗಾಗಿ ಆಕಾಂಕ್ಷಿಗಳು ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳವುದಿಲ್ಲ. ರಾಜ್ಯದಲ್ಲಿನ ಬ್ಯಾಂಕ್ ಹು¨ªೆಗಳು ಸ್ಥಳೀಯರಿಗೆ ಸಿಗುವಂತೆ ಖಚಿತಪಡಿಸಲು 2014 ಕ್ಕೂ ಮೊದಲು ಆರ್‌ಆರ್‌ಬಿ ಗಳಲ್ಲಿನ ಹು¨ªೆಗಳ ನೇಮಕಕ್ಕೆ ಇದ್ದ ನಿಯಮಗಳನ್ನು ಜಾರಿಗೆ ತಂದು, ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕದಲ್ಲಿಯೂ ಈ ನಿಯಮಗಳನ್ನು ಅನ್ವಯಿಸಬೇಕು. ಬಿಎಸ್‌ಆರ್‌ಬಿಯಲ್ಲಿ ಇದ್ದಂತೆ ಗುಮಾಸ್ತ ಹುದ್ದೆಯ ನೇಮಕಾತಿ ಪರೀಕ್ಷೆಯನ್ನು ರಾಜ್ಯವಾರು ಮಾಡಲೇಬೇಕು. ಅನ್ಯ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಜ್ಞಾನ ಅಪೇಕ್ಷಣೀಯವೇ ವಿನಾ ಕಡ್ಡಾಯವಲ್ಲ ಎಂಬ ಬ್ಯಾಂಕಿಂಗ್ ನೇಮಕ ನೀತಿಯಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಗುಮಾಸ್ತ ಹುದ್ದೆಗಳು ಕನ್ನಡಿಗರ ಕೈ ತಪ್ಪುತ್ತಿವೆ. ನೇಮಕಾತಿಗೆ ರಾಜ್ಯದ 10/12ನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿದವರು ಎಂದು ಬದಲಾಯಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಇರುವ ಸೌಲಭ್ಯವನ್ನು ಕನ್ನಡಿಗರು ಬಳಸಿಕೊಳ್ಳಬೇಕು. ಆಗ ಮಾತ್ರ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕನ್ನಡಿಗರು ಪಾರಮ್ಯ ಮೆರೆಯಲು ಸಾಧ್ಯವಾಗುತ್ತದೆ.
ಆಗಬೇಕಿರುವುದೇನು?
1 ಕನ್ನಡದಲ್ಲಿ ಪರೀಕ್ಷೆ ನಡೆಸುವ ಬದಲು, ಕನ್ನಡಿಗರಿಗೆ ಮೀಸಲಿಟ್ಟ ಹು¨ªೆಗಳು ಕನ್ನಡಿಗರಿಗೆ ದೊರೆಯುವಂತಾಗಬೇಕು.
2 ಬ್ಯಾಂಕಿಂಗ್, ರೈಲ್ವೇ ಸೇರಿದಂತೆ ಇಲಾಖೆಯ ಪರೀಕ್ಷೆ ಬರೆಯಲು ಅಗತ್ಯವಿರುವ ಮಾಹಿತಿಗಳು ಕನ್ನಡದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
3 ಗೂಗಲ್ ಅನುವಾದವನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಅನಂತರ ಇಂಗ್ಲಿಷ್‌ಗೆ ಭಾಷಾಂತರಿಸಬೇಕು.
4 ಮೊದಲ ಹಂತದ ಯುಪಿಎಸ್‌ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಒದಗಿಸಬೇಕು.
5 ಪ್ರತಿ ಪ್ರಶ್ನೆಗಳು ಒಂದೇ ವಿಂಡೋದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನೋಡಲು ಬರಬೇಕು.
ಆರ್. ಕೆ. ಬಾಲಚಂದ್ರ, ವೃತ್ತಿ ಮಾರ್ಗದರ್ಶಕರು, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.